Bahiranga haraju ಕಲಬುರಗಿ ಕೋಟನೂರು (ಡಿ) ಬೀಜೋತ್ಪಾದನಾ ಕೇಂದ್ರದಲ್ಲಿರುವ ಮೇಕೆ, ಹೋತ, ಆಕಳು ಹಾಗೂ ಎತ್ತುಗಳ ಬಹಿರಂಗ ಹರಾಜು ಪ್ರಕ್ರಿಯೆ ಇದೇ ಜೂನ್ 14 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ.
ಆಸಕ್ತಿಯುಳ್ಳ ವ್ಯಕ್ತಿಗಳು ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಕಲಬುರಗಿ ಕೋಟನೂರು (ಡಿ) ಬೀಜೋತ್ಪಾದನಾ ಕೇಂದ್ರದ ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಸಾಕಿದಂತಹ ಗಂಡು ಮತ್ತು ಹೆಣ್ಣು ಮೇಕೆಗಳು ಹಾಗೂ ಜಾನುವಾರುಗಳನ್ನು ಇಲಾಖಾ ಪುಸ್ತಕ ಬೆಲೆ ಪ್ರಕಾರ 6 ತಿಂಗಳ ಮೇಲ್ಪಟ್ಟ ಒಟ್ಟು 13 ಹೋತಗಳನ್ನು ಸಂತಾನಾಭಿವೃದ್ಧಿಗೆ ದೇಹ ತೂಕದ ಕಿಲೋ ಒಂದಕ್ಕೆ 350 ರೂಪಾಯಿಯಂತೆ 6 ತಿಂಗಳ ಮೇಲ್ಪಟ್ಟ ಒಟ್ಟು 26 ಮೇಕೆಗಳನ್ನು ಸಂತಾನಾಭಿವೃದ್ಧಿಗೆ ದೇಹ ತೂಕದ ಕಿಲೋ ಒಂದಕ್ಕೆ 300 ರೂಪಾಯಿಯಂತೆ ಹರಾಜು ಮಾಡಲಾಗುತ್ತದೆ.
ಅದೇ ರೀತಿ 13 ವರ್ಷ ಮೇಲ್ಪಟ್ಟ ಒಟ್ಟು 3 ಎತ್ತುಗಳನ್ನು ಪ್ರತಿ ಒಂದಕ್ಕೆ 7000 ರೂಪಾಯಿಯಂತೆ, ಹತ್ತು ವರ್ಷ ಮೇಲ್ಪಟ್ಟ ಒಂದು ಆಕಳು 12500 ರೂಪಾಯಿಯಂತೆ ನಾಲ್ಕು ವರ್ಷ ಮೇಲ್ಪಟ್ಟ 2 ಹೋರಿಗಳನ್ನು 35000 ರೂಪಾಯಿಯಂತೆ ಹರಾಜು ಮಾಡಲಾಗುತ್ತದೆ.
Bahiranga haraju ಈ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲಿಚ್ಚಿಸುವ ರೈತರು ಹಾಗೂ ಆಸಕ್ತಿಯುಳ್ಳ ವ್ಯಕ್ತಿಗಳು 1000 ರೂಪಾಯಿ ಶುಲ್ಕವನ್ನು ಕಟ್ಟಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಕೋಟನೂರು (ಡಿ) ಬೀಜೋತ್ಪಾದನಾ ಕೇಂದ್ರವನ್ನು ಸಂಪರ್ಕಿಸಲು ಕೋರಲಾಗಿದೆ.
ಕೋಳಿ ಘಟಕ ಸ್ಥಾಪನೆಗೆ ಸಿಗಲಿದೆ ಸಬ್ಸಿಡಿ
ಬಿ.ವಿ. 380 ತಳಿಯ 20 ಮೊಟ್ಟೆ ಕೋಳಿ ಘಟಕ ಸ್ಥಾಪನೆಗೆ ಸಬ್ಸಿಡಿ ಸಿಗಲಿದೆ . ಹೌದು, ನಿರುದ್ಯೋಗ ಯುವಕರು ಸ್ವಾವಲಂಬಿ ಜೀವನ ಸಾಗಿಸಲು ಅವರು ಆರ್ಥಿಕವಾಗಿ ಸಬಲರಾಗಲು ಸರ್ಕಾರದ ವತಿಯಿಂದ ಸಬ್ಸಿಡಿ ನೀಡಲಾಗುವುದು.
ಇದನ್ನೂ ಓದಿ ನಿಮ್ಮ ಹೆಸರಿಗೆ FID ಇದೆಯೇ? ಇಲ್ಲೇ ಚೆಕ್ ಮಾಡಿ ಬರ ಪರಿಹಾರ ಪಡೆಯಿರಿ
ಕೋಳಿ ಘಟಕ ಸ್ಥಾಪನೆಗೆ ಏನೇನು ಬೇಕು? ಯಾವ ಯಾವ ರೈತರಿಗೆ ಸಬ್ಸಿಡಿ ನೀಡಲಾಗುವುದು? ರೈತರು ಅರ್ಜಿ ಎಲ್ಲಿ ಸಲ್ಲಿಸಬೇಕು. ಯಾರಿಗೆ ಸಂಪರ್ಕಿಸಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಬಿ.ವಿ 380 ತಳಿಯ 20 ಮೊಟ್ಟೆ ಕೋಳಿ ಘಟಕ ಸ್ಥಾಪಿಸಲು ರೈತರಿಗೆ ಸಹಾಯಧನ ನೀಡಲಾಗುವುದು. ಹೌದು, ಗ್ರಾಮೀಣ ಭಾಗದಲ್ಲಿ ಮೊಟ್ಟೆ ಹಾಗೂ ಮಾಂಸದ ಉತ್ಪಾದನೆ ಹೆಚ್ಚಿಸುವುದಕ್ಕಾಗಿ ಸಬ್ಸಿಡಿ ನೀಡಲಾಗುವುದು.
ನಿರುದ್ಯೋಗ ಯುವಕ ಯುವತಿಯರಿಗೆ ಮತ್ತು ಸಣ್ಣ ರೈತರು ಕೋಳಿ ಸಾಕಾಣಿಕೆಯಲ್ಲಿ ಸ್ವಯಂ ಉದ್ಯೋಗ ಕಲ್ಪಿಸಲಾಗುವುದು.
Poultry unit subsidy ಅರ್ಜಿ ನಮೂನೆ ಹೀಗೆ ಡೌನ್ಲೋಡ್ ಮಾಡಿ
ಕೋಳಿ ಘಟಕ ಸ್ಥಾಪನೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿಯ ನಮೂನೆ ಡೌನ್ಲೋಡ್ ಮಾಡಲು ಈ
https://yuvakanaja.in/wp-content/uploads/2022/07/scheme-2.pdf
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಅರ್ಜಿ ನಮೂನೆ ಓಪನ್ ಆಗುತ್ತದೆ.ಈ ಅರ್ಜಿಯಲ್ಲಿ ಕೇಳಲಾದ ಅಗತ್ಯ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ ಸಂಬಂಧಿಸಿದ ಕಚೇರಿಗೆ ಅರ್ಜಿ ಸಲ್ಲಿಸಬಹುದು.
ಆಯ್ಕೆಯಾದ ಫಲಾನುಭವಿಗಳು ಸ್ವಂತವಾಗಿ ಹಣ ಪಾವತಿಸದಿದ್ದರೆ ಬ್ಯಾಂಕಿನಿಂದ ಸಾಲ ಪಡೆಯಬಹುದು. ಸಾಮಾನ್ಯ ವರ್ಗದವರಿಗೆ 26 ಸಾವಿರ ರೂಪಾಯಿ ಸಾಲ ನೀಡಲಾಗುವುದು. ಎಸ್.ಸಿ, ಎಸ್ಟಿ ವರ್ಗದವರಿಗೆ 5200 ರೂಪಾಯಿ ಬ್ಯಾಂಕ್ ಸಾಲ ನೀಡಲಾಗಿದೆ. ಉಳಿದ ಮೊತ್ತ ರೈತರಿಗೆ ಸಬ್ಸಿಡಿ ಸಿಗಲಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು
ರೈತರು ಬಿ.ಪಿ.ಎಲ್ ಕಾರ್ಡ್ ಹೊಂದಿರಬೇಕು. ಆಧಾರ್ ಕಾರ್ಡ್ ಇರಬೇಕು. ಇತ್ತೀಚಿನ ಮೂರು ಫೋಟೋ ಇರಬೇಕು. ಬ್ಯಾಂಕ್ ಪಾಸ್ ಬುಕ್ ಹೊಂದಿರಬೇಕು. ಅಱ್ಜಿ ಹಾಗೂ ದಾಖಲೆಗಳನ್ನು ದ್ವಿ ಪ್ರತಿಯಲ್ಲಿ ಸಲ್ಲಿಸಬೇಕು. ಆರ್.ಡಿ.ಸಂಖ್ಯೆ ಹೊಂದಿರುವ ಜಾತಿ ಪ್ರಮಾಣ ಪತ್ರ ನೀಡಬೇಕು