Apply for Job card registration ಮನರೇಗಾ (MGNREGA) ಯೋಜನೆಯಡಿಯಲ್ಲಿ ಜಾಬ್ ಕಾರ್ಡ್ ಪಡೆಯಲು ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಬಹುದು. ಹೌದು, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಆಯಾ ಗ್ರಾಮ ಪಂಚಾಯತನ ಸಕ್ಷಮ ಪ್ರಾಧಿಕಾರದಿಂದ ನೀಡಲಾಗುವ ಜಾಬ್ ಕಾರ್ಡ್ ಇದಾಗಿದೆ.
Apply for Job card registration ಆನ್ಲೈನ್ ನಲ್ಲಿ ಜಾಬ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಲು ಈ
https://bsk.karnataka.gov.in/BSK/csLogin/loginPage
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೋಂದಾಯಿಸಿ/ಲಾಗಿನ್ ಮಾಡಿ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ನೀವು ಭಾಷೆಯನ್ನು ಬದಲಾಯಿಸಕೊಳ್ಳಬಹುದು. ಅರ್ಜಿಯನ್ನು ಇಂಗ್ಲೀಷ್ನಲ್ಲಿ ಭರ್ತಿ ಮಾಡಬೇಕಾದರೆ ಇಂಗ್ಲೀಷ್ ಆಯ್ಕೆ ಮಾಡಿಕೊಳ್ಳಬೇಕು. ಕನ್ನಡದಲ್ಲಿ ಭರ್ತಿ ಮಾಡಬೇಕಾದರೆ ಕನ್ನಡ ಆಯ್ಕೆ ಮಾಡಿಕೊಳ್ಳಬೇಕು.
ನೋಂದಾಯಿಸಿ ಲಾಗಿನ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಲಾಗಿನ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ಮೊದಲ ಬಾರಿಗೆ ನೀವು ಲಾಗಿನ್ ಮಾಡುತ್ತಿದ್ದರೆ ಈಗ ನೋಂದಣಿ ಮಾಡಿ ಮೇಲೆ ಕ್ಲಿಕ್ ಮಾಡಬೇಕು.
ಒಂದು ವೇಳೆ ನೀವು ನಿಮ್ಮಹೆಸರಿನಿಂದ ನೋಂದಣಿ ಮಾಡಿಕೊಂಡಿದ್ದರೆ ಮೊಬೈಲ್ ಸಂಖ್ಯೆ ನಮೂದಿಸಬೇಕು. ಓಟಿಪಿ ಕಳುಹಿಸಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಓಟಿಪಿ ನಮೀದಿಸಿದ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ ಸರ್ಕಾರದ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ತ್ವರಿತ ಸಂಪರ್ಕಗಳು, ಜನಪ್ರಿಯ ಸೇವೆಗಳು ಹಾಗೂ ಆನ್ಲೈನ್ ಸೇವೆಗಳ ಕಾಲಂ ಕೆಳಗಡೆ ಯಾವ ಯಾವ ಸೌಲಭ್ಯಗಳು ಲಭ್ಯವಿರುತ್ತದೆ ಎಂಬ ಮಾಹಿತಿ ಕಾಣುತ್ತದೆ.
ಇದನ್ನೂ ಓದಿ : ಜಾಬ್ ಕಾರ್ಡ್ ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯೋ? ಮೊಬೈಲ್ ನಲ್ಲೇ ಚೆಕ್ ಮಾಡಿ
ನೀವು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನಡೆಯಡಿ ಕೌಶಲ್ಯರಹಿತ ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಣೆ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಜಾಬ್ ಕಾರ್ಡ್ ಅಪ್ಲಿಕೇಶನ್ ಈ ಸೇವಾ ಆಯ್ಕೆಯನ್ನು ಪಡೆಯುವ ಮೂಲಕ ನಾಗರಿಕರು ಮನರೇಗಾ ಅಡಿಯಲ್ಲಿ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಟ್ರ್ಯಾಕ್ ಮಾಡಬಹುದು. ನೋಂದಣಿ ಅಥವಾ ಅರ್ಜಿ ಸಲ್ಲಿಸುವಲ್ಲಿ ನೀವು ಸಮಸ್ಯೆಯನ್ನು ಸಹಾಯ ಪುಟಕ್ಕೆ ಭೇಟಿ ನೀಡಿ ಎಂಬ ಸಂದೇಶ ಕಾಣುತ್ತದೆ. ಅಲ್ಲಿ ಕಾಣುವ ಸಲ್ಲಿಸಿ ಬಾಕ್ಸ್ ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಮೊಬೈಲ್ ನಂಬರ್ ನಮೂದಿಸಿದ ನಂತರ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ.
ಒಂದು ವೇಳೆ ನೀವು ನಿಮ್ಮ ಹೆಸರು ನೋಂದಾಯಿಸಿದ್ದರೆ
ಓಟಿಪಿ ನಮೂದಿಸಿದ ನಂತರ ನಿಮಗೆ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಕುಟುಂಬದ ಮುಖ್ಯಸ್ಥರ ಹೆಸರು ಪೋಶಕರು ಅಥವಾ ಸಂಗಾತಿಯ ಹೆಸರು ನಮೂದಿಸಬೇಕು. ಮೊಬೈಲ್ ನಂಬರ್ ಕಾಣುತ್ತದೆ. ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಗ್ರಾಮ ಪಂಚಾಯತ್ ಆಯ್ಕೆ ಮಾಡಿಕೊಳ್ಳಬೇಕು. ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ವಿಳಾಸ ಇರುತ್ತದೆ. ನಿಮ್ಮ ವಿಳಾಸ ಪರಿಶೀಲಿಸಿಕೊಂಡು ಸಲ್ಲಿಸು ಮೇಲೆ ಕ್ಲಿಕ್ ಮಾಡಿ ಜಾಬ್ ಕಾರ್ಡಿಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಮ್ಮ ಹೆಸರು ಮುಂದಿರುವ ಲಾಗೌಟ್ ಮೇಲೆ ಕ್ಲಿಕ್ ಮಾಡಬೇಕು.
ನೀವು ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಸ್ಟೇಟಸ್ ಚೆಕ್ ಮಾಡಬೇಕಾದರೆ ಮುಖಪುಟ ಕೆಳಗಡೆ ಅಪ್ಲಿಕೇಶನ್ ಹಂತದ ಮಾಹಿತಿ ಕೆಳಗಡೆ ಜಿ.ಎಸ್.ಸಿ ಸಂಖ್ಯೆಯನ್ನು ನಮೂದಿಸಿ ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ ಸ್ಟೇಟಸ್ ಚೆಕ್ ಮಾಡಬಹುದು.
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಸಮಸ್ಯೆಯಾಗುತ್ತಿದ್ದರೆ ನೀವು ಯಾವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುತ್ತೀರೋ ಆ ಪಂಚಾಯತಿಯಲ್ಲಿ ಅಲ್ಲಿ ಅರ್ಜಿ ಸಲ್ಲಿಸಬಹುದು.
ಮನರೇಗಾ ಯೋಜನೆಯ ಮಾನದಂಡಗಳು
ಅರ್ಜಿದಾರರು ಭಾರತದ ನಾಗರಿಕರಾಗಿರಬೇಕು. ಅರ್ಜಿದಾರರು ಅರ್ಜಿ ಸಲ್ಲಿಸುವ ಸಮಯದಲ್ಲಿ 18 ವರ್ಷಗಳನ್ನು ಪೂರ್ಣಗೊಳಿಸಬೇಕು. ಅರ್ಜಿದಾರರು ಕೌಶಲ್ಯರಹಿತ ಕಾರ್ಮಿಕರ ವಿತರಣೆಗೆ ಸಿದ್ದರಾಗಿರಬೇಕು. ಅರ್ಜಿದಾರರು ಸ್ಥಳೀಯರಾಗಿರಬೇಕು. ಜಾಬ್ ಕಾರ್ಡ್ ಪಡೆದವರಿಗೆ ವರ್ಷಕ್ಕೆ 100 ದಿನಗಳ ಖಾತ್ರಿಯ ಉದ್ಯೋಗ ನೀಡಲಾಗುವುದು. ಉದ್ಯೋಗಕ್ಕೆ ನೋಂದಣಿ ಮಾಡಿಸಿದ ದಿನಾಂಕದ 15 ದಿನಗಳ ಒಳಗೆ ನೋಂದಾಯಿತರಿಗೆ ಕೆಲಸ ನೀಡಲಾಗುವುದು.