Annabhagya status check : ಅನ್ನಭಾಗ್ಯದ ಫಲಾನುಭವಿಗಳು ತಮಗೆಷ್ಟು ಹಣ ಜಮೆಯಾಗಿದೆ ಎಂಬುದನ್ನು ಒಂದೇ ನಿಮಿಷದಲ್ಲಿ ಮನೆಯಲ್ಲಿಯೇ ಕುಳಿತು ಚೆಕ್ ಮಾಡಬಹುದು. ಹೌದು, ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಫಲಾನುಭವಿಗಳ ಖಾತೆಗೆ ಅನ್ನಭಾಗ್ಯದ ಹಣ ಜಮೆ ಮಾಡಲಾಗುತ್ತಿದೆ. ಅನ್ನಭಾಗ್ಯದ ಸ್ಟೇಟಸ್ ಈ ಕೆಳಗಡೆ ನೀಡಲಾದ ಲಿಂಕ್ ನಲ್ಲಿ ಚೆಕ್ ಮಾಡಬಹುದು. ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
Annabhagya status check ಅನ್ನಭಾಗ್ಯದ ಹಣ ನಿಮಗೆಷ್ಟು ಜಮೆಯಾಗಿದೆ?
ಅನ್ನಭಾಗ್ಯದ ಯೋಜನೆಯಡಿ ನೋಂದಾಯಿಸಿಕೊಂಡ ರೇಶನ್ ಕಾರ್ಡ್ ಪಡೆದವರು ಅನ್ನಭಾಗ್ಯದ ಯೋಜನೆಯಡಿ ನಿಮಗೆಷ್ಟು ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ
https://ahara.kar.nic.in/status3/status_of_dbt.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ Food, civil supplies and Consumer Affairs ಪೇಜ್ ಕಾಣಿಸುತ್ತದೆ. ಅದರ ಕೆಳಗಡೆ ಸ್ಟೇಟಸ್ ಆಫ್ ಡಿಬಿಟಿ ಎಂಬುದು ಕಾಣಿಸುತ್ತದೆ. ಆರ್.ಸಿ ನಂಬರ್ ಅಂದರೆ ನಿಮ್ಮ ರೇಶನ್ ಕಾರ್ಡ್ ನಂಬರ್ ಹಾಕಬೇಕು. ನಂತರ ಗೋ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮಗೆಷ್ಟು ಹಣ ಜಮೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ. ಹೌದು ಅಲ್ಲಿ ನಿಮಾ್ಮ ಹೆಸರು, ಕುಟುಂಬದ ಸದಸ್ಯರು ಹಾಗೂ ಎಷ್ಟುಕೆ.ಜಿ ಅಕ್ಕಿಯ ಬದಲಾಗಿ ಎಷ್ಟು ಹಣ ಜಮೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.
ನಿಮ್ಮ ಕಾರ್ಡ್ ರೇಶನ್ ಕಾರ್ಡ್ ಅಡಿಯಲ್ಲಿ ಹಣ ಪಡೆಯಲು ಅರ್ಹವಾಗಿದೆಯೋ ಇಲ್ಲವೋ ಎಂಬುದರ ಮಾಹಿತಿ ಇರುತ್ತದೆ. ಪಾವತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರೆ ನಿಮಗೆ ಈಗಾಗಲೇ ಜಮೆಯಾಗಿರುತ್ತದೆ ಅಥವಾ ಇನ್ನೆರಡು ದಿನಗಳಲ್ಲಿ ಜಮೆಯಾಗುತ್ತದೆ ಎಂದರ್ಥ.
ನಿಮಗೆ ರೇಶನ್ ಕಾರ್ಡ್ (ಆರ್.ಸಿ) ನಂಬರ್ ಗೊತ್ತಿಲ್ಲದಿದ್ದರೆ ಹೀಗೆ ಚೆಕ್ ಮಾಡಿ
ನಿಮ್ಮ ಬಳಿ ಸದ್ಯ ರೇಶನ್ ಕಾರ್ಡ್ ಇಲ್ಲದಿದ್ದರೆ ನೀವು ಈ
https://ahara.kar.nic.in/Home/EServices
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬಲಗಡೆ ಕಾಣುವ ಇ ರೇಶನ್ ಕಾರ್ಡ್ ( ಇ ಪಡಿತರ ಚೀಟಿ) ಮೇಲೆ ಕ್ಲಿಕ್ ಮಾಡಬೇಕು.ನಂತರ ಶೇ ವಿಲೇಜ್ ಲಿಸ್ಟ್ (ಹಳ್ಳಿ ಪಟ್ಟಿ) ಮೇಲೆ ಕ್ಲಿಕ್ ಮಾಡಬೇಕುಃ ನಂತರ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತ್, ಹಾಗೂ ಗ್ರಾಮ ಆಯ್ಕೆ ಮಾಡಿಕೊಂಡು ಗೋ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮೂರಿನಲ್ಲಿ ಯಾರ್ಯಾರು ರೇಶನ್ ಕಾರ್ಡ್ ಹೊಂದಿದ್ದಾರೆ ಎಂಬ ಪಟ್ಟಿ ಕಾಣಿಸುತ್ತದೆ. ಅದರಲ್ಲಿ ನಿಮ್ಮ ಹೆಸರಿನ ಹಿಂದೆ ರೇಶನ್ ಕಾರ್ಡ್ ನಂಬರ್ ಇರುತ್ತದೆ. ಅದನ್ನು ಬರೆದಿಟ್ಟುಕೊಂಡ ಅಥವಾ ಕಾಪಿ ಮಾಡಿಕೊಂಡು ಸ್ಟೇಟಸ್ ಚೆಕ್ ಮಾಡಬಹುದು.
ಯಾವ ಕಾರ್ಡ್ ಇದ್ದವರಿಗೆ ಅನ್ನಭಾಗ್ಯದ ಹಣ ಜಮೆ
ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿದವರಿಗೆ ಮಾತ್ರ ಅನ್ನಭಾಗ್ಯದ ಯೋಜನೆಯಡಿಯಲ್ಲಿ ಹಣ ಜಮೆಯಾಗುತ್ತಿದೆ. ಹೌದು, ಎಪಿಎಲ್ ಕಾರ್ಡ್ ಇದ್ದವರಿಗೆ ಅನ್ನಭಾಗ್ಯದ ಹಣ ಜಮೆಯಾಗುವುದಿಲ್ಲ. ಕುಟುಂಬದ ಸದಸ್ಯರನುಸಾರವಾಗಿ ಹಣ ಜಮೆಯಾಗುತ್ತಿದೆ. ಅಂದರೆ ಒಂದು ಕುಟುಂಬದಲ್ಲಿ ಇಬ್ಬರು ಮಕ್ಕಳು ಗಂಡ ಹೆಂಡತಿ ಒಟ್ಟು ನಾಲ್ಕು ಜನ ಸದಸ್ಯರಿದ್ದರೆ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಒಬ್ಬರಿಗೆ 170 ರೂಪಾಯಿ ಜಮೆಯಾಗುವುದು. ಕುಟುಂಬದಲ್ಲಿ ನಾಲ್ಕುಜನ ಸದಸ್ಯರಿಗೆ ತಲಾ 170 ರೂಪಾಯಿ ಒಟ್ಟು ನಾಲ್ಕು ಜನ ಸದಸ್ಯರಿಗೆ 680 ರೂಪಾಯಿ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತದೆ.
ಇದನ್ನೂ ಓದಿ ನಿಮ್ಮ ಜಮೀನಿನ ಭೂ ಮಾಲಿಕರ ವಿವರ ಮೊಬೈಲ್ ನಲ್ಲೇ ಚೆಕ್ ಮಾಡಿ
ಒಂದು ಕುಟುಂಬದಲ್ಲಿ ಐದು ಜನ ಸದಸ್ಯರಿದ್ದರೆ ತಲಾ 170 ರೂಪಾಯಿಯಂತೆ ಒಟ್ಟು ಐದು ಜನರಿಗೆ 850 ರೂಪಾಯಿ ಜಮೆಯಾಗುತ್ತದೆ. ಇದೇ ರೀತಿ ಕುಟುಂಬದ ಸದ್ಯರನುಸಾರವಾಗಿ ನೇರವಾಗಿ ಬಿಪಿಎಲೇ್ ಕಾರ್ಡ್ ಹೊಂದಿರುವವರ ಖಾತೆಗೆ ಜಮೆಯಾಗುತ್ತಿದೆ. ಉಳಿದಂತೆ 5 ಕೆ.ಜಿ ಅಕ್ಕಿಯನ್ನು ಪಡಿತರ ಅಂಗಡಿಗಳಲ್ಲಿ ಪ್ರತಿ ತಿಂಗಳು ವಿತರಿಸಲಾಗುವುದು.