Annabhagya ಹಣ ಈ ಲಿಸ್ಟ್ ನಲ್ಲಿರುವವರಿಗೆ ಜಮೆ: ಚೆಕ್ ಮಾಡಿ

Written by Ramlinganna

Published on:

Annabhagya ದ ಯೋಜನೆಯಡಿ ಅಕ್ಕಿಯ ಬದಲಾಗಿ ನೀಡಲಾಗುವ ಹಣ  ಯಾರಿಗೆ ಜಮೆಯಾಗಲಿದೆ ಯಾರಿಗೆ ಜಮೆಯಾಗಲ್ಲಎಂಬುದನ್ನು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಫಲಾನುಭವಿಗಳು ಈಗ ಮನೆಯಲ್ಲಿಯೇ ಕುಳಿತು  ಅನ್ನಭಾಗ್ಯದ ಹಣ ಜಮೆಯಾಗುತ್ತೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.

Annabhagya ದ ಹಣ ಯಾರ್ಯಾರಿಗೆ ಜಮೆಯಾಗಲಿದೆ? ಚೆಕ್ ಮಾಡುವುದು ಹೇಗೆ?

ಅನ್ನಭಾಗ್ಯದ ಯೋಜನೆಯಡಿ ಯಾವ ಯಾವ ಫಲಾನುಭವಿಗಳಿಗೆ ಹಣ ಜಮೆಯಾಗುತ್ತದೆ ಎಂಬುದನ್ನು ಚೆಕ್ ಮಾಡಲು ಈ

https://ahara.kar.nic.in/Home/EServices

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಕಾಣುವ ಇ ಪಡಿತರ ಚೀಟಿ E Ration Card) ಮೇಲೆ ಕ್ಲಿಕ್ ಮಾಡಬೇಕು. ನಂತರ ಹಳ್ಳಇ ಪಟ್ಟಿ (Show village list) ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು.ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಗ್ರಾಮ ಪಂಚಾಯತ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಂಡ ನಂತರ ಗೋ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಊರಿನಲ್ಲಿ ಯಾರ್ಯಾರು ಪಡಿತರ ಚೀಟಿ ಪಡೆದಿದ್ದಾರೆ ಅವರ ಹೆಸರು ಕಾಣಿಸುತ್ತದೆ. ಆದರೆ ಇಲ್ಲಿ ಹೆಸರಿರುವ ಎಲ್ಲಾ ಕುಟುಂಬದ ಸದಸ್ಯರಿಗೆ ಹಣ ವರ್ಗಾವಣೆಯಾಗುವುದಿಲ್ಲ. ಏಕೆಂದರೆ ಎಪಿಎಲ್ ಕುಟುಂಬದ ಸದಸ್ಯರಿಗೆ ಹಣ ವರ್ಗಾವಣೆಯಾಗುವುದಿಲ್ಲ. ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಮಾತ್ರ ಅಕ್ಕಿ ಯೋಜನೆಯ ಹಣ ಜಮೆಯಾಗಲಿದೆ.

ಅಂತ್ಯೋದಯ ಹಾಗೂ ಬಿಪಿಎಲ್ ಪಟ್ಟಿ ಗುರುತಿಸುವುದು ಹೇಗೆ?

ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಹೆಸರಿನ ಮುಂದೆ Priority Household  ಎಂದು ಬರೆದಿದ್ದರೆ ಬಿಪಿಎಲ್ ಕುಟುಂಬದ ಅದೇ ರೀತಿ ಅಂತ್ಯೋದಯ ಅನ್ನ ಯೋಜನೆ ಬರೆದಿದ್ದರೆ ಅವರಿಗೂ ಸಹ ಅನ್ನಭಾಗ್ಯದ ಹಣ ಜಮೆಯಾಗಲಿದೆ.

ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿದರೂ ಇವರಿಗೆ ಹಣ ಜಮೆಯಾಗಲ್ಲ

ಅನ್ನಭಾಗ್ಯದ ಯೋಜನಯಡಿಯಲ್ಲಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿದರೂ ಸಹ ಕೆಲವರಿಗೆ ಹಣ ಜಮೆಯಾಗಲ್ಲ. ಏಕೆಂದರೆ ಆ ಕುಟುಂಬವು ಕಳೆದ ಮೂರು ತಿಂಗಳಲ್ಲಿ ಒಮ್ಮೆಯಾದರೂ ಪಡಿತರ ಆಹಾರ ಧಾನ್ಯ ಪಡೆದಿರುವುದಿಲ್ಲ. ಕಳೆದ ಮೂರು ತಿಂಗಳ ಅವಧಿಯಲ್ಲಿ ಒಮ್ಮೆಯಾದರೂ ಆ ಕುಟುಂಬವು ರೇಶನ್ ಪಡೆದಿರಬೇಕು. ಅಂದರೆ ಮಾತ್ರ ಅನ್ನಭಾಗ್ಯದ ಹಣ ಜಮೆಯಾಗಲಿದೆ.

ಇದನ್ನೂ ಓದಿ : ನಿಮ್ಮ ಜಮೀನಿನ ಮೇಲೆ ಸಾಲವೆಷ್ಟಿದೆ? ಅಕ್ಕಪಕ್ಕದ ಜಮೀನು ಯಾರ ಹೆಸರಿಗೆ ಎಷ್ಟಿದೆ? ಇಲ್ಲೇ ಚೆಕ್ ಮಾಡಿ

ಪಡಿತರ ಚೀಟಿಯ ಮುಖ್ಯಸ್ಥರ ಆಧಾರ್ ಜೋಡಣೆ ಹಾಗೂ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಆಧಾರ್ ಲಿಂಕ್ ಆಗಿರುವ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಗಳ ಪರಿಶೀಲನೆಗಾಗಿ ಡಿಬಿಟಿ ಕೋಶಕ್ಕೆ ವರ್ಗಾವಣೆ ಮಾಡಲಾಗುವುದು. ಅದರಂತೆ ಡಿಬಿಟಿ ಮೂಲಕ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು.

ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರನ್ನುಹೊಂದಿರದ ಅಥವಾ ಒಂದಕ್ಕಿಂತ ಹೆಚ್ಚಿನ ಮುಖ್ಯಸ್ಥರನ್ನು ಹೊಂದಿರುವ ಪಡಿತರ ಚೀಟಿ ಕುಟುಂಬಗಳು ಅಕ್ಕಿ ಬದಲಿಗೆ ಹಣ ಪಡೆಯಲು ಅರ್ಹತೆ ಹೊಂದಿರುವುದಿಲ್ಲ. ಅದರಂತೆ, ಕುಟುಂಬದ ಮುಖ್ಯಸ್ಥರನ್ನು ಗುರುತಿಸದ ಹಾಗೂ ಒಂದಕ್ಕಿಂತಲೂ ಹೆಚ್ಚು ಮುಖ್ಯಸ್ಥರನ್ನು ಹೊಂದಿರುವವರು ಆಹಾರ ಇಲಾಖೆ ಅಧಿಕಾರಿಗಳ ಸಹಕಾರ ಪಡೆದು ಸರಪಡಿಸಿಕೊಳ್ಳಬೇಕಾಗುತ್ತದೆ.

ಈ ತಿಂಗಳೂ ಸಹ  ಆಹಾರಧಾನ್ಯದ ಬದಲಾಗಿ ಹಣ ವರ್ಗಾವಣೆ ಮಾಡಲಾಗುವುದು. ಯಾವ ದಿನಾಂಕದಂದು ಹಣ ವರ್ಗಾವಣೆ ಮಾಡಲಾಗುವುದು ಎಂಬುದರ ಕುರಿತು ಸರ್ಕಾರದ ವತಿಯಿಂದ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ.

Leave a Comment