ಬೆಳೆ ವಿಮೆ ಮಾಡಿಸಿದ ನಂತರ ರೈತರೇನು ಮಾಡಬೇಕು?

Written by Ramlinganna

Updated on:

After crop insurance farmers what should do ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಕುರಿತಂತೆ ಇನ್ನೂ ಬಹುತೇಕ ರೈತರಿಗೆ ಸರಿಯಾಗಿ ಮಾಹಿತಿ ಗೊತ್ತಿರಲಿಕ್ಕಿಲ್ಲ. ಬೆಳೆ ವಿಮೆ ಮಾಡಿಸಿದ ಮಾತ್ರಕ್ಕೆ ಬೆಳೆ ವಿಮೆ ಹಣ ಜಮೆಯಾಗುವುದಿಲ್ಲ. ಬೆಳೆ ವಿಮೆ ಎಂದರೇನು? ಬೆಳೆ ವಿಮೆ ಏಕೆ ಮಾಡಿಸಬೇಕು? ಬೆಳೆ ವಿಮೆ ಮಾಡಿದ ರೈತರಿಗೆ ಯಾವ ಸಂದರ್ಭದಲ್ಲಿ ಬೆಳೆ ವಿಮೆ ಹಣ ಜಮೆಯಾಗುತ್ತದೆ? ಬೆಳೆ ನಷ್ಟವಾದರೆ ರೈತರೇನು ಮಾಡಬೇಕು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಏನಿದು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ?

ಹವಾಮಾನ ವೈಪರೀತ್ಯದ ಕಾರಣದಿಂದಾಗಿ ರೈತರು ಪದೇ ಪದೇ ನಷ್ಟಕ್ಕೆ ಒಳಗಾಗಿ ಸಂಕಷ್ಟಕ್ಕೊಳಗಾಗುತ್ತಾರೆ. ಅತೀವೃಷ್ಟಿ ಅಥವಾ ಅನಾವೃಷ್ಟಿ ಬಿರುಗಾಳಿ, ಸಿಡಿಲು, ಆಲಿಕಲ್ಲು, ಪ್ರವಾಹ ಸೇರಿದಂತೆ ಇನ್ನಿತರ ಪ್ರಕೃತಿ ವಿಕೋಪದಿಂದ ಬೆಳೆ ಹಾಳಾಗಿ ರೈತರಿಗೆ ಹಾನಿಯಾಗುತ್ತಿರುತ್ತದೆ. ಪ್ರಕೃತಿ ವಿಕೋಪದಿಂದ ರೈತರಿಗಾಗುವ ಬೆಳೆ ಹಾನಿಯಿಂದ ಪಾರು ಮಾಡಲು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾಳಾದರೆ ರೈತರಿಗೆ ನಿಗದಿತ  ವಿಮೆ ಹಣ ಜಮೆಯಾಗಿ ಸಂಕಷ್ಟದಿಂದ ದೂರಮಾಡುತ್ತದೆ.  ಬೆಳೆ ವಿಮೆಯ ಪ್ರಿಮಿಯಂ ಕೇವಲ ಶೇ. 1.5 ರಿಂದ 2 ಹಾಗೂ ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳಿಗೆ ಶೇ. 5 ರಷ್ಟಿರುತ್ತದೆ.

ಬೆಳೆ ವಿಮೆ ಮಾಡಿಸಿದ ರೈತರ ಬೆಳೆಯು ನೈಸರ್ಗಿಕ ವಿಕೋಪಗಳಿಂದ ಬೆಳೆ ಹಾನಿಯಾದರೆ ರೈತರು ವಿಮೆ ಮಾಡಿಸಿದ ಇನ್ಸುರೆನ್ಸ್ ಕಂಪನಿಯಿಂದ ವಿಮೆ ಹಣ ಪಡೆಯುತ್ತಾನೆ.

After crop insurance farmers what should do ಬೆಳೆ ನಷ್ಟವಾದರೆ ರೈತರೇನು ಮಾಡಬೇಕು?

ರೈತರು ಯಾವ ಬೆಳೆಗೆ ವಿಮೆ ಮಾಡಿಸಿರುತ್ತಾರೋ ಅದರ ರಶೀದಿ ಹೊಂದಿರಬೇಕು.  ಯಾವ ವಿಮಾ ಕಂಪನಿಗೆ ಹಣ ಪಾವತಿಸಿದ್ದೀರೋ ಆ ವಿಮಾ ಕಂಪನಿಯ ಅಂದರೆ ತಾಲೂಕಿನ ಏಜೆಂಟ್ ರ ನಂಬರ್ ಪಡೆದಿರಬೇಕು. ಏಕೆಂದರೆ ಪ್ರಕೃತಿ ವಿಕೋಪಗಳಾದ ಭೂಕುಸಿತ, ಅತೀವೃಷ್ಟಿ, ಅನಾವೃಷ್ಟಿ, ಸಿಡಿಲು, ಆಲಿಕಲ್ಲು ಸೇರಿದಂತೆ ಇನ್ನಿತರ ನೈಸರ್ಗಿಕ ವಿಕೋಪದಿಂದಾಗಿ ಬೆಳೆ ಹಾಳಾದರೆ ಅವರಿಗೆ ಕರೆ ಮಾಡಿ ಮಾಹಿತಿ ನೀಡಬೇಕಾಗುತ್ತದೆ.

ಬೆಳೆ ನಷ್ಟವಾದಾಗ  48 ಗಂಟೆಯೊಳಗೆ ವಿಮಾ ಕಂಪನಿಗೆ ತಿಳಿಸಬೇಕು. ಆಗ ವಿಮಾ ಕಂಪನಿಯ ಸಿಬ್ಬಂದಿಗಳು ರೈತರ ಜಮೀನಿಗೆ ಬಂದು ಬೆಳೆ ಪರಿಶೀಲನೆ ಮಾಡಿ ಪರಿಹಾರಕ್ಕಾಗಿ ಮೇಲಧಿಕಾರಿಗಳಿಗೆ ಅರ್ಜಿ ಸಲ್ಲಿಸುತ್ತಾರೆ. ಆದರೆ ಬೆಳೆ ಹಾಳಾದಾಗ ಬಹುತೇಕ ರೈತರು ವಿಮಾ ಕಂಪನಿಯವರಿಗೆ ಮಾಹಿತಿ ನೀಡುವುದಿಲ್ಲ. ಹಾಗಾಗಿ ಬೆಳೆ ನಷ್ಟವಾದರೂ ಅನೇಕ ರೈತರಿಗೆ ವಿಮೆ ಹಣ ಜಮೆಯಾಗುವುದಿಲ್ಲ.

ನಿಮ್ಮ ಜಿಲ್ಲೆಗೆ ಯಾವ ಬೆಳೆ ವಿಮಾ ಕಂಪನಿಯಿದೆ?

ರೈತರು ತಮ್ಮ ಜಿಲ್ಲೆಗೆ ಯಾವ ಬೆಳೆ ವಿಮಾ ಕಂಪನಿಯಿದೆ ಎಂಬುದನ್ನು ತಿಳಿದುಕೊಳ್ಳಲು

https://www.samrakshane.karnataka.gov.in/HomePages/frmKnowYourInsCompany.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ವಿಮಾ ಕಂಪನಿಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯಿದೆ ಎಂಬ ಮಾಹಿತಿ ಕಾಣುತ್ತದೆ.

ಬೆಳೆ ನಷ್ಟವಾದಾಗ ಬೆಳೆ ವಿಮೆ ಪರಿಹಾರ ಹೇಗೆ ನಿರ್ಧರಿಸುತ್ತಾರೆ?

ರೈತರು ತಮ್ಮ ಬೆಳೆಗೆ ವಿಮೆ ಮಾಡಿಸಿದ ನಂತರ ಶೇ. 75ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮೆ ಮೊತ್ತದ ಗರಿಷ್ಟ ಶೇ. 25 ರಷ್ಟುಬೆಳೆ ವಿಮೆ ನಷ್ಟ ಪರಿಹಾರ ನೀಡಲಾಗುವುದು. ಬೆಳೆ ಬಿತ್ತನೆ ನಂತರ ಕಟಾವು ಹಂತದವರೆಗಿನ ಅವಧಿಯಲ್ಲಿ  ಶೇ. 50 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾಳಾದರೆ  ಮುಂಚಿತವಾಗಿ ಅಂದಾಜಿಸಲಾದ ಬೆಳೆ ವಿಮೆ ನಷ್ಟ ಪರಿಹಾರದಲ್ಲಿ ಶೇ. 25 ರಷ್ಟು ಹಣ ನೀಡಲಾಗುವುದು. ಬೆಳೆ ಸಂಪೂರ್ಣ ನಾಶವಾದಾಗ ಕಂಪನಿಯ ಸಿಬ್ಬಂದಿಗಳು ಪರಿಶೀಲನೆ ಮಾಡಿದ ನಂತರ ನಿಗದಿತ ವಿಮಾ ಹಣ ಪಾವತಿಸಲಾಗುವುದು.

ಇದನ್ನೂ ಓದಿ ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ

ರೈತರು ಬೆಳೆ ವಿಮೆ ಮಾಡಿಸಿದ ನಂತರ ಬೆಳೆ ನಷ್ಟವಾದರೆ ಸಂಬಂಧಿಸಿದ ಇನ್ಸುರೆನ್ಸ್ ಕಂಪನಿಯ ಸಿಬ್ಬಂದಿಗಳಿಗೆ ತಿಳಿಸುವುದನ್ನು ಮರೆತುಬಿಡುತ್ತಾರೆ. ಹಾಗಾಗಿ ಬಹುತೇಕ ರೈತರು ಬೆಳೆ ವಿಮೆ ಪರಿಹಾರದಿಂದ ವಂಚಿತರಾಗುತ್ತಾರೆ.

ರೈತರ ಉಚಿತ ಸಹಾವಾಣಿಗೆ ಕರೆ ಮಾಡಿ ಬೆಳೆ ವಿಮೆ ಮಾಹಿತಿ ಪಡೆಯಿರಿ

ಒಂದು ವೇಳೆ ರೈತರಿಗೆ ತಮ್ಮ ಜಿಲ್ಲೆಗ ಯಾವ ಇನ್ಸುರೆನ್ಸ್ ಕಂಪನಿ ಇದೆ. ಹಾಗೂ ಸಿಬ್ಬಂದಿಗಳ ಮೊಬೈಲ್ ನಂಬರ್ ಪಡೆಯಬೇಕಾದರೆ  ಈ ಉಚಿತ ಸಹಾವವಾಣಿ 1800 180 1551ಗೆ ಕರೆ ಮಾಡಬೇಕು. ಈ ಉಚಿತ ಸಹಾಯವಾಣಿಯು  ಬೆಳಗ್ಗೆ 9 ರಿಂದ ಸಾಯಂಕಾಲ 5 ರವರೆಗೆ ಕಾರ್ಯನಿರ್ವಹಿಸುತ್ತದೆ. ಈ ನಂಬರಿಗೆ ಕರೆ ಮಾಡಿ ನಿಮ್ಮ ಜಿಲ್ಲೆಯ ಬೆಳೆ ವಿಮಾ ಕಂಪನಿಯ ಸಿಬ್ಬಂದಿಗಳ ಮೊಬೈಲ್ ನಂಬರ್ ಪಡೆದುಕೊಳ್ಳಬೇಕು.

 

Leave a Comment