additional crop damage relief ಬೆಳೆ ಹಾನಿಗೆ ರಾಜ್ಯ ಸರ್ಕಾರ ಘೋಸಿಸಿದ್ದ ಹೆಚ್ಚುವರಿ ಪರಿಹಾರ ಹಣ ಮುಂದಿನ ಎರಡ್ಮೂರು ದಿನಗಳಲ್ಲಿ ರೈತರ ಖಾತೆಗೆ ಜಮೆಯಾಗಲಿದೆ. ರಾಜ್ಯದ 18.2 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ 1200 ಕೋಟಿ ರೂಪಾಯಿ ಬಿಡುಗಡೆ ಮಾಡಲು ಸರ್ಕಾರ ಸಿದ್ದತೆ ನಡೆಸಿದೆ.
ಕಳೆದ ವರ್ಷ ಸುರಿದ ಮಳೆಯಿಂದಾಗಿ ರಾಜ್ಯದಲ್ಲಿ ಅಪಾರ ಪ್ರಮಾಣ ಬೆಳೆ ಹಾಳಾಗಿತ್ತು. ಕೆಲವು ರೈತರ ಬೆಳೆ ನಿಂತಲ್ಲೇ ಕೊಳೆತುಹೋದರೆ ಇನ್ನೂ ಕೆಲವು ರೈತರ ಬೆಳೆ ಕಟಾವು ಹಂತದಲ್ಲಿರುವಾಗ ಹಾಳಾಗಿತ್ತು. ಇದರಿಂದಾಗಿ ರೈತರ ಅಪಾರ ಬೆಳೆ ಹಾಳಾಗಿತ್ತು.
ರೈತರ ನೆರವಿಗೆ ಬಂದ ಸರ್ಕಾರ ಆರಂಭದಲ್ಲಿ ಒಣ ಬೇಸಾಯ ಭೂಮಿಗೆ ಪ್ರತಿ ಹೆಕ್ಟೇರಿಗೆ 6800 ರೂಪಾಯಿ ನೀರಾವರಿ ಬೆಳೆಗಳಿಗೆ ಪ್ರತಿ ಹೆಕ್ಟೇರಿಗೆ 13500 ರೂಪಾಯಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಪ್ರತಿ ಹೆಕ್ಟೇರಿಗೆ 18000 ರೂಪಾಯಿ ಪರಿಹಾರ ಘೋಷಿಸಿತ್ತು. ಇದರಿಂದಾಗಿ ರಾಜ್ಯದಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಸರ್ಕಾರ ಘೋಷಿಸಿದ್ದಪರಿಹಾರ ಹಣ ತುಂಬಾ ಕಡಿಮೆಯಿದೆ ಎಂದು ರೈತ ಸಂಘಟನೆಗಳು, ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಸರ್ಕಾರ ಹೆಚ್ಚುವರಿ ಪರಿಹಾರ ಹಣ ಘೋಷಿಸಿತ್ತು. ರಾಜ್ಯ ಪರಿಹಾರ ನಿಧಿ (ಎನ್.ಡಿ.ಆರ್.ಎಫ್) ನಿಯಮದಂತೆ ಹೆಚ್ಚುವರಿ ಹಣವನ್ನು ಡಿಸೆಂಬರ್ ತಿಂಗಳಲ್ಲಿ ಸರ್ಕಾರ ಘೋಷಿಸಿತ್ತು. ಈಗ ಇನ್ನೆರಡು ದಿನಗಳಲ್ಲಿ ರೈತರ ಖಾತೆಗೆ ಪರಿಹಾರ ಹಣ ಜಮೆ ಮಾಡಲು ಸರ್ಕಾರ ಸಿದ್ದತೆ ನನಡೆಸಿದೆ ಎನ್ನಲಾಗುತ್ತಿದೆ.
additional crop damage relief ಎನ್.ಡಿ.ಆರ್.ಎಫ್ ಯಡಿ ಎಷ್ಟು ಪರಿಹಾರ ಹಣ ಹೆಚ್ಚಳ
ಎನ್.ಡಿ.ಆರ್.ಎಫ್ ಯಡಿ ಸರ್ಕಾರವು ಒಣ ಬೇಸಾಯ ಭೂಮಿಗೆ ಪ್ರತಿ ಹೆಕ್ಟೇರಿಗೆ 6800 ಗೆ 6800 ಹೆಚ್ಚುವರಿಯಾಗಿ ಒಟ್ಟು 13600 ರೂಪಾಯಿ ಪ್ರತಿ ಹೆಕ್ಟೇರಿಗೆ ಘೋಷಣೆ ಮಾಡಿದೆ. ಅದೇ ರೀತಿ ನೀರಾವರಿ ಜಮೀನಿಗೆ ಪ್ರತಿ ಹೆಕ್ಟೇರಿಗೆ 13500 ಘೋಷಿಸಲಾಗಿತ್ತು. ಹೆಚ್ಚುವರಿಗೆಯಾಗಿ 11500 ಸೇರಿ ಒಟ್ಟು 25 ಸಾವಿರ ರೂಪಾಯಿ ಘೋಷಣ ಮಾಡಲಾಗಿದೆ. ಅದೇ ರೀತಿ ತೋಟಗಾರಿಕೆ ಬೆಳೆಗಳಿಗೆ 18 ಸಾವಿರ ರೂಪಾಯಿ ಘೋಷಣೆ ಮಾಡಲಾಗಿತ್ತು. ಹೆಚ್ಚುವರಿಯಾಗಿ ಘೋಷಣೆ ಮಾಡಿದ10 ಸಾವಿರ ರೂಪಾಯಿ ಸೇರಿ ಒಟ್ಟು 26 ಸಾವಿರ ರೂಪಾಯಿ ಘೋಷಣೆ ಮಾಡಲಾಗಿದೆ. ಹೆಚ್ಚುವರಿಯಾಗಿ ಘೋಷಣೆ ಮಾಡಿದ1200 ಕೋಟಿ ರೂಪಾಯಿ ಹಣವನ್ನು 18.2 ಲಕ್ಷ ರೈತರಿಗೆ ಎರಡ್ಮೂರು ದಿನಗಳಲ್ಲಿ ರೈತರ ಖಾತೆಗೆ ನೇರವಾಗಿ ಜಮೆ ಮಾಡಲಿದೆ.
ಪರಿಹಾರ ಜಮೆ ಸ್ಟೇಟಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ಪರಿಹಾರ ಜಮೆ ಸ್ಟೇಟಸ್ ನೋಡಲು ಈ
https://landrecords.karnataka.gov.in/PariharaPayment/
ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪರಿಹಾರ ತಂತ್ರಾಂಶದ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ಆಧಾರ್ ಕಾರ್ಡ್ ಆಯ್ಕೆ ಮಾಡಿಕೊಳ್ಳಬೇಕು. ನಂತರ select calamity type ನಲ್ಲಿ flood ಆಯ್ಕೆ ಮಾಡಿಕೊಂಡು Year ನಲ್ಲಿ 2021-22 ಆಯ್ಕೆ ಮಾಡಿಕೊಳ್ಳಬೇಕು. ಆಧಾರ್ ಕಾರ್ಡ್ ನಮೂದಿಸಿದ ನಂತರ ಕ್ಯಾಪ್ಚಾ ಕೋಡ್ ನಮೂದಿಸಿ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ಹಿಂದಿನ ಅಂದರೆ ಡಿಸೆಂಬರ್ ತಿಂಗಳಲ್ಲಿ ಜಮೆಯಾದ ದಿನಾಂಕ ಎ್ಟು ಹಣ ಜಮೆಯಾಗಿರುವುದು, ಯಾವ ಬ್ಯಾಂಕಿನಲ್ಲಿ ಜಮೆಯಾಗಿದೆ ಎಂಬ ಮಾಹಿತಿ ಕಾಣುತ್ತದೆ. ಅದೇ ಮುಂದಿನ ಕಂತು ಜಮೆಯಾಗುವ ಸ್ಟೇಟಸ್ ಸಹ ಕಾಣುತ್ತದೆ.
ಇದನ್ನೂ ಓದಿ: ಬೆಳೆ ಸಾಲಮನ್ನಾ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಪರಿಹಾರವಿವರದಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆನಂಬರ್, ಬೆಳೆ, ಎಷ್ಟು ಎಕರೆಗೆ ಜಮೆಯಾಗಿದೆ ಎಂಬ ಮಾಹಿತಿ ಇರುತ್ತದೆ.