ರೈತರ ಬೆಳೆ ನೇರವಾಗಿ ಖರೀದಿಸಲು ಮುಂದಾಗಿದ್ದಾರೆ ನಟ ಉಪೇಂದ್ರ

Written by By: janajagran

Updated on:

Actor upendra buy crop ಕೊರೋನಾ  ಸೋಂಕು ತಡೆಯುವುದಕ್ಕಾಗಿ ಸರ್ಕಾರ ಹೇರಿದ್ದ ಲಾಕ್ಡೌನ್ ನಿಂದಾಗಿ ರೈತರು ತೀರ ಸಂಕಷ್ಟ ಎದುರಿಸುತ್ತಿದ್ದಾರೆ. ರೈತರ ಬೆಳೆಗಳಿಗೆ ಸೂಕ್ತ ಬೆಲೆಯಿಲ್ಲದೆ, ಹಾಕಿದ ಖರ್ಚು ಬರದೆ ಇರುವುದರಿಂದ ಕೆಲ ರೈತರು ತಮ್ಮ ಉತ್ಪನ್ನಗಳನ್ನು ರಸ್ತೆ ಮೇಲೆ ಎಸೆಯುತ್ತಿದ್ದಾರೆ.  ಕೆಲವರು ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಖರೀದಿಗೆ ಬರದೆ ಇರುವುದರಿಂದ ರಸ್ತೆಮೇಲೆ ಎಸೆದು ವಾಪಸ್ಸು ಬರುತ್ತಿದ್ದರಿಂದ ನಟ ಉಪೇಂದ್ರ ರೈತರ ನೆರವಿಗೆ (Actor upendra  buy crop ) ಧಾವಿಸಿದ್ದಾರೆ.

ಹೌದು ಕೊರೋನಾ ಸೋಂಕಿನಿಂದ ಸಂಕಷ್ಟದಲ್ಲಿ ಸಿಲುಕಿರುವ ರಾಜ್ಯದ ರೈತರಿಗೆ ನೆರವು ನೀಡಲು ಮುಂದಾಗಿದ್ದಾರೆ. ಬೆಳೆದ ಬೆಳೆಯನ್ನು ಸೂಕ್ತ ಸಮಯಕ್ಕೆ ಮಾರಾಟ ಮಾಡಲು ಆಗದೆ ಕಂಗಾಲಾಗಿರುವ ಅನ್ನದಾತರಿಗೆ ಅನುಕೂಲ ಮಾಡಲು ಒಪ್ಪಿಕೊಂಡಿದ್ದಾರೆ. ಈ ಕುರಿತು ಸ್ವತಃ ಅವರೇ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ ನಿಮ್ಮ ಮಕ್ಕಳಿಗೆ ಎಷ್ಟು ಸ್ಕಾಲರ್ ಶಿಪ್ ಬರುತ್ತಿದೆ? ಇಲ್ಲೇ ಚೆಕ್ ಮಾಡಿ

ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಇಲ್ಲದಾಗಿದೆ, ಹಣ್ಣು-ತರಕಾರಿಗಳನ್ನು ಹೇಗೆ ನಗರಗಳಿಗೆ ಸಾಗಣೆ ಮಾಡುವುದು, ಮಾರುಕಟ್ಟೆ ಎಲ್ಲಿದೆ ಎಂಬ ಚಿಂತೆಯಲ್ಲಿ ರೈತರಿದ್ದಾರೆ. ಕೆಲವು ಕಡೆಗಳಲ್ಲಿ ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆಯಿಲ್ಲದೆ ನೆಲದಲ್ಲಿ ಚೆಲ್ಲಿದ, ನಾಶಮಾಡಿದ ಉದಾಹರಣೆಗಳು ಸಾಕಷ್ಟಿವೆ. ಇದನ್ನೆಲ್ಲಾ ಕಂಡು ಉಪೇಂದ್ರರವರು ಟ್ವೀಟರ್ ನಲ್ಲಿ ಹೇಳಿಕೊಂಡಿರುವ ಮಾಹಿತಿ… ನೀವು ಬೆಳೆದ ಬೆಳೆಗಳ ಮಾಹಿತಿ ಒದಗಿಸಿ ಅದನ್ನು ನಾವು ಖರೀದಿಸುತ್ತೇವೆ ಎಂದು ಕರೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಉಪೇಂದ್ರ ಬೆಳೆದ ಬೆಳೆ ವ್ಯಾಪಾರವಾಗದೇ ಸಂಕಷ್ಟದಲ್ಲಿರುವ ರೈತರ ಗಮನಕ್ಕೆ…… ನಮಗೆ ಅವಶ್ಯಕತೆಯಿರುವ ಬೆಳೆಯನ್ನು ನಿಮ್ಮ ಬಳಿ ಸೂಕ್ತ ಬೆಲೆಗೆ ಎಖರೀದಿಸಿ ಅವಶ್ಯಕತೆಯಿರುವವರಿಗೆ ಹಂಚುತ್ತೇನೆ. ಈ ಕೆಳಗಿನ ಮೊಬಲ್ ಸಂಖ್ಯೆಗೆ (ಮೇ 24 ರೊಳಗೆ) 9845763396 ಕರೆ ಮಾಡಿ ಎಂದು ಕೇಳಿಕೊಂಡಿದ್ದಾರೆ.

ರೈತರಿಗೆ ಅನುಕೂಲವಾಗಲೆಂದು ನಟ ಉಪೇಂದ್ರರವರು ರೈತರ ಬೆಳೆ ಖರೀದಿಗೆ ಮುಂದಾಗಿದ್ದಾರೆ. ರೈತರ ಬೆಳೆ ಮಾರಾಟವಾಗದಿದ್ದರೆ ಅಪಾರ ಹಾನಿಯಾಗುತ್ತದೆ. ರೈತರ ಬೆಳೆ ಹಾನಿಯಾಗುವುದನ್ನು ತಡೆಯುವುದಕ್ಕಾಗಿ ಉಪೇಂದ್ರರವರು ಖರೀದಿ ಮಾಡುತ್ತಿದ್ದಾರೆ. ರೈತರು ಬೆಳೆದ ಉತ್ಪನ್ನ ಖರೀದಿಯಾಗದಿದ್ದರೆ ಹಾನಿಯಾಗುತ್ತದೆ. ಹಾಗಾಗಿ ರೈತರ ಉಪಯೋಗಕ್ಕಾಗಿ ಪ್ರತಿ ಸಲ ಏನಾದರೊಂದು ಹೊಸ ಹೊಸ ಕಾರ್ಯಗಳನ್ನ ಮಾಡುತ್ತಿರುತ್ತಾರೆ.  ನಟ ಉಪೇಂದ್ರರವರು ಮಾಡುತ್ತಿರುವ ಈ ಕಾರ್ಯಕ್ಕೆ ಅಭಿಮಾನಿಗಳು ಶ್ಲಾಘಿಸುತ್ತಿದ್ದಾರೆ ಇದರೊಂದಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.  ಇದೇ ರೀತಿ ಉಪಂದ್ರರವರು ಮುಂದೆ ಇಂತಹ ಕೆಲಸಗಳನ್ನು ಮಾಡುತ್ತಿರಬೇಕೆಂದು ಹಾರೈಸುತ್ತಿದ್ದಾರೆ.

ರೈತರು ಹಂಚಿಕೊಳ್ಳಬೇಕಾದ ಮಾಹಿತಿ..

ನೀವು ಬೆಳೆದ ಬೆಳೆ ಯಾವುದು?

ಆ ಬೆಳೆ ಎಷ್ಟು ಕೆಜಿ/ಕ್ವಿಂಟಾಲ್ ಇದೆ?

ಅದರ ಅಂತಿಮ ಬೆಲೆ ಎಷ್ಟು?

ಅದನ್ನು ಬೆಂಗಳೂರಿಗೆ ಸಾಗಿಸಲು ಸಾರಿಗೆ ವೆಚ್ಚ ಎಷ್ಟು?

ಈ ವಿವರಗಳನ್ನು ವ್ಯಾಟ್ಸ್ ಅಪರ್ ನಂಬರ್ 9845763396 ಗೆ ಕಳುಹಿಸಿಕೊಡಿ ಎಂದು ಉಪ್ಪೀ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

Leave a Comment