ನಿಮ್ಮ ಹೆಸರಿಗೆ ಎಫ್ಐಡಿ ಇದೆಯೋ ಇಲ್ಲವೋ? ಚೆಕ್ ಮಾಡಿ

Written by Ramlinganna

Published on:

Farmer check FID number ರೈತರು ತಮ್ಮ ಹೆಸರಿಗೆ ಎಫ್ಐಡಿ ಆಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ರೈತರ ಬಳಿಯಿರುವ ಮೊಬೈಲ್ ನಲ್ಲಿ ಆಧಾರ್ ನಂಬರ್ ಹಾಕಿ ಎಫ್ಐಡಿ ಆಗಿದೆಯೋ ಇಲ್ಲವೋ ಎಂಬುದನ್ನು ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

ರೈತರು ತೋಟಗಾರಿಕೆ, ಕೃಷಿ, ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೆ ಇಲಾಖೆಯ ವತಿಯಿಂದ ಸಬ್ಸಿಡಿ ಪಡೆಯಬೇಕಾದರೆ ಎಫ್ಐಡಿ ಇರುವದು ಕಡ್ಡಾಯವಾಗಿದೆ. ಹಾಗಾಗಿ ರೈತರು ಒಮ್ಮೆ ತಮ್ಮಹೆಸರಿಗೆ ಎಫ್ಐಡಿ ಆಗಿರುವುದನ್ನು ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು. ಹಾಗಾದರೆ  ಎಫ್ಐಡಿ ಹಾಗೂ ಪಿಎಂಕೆಐಡಿಯನ್ನು ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ.

ಕೃಷಿ ಇಲಾಖೆಯ ಬಳಿಯಿರುವ ರೈತರ ದಾಖಲೆಗಳ ಆಧಾರದ ಮೇಲೆ ಈಗಾಗಲೇ ಬಹಳಷ್ಟು ರೈತರ ಎಫ್ಐಡಿ ಮಾಡಲಾಗಿದೆ. ಆದರೂ ಸಹ ಇನ್ನೂ ಬಹಳಷ್ಟು ರೈತರಿಗೆ ಎಫ್ಐಡಿ ಆಗಿದೆಯೋ ಇಲ್ಲವೋ ಎಂಬುದು ಗೊತ್ತಿರುವುದಿಲ್ಲ. ಹಾಗಾಗಿ ರೈತರು ತಮ್ಮ ಹೆಸರಿಗೆ ಎಫ್ಐಡಿ ಆಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಲು  ಈ

https://fruitspmk.karnataka.gov.in/MISReport/GetDetailsByAadhaar.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಫ್ರೂಟ್ಸ್ ತಂತ್ರಾಂಶದ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಆಧಾರ್ ಕಾರ್ಡ್ ನಮೂದಿಸಬೇಕು. ನಂತರ Search ಮೇಲೆ ಕ್ಲಿಕ್ ಮಾಡಬೇಕು.

ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಫಾರ್ಮರ್ಸ್ ಡಿಟೇಲ್ಸ್ ಕೆಳಗಡೆ FruitID ಇರುತ್ತದೆ. ನಿಮ್ಮ ಎಫ್ಐಡಿ ಸಂಖ್ಯೆಯು  FID ಇದ್ದು, ಅದರ ಮುಂದುಗಡೆ ಕೆಲವು ಅಂಕಿಗಳು ಇರುತ್ತದೆ. ಉದಾಹರಣೆಗೆ FID……… ಇಲ್ಲಿ ಎಫ್ಐಡಿ ಅಂಕಿಗಳು ಕಾಣಿಸುತ್ತವೆ. ರೈತರು ತಮ್ಮ ಎಫ್ಐಡಿ ಸಹಾಯದಿಂದ ಯಾವ ಯಾವ ಸರ್ವೆ ನಂಬರ್ ಗಳನ್ನು ಎಫ್ಐಡಿಯಲ್ಲಿ ಸೇರಿಸಲಾಗಿದೆ ಎಂಬುದನ್ನ ಚೆಕ್ ಮಾಡಬಹುದು.

ಇದನ್ನೂ ಓದಿ : ನಿಮ್ಮ ಜಮೀನಿಗೆ ಮುಟೇಶನ್ ಆಗಿದೆಯೇ? ಇಲ್ಲೇ ಚೆಕ್ ಮಾಡಿ

ಇದರೊಂದಿಗೆ ಅಲ್ಲಿ ಕಾಣುವ ಪಿಎಂಕೆವೈಡಿ ಸಹಾಯದಿಂದ  ರೈತರು ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡಬಹುದು. ಅಂದರೆ ಇಲ್ಲಿಯವರೆಗೆ ನಿಮಗೆ ಪಿಎಂ ಕಿಸಾನ್ ಯೋಜನೆಯ ಎಷ್ಟು ಕಂತುಗಳು ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಬಹುದು.

Farmer check FID number ರೈತರ ಹೆಸರಿಗೆ  ಎಫ್ಐಡಿ ಇರದಿದ್ದರೆ ರೈತರೇನು ಮಾಡಬೇಕು?

ಯಾವ ರೈತರಿಗೆ ಎಫ್ಐಡಿ ಆಗಿಲ್ಲವೋ ಅವರು ಮೊಬೈಲ್ ನಲ್ಲೇ ಎಫ್ಐಡಿ ಗೆ ಅರ್ಜಿ ಸಲ್ಲಿಸಬಹುದು. ಅಥವಾ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಸಲ್ಲಿಸಬಹುದು.  ಅರ್ಜಿ ಸಲ್ಲಿಸುವಾಗ ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ, ಜಮೀನಿನ ದಾಖಲೆಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಆರ್.ಡಿ. ಸಂಖ್ಯೆಯಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಇತ್ತೀಚನ ಭಾವಚಿತ್ರ ಸಲ್ಲಿಸಬೇಕು.

ಪಿಎಂ ಕಿಸಾನ್  ಇಕೆವೈಸಿ ಆಗಿದೆಯೋ ಇಲ್ಲವೋ? ಮೊಬೈಲ್ ನಲ್ಲೇ ಚೆಕ್ ಮಾಡಿ

ಯಾವ ರೈತರು ಪಿಎಂ ಕಿಸಾನ್ ಯೋಜನೆಗೆ ಇಕೆವೈಸಿ ಮಾಡಿಸಿಲ್ಲವೋ ಕೂಡಲೇ ಇಕೆವೈಸಿ ಮಾಡಿಸಿಕೊಳ್ಳಬೇಕು. ಇಕೆವೈಸಿ ಮಾಡಿಸಿದರೆ ಮಾತ್ರ ನಿಮಗೆ ಪಿಎಂ ಕಿಸಾನ್ ಯೋಜನೆಯ ಹಣ ಜಮೆಯಾಗುತ್ತದೆ. ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಿದ ರೈತರು ಇಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://exlink.pmkisan.gov.in/aadharekyc.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಓಟಿಪಿ ಬೇಸ್ಡ್ ಇಕೆವೈಸಿ ಕೆಳಗಡೆ ನಿಮ್ಮ ಆಧಾರ್ ಕಾರ್ಡ್ ನಮೂದಿಸಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇಕೆವೈಸಿ ಆಗಿದೆಯೋ ಇಲ್ಲವೋ ಎಂಬ ಮೆಸೆಜ್ ಬರುತ್ತದೆ.

Leave a Comment