ನಿಮ್ಮ LIC policy Status Mobile ನಲ್ಲಿ ಚೆಕ್ ಮಾಡಿ

Written by By: janajagran

Published on:

LIC policy Status Mobile ನಲ್ಲಿ ಚೆಕ್ ಮಾಡಬಹುದು ಹೌದು, ಎಲ್ಐಐಸಿ  ಮಾಡಿಸಿದವರೆಲ್ಲರೂ ತಮ್ಮ ಎಲ್ಐಸಿ ಸ್ಟೇಟಸನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ನಮ್ಮ ಯೂಟೂಬ್ ಚಾನೆಲ್ ಸಬಸ್ಕ್ರೈಬ್ ಮಾಡಿ ಇಂತಹ ಮಾಹಿತಿ ಮೊಬೈಲ್ ನಲ್ಲೇ ಪಡೆಯಿರಿ

ಇದಕ್ಕಾಗಿ ನಿಮ್ಮ ಬಳಿ ಫೋನ್ ಇದ್ದರೆ ಸಾಕು, ಇದರೊಂದಿಗೆ ನಿಮ್ಮ ಎಲ್ಐಸಿ ನಂಬರ್ ನೆನಪಿರಬೇಕು. ಈ ಕೆಳಗಡೆ ನೀಡಲು ಸುಲಭ ಮಾರ್ಗದ ಮೂಲಕ ಎಲ್ಐಸಿ ಸ್ಟೇಟಸನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸ್ಟೇಪ್ ಬೈ ಸ್ಟೇಪ್ ಮಾಹಿತಿ.

ಆಡು ಮುಟ್ಟದ ಸೊಪ್ಪಿಲ್ಲ, ಎಲ್ಐಸಿ (LIC) ಇಲ್ಲದ ಮನೆಯಿಲ್ಲ’ ಎಂಬಂತೆ ಪ್ರತಿಯೊಂದು ಕುಟುಂಬದಲ್ಲಿ ಒಬ್ಬರಾದರೂ ಎಲ್ಐಸಿ ವಿಮೆ ಮಾಡಿಸಿಯೇ ಇರುತ್ತಾರೆ. ಪಾಲಿಸಿ ಇಲ್ಲದ ಮನೆ ಊಹಿಸಿಕೊಳ್ಳಲಿಕ್ಕೆ ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಎಲ್ಐಸಿ ಪ್ರಸಿದ್ಧಿ ಹೊಂದಿದೆ. ದೇಶದ ಮೂಲೆ ಮೂಲೆಯಲ್ಲಿ ಜನತೆ ಒಂದಿಲ್ಲೊಂದು ಎಲ್ಐಸಿಯನ್ನು ಮಾಡಿಸಿರುತ್ತಾರೆ.

ನಿಮ್ಮ ಪಾಲಿಸಿಯ ಮಾಹಿತಿಯನ್ನು ಪಡೆಯಲು ಈಗ ನೀವು  ಏಜೆಂಟರುಗಳಿಗೆ ಅಥವಾ ಎಲ್ಐಸಿ ಕಚೇರಿಗಳಿಗೆ ಹೋಗಿ ಕೇಳುವ ಅವಶ್ಯಕತೆಯಿಲ್ಲ. ಮನೆಯಲ್ಲಿಯೇ ಕುಳಿತು (Check online LIC Policy status) ಎಲ್ಐಸಿ ಯಾವಾಗ ಮ್ಯಾಚುರಿಟಿ ಆಗುತ್ತದೆ. ನಿಮ್ಮ ಪಾಲಿಸಿಯ ಬೋನಸ್, ಸ್ಟೇಟಸ್, ಸಾಲ ತೆಗೆದುಕೊಂಡಿದ್ದರೆ ಸಾಲದ ಮಾಹಿತಿಯೂ ಮೊಬೈಲ್ ನಲ್ಲಿಯೇ ನೋಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಮಾಹಿತಿ.

ನಿಮ್ಮ LIC policy Status Mobile ತಿಳಿದುಕೊಳ್ಳಲು ಈ ಕೆಳಗೆ ಸೂಚಿಸಿದಂತೆ ಮಾಡಿದರೆ ಸಾಕು. ಎಲ್ಐಸಿ ಪಾಲಿಸಿಯ ಮಾಹಿತಿಗಳಲ್ಲಿ ಪಾಲಿಸಿ ದರ್ಜೆ (status), ಪ್ರೀಮಿಯಂ ಕಟ್ಟುವುದು, ಬೋನಸ್ ಬಗೆಗಿನ ಮಾಹಿತಿ ಮತ್ತು ಶರಣಾಗತಿ ಮೌಲ್ಯ(surrender value) ಇವೆಲ್ಲವನ್ನು ಸುಲಭವಾಗಿ ಮಾಹಿತಿ ಪಡೆಯಬಹುದು.

LIC policy Status Mobile ನಲ್ಲೇ ಚೆಕ್ ಮಾಡುವುದು ಹೇಗೆ?

ನಿಮ್ಮ ಮೊಬೈಲ್ ಗೂಗಲ್ ನಲ್ಲಿ LIC ಟೈಪ್ ಮಾಡಬೇಕು. ಆಗ ಕೆಳಗಡೆ customer portal ಮೇಲೆ ಕ್ಲಿಕ್ ಮಾಡಬೇಕು. ಅಥವಾ

https://licindia.in/Home-(1)/LICOnlineServicePortal

ಈ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸಾಕು. ಎಲ್ಐಸಿ ನ್ಯೂ ಯುಸರ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು New User ಮೇಲೆ ಕ್ಲಿಕ್ ಮಾಡಬೇಕು. ನಂತರ ಅಕೌಂಟ್ ಓಪನ್ ಮಾಡುವ ಪೇಜ್ ಓಪನ್ ಆಗುತ್ತದೆ. ಅಥವಾ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೂ ಸಹ ನೇರವಾಗಿ

https://ebiz.licindia.in/D2CPM/?_ga=2.44073316.112911503.1616004771-1997612316.1614659821#Register

ನೇರವಾಗಿ ಪೇಜ್ ಓಪನ್ ಆಗುತ್ತದೆ. ಇಲ್ಲಿ ಪಾಲಿಸಿ ನಂಬರ್, ಇನ್ಸಟಾಲ್ಮೆಂಟ್ ಪ್ರಿಮಿಯಂ ಹಣ, ಜನ್ಮ ದಿನಾಂಕ, ಮೊಬೈಲ್ ನಂಬರ್, ಈ ಮೇಲ್ ಐಡಿ ಇದ್ದರೆ (ಈ ಮೇಲ್ ಐಡಿ) ಪುರುಷ ಮಹಿಳೆ ಎರಡಲ್ಲಿ ಪುರುಷರಾಗಿದ್ದರೆ ಮೇಲ್ ಮಹಿಳೆಯರಾಗಿದ್ದರೆ ಫಿಮೇಲ್ ಆಯ್ಕೆ ಮಾಡಿಕೊಳ್ಳಬೇಕು. ಪ್ರೊಸೀಡ್ ಆಫಷನ್ ಮೇಲೆ ಕ್ಲಿಕ್ ಮಾಡಿ ಪಾಸ್ವರ್ಡ್ ಸೆಟ್ ಮಾಡಿಕೊಂಡ ನಂತರ ನಿಮ್ಮ User ID ಎಲ್ಐಸಿ ಪೋರ್ಟಲ್ ನಲ್ಲಿ ನೋಂದಾವಣೆಯಾಗುತ್ತದೆ.

ಇದನ್ನೂ ಓದಿನಿಮ್ಮ ಯಾವ ಯಾವ ಜಮೀನು ಜಂಟಿಯಲ್ಲಿದೆ? ಇಲ್ಲೇ ಚೆಕ್ ಮಾಡಿ

ಆಗ ನಿಮ್ಮ ಯೂಸರ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ  ನೀವು ಎಲ್ಐಸಿ ಪಾಲಿಸಿಯ ಮಾಹಿತಿಗಳಲ್ಲಿ ಪಾಲಿಸಿ ದರ್ಜೆ (status), ಪ್ರೀಮಿಯಂ ಕಟ್ಟುವುದು, ಬೋನಸ್ ಬಗೆಗಿನ ಮಾಹಿತಿ ಮತ್ತು ಶರಣಾಗತಿ ಮೌಲ್ಯ(surrender value) ಇವೆಲ್ಲವನ್ನು ಸುಲಭವಾಗಿ ಮಾಹಿತಿ ಪಡೆಯಬಹುದು ಇನ್ನೇಕೆ ತಡ, ನಿಮ್ಮ ಎಲ್ಐಸಿ ನಂಬರ್ ಹಾಕಿ ಚೆಕ್ ಮಾಡಿ ನೋಡಿ.

Leave a Comment