Dhan teras ದಿನ ಕೆಲವು ಉಪಕರಣಗಳನ್ನೇಕೆ ಖರೀದಿಸಬೇಕು. ಬಡವರು ಶ್ರೀಮಂತರು ತಮ್ಮ ಆರ್ಥಿಕ ಸ್ಥಿತಿಗನುಸಾರವಾಗಿ ಯಾವ ಯಾವ ಉಪಕರಣಗಳನ್ನು ಖರೀದಿಸಬೇಕು ಎಂಬುದರ ಮಾಹಿತಿ ಇಲ್ಲಿದೆ.
ಧನ್ ತೆರೆಸ್ ದಿನ ಯಾವ ವಸ್ತುಗಳನ್ನು ಖರೀದಿಸಿದರೆ ಲಕ್ಷ್ಮೀ ದೇವತೆ ಮನೆಗೆ ಆಗಮಿಸುತ್ತಾಳೆ ಎಂಬ ಆಲೋಚನೆಯಲ್ಲಿದ್ದೀರಾ? ಇಲ್ಲಿ ನೀಡಲಾದ ಉಪಕರಣಗಳಲ್ಲಿ ಯಾವುದಾದರೊಂದನ್ನು ಖರೀದಿ ಮಾಡಿ ನೀವು ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಛರಿಸಬಹುದು.
ದೀಪಾವಳಿ ಹಬ್ಬದ ಎರಡು ದಿನ ಮೊದಲು ಬರುವ ಧನ್ ತೆರಸ್ ದಿನ ಕೆಲವು ವಸ್ತುಗಳನ್ನು ಖರೀದಿಸಿ ಲಕ್ಷ್ಮೀ ದೇವಿಯ ಅನುಗ್ರಹ ಪಡೆದುಕೊಳ್ಳುತ್ತಾರೆ. ಹಾಗಾದರೆ ಯಾವ ಯಾವ ವಸ್ತುಗಳನ್ನು ಖರೀದಿಸಬೇಕು. ಈ ದಿನ ಕೆಲವು ವಸ್ತುಗಳನ್ನೇಕೆ ಖರೀದಿಸಬೇಕು. ಆ ವಸ್ತುಗಳ ಮಹತ್ವವೇನು ಇಲ್ಲಿದೆ ಮಾಹಿತಿ.
ದೀಪಾವಳಿ ಹಬ್ಬ ಬಂತೆಂದರೆ ಸಾಕು, ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರಲ್ಲೂ ಜಗಮಗಿಸುವ ಬೆಳಕು.ಹೂವು, ದೀಪಗಳಿಂದ ಅಲಂಕಾರ ತುಂಬಿರುತ್ತದೆ. ಹಬ್ಬಕ್ಕೆ ಇನ್ನೇನು ಎರಡೇ ದಿನ ಉಳಿಯಿತು. ಖರೀದಿಯ ಭರಾಟೆ ಜೋರಾಗಿ ನಡೆಯುತ್ತಿದೆ. ನವೆಂಬರ್ 10 ರಂದು ಶುಕ್ರವಾರ Dhan teras ಆಚರಿಸಲಾಗುವುದು.ಈ ದಿನ ಧನ್ವಂತರಿ ದೇವನನ್ನು, ಲಕ್ಷ್ಮೀ ದೇವಿಯನ್ನು ಹಾಗೂ ಕುಬೇರ ದೇವನಿಗೆ ಪೂಜಿಸುವ ಸಂಪ್ರದಾಯವಿದೆ. ಈ ದಿನ ಹೊಸ ವಸ್ತುಗಳನ್ನು ಖರೀದಿಸುವುದು ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಕೆಲವು ವಸ್ತುಗಳನ್ನು ಖರೀದಿಸಿದರೆ ಸಂಪತ್ತು ಮತ್ತು ಲಕ್ಷ್ಮೀ ದೇವಿಯ ಆಶೀರ್ವಾದವನ್ನು ತರುತ್ತದೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ : ನಿಮ್ಮ ಜಮೀನು ಯಾರ ಹೆಸರಿನೊಂದಿಗೆ ಎಷ್ಟು ಎಕರೆ ಜಂಟಿಯಾಗಿದೆ? ಇಲ್ಲೇ ಚೆಕ್ ಮಾಡಿ
ಕೇವಲ ಬಂಗಾರ, ಬೆಳ್ಳಿ ಖರೀದಿಸುವುದಷ್ಟೇ ಅಲ್ಲ, ಬಡವರೂ ಸಹ ಧನತೆರಸ್ ದಿನ ಕಡಿಮೆ ದರದಲ್ಲಿ ಕೆಲವು ವಸ್ತುಗಳನ್ನು ಖರೀದಿಸಬಹುದು.
ಎಣ್ಣೆ ದೀಪಗಳು
ದೀಪಗಳನ್ನು ಬೆಳಗಿಸಿದರೆ ಲಕ್ಷ್ಮೀ ದೇವಿಯು ಮನೆಗೆ ಆಗಮನವಾಗುತ್ತಾಳೆ. ಎಣ್ಣೆ ದೀಪಗಳನ್ನು ಬೆಳೆಗಿಸಬೇಕು. ಇದನ್ನೇ ದಿಯಾಸ್ ಎಂದು ಕರೆಯಲಾಗುವುದು. ದುಷ್ಟಶಕ್ತಿಗಳನ್ನು ಮತ್ತು ಕತ್ತಲೆಯನ್ನು ಹೊರ ಹಾಕಲಾಗುವುದು ಎಂಬ ವಾಡಿಕೆ.
ಗೋಮತಿ ಚಕ್ರ
ಗೋಮತಿ ಯಕ್ರ ಲಕ್ಷ್ಮೀ ದೇವಿಯನ್ನು ಪೂಜಿಸಲು ಪವಿತ್ರವೆಂದು ಭಾವಿಸಲಾಗುವುದು. ವಿಶೇಷವಾಗಿ ದೀಪಾವಳಿಯಲ್ಲಿ ಇದನ್ನು ಪೂಜೆಗೆ ಬಳಸಲಾಗುವುದು. ದುಷ್ಟ ಕಣ್ಣಿನಿಂದ ದೂರವಿರಲುಇದನ್ನ ಮನೆಯಲ್ಲಿ ಇಡಲಾಗುವುದು.
ಹಿತ್ತಾಳೆ, ತಾಮ್ರ ಪಾತ್ರೆಗಳ ಖರೀದಿ
ಧನ್ ತೆರೆಸ್ ದಿನ ಹಿತ್ತಾಳೆ ಹಾಗೂ ತಾಮ್ರದ ಅಡಿಕೆ ಪಾತ್ರೆಗಳನ್ನು ಸಹ ಖರೀದಿಸಲಾಗುವುದು. ಅದರಲ್ಲಿ ಪ್ರಸಾದವನ್ನು ತಯಾರಿಸಿ ಹಂಚುವ ಮೂಲಕ ಅದನ್ನು ಪ್ರತಿನಿತ್ಯ ಬಳಸುವುದು ವಾಡಿಕೆ.
ಪೊರಕೆ ಖರೀದಿ
ಬೆಲೆ ಬಾಳುವ ಉಪಕರಣಗಳನ್ನು ಖರೀದಿಸಲು ಸಾಧ್ಯವಾಗದಿದ್ದರೆ ಪೊರಕೆಯನ್ನು ಸಹ ಖರೀದಿಸಬಹುದು. ಹೌದು, ಅಮೂಲ್ಯ ವಸ್ತುಗಳನ್ನ ಖರೀದಿಸಲು ಹಣವಿಲ್ಲದಿದ್ದರೆ ಈ ದಿನ ಪೊರಕೆ ಖರೀದಿಸಿಕೊಳ್ಳಬಹುದು. ಇದನ್ನು ಸಹ ಅದೃಷ್ಟ ಹಾಗೂ ಮಂಗಳಕರವಂದು ಪರಿಗಣಿಸಲಾಗಿದೆ.ಮನೆಗೆ ಪೊರಕೆ ಖರೀದಿಸಿದರೆ ಮನೆಯಿಂದ ಬಡತನ ದೂರವಾಗುತ್ತದೆ ಎಂಬ ವಾಡಿಕೆಯಿದೆ.
ಬೆಳ್ಳಿ ಮತ್ತು ಬಂಗಾರ ಖರೀದಿ
ತಮಗೆಲ್ಲಾ ಗೊತ್ತಿದ್ದ ಹಾಗೆ ಧನ್ ತೆರೆಸ್ ದಿನ ಬೆಳ್ಳಿ ಖರೀದಿಗೂ ಮಂಗಳಕರವೆಂದು ಪರಿಗಣಿಸಲಾಗುವುದು. ಬೆಳ್ಳಿ ನಾಣ್ಯ, ಬೆಳ್ಳಿ ಪೂಜೆ ಸಾಮಾಗ್ರಿಗಳನ್ನು ಖರೀದಿಸುವುದು ವಾಡಿಕೆ. ಮತ್ತು ಇದು ಶುದ್ಧತೆಯ ಸಂಕೇತವಾಗಿದೆ.