ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಭಾರಿ ಮಳೆಯಾಗುವ ಸಾಧ್ಯತೆ

Written by Ramlinganna

Updated on:

Rain alert nine districts ಮುಂದಿನ ನಾಲ್ಕು ದಿನ ರಾಜ್ಯದ ದಕ್ಷಿಣ ಒಳನಾಡಿನ 9 ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿರುವುದರಿಂದ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ನವೆಂಬರ್ 4 ರಂದು ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇದರೊಂದಿಗೆ ನವೆಂಬರ್ 5 ರಂದು ಚಾಮರಾಜನಗರ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಯಲ್ಲಿ ಮಳೆಯಾಗಲಿದೆ. ನವೆಂಬರ್ 6 ರಂದು ಕೊಡಗು, ಚಿಕ್ಕಮಗಳೂರು, ಹಾಸನ, ಚಾಮರಾಜನಗರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ. ನವೆಂಬರ್ 7 ರಂದು ಶಿವಮೊಗ್ಗ, ತುಮಕೂರು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಉಳಿದಂತೆ ಮುಂದಿನ ಒಂದು ವಾರ ದಕ್ಷಿಣ ಒಳನಾಡು, ಕರಾವ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ. ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ ಕೊನೆಗೂ ಬರಗಾಲ ಪರಿಹಾರ ಹಣ ಬಿಡುಗಡೆಃ ನಿಮಗೆಷ್ಟು ಜಮೆಯಾಗಿದೆ? ಇಲ್ಲೇ ಚೆಕ್ ಮಾಡಿ

ಶುಕ್ರವಾರ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಪುತ್ತೂರಿನಲ್ಲಿ ಅತೀ ಹೆಚ್ಚು 3 ಸೆಂ.ಮೀ ಮಳೆಯಾಗಿದೆ. ಪಣಂಬೂರಿನಲ್ಲಿ 2 ಸೆಂ.ಮೀ. ಮಳೆಯಾದ ವರದಿಯಾಗಿದೆ.

Rain alert nine districts ಕರಾವಳಿಯಲ್ಲಿ ಸಿಡಿಲಿಬ್ಬರದ ಮಳೆ

ಕರಾವಳಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಗುಡುಗು ಮಿಂಚು, ಸಿಡಿಲಿನ ಮಳೆ ಶುಕ್ರವಾರವೂ ಮುಂದುವರೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರಗಳಲ್ಲಿ ಶುಕ್ರವಾರ ಸಂಜೆಯಿಂದ ಗುಡುಗು ಸಹಿತ ಮಳೆಯಾಗಿದೆ.ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ನವಂಬರ್ 5 ರವರೆಗೊ ಕರಾವಳಿಯಲ್ಲಿಉತ್ತಮ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅಪರಾಹ್ನ ಮೋಡ ಕವಿದ ವಾತಾವರಣ ಕಂಡುಬಂದಿತ್ತು. ಸಂಜೆ ವೇಳೆಗೆ ಗ್ರಾಮಾಂತರ ಭಾಗದ ಹಲವೆಡೆ ಗುಡುಗು ಸಹಿತ ಮಳೆ ಸುರಿದಿದೆ. ಬೆಳ್ತಂಗಡಿ, ನಾರಾವಿ, ಚಾರ್ಮಾಡಿ, ಧರ್ಮಸ್ಥಳ, ಪುತ್ತೂರು, ಕಡಬ, ಸುಳ್ಯ ಭಾಗದಲ್ಲಿ ಮಳೆಯಾಗಿದೆ.

ಇಂದು ಯಾವ ಯಾವ ಊರಿನಲ್ಲಿ ಮಳೆಯಾಗುತ್ತದೆ? ಈ ನಂಬರಿಗೆ ಕರೆ ಮಾಡಿ

ಇಂದು ಯಾವ ಯಾವ ಊರಿನಲ್ಲಿ ಮಳೆಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ವರುಣಮಿತ್ರ ಸಹಾಯವಾಣಿ ನಂಬರಿಗೆ ಕರೆ ಮಾಡಬೇಕು. ಹೌದು, ವರುಣಮಿತ್ರ ಸಹಾಯವಾಣಿ ನಂಬರ್ 92433 45433 ಗೆ ಕರೆ ಮಾಡಿದರೆ ಸಾಕು, ನಿಮಗೆ ಮಳೆಯ ಮಾಹಿತಿ ಸಿಗುತ್ತದೆ. ಈ ನಂಬರ್  ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ.  ನೀವು ಇದ್ದ ಊರಿನಲ್ಲಿಯೂ ಮುಂದಿನ ಐದು ದಿನದ ಹವಾಮಾನದ ವರದಿಯನ್ನು ನೀಡಲಾಗುವುದು. ಇದಕ್ಕಾಗಿ ರೈತರು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಸಂಪೂರ್ಣ ಉಚಿತವಾಗಿರುತ್ತದೆ.

ಇನ್ನೇಕೆ ತಡ ವರುಣಮಿತ್ರ ಸಹಾಯವಾಣಿ ನಂಬರ್ 92433 45433 ಗೆ ಕರೆ ಮಾಡಿ  ನಿಮ್ಮೂರಿನ ಸುತ್ತಮುತ್ತ ಮಳೆಯಾಗುತ್ತೋ ಇಲ್ಲವೋ ಎಂಬ ಮಾಹಿತಿ ಪಡೆಯಿರಿ.

ಮೇಘದೂತ್ ಆ್ಯಪ್ ಡೌನ್ಲೋಡ್ ಮಾಡಿ  ಐದು ದಿನ ಮೊದಲೇ ಮಳೆಯ ಮಾಹಿತಿ ಪಡೆಯುವುದು ಹೇಗೆ?

ರೈತರು ಮನೆಯಲ್ಲಿಯೇ ಕುಳಿತು ಐದು ದಿನ ಮೊದಲೇ ಮಳೆಯಾಗುತ್ತೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು. ಹೌದು,  ಈ

https://play.google.com/store/apps/details?id=com.aas.meghdoot&hl=en_IN&gl=US

ಲಿಂಕ್ ಮೇಲ ಕ್ಲಿಕ್ ಮಾಡಿ ಮೇಘದೂತ್ ಆ್ಯಪ್ ಇನಸ್ಟಾಲ್ ಮಾಡಿಕೊಳ್ಳಬಹುದು. ನಂತರ ಇನಸ್ಟಾಲ್ ಮೇಲೆ ಕ್ಲಿಕ್ ಮಾಡಿ ಓಪನ್ ಮೇಲೆ ಕ್ಲಿಕ್ ಮಾಡಬೇಕು. ನೀವು ಯಾವ ಭಾಷೆಯಲ್ಲಿ ಮಾಹಿತಿ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ಭಾಷೆ ಆಯ್ಕೆ ಮಾಡಿಕೊಳ್ಳಬೇಕು, ನಂತರ ಮುಂದೆ ಮೇಲೆ ಕ್ಲಿಕ್ ಮೇಘದೂತ್ ಆ್ಯಪ್ ಲಾಗಿನ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಲಾಗಿನ್ ಆಗಬೇಕು. ನಂತರ ವೈಲ್ ಯೂಸಿಂಗ್ ದ ಆ್ಯಪ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಜಿಲ್ಲೆಯ ಕನಿಷ್ಠ, ಗರಿಷ್ಠ ತಾಪಮಾನ, ಗಾಳಿಯ ವೇಗ ಹಾಗೂ ಗಾಳಿಯ ದಿಕ್ಕು ತೇವಾಂಶದ ಮಾಹಿತಿ ಕಾಣಿಸುತ್ತದೆ.

Leave a Comment