ರೈತರು ಮನೆಯಲ್ಲಿಯೇ ಕುಳಿತು ತಮ್ಮ ಹಳೆಯ ಪಹಣಿ ( Check land old RTC ) ಯನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ರೈತರ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
ಯೂಟೂಬ್ ಚಾನೆೆೆಲ್ ಸಬಸ್ಕ್ರೈಬ್ ಮಾಡಿ
Check land old RTC ಮೊಬೈಲ್ ನಲ್ಲೇ ಹಳೆಯ ಪಹಣಿ ಚೆಕ್ ಮಾಡುವುದು ಹೇಗೆ?
ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಹಳೆಯ ಪಹಣಿ ಚೆಕ್ ಮಾಡಲು ಈ
https://landrecords.karnataka.gov.in/Service2/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂಮಿ ಆನ್ಲೈನ್ ಲ್ಯಾಂಡ್ ರಿಕಾರ್ಡ್ ವೀವ್ ಪೇಜ್ ತೆರೆದುಕೊಳ್ಳುತ್ತದೆ.ಅಲ್ಲಿ ನಿಮಗೆ ಪ್ರಸಕ್ತ ವರ್ಷ, ಹಳೆಯ ವರ್ಷ, ಮೊಟೇಶನ್ ಸ್ಟೇಟಸ್, ಖಾತಾ, ಸರ್ವೆ ಡಾಕುಮೆಂಟ್, ಆಕಾರಬಂದ್ ಹೀಗೆ ಆಯ್ಕೆಗಳು ಕಾಣಿಸುತ್ತವೆ.
ಅದರಲ್ಲಿ ನೀವು Old Year ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು.
ನಿಮ್ಮ ಊರು ಆಯ್ಕೆ ಮಾಡಿಕೊಂಡ ನಂತರ ಸರ್ವೆ ನಂಬರ್ ನಮೂದಿಸಬೇಕಾಗುತ್ತದೆ. ನಿಮ್ಮ ಸರ್ವೆ ನಂಬರ್ ನಮೂದಿಸದ ನಂತರ Go ಮೇಲೆ ಕ್ಲಿಕ್ ಮಾಡಬೇಕು. ಸರ್ನೋಕ್ ನಲ್ಲಿ ಸ್ಟಾರ್ ಆಯ್ಕೆ ಹಿಸ್ಸಾ ನಂಬರ್ ಗೊತ್ತಿದ್ದರೆ ಹಿಸ್ಸಾ ನಂಬರ್ ನಮೂದಿಸಬೇಕು. ನಂತರ ಆಗ ನಿಮ್ಮ ಪಿರಿಯಡ್ ನಲ್ಲಿ ನಿಮ್ಮಹಳೆಯ ಪಹಣಿ ಯಾವ ವರ್ಷದಿಂದ ಚೆಕ್ ಮಾಡಬಹುದು ಎಂಬ ಆಯ್ಕೆ ಕಾಣಿಸುತ್ತವೆ.
ಇದನ್ನೂ ಓದಿ : Crop loan ಈ ಪಟ್ಟಿಯಲ್ಲಿದ್ದವರಿಗೆ ಮಾತ್ರ ಬೆಳೆ ಸಾಲ ಮನ್ನಾ: ನಿಮ್ಮ ಹೆಸರು ಇಲ್ಲೇ ಚೆಕ್ ಮಾಡಿ
ಅಲ್ಲಿ ನೀವು ಯಾವ ವರ್ಷದಿಂದ ಪಹಣಿ (ಆರ್.ಟಿ.ಸಿ) ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ವರ್ಷ ಆಯ್ಕೆ ಮಾಡಿಕೊಳ್ಳಬೇಕು. ನಂತರ Fetch details ಮೇಲೆ ಕ್ಲಿಕ್ ಮಾಡಬೇಕು.
ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಹೆಸರು ಕಾಣಿಸುತ್ತದೆ. ಅದ ಮುಂದುಗಡೆ ಖಾತಾ ನಂಬರ್ ಸಹ ಕಾಣಿಸುತ್ತದೆ. ಅಲ್ಲಿ View ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅದೇ ನಿಮ್ಮಜಮೀನಿನ ಪಹಣಿ ಆಗಿರುತ್ತದೆ.
ಪಹಣಿ ದಾಖಲೆಯಲ್ಲಿ ನೀವು ನಮೂದಿಸಿದ ಸರ್ವೆನಂಬರ್ ಕಾಣಿಸುತ್ತದೆ. ಇದರೊಂದಿಗೆ ನಿಮಗೆ ಎಷ್ಟು ಎಕರೆ ಜಮೀನಿದೆ? ನಿಮ್ಮ ಜಮೀನು ಪಟ್ಟಾ ಆಗಿದೆಯೋ ಇಲ್ಲವೋ ಎಂಬ ಮಾಹಿತಿಯೂ ಕಾಣಿಸುತ್ತದೆ. ಇದರೊಂದಿಗೆ ನಿಮ್ಮ ಜಮೀನಿನ ಪಹಣಿ ನೀವು ಯಾವ ವರ್ಷದಿಂದ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ವರ್ಷ ಕಾಣಿಸುತ್ತದೆ.
ಈ ದಾಖಲೆಯನ್ನು ಮೊಬೈಲ್ ನಲ್ಲಿ ನೋಡುವುದಕ್ಕಾಗಿ ಇರುತ್ತದೆ. ನೀವು ಈ ಪಹಣಿಯನ್ನು ಪಹಣಿ ಪಡೆಯಲು ನಿಗದಿಪಡಿಸಿದ ಶುಲ್ಕವನ್ನು ಪಾವತಿಸಿ ಆನ್ಲೈನ್ ನಲ್ಲಿ ಪ್ರಿಂಟ್ ತೆಗೆದುಕೊಳ್ಳಬಹುದು.
ಜಮೀನಿನ ಮುಟೇಶನ್ ಚೆಕ್ ಮಾಡುವುದು ಹೇಗೆ?
ರೈತರು ತಮ್ಮ ಜಮೀನಿನ ಮುಟೇಶನ್ ನ್ನು ಸಹ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ಈ
https://landrecords.karnataka.gov.in/Service12/MutationStatus.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮುಟೇಶನ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸರ್ವೆ ನಂಬರ್ ನಮೂದಿಸಬೇಕು. ಇದಾದ ನಂತರ ಸರ್ನೋಕ್ ನಲ್ಲಿ ಸ್ಟಾರ್ ಹಾಗೂ ಹಿಸ್ಸಾ ನಂಬರ್ ನಮೂದಿಸಬೇಕು. ನಂತರ Fetch Details ಮೇಲೆ ಕ್ಲಿಕ್ ಮಾಡಬೇಕು. ಆಆಗಗನಿಮಮ್ಮ ಮುಟೇಶನ್ ಪೇಜ್ ಓಪನ್ ಆಗುತ್ತದೆ. ನಿಮ್ಮ ಜಮೀನು ಮುಟೇಶನ್ ಆಗಿದೆಯೋ ಇಲ್ಲವೋ ಎಂಬುದನ್ನು ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು.