Bele vime ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರಿಗೆ ಡಿಬಿಟಿ ಮೂಲಕ ಬೆಳೆ ವಿಮೆ ಪರಿಹಾರ ನೀಡುವ ಪ್ರಕ್ರಿಯೆ ಚಾಲನೆ ದೊರೆತಿದೆ. ಯಾವ ಯಾವ ಜಿಲ್ಲೆಯ ರೈತರಿಗೆ ಯಾವ ಯಾವ ಬೆಳೆಗಳಿಗೆ ವಿಮೆ ಹಣ ಬಿಡುಗಡೆಯಾಗಿದೆ ಎಂಬುದನ್ನು ರೈತರು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
2023-24 ನೇ ಸಾಲಿನ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ಗದಗ ಜಿಲ್ಲೆಯ ರೈತರಿಗೆ ಅದರಲ್ಲಿ ಹೆಸರು ಬೆಳೆಗೆ ಅತೀ ಹೆಚ್ಚು ವಿಮೆ ಹಣ ಮಂಜೂರಾಗಿದೆ. ರಾಜ್ಯದಲ್ಲಿ ಹೆಸರು ಬೆಳೆಗೆ 42 ಕೋಟಿ ರೂಪಾಯಿ ವಿಮೆ ಹಣ ನೀಡಲು ವಿಮೆ ಕಂಪನಿ ಒಪ್ಪಿಕೊಂಡಿದೆ. ಅದರಲ್ಲಿ ಗದಗ ಜಿಲ್ಲೆಗೆ ಹೆಚ್ಚು ಹಣ ದೊರೆಯಲಿದೆ.
ಇದನ್ನೂ ಓದಿ Google Map ನಲ್ಲಿ ನಿಮ್ಮ ಲೋಕೇಷನ್ ಸೇರಿಸಬೇಕೇ? ಇಲ್ಲಿದೆ ಮಾಹಿತಿ
ಬೆಳೆ ವಿಮೆ ಮಾಡಿಸಿದ ರೈತರಿಗೆ ಶೇ. 25 ರಷ್ಟು ಹಣವನ್ನು ರೈತರ ಖಾತೆಗೆ ಜಮೆ ಮಾಡಲು ತೀರ್ಮಾನಿಸಲಾಗಿದೆ. ಈಗಾಗಲೇ ಡಿಬಿಟಿ ಮೂಲಕ ಬೆಳೆ ವಿಮೆ ಪರಿಹಾರ ನೀಡುವ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಅತೀ ಶೀಘ್ರದಲ್ಲಿ ಎಲ್ಲಾ ರೈತರ ಖಾತೆಗೆ ಬೆಳೆ ವಿಮೆ ಹಣ ಜಮೆಯಾಗಲಿದೆ.
ಹೆಸರು ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗಲಿದೆ?
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ರೈತರು ಹೆಸರು ಬೆಳೆಗೆ ಪ್ರತಿ ಹೆಕ್ಟೇರಿಗೆ 665 ರೂಪಾಯ ವಿಮಾ ಹಣ ಪಾವತಿಸಿದ್ದಾರೆ. ವಿಮಾ ನಿಯಮದ ಪ್ರಕಾರ ಪ್ರತಿ ಹೆಕ್ಟೇರ್ ಪ್ರದೇಶಕ್ಕೆ 33250 ರೂಪಾಯಿ ಬೆಳೆ ವಿಮೆ ಹಣ ಜಮೆ ಆಗಬೇಕು. ಆದರೆ ಶೇ. 25ಕ್ಕಿಂತ ಕಡಿಮೆ ಪ್ರದೇಶದಲ್ಲಿ ಬಿತ್ತನೆಯಾಗಿದ್ದರಿಂದ ಬೆಳೆ ವಿಮೆ ಪರಿಹಾರದಶೇ. 25 ರಷ್ಟು ವಿಮೆ ಪರಿಹಾರ ಪಾವತಿ ಮಾಡಲಾಗುತ್ತಿದ.ಈ ಪ್ರಕಾರ ಪ್ರತಿ ಹೆಕ್ಟೇರಿಗೆ ಶೇ. 25 ರಷ್ಟು ಹಣ ಜಮೆಯಾಗಲಿದೆ.
ನಿಮಗೆಷ್ಟು Bele vime ಹಣ ಜಮೆಯಾಗಿದೆ?
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ತಮಗೆಷ್ಟು ಬೆಳೆ ವಿಮೆ ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ರೈತರು ಈ
https://samrakshane.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ವರ್ಷದ ಆಯ್ಕೆ 2023-2024 ಆಯ್ಕೆ ಮಾಡಿಕೊಳ್ಳಬೇಕು. ಅದರ ಕೆಳಗಡೆ ಋತು Kharif ಆಯ್ಕೆ ಮುಂಗಾರು ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ / Go ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ Farmers ಕೆಳಗಡೆ ಕೆಲವು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ check status ಮೇಲೆ ಕ್ಲಿಕ್ ಮಾಡಬೇಕು.
ಅಲ್ಲಿ ನಿಮಗೆ Proposal ಮತ್ತು Mobile No ಹಾಗೂ Aadhaar ಎಂಬ ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನೀವು ಮೊಬೈಲ್ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು. ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ Search ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹೆಸರು ಕಾಣಿಸುತ್ತದೆ. ಅದರ ಮುಂದುಗಡೆ ವಿಮಾ ಕಂಪನಿಯಿಂದ ಅರ್ಜಿ ಸ್ವೀಕೃತವಾಗಿದೆಯೋಇಳ್ಲವೋ ಎಂಬುದು ಕಾಣಿಸುತ್ತದೆ. ಅದರ ಮುಂದುಗಡೆ ಕಾಣಿಸುವ Select ಮೇಲೆ ಕ್ಲಿಕ್ ಮಾಡಬೇಕು. ನಂತರ View Details ಮೇಲೆ ಕ್ಲಿಕ್ ಮಾಡಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.