Bele vime ಮಾಡಿಸಿದ ನಂತರ ರೈತರೇನು ಮಾಡಬೇಕು?

Written by Ramlinganna

Updated on:

after insurance do this ಕೇವಲ ಬೆಳೆ ವಿಮೆ ಮಾಡಿಸಿದ ಮಾತ್ರಕ್ಕೆ ಬೆಳೆ ವಿಮೆ ಹಣ ಜಮೆಯಾಗಲ್ಲ. ಬೆಳೆ ವಿಮೆ ಮಾಡಿಸಿದ ನಂತರ ರೈತರೇನು ಮಾಡಬೇಕು? ಯಾವಾಗ ಯಾರಿಗೆ ಕರೆ ಮಾಡಿ ಬೆಳೆ ಹಾನಿಗಿರುವ ಮಾಹಿತಿ ನೀಡಬೇಕು? ಇಲ್ಲಿದೆ ನೋಡಿ  ಮಾಹಿತಿ.

ಮುಂಗಾರು ಹಾಗೂ ಹಿಂಗಾರು ಹಂಗಾಮಿಗೆ ರೈತರು ರೈತರು ಎಲ್ಲರಂತೆ ಬೆಳೆ ವಿಮೆ ಮಾಡಿಸುತ್ತಾರೆ. ಆದರೆ ಯಾವ ವಿಮಾ ಕಂಪನಿಗೆ ಬೆಳೆ ವಿಮೆ ಹಣ ಪಾವತಿಸಿದ್ದಾರೆ? ಪ್ರಕೃತಿ ವಿಕೋಪದಿಂದಾಗಿ ಹಾಗೂ ಅತೀ ಮಳೆಯಿಂದಾಗಿ  ಬೆಳೆ ನೀರಿನಿಂದ ಜಲಾವೃತ್ತಗೊಂಡರೆ ಯಾರಿಗೆ ಕರೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯ ಕೊರತೆಯಿಂದಾಗಿ ಬೆಳೆ ವಿಮೆಯ ಸೌಲಭ್ಯ ಪಡೆಯುವುದಿಲ್ಲ. ಹಾಗಾಗಿ ಬೆಳೆ ವಿಮೆ ಮಾಡಿಸಿದ ನಂತರ ರೈತರು ಯಾರಿಗೆ ಯಾವಾಗ ಕರೆ ಮಾಡಬೇಕು ಎಂಬುದರ ಮಾಹಿತಿ ಇಲ್ಲಿದೆ.

after insurance do this ಬೆಳೆ ವಿಮೆ ಮಾಡಿಸುವಾಗ ರೈತರು ಈ ಮಾಹಿತಿ ತಿಳಿದಿರಬೇಕು?

ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರು ಯಾವ ವಿಮಾ ಕಂಪನಿಗೆ ಬೆಳೆ ವಿಮೆ ಹಣ ಪಾವತಿಸಿದ್ದಾರೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ನೀವು ಎಲ್ಲಿ ಬೆಳೆ ವಿಮೆ ಹಣ ಕಟ್ಟುತ್ತೀರೋ ಅಲ್ಲಿಯೇ ನೀವು ಯಾವ ವಿಮಾ ಕಂಪನಿಗೆ ಹಣ ಕಟ್ಟುತ್ತಿದ್ದೀರೆಂಬುದನ್ನು ತಿಳಿದುಕೊಳ್ಳಬೇಕು. ಇದರೊಂದಿಗೆ ನಿಮ್ಮ ತಾಲೂಕಿನಲ್ಲಿ ಯಾರಿಗೆ ವಿಮಾ ಕಂಪನಿಯ ಸಿಬ್ಬಂದಿಯನ್ನಾಗಿ ನಿಯೋಜಿಸಲಾಗಿದೆ ಎಂದು ತಿಳಿದುಕೊಂಡು ಅವರ ಮೊಬೈಲ್ ನಂಬರ್ ಪಡೆದುಕೊಳ್ಳಬೇಕು.

ಬೆಳೆ ಹಾನಿಯಾದಾಗ ಯಾವಾಗ ಯಾರಿಗೆ ಕರೆ ಮಾಡುವುದು ಕಡ್ಡಾಯವಾಗಿದೆ?

ರೈತರು ಬೆಳೆ ವಿಮೆ ಮಾಡಿಸಿದ ನಂತರ ತಮ್ಮ ಬೆಳೆ ಪ್ರಾಕೃತಿಕ ವಿಕೋಪದಿಂದಾಗಿ ಅಂದರೆ ಪ್ರವಾಹ, ಭೂ ಕುಸಿತ, ಗುಡುಗು ಸಿಡಿಲಿನಿಂದ ಉಂಟಾಗುವ ಬೆಂಕಿ ಅಥವಾ ನಿರಂತರ ಮಳೆಯಿಂದಾಗಿ ನಿಮ್ಮ ಜಮೀನು ಜಲಾವೃತ್ತಗೊಂಡು ಬೆಳೆ ಹಾಳಾದರೆ 72 ಗಂಟೆಯೊಳಗೆ ವಿಮಾ ಕಂಪನಿಗೆ ತಿಳಿಸಬೇಕು. ನಿಮ್ಮ ತಾಲೂಕಿನ ವಿಮಾ ಕಂಪನಿಯ ಸಿಬ್ಬಂದಿಗೆ ಕರೆ ಮಾಡುವುದು ಕಡ್ಡಾಯವಾಗಿದೆ.

ಇದನ್ನೂ ಓದಿ ನಿಮ್ಮ ಜಮೀನಿನ ಮೇಲೆ ಸಾಲವೆಷ್ಟಿದೆ? ಅಕ್ಕಪಕ್ಕದ ಜಮೀನು ಯಾರ ಹೆಸರಿಗೆ ಎಷ್ಟಿದೆ? ಇಲ್ಲೇ ಚೆಕ್ ಮಾಡಿ

ಒಂಮ ವೇಳೆ ನಿಮ್ಮ ತಾಲೂಕಿನ ವಿಮಾ ಕಂಪನಿಯ ಸಿಬ್ಬಂದಿಗಳು ನಿಮ್ಮ ಕರೆ ಸ್ವೀಕರಿಸದಿದ್ದರೆ ಅಥವಾ ಸರಿಯಾಗಿ ಸ್ಪಂದಿಸದಿದ್ದರೆ ನೀವು ಕೂಡಲೇ ನಿಮ್ಮ ತಾಲೂಕಿನ ರೈತ ಸಂಪರ್ಕ ಕೇಂದ್ರಕ್ಕೆ ದೂರು ನೀಡಬೇಕು. ಬೆಳೆ ಹಾನಿಯಾಗಿರುವ ಕುರಿತು ನಿಮ್ಮ ಹತ್ತಿರದ ಕೃಷಿ ಇಲಾಖೆಗೆ ತಿಳಿಸಬೇಕು.  ಇಲ್ಲವೇ ಬೆಳೆ ವಿಮಾ ಕಂಪನಿಯ ಉಚಿತ ಸಹಾಯವಾಣಿಗೆ 1800 1800 1551ಗೆ ಕರೆ ಮಾಡಬಹುದು.

ನೀವು ಬೆಳೆ ವಿಮೆ ಮಾಡಿಸಿದ ಬೆಳಗಳಿಗೆ ಎಷ್ಟು ವಿಮೆ ಹಣ ಜಮೆಯಾಗಬಹುದು? ಹೀಗೆ ಚೆಕ್ ಮಾಡಿ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ನೀವು ಬೆಳೆ ವಿಮೆ ಮಾಡಿಸಿದ ಬೆಳೆಗಳಿಗೆ ಎಕರೆಗೆ ಎಷ್ಟು ಹಣ ಜಮೆಯಾಗಬಹುದು ಎಂಬುದನ್ನು ಚೆಕ್ ಮಾಡಲು ಈ

https://samrakshane.karnataka.gov.in/PublicHome.aspx

ಮೇಲೆ ಕ್ಲಿಕ್ ಮಾಡಬೇಕು. Premium Calculator ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಜಿಲ್ಲೆ. ತಾಲೂಕು, ಹೋಬಳಿ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ಯಾವ ಬೆಳೆಗೆ ವಿಮೆ ಮಾಡಿಸಿದ್ದೀರೋ ಆ ಬೆಳೆಯನ್ನು ಆಯ್ಕೆ ಮಾಡಿಕೊಳ್ಳಬೇಕು.  ನಂತರ ನೀವು ಎಷ್ಟು ಎಕರೆಗೆ ವಿಮೆ ಕಟ್ಟಿದ್ದೀರಿ ಅದನ್ನು ನಮೂದಿಸಬೇಕು. ಉದಾಹರಣೆಗೆ ನೀವು ತೊಗರಿ ಬೆಳೆಗೆ ಒಂದು ಎಕರೆಗೆ ವಿಮೆ ಹಣ ಕಟ್ಟಿದ್ದರೆ ಒಂದು ಎಕರೆ ನಮೂದಿಸಿದ ನಂತರ Show Premium ಮೇಲೆ ಕ್ಲಿಕ್ ಮಾಡಬೇಕು.

ಒಂದು ಎಕರೆಗೆ ಎಷ್ಟು  ಹಣ ಜಮೆಯಾಗಬಹುದು ಎಂಬ ಮಾಹಿತಿ ಕಾಣಿಸುತ್ತದೆ. ಉದಾಹರಣೆಗೆ ನೀವು ಒಂದು ಎಕರೆಗೆ ತೊಗರಿ ಬೆಳೆಗೆ ವಿಮೆ ಮಾಡಿಸಿದ್ದರೆ ನಿಮಗೆ 19 ಸಾವಿರ ರೂಪಾಯಿಯವರೆಗೆ ಬೆಳೆ ವಿಮೆ ಹಣ ಜಮೆಯಾಗುವ ಸಾಧ್ಯತೆಯಿದೆ.

Leave a Comment