200 ಯೂನಿಟ್ ವರೆಗಿನ ಉಚಿತ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸಿ

Written by Ramlinganna

Updated on:

Apply here for free electricity ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದ ಯೋಜನೆಗಳಲ್ಲಿ ಗೃಹ ಜ್ಯೋತಿ ಯೋಜನೆಯೂ ಒಂದಾಗಿದೆ. ಈ ಯೋಜನೆಯಡಿಯಲ್ಲಿ ಸಾರ್ವಜನಿಕರಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸಿಗಲಿದೆ.

ಹೌದು,  ಕಾಂಗ್ರೆಸ್ ಪಕ್ಷವು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸಾರ್ವಜನಿಕರಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿತ್ತು. ಅದನ್ನು ಜಾರಿಗೆ ಸಹ ತರಲಾಗಿದೆ. ಆನ್ಲೈನ್ ನಲ್ಲಿ ಅರ್ಜಿ ಹಾಕುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.

ರಾಜ್ಯ ಸರ್ಕಾರದದ ಮಹತ್ವಾಕಾಂಕ್ಷಿ  ಯೋಜನೆ ಗೃಹ ಜ್ಯೋತಿ ಯೋಜನೆ ಅಡಿ ಫಲಾನುಭವಿಗಳು ಜುಲೈ 1 ರಿಂದ ಬಳಕೆ ಮಾಡುವ ವಿದ್ಯುತ್ ಉಚಿತ ಆಗಲಿದೆ. ಗೃಹ ಬಳಕೆದಾರರು ಜುಲೈ 1 ರಿಂದ ಬಳಕೆ ಮಾಡುವ ಮಾಸಿಕ 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಗೆ ಆಗಸ್ಟ್ ತಿಂಗಳಲ್ಲಿ ಶೂನ್ಯ ಬಿಲ್ ಬರಲಿದೆ.

ಜೂನ್ ತಿಂಗಳಲ್ಲಿ ಬಳಕೆ ಮಾಡಿರುವ ವಿದ್ಯುತ್ ಶುಲ್ಕದ ಬಗ್ಗೆ ಎಸ್ಕಾಂಗಳು ವಿದ್ಯುತ್ ಬಿಲ್ ನೀಡಲಿವೆ. ಅದನ್ನು ಬಳಕೆದಾರರು ಸಂಪೂರ್ಣವಾಗಿ ಪಾವತಿ ಮಾಡಬೇಕಾಗುತ್ತದೆ.  ಜೂನ್ 1 ರಿಂದ ಬಳಕೆಯಾಗುವ ಹಾಗೂ ಆಗಸ್ಟ್ 1 ರ ಬಳಿಕ ರೀಡ್ ಮಾಡಿ ನೀಡುವ ಬಿಲ್ ಗೆ ಮಾತ್ರ ಗೃಹ ಜ್ಯೋತಿ ವಿನಾಯಿತಿ ಅನ್ವಯವಾಗಲಿದೆ.

ಇದನ್ನೂ ಓದಿ : ನಿಮ್ಮ ಕುಟುಂಬದಲ್ಲಿ ಯಾರು ಯಾರಿಗೆ ಅನ್ನಭಾಗ್ಯದ ಹಣ ಎಷ್ಟು ಸಿಗುವುದು? ಇಲ್ಲೇ ಚೆಕ್ ಮಾಡಿ

ಎಸ್ಕಾಂಗಳು ಜುಲೈ ನ  ಯಾವುದೇ ದಿನಾಂಕದಲ್ಲಿ ಬಿಲ್ ನೀಡಿದರೂ ಅದರ ಸಂಪೂರ್ಣ ಶುಲ್ಕವನ್ನು ಗ್ರಾಹಕರು ಪಾವತಿಸಬೇಕಾಗುತ್ತದೆ. ಹೀಗಾಗಿ ಆಗಸ್ಟ್ 1 ಹಾಗೂ ನಂತರ ರೀಡ್ ಮಾಡುವ ಬಿಲ್ ಗಳನ್ನು ಮಾತ್ರ ಪಾವತಿಸುವಂತಿಲ್ಲ. ಅದಕ್ಕೆ ಮೊದಲಿನ ಬಿಲ್ಗಳನ್ನು ಪಾವತಿಸಲೇಬೇಕು.

2023 ರ ಜುಲೈ ತಿಂಗಳಿನಿಂದ ಬಳಕೆಯಾದ ವಿದ್ಯುತ್ ಗೆ ಆಗಸ್ಟ್ ತಿಂಗಳಲ್ಲಿ ನೀಡುವ ಬಿಲ್ಲಿಗೆ ಅನ್ವಯವಾಗುವಂತೆ ಯೋಜನೆ ಜಾರಿಗೊಳಿಸಲಾಗಿದೆ.

Apply here for free electricity ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಬಹುದೇ?

ಹೌದು ಗೃಹ ಜ್ಯೋತಿಗೆ ಆನ್ಲೈನ್ ನಲ್ಲಿ ಅಂದರೆ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಲು ಈ

https://sevasindhugs.karnataka.gov.in

ಲಿಂಕ್ ಮೇಲೆ ಕ್ಲಿಕ್ ಮಾಡಹಬೇಕು ಅಲ್ಲಿ ಕಾಣುವ ಗೃಹ ಜ್ಯೋತಿ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಾನು ಒದಗಿಸಿದ ಮಾಹಿತಿಯನ್ನು ಓದಿದ್ದೇನೆ ನಾನು ಬೇರೆಡೆ ಯೋಜನೆಗೆ ನೋಂದಿಸಿಲ್ಲ ಎಂದು ಘೋಷಿಸುತ್ತೇನೆಒಂದು ನೋಂದಣಿ ಮಾತ್ರ ಯೋಜನೆಗೆ ಅರ್ಹವಾಗಿದೆ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ Agree ಮೇಲೆ ಕ್ಲಿಕ್ ಮಾಡಬೇಕು.  ನಂತರ ನಿಲ್ಲಮ ಆಧಾರ್ ಕಾರ್ಡ್ ನಮೂದಿಸಬೇಕು.ನಂತರ ಗೆಟ್ ಡಿಟೇಲ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳದಾ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಹಾಕಬೇಕು.

ಎಷ್ಟು ಬಳಕೆಗೆ ಉಚಿತ ವಿದ್ಯುತ್ ಭಾಗ್ಯ ಸಿಗಲಿದೆ?

2022-23 ರ ಸರಾಸರಿ ವಿದ್ಯುತ್ ಬಳಕೆ ಪ್ರಮಾಣದ ಮೇಲೆ ಶೇ. 10 ರಷ್ಟು ಹೆಚ್ಚುವರಿ ವಿದ್ಯುತ್ತನ್ನು ಉಚಿತವಾಗಿ ಬಳಕೆ ಮಾಡಬಹುದು. ಆದರೆ 200 ಯೂನಿಟ್ ಮೀರಿದರೆ  ಸಂಪೂರ್ಣ ಶುಲ್ಕ ಪಾವತಿಸಬೇಕು. ಯೋಜನೆಯ ಫಲಾನುಭವಿಯಾಗಿದ್ದರೂ ಯಾವುದಾದರೂ ಒಂದು ತಿಂಗಳಲ್ಲಿ ಮಾತ್ರ 200 ಯೂನಿಟ್ಗಿಂತ ಹೆಚ್ಚು ವಿದ್ಯುತ್ ಬಳಸಿದರೆಂ ಆ ನಿಗದಿತ ತಿಂಗಳ ಬಿಲ್ ಮಾತ್ರ ಪೂರ್ತಿ ಪಾವತಿಸಬೇಕು. ಮುಂದಿನ ತಿಂಗಳಿಂದ ಯೋಜನೆಯ ಲಾಭ ಮುಂದುವರೆಯಲಿದೆ.

ಅರ್ಜಿ ಎಲ್ಲಿ ಸಲ್ಲಿಸಬೇಕು?

ಸೇವಾ ಸಿಂಧು ಪೋರ್ಟಲ್ ನಲ್ಲಿ ಮಾತ್ರ ಗೃಹ ಜ್ಯೋತಿಗೆ ಅರ್ಜಿ ಸಲ್ಲಿಸಬೇಕು. ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಮೊಬೈಲ್, ಕಂಪ್ಯೂಟರ್ , ಲ್ಯಾಪ್ ಟಾಪ್ ಗಳಲ್ಲಿ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ವಿದ್ಯುತ್ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು.

Leave a Comment