Bhu hiduvali pramana patra ರೈತರು ತಮಗೆ ಬೇಕಾಗುವ ಭೂ ಹಿಡುವಳಿದಾರ ಪ್ರಮಾಣ ಪತ್ರವನ್ನು ಈಗ ಮೊಬೈಲ್ ನಲ್ಲೇ ಪಡೆಯಬಹುದು.
ಹೌದು, ಈ ದಾಖಲೆಗಾಗಿ ರೈತರು ಈಗ ತಹಶೀಲ್ದಾರ್ ಕಚೇರಿಗಳ ಎದುರು, ನಾಡ ಕಚೇರಿಗಳ ಮುಂದೆ ಗಂಟೆಗಟ್ಟಲೇ ಕಾಯಬೇಕಿಲ್ಲ, ಇದಕ್ಕಾಗಿ ಕೆಲಸ ಬಿಟ್ಟು ಹೋಗುವ ಅಗತ್ಯವೂ ಇಲ್ಲ, ಮನೆಯಲ್ಲಿಯೇ ಕುಳಿತು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು.
Bhu hiduvali pramana patra ಭೂ ಹಿಡುವಳಿದಾರ ಪ್ರಮಾಣ ಪತ್ರ ಮೊಬೈಲ್ ನಲ್ಲಿ ಪಡೆಯಿರಿ
ರೈತರು ತಮಗೆ ಬೇಕಾಗುವ ಭೂ ಹಿಡುವಳಿ ಪ್ರಮಾಣ ಪತ್ರ ಪಡೆಯಲು ಈ
https://nadakacheri.karnataka.gov.in/AJSK/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೇಲ್ಗಡೆ ಕನ್ನಡ ಭಾಷೆ ಆಯ್ಕೆ ಮಾಡಿಕೊಳ್ಳಬಹುದು. ಮುಖಪುಟದ ಪಕ್ಕದಲ್ಲಿರುವ ಆನ್ಲೈನ್ ಅರ್ಜಿ ಮೇಲೆ ಕ್ಲಿಕ್ ಮಾಡಬೇಕು. ಅದರ ಕೆಳಗಡೆ ಆನ್ಲೈನ್ ಅರ್ಜಿ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು.
ಆಗ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಅದನ್ನು ನಮೂದಿಸಿದ ನಂತರ ಮತ್ತೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ New Request ಮೇಲೆ ಕ್ಲಿಕ್ ಮಾಡಬೇಕು. ಆಗ Agri services ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ಕೆಲವು ಆಯ್ಕೆಗುಲ ಕಾಣಿಸುತ್ತವೆ. ಅಂದರೆ ಯಾವ ಯಾವ ದಾಖಲೆಗಳಿಗೆ ನೀವು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು ಎಂಬ ಆಯ್ಕೆಗಳಿರುತ್ತವೆ. ನೀವು ಯಾವ ದಾಖಲೆಗಾಗಿ ಅರ್ಜಿ ಸಲ್ಲಿಸುತ್ತೀರೋ ಅದರ ಮೇಲೆ ಆಯ್ಕೆಮಾಡಿಕೊಳ್ಳಬಹುದು.
ಭೂ ಹಿಡುವಳಿ ಪ್ರಮಾಣ ಪತ್ರ
ಭೂ ಹಿಡುವಳಿ ಪ್ರಮಾಣಪತ್ರ ಪಡೆಯಲು ಅಲ್ಲಿ ಕಾಣುವ ಭೂ ಹಿಡುವಳಿ ಪ್ರಮಾಣ ಪತ್ರ ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು, ಹೋಬಳಿ ಹಾಗೂ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಮಾಡಿಕೊಳ್ಳಬೇಕು.ನಂತರ ದಾಖಲೆ ಉಪ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು.
ಅರ್ಜಿದಾರನ ಹೆಸರು ಶ್ರೀ, ಶ್ರೀಮತಿ, ಕುಮಾರ ಅಥವಾ ಕುಮಾರಿ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಹೆಸರು ನಮೂದಿಸಬೇಕು. ನಂತರ ಸಂಬಂಧಿಕರ ಹೆಸರು ಎದುರುಗಡೆ ನಿಮ್ಮ ತಂದೆ, ಪತಿ ಯಾವುದಾದರೂ ಒಂದು ಆಯ್ಕೆ ಮಾಡಿಕೊಂಡು ಅವರ ಹೆಸರು ಬರೆಯಬೇಕು.
ಇದನ್ನೂ ಓದಿ : ನಿಮ್ಮೂರಲ್ಲಿ ಮಳೆ ಯಾವಾಗ ಬರುತ್ತದೆ? ಈ ನಂಬರಿಗೆ ಕರೆ ಮಾಡಿ
ತಾಯಿಯ ಹೆಸರು ಬರೆಯಬೇಕು. ನಂತರ ಖಾಯಂ ವಿಳಾಸ ನಮೂದಿಸಬೇಕು. ಭೂ ಹಿಡುವಳಿ ಪ್ರಮಾಣ ಪತ್ರ ಯಾವ ಉದ್ದೇಶಕ್ಕಾಗಿ ಪಡೆಯಬೇಕೆಂದುಕೊಂಡಿದ್ದೀರೋ ಅದನ್ನು ನಿರ್ಧಿಷ್ಟ ಉದ್ದೇಶಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಅರ್ಜಿದಾರರ ಐಡಿ ಆಧಾರ್ ಕಾರ್ಡ್, ರೇಶನ್ ಕಾರ್ಡ್, ಡ್ರೈವಿಂಗ್ ಲೈಸನ್ಸ್ ಹೀಗೆ ಅಲ್ಲಿ ಕಾಣುವ ಯಾವುದಾದರೂ ಒಂದು ಅಂದರೆ ನಿಮ್ಮ ಬಳಿಯಿರುವ ಐಡಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಐಡಿ ಕಾರ್ಡ್ ಹಾಕಬೇಕು.
ಇಲಾಖೆ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಕುಟುಂಬದ ವಾರ್ಷಿಕ ಆದಾಯ ಹಾಕಬೇಕು. ಭೂ ದಾಖಲೆ ಪ್ರಮಾಣ ಪತ್ರಕ್ಕೆ ಒಟ್ಟು ಶುಲ್ಕಕೇವಲ 40 ರೂಪಾಯಿ ಇರುತ್ತದೆ. ಅದನ್ನು ಆನ್ಲೈನ್ ಮೂಲಕ ಪಾವತಿಸಬಹುದು.
ಗ್ರಾಮೀಣ ಪ್ರದೇಶ
ಗ್ರಾಮೀಣ ಪ್ರದೇಶ ಆಯ್ಕೆ ಮಾಡಿಕೊಂಡ ನಂತರ ಜಿಲ್ಲೆ, ತಾಲೂಕು ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಜಮೀನಿನ ಸರ್ವೆ ನಂಬರ್ ಹಾಗೂ, ವಿಸ್ತೀರ್ಣ ನಮೂದಿಸಬೇಕು. ಖಾತಾ ಸಂಖ್ಯೆ ಹಾಕಬೇಕು. ಭೂಮಿ ವರ್ಗ, ಆಕಾರ ನಮೂದಿಸಿ ಸೇರಿಸು ಮೇಲೆ ಕ್ಲಿಕ್ ಮಾಡಿ ಅಲ್ಲಿ ಕಾಣುವ ಇಮೇಜ್ ನ್ಯಾಲ್ಯು ನಮೂದಿಸಿ Proceed to e Sign ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.