Check your land tippani and podi ರೈತರು ಸರ್ವೆ ನಂಬರ್ ಹಾಕಿ ಮೊಬೈಲ್ ನಲ್ಲೇ ಜಮೀನಿನ ಟಿಪ್ಪಣಿ, ಮೂಲ ಸರ್ವೆ ಪ್ರತಿ ಹಾಗೂ ಪೋಡಿ ಟಿಪ್ಪಣಿಯನ್ನು ಚೆಕ್ ಮಾಡಬಹುದು.
ಹೌದು, ಟಿಪ್ಪಣಿ ಪುಸ್ತಕ, ಮೂಲ ಸರ್ವೆ ಪ್ರತಿ ಪುಸ್ತಕ, ಹಿಸ್ಸಾ ಸರ್ವೆ ಪೋಡಿ ಟಿಪ್ಪಣಿ ಪಡೆಯಲು ಯಾವ ಕಚೇರಿಗೂ ಹೋಗಬೇಕಿಲ್ಲ, ಯಾವ ಅಧಿಕಾರಿಗಳ ಬಳಿಯೂ ಕೈಕಟ್ಟಿ ನಿಂತುಕೊಳ್ಳುವ ಅಗತ್ಯವಿಲ್ಲ. ಕಚೇರಿಗಳ ಮುಂದೆ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯಬೇಕಿಲ್ಲ, ನಿಮ್ಮ ಬಳಿಯಿರುವ ಸ್ಮಾರ್ಟ್ ಫೋನ್ ನಲ್ಲೇ ಎಲ್ಲಾ ದಾಖಲೆಗಳನ್ನು ಒಂದೇ ನಿಮಿಷದಲ್ಲಿ ಚೆಕ್ ಮಾಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಮೊಬೈಲ್ ನಲ್ಲೇ ಮೂಲ ಸರ್ವೆ ಟಿಪ್ಪಣಿ ಪುಸ್ತಕ, ಮೂಲ ಸರ್ವೆ ಪ್ರತಿ, ಹಿಸ್ಸಾ ಸರ್ವೆ ಪೋಡಿ ಟಿಪ್ಪಣಿ ಚೆಕ್ ಮಾಡುವುದು ಹೇಗೆ?
ರೈತರು ತಮ್ಮಲ್ಲಿರುವ ಸ್ಮಾರ್ಟ್ ಫೋನ್ ನಲ್ಲಿ ಮೂಲ ಸರ್ವೆ ಟಿಪ್ಪಣಿ ಪುಸ್ತಕ, ಮೂಲ ಸರ್ವೆ ಪ್ರತಿ ಪುಸ್ತಕ ಹಾಗೂ ಹಿಸ್ಸಾ ಸರ್ವೆ ಸರ್ವೆ ಪೋಡಿ ಟಿಪ್ಪಣಿ ಚೆಕ್ ಮಾಡಲು ಈ
https://bhoomojini.karnataka.gov.in/service35/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂ ಕಂದಾಯ ಇಲಾಖೆಯ ಸರ್ವೆ ಡಾಕುಮೆಂಟ್ಸ್ ವೆಬ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ತಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.
ಇದಾದ ಮೇಲೆ ಹೋಬಳಿ ಆಯ್ಕೆ ಮಾಡಿಕೊಂಡು ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ರೈತರು ಸರ್ವೆ ನಂಬರ್ ಹಾಕಬೇಕು. ಸರ್ನೋಕ್ ಕಾಲಂ ಹಾಗೂ ಹಿಸ್ಸಾ ಕಾಲಂನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮಗೆ Search ಹಾಗೂ View Akarband ಎರಡು ಆಯ್ಕೆಗಳು ಕಾಣಿಸುತ್ತದೆ. ನೀವು Search ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂಓದಿ : ಒಂದು ವಾರದೊಳಗೆ ಬರ ಪರಿಹಾರ ಜಮೆ- ಕೃಷ್ಣ ಭೈರೇಗೌಡ
ಆಗ ನೀವು ನಮೂದಿಸಿದ ಸರ್ವೆ ನಂಬರಿನಲ್ಲಿ ಯಾವ ಯಾವ ದಾಖಲೆಗಳನ್ನು ಚೆಕ್ ಮಾಡಬಹುದು ಎಂಬ ಪಟ್ಟಿ ಕಾಣಿಸುತ್ತದೆ. ಅಲ್ಲಿ ಮೂಲ ಸರ್ವೆ ಟಿಪ್ಪಣಿ ಪುಸ್ತಕ, ಮೂಲ ಸರ್ವೆ ಪ್ರತಿ ಪುಸ್ತಕ, ಹಿಸ್ಸಾ ಸರ್ವೆ ಪೋಡಿ ಟಿಪ್ಪಣಿ ಹೀಗೆ ಹಲವಾರು ಆಯ್ಕೆಗಳು ಕಾಣಿಸುತ್ತವೆ.
ಮೂಲ ಸರ್ವೆ ಟಿಪ್ಪಣಿ ಪುಸ್ತಕ ಚೆಕ್ ಮಾಡುವುದು ಹೇಗೆ? (How to check survey tippani book)
ಮೂಲ ಸರ್ವೆ ಟಿಪ್ಪಣಿ ಪುಸ್ತಕ ಚೆಕ್ ಮಾಡಬೇಕಾದರೆ ಅಲ್ಲಿ ಕಾಣುವ ಮೂಲ ಸರ್ವೆ ಟಿಪ್ಪಣಿ ಪುಸ್ತಕ ಎದುರುಗಡೆ ಕಾಣುವ View Document ಪಿಡಿಎಫ್ ಮೇಲೆ ಕ್ಲಿಕ್ಮಾಡಬೇಕು. ಆಗ ಮೂಲ ಸರ್ವೆ ಟಿಪ್ಪಣಿ ಪುಸ್ತಕ ತೆರೆದುಕೊಳ್ಳಉತ್ತದೆ. ಅಲ್ಲಿ ನಿಮ್ಮ ಸರ್ವೆ ನಂಬರ್ ಸಹ ಕಾಣಿಸುತ್ತದೆ. ಇದು ರೈತರ ಜಮೀನಿನ ಮೊದಲ ದಾಖಲೆಯಾಗಿರುತ್ತದೆ. ನಿಮ್ಮ ಜಮೀನಿನ ನಕ್ಷೆ ಹೇಗೆ ತಯಾರಿಸಲಾಗಿದೆ ಎಂಬುದನ್ನು ನೋಡಬಹುದು. ಈ ದಾಖಲೆಯನ್ನು ಡೌನ್ಲೋಡ್ ಸಹ ಮಾಡಿಕೊಳ್ಳಬಹುದು.
Check your land tippani and podi ಮೂಲ ಸರ್ವೆ ಪ್ರತಿ ಪುಸ್ತಕ (Survey document)
ಮೂಲ ಸರ್ವೆ ಪ್ರತಿ ಪುಸ್ತಕ ಪಡೆಯಲು ಅದರ ಮುಂದುಗಡೆ ಕಾಣುವ ಅಂದರೆ ರೆಪಾಸಿಟರಿ ಮುಂದಿರುವ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೂಲ ಸರ್ವೆ ಪ್ರತಿ ಪುಸ್ತಕ ತೆರೆದುಕೊಳ್ಳುತ್ತದೆ. ಈ ದಾಖಲೆಯನ್ನು ಸಹ ನೀವು ಡೌನ್ಲೋಡ್ ಮಾಿಕೊಳ್ಳಬಹುದು. ಇದೇ ರೀತಿ ನಿಮಗೆ ಯಾವ ದಾಖಲೆ ಬೇಕೋ ಆ ದಾಖಲೆಯನ್ನು ಮೊಬೈಲ್ ನಲ್ಲಿ ಪಡೆದುಕೊಳ್ಳಬಹುದು.