ಬೆಳೆ ವಿಮೆ, ಬೆಳೆ ಹಾನಿ ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡಿ

Written by Ramlinganna

Updated on:

Check insurance and pmkisan status ರೈತರು ಮನೆಯಲ್ಲಿ ಕುಳಿತು ಬೆಳೆ ವಿಮೆ, ಬೆಳೆ ಹಾನಿ ಹಾಗೂ ಪಿಎಂ ಕಿಸಾನ್ ಹಣ ಜಮೆಯಾಗಿರುವ ಕುರಿತು ಚೆಕ್ ಮಾಡಬಹುದು.

ಹೌದು, ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಬೆಳೆವಿಮೆಯಿಂದ ಎಷ್ಟು ಹಣ ಜಮೆಯಾಗಿದೆ? ಬೆಳೆ ಹಾನಿ ಪರಿಹಾರ ಹಣ ಎಷ್ಟು ಜಮೆಯಾಗಿದೆ? ಅದೇ ರೀತಿ ಪಿಎಂ ಕಿಸಾನ್ ಹಣ ಎಷ್ಟು ಕಂತು ಜಮೆಯಾಗಿದೆ ಎಂಬುದನ್ನು ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು. ಮೊಬೈಲ್ ನಲ್ಲೇ ಎಲ್ಲವೂ ಹೇಗಪ್ಪಾ ಚೆಕ್ ಮಾಡುವುದು ಅಂದುಕೊಂಡಿದ್ದೀರಾ… ಇಲ್ಲಿದೆ ನೋಡಿ ಮಾಹಿತಿ.

Check insurance and pmkisan status ಬೆಳೆ ಹಾನಿ ಪರಿಹಾರ ಚೆಕ್ ಮಾಡುವುದು ಹೇಗೆ? 

ರೈತರಿಗೆ ಇಲ್ಲಿಯವರೆಗೆ ಬೆಳೆ ಹಾನಿಯಿಂದ ಎಷ್ಟು ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡುವುದರೊಂದಿಗೆ ಪ್ರಸಕ್ತ ವರ್ಷ ಎಷ್ಟು ವಿಮೆ ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ಹಾನಿ ಪರಿಹಾರ ಸ್ಟೇಟಸ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು. ನಂತರ calamity type ನಲ್ಲಿ  Flood ಆಯ್ಕೆ ಮಾಡಿಕೊಳ್ಳಬೇಕು.  Select Year type  ನಲ್ಲಿ ಯಾವ ವರ್ಷದ ಬೆಳೆ ಹಾನಿ ಪರಿಹಾರ ಜಮೆಯ ಸ್ಟೇಟಸ್ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ವರ್ಷ ಆಯ್ಕೆ ಮಾಡಿಕೊಳ್ಳಬೇಕು. ನಂತರ 12 ಅಂಕಿಗಳ ಆಧಾರ್ ಸಂಖ್ಯೆ ಹಾಕಬೇಕು. ಇದಾದ ಮೇಲೆ ಕ್ಯಾಪ್ಚ್ಯಾ ಕೋಡ್ ಹಾಕಿ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮಗೆ ಬೆಳೆ ಹಾನಿ ಪರಿಹಾರ ಎಷ್ಟು ಜಮೆಯಾಗಿದೆ? ಯಾವ ಬೆಳೆಗೆ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಬಹುದು.

ಬೆಳೆ ವಿಮೆಯ ಸ್ಟೇಟಸ್ ಚೆಕ್ ಮಾಡುವುದು ಹೇಗೆ? (How to check crop insurance status)

ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರು ತಮಗೆ ಎಷ್ಟು ಬೆಳೆ ವಿಮೆ ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://www.samrakshane.karnataka.gov.in/publichome.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆಯ ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ಫಾರ್ಮರ್ಸ್ ಕೆಳಗಡೆ ಕಾಣುವ check status ಮೇಲೆ ಕ್ಲಿಕ್ ಮಾಡಬೇಕು. ನಂತರ ಮೊಬೈಲ್ ನಂಬರ್ ಆಯ್ಕೆ ಮಾಡಿ ಮೊಬೈಲ್ ನಂಬರ್ ನಮೂದಿಸಬೇಕು. ಇದಾದಮೇಲೆ ಕ್ಯಾಪ್ಚ್ಯಾ ಕೋಡ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಬೆಳೆ ವಿಮೆ ಹಣ ಜಮೆಯಾಗಿದೆಯೋ ಇಲ್ಲವೋ? ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಬಹುದು.

ಪಿಎಂ ಕಿಸಾನ್ ಹಣ ಜಮೆಯ ಸ್ಟೇಟಸ್ ಚೆಕ್ ಮಾಡುವುದು ಹೇಗೆ? (How to check pm kisan status)

ರೈತರು ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://pmkisan.gov.in/BeneficiaryStatus.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ರೈತರು ಮೊಬೈಲ್ ನಂಬರ್ ಹಾಕಬೇಕು. ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ Get Data ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮಗೆ ಇಲ್ಲಿಯವರೆಗೆ ಎಷ್ಟು ಕಂತುಗಳು ಜಮೆಯಾಗಿದೆ? ಯಾವ ದಿನಾಂಕದಂದು ಜಮೆಯಾಗಿದೆ? ಇಲ್ಲಿಯವರೆಗೆ  ಎಷ್ಟು ಹಣ ಜಮೆಯಾಗಿದೆ ಎಂಬುದು ಸೇರಿದಂತೆ ನಿಮ್ಮ ಅಕೌಂಟ್ ಆ್ಯಕ್ಟಿವ್ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.

ಇದನ್ನೂ ಓದಿ ನಿಮ್ಮ ಜಮೀನಿನ ಮ್ಯಾಪ್ mobileನಲ್ಲಿ ಡೌನ್ಲೋಡ್ ಮಾಡಿ

Leave a Comment