ಗೋಕೃಪಾಮೃತ ತಯಾರಿಕೆಗೆ 2 ಬ್ಯಾರೆಲ್ ವಿತರಣೆಗೆ ಅರ್ಜಿ ಆಹ್ವಾನ

Written by Ramlinganna

Updated on:

Application for distribute Vegetable seeds 1000 ರೂಪಾಯಿ ವೆಚ್ಚದಲ್ಲಿ ವಿವಿಧ ತರಕಾರಿ ಬೀಜಗಳ ವಿತರಣೆ ಹಾಗೂ ಜೀವಾಮೃತ/ಗೋಕೃಪಾಮೃತ ತಯಾರಿಸಲು 200 ಲೀಟರ್ ಸಾಮರ್ಥ್ಯದ 2 ಬ್ಯಾರೆಲ್ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ.

ಹೌದು, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಕ್ರಿಯಾ ಯೋಜನೆಯನ್ವಯ ಕಲ್ಯಾಣ ಕರ್ನಾಟಕ ವಿಭಾಗದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ರೈತರಿಗೆ ಬೆಂಗಳೂರಿನ ನ್ಯಾಶನಲ್ ಸೀಡ್ಸ್ ಕಾರ್ಪೋರೇಶಷನ್ ಲಿಮಿಟೆಡ್ ಸಹಯೋಗದೊಂದಿಗೆ ವಿವಿಧ ತರಕಾರಿ ಬೀಜಗಳ ಕೀಟ್ ಗಳನ್ನು ಪೂರೈಸಲು ಹಾಗೂ ಗೋ ಕೃಪಾಮೃತ ತಯಾರಿಕಾ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಇದಕ್ಕಾಗಿ ಆಸಕ್ತಿಯುಳ್ಳ ರೈತರಿಂದ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು ಅಕ್ಟೋಬರ್ 17 ರವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ ವಿಭಾಗದ ಕಲ್ಯಾಣ ಕರ್ನಾಟಕ ಮಾನವ  ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ತಿಳಿಸಿದ್ದಾರೆ.

ಆಸಕ್ತಿಯುಳ್ಳ ರೈತರು ಸಂಘದ ವೆಬ್ಸೈಟ್ ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಅಕ್ಟೋಬರ್ 17 ರ ಸಾಯಂಕಾಲ 5 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಂಘದ ವೆಬ್ಸೈಟ್ ನ್ನು ಹಾಗೂ ಸಂಘದ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.ಈ ಹಿಂದೆ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು ಅಕ್ಟೋಬರ್ 1 ರವರೆಗೆ ನಿಗದಿಪಡಿಸಲಾಗಿತ್ತು.

Application for distribute Vegetable seeds ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ರೈತರು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಈ

www.kkhracs.com

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ವೆಬ್ ಪೇಜ್ ತೆರೆದುಕೊಳ್ಳುತ್ತದೆ.  ನೀವು ಈಗಾಗಲೇ ತಮ್ಮ ಹೆಸರು ಸಂಘಕ್ಕೆ ನೋಂದಣಿ ಮಾಡಿಕೊಂಡಿದ್ದರೆ ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು.  ನಿಮ್ಮ ಮೊಬೈಲ್ ನಂಬರ್ ನಮೂದಿಸಿ Next ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಪಾಸ್ವರ್ಡ್ ನಮೂದಿಸಿ  Sign in ಮೇಲೆ ಕ್ಲಿಕ್ ಮಾಡಬೇಕು. ಆಗ ಅರ್ಜಿ ಸಲ್ಲಿಸಲು ಡ್ಯಾಶಬೋರ್ಡ್ ಓಪನ್ ಆಗುತ್ತದೆ.

ಒಂದು ವೇಳೆ ನೀವು ಸಂಘದ ವೆಬ್ ಪೇಜಿಗೆ ನಿಮ್ಮ ಹೆಸರು ನೋಂದಣಿ ಮಾಡಿಸಿಲ್ಲವೆಂದರೆ ಲಾಗಿನ್ ನೋಂದಣಿ ಮೇಲೆ ಕ್ಲಿಕ್ ಮಾಡಬೇಕು.  ಆಗ ಇನ್ನೊಂದು ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮಹೆಸರು, ಕೊನೆಯ ಹೆಸರು, ಮೊಬೈಲ್ ನಂಬರ್ ನಮೂದಿಸಿ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ನಂತರ ನಿಮ್ಮ ಮೊಬೈಲಿಗೆ ಬಂದ ಓಟಿಪಿ ನಮೂದಿಸಿ ಪಾಸ್ವರ್ಡ್ ಕ್ರಿಯೇಟ್ ಮಾಡಿಕೊಳ್ಳಬೇಕು.

ಆಗ ಸಂಘದ ಡ್ಯಾಶಬೋರ್ಡ್ ಓಪನ್ ಆಗುತ್ತದೆ.  ಅಲ್ಲಿ ನೀವು ಕೃಷಿಮಿತ್ರ ಮೇಲೆ ಕ್ಲಿಕ್ ಮಾಡಿದ ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ತರಕಾರಿ ಬೀಜಗಳ ಕಿಟ್ ವಿತರಣೆ

ತರಕಾರಿ ಬೀಜಗಳ ಕಿಟ್ ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದರೆ ತರಕಾರಿ ಬೀಜಗಳ ಕಿಟ್ ವಿತರಣೆ ಕೆಳಗಡೆ ಕಾಣುವ ಅರ್ಜಿಗೆ ಅಪ್ಲೈ ಮಾಡಲು ಹಾಗೂ ವಿವರಗಳಿಗೆ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹೆಸರು, ತಂದೆಯ ಹೆಸರು, ವಿಳಾಸ, ಜಿಲ್ಲೆ, ತಾಲೂಕು, ಮೊಬೈಲ್ ನಂಬರ್, ಆಧಾರ್ ಸಂಖ್ಯೆ, ಹಾಗೂ ಆಧಾರ್ ಕಾರ್ಡ್ ಅಟ್ಯಾಚ್ ಮಾಡಬೇಕು. ಜಾತಿ ಆಯ್ಕೆಮಾಡಿಕೊಳ್ಳಬೇಕು.

ಸಣ್ಣ ಮತ್ತು ಅತೀಸಣ್ಣ ರೈತ ಪ್ರಮಾಣ ಪತ್ರ ಲಗತ್ತಿಸಬೇಕು. ತರಕಾರಿ ಬೆಳೆಯಲು ಉದ್ದೇಶಿತ ಪ್ರದೇಶ ನಮೂದಿಸಬೇಕು. ತರಕಾರಿ ಬೆಳೆಯಲು ಉದ್ದೇಶಿಸಿದ ಜಮೀನಿನ ವಿವರಗಳು, ನೀರಾವರಿ ಸೌಲಭ್ಯ ಆಯ್ಕೆ ಮಾಡಿಕೊಳ್ಳಬೇಕು. ಭರ್ತಿ ಮಾಡಿದ ಮಾಹಿತಿ ಸರಿಯಾಗಿದೆ ಎಂಬುದನ್ನು ಆಯ್ಕೆ ಮಾಡಿ Submit  ಮೇಲೆ ಕ್ಲಿಕ್ ಮಾಡಬೇಕು. ಈ ಯೋಜನೆಯಡಿ 1000 ವೆಚ್ಚದಲ್ಲಿ ವಿವಿಧ ತರಕಾರಿ ಬೀಜಗಳ ಕಿಟ್ ನ್ನು ರೈತರಿಗೆ ವಿತರಿಸಲಾಗುವುದು.

ಜೀವಾಮೃತ/ಗೋಕೃಪಾಮೃತ ತರಬೇತಿ 200 ಲೀಟರ್ ಸಾಮರ್ಥ್ಯದ 2 ಬ್ಯಾರೆಲ್ ವಿತರಣೆ

ಜೀವಾಮೃತ/ಗೋಕೃಪಾಮೃತ ತರಬೇತಿ ಪಡೆಯಲು ಜೀವಾಮೃತ/ಗೋಕೃಪಾಮೃತ ವಿತರಣೆ ಕೆಳಗಡೆ ಕಾಣುವ ಅರ್ಜಿಗೆ ಅಪ್ಲೈ ಮಾಡಲು ಹಾಗೂ ವಿವರಗಳಿಗೆ ಕ್ಲಿಕ್ ಮಾಡಿ ಮೇಲೆ ಕ್ಲಿಕ್ ಮಾಡಬೇಕು. ಆಗ ಅರ್ಜಿ ಓಪನ್ ಆಗುತ್ತದೆ. ಅಲ್ಲಿ ಕೇಳಲಾದ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ ಮುದ್ರಾ ಯೋಜನೆಯಡಿ ಸಿಗಲಿದೆ 10 ಲಕ್ಷ ರೂಪಾಯಿಯವರೆಗೆ ಸಾಲ

ಅರ್ಜಿ ಸಲ್ಲಿಸಿದ ರೈತರಿಗೆ 200 ಲೀಟರ್ ಸಾಮರ್ಥ್ಯದ 2 ಬ್ಯಾರೆಲ್ ಗಳನ್ನು ಪ್ರತಿಯೊಬ್ಬ ರೈತರಿಗೆ ಜೀವಾಮೃತ/ಗೋಕೃಪಾಮೃತ ತಯಾರಿಸಿ ಸಂಗ್ರಹಿಸಲು ಒದಗಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಕಚೇರಿ ಸಮಯ 10 ರಿಂದ 5 ರವರೆಗೆ 08472 227712 ಗೆ ಸಂಪರ್ಕಿಸಬಹುದು.

Leave a Comment