How much insurance money get 2022-23ನೇ ಸಾಲಿನ ಮುಂಗಾರು ಹಂಗಾಮಿಗೆ ತೋಟಗಾರಿಕೆ ಬೆಳೆಗಳಿಗಷ್ಟೇ ಅಲ್ಲ, ತರಕಾರಿ ಬೆಳೆಗಳಿಗೂ ವಿಮೆ ಮಾಡಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಬಹುತೇಕ ರೈತರು ತೊಗರಿ, ಹೆಸರು, ಉದ್ದು, ಜೋಳ, ಸೂರ್ಯಕಾಂತಿ ಬೆಳೆ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸುತ್ತಾರೆ. ಆದರೆ ತರಕಾರಿ ಬೆಳೆಗಳಿಗೆ ವಿಮೆ ಮಾಡಿಸುವುದಿಲ್ಲ. ಈಗ ಕೆಲವು ತರಕಾರಿ ಬೆಳೆಗಳಿಗೂ ವಿಮೆ ಮಾಡಿಸಬಹುದು. ವಿಮೆ ಮಾಡಿಸಿದರೆ ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ತರಕಾರಿಯ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು?
ರೈತರು ಆಲುಗಡ್ಡೆ, ಮೆಣಸಿನಕಾಯಿ, ಟೊಮ್ಯಾಟೋ, ಎಲೆಕೋಸು (ಕ್ಯಾಬೇಜ್), ಹೂಕೋಸು, ಈರುಳ್ಳಿ ಬೆಳೆಗಳಿಗೂ ವಿಮೆ ಮಾಡಿಸಬಹುದು. ಈ ತರಕಾರಿ ಬೆಳೆಗಳಿಗೆ ವಿಮೆ ಮಾಡಿಸಲು ಪ್ರಸಕ್ತ ಸಾಲಿನಲ್ಲಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
How much insurance money get ತರಕಾರಿಯ ಬೆಳೆಗೆ ವಿಮೆ ಮಾಡಿಸಲು ಕೊನೆಯ ದಿನಾಂಕ ಯಾವುದು?
ರೈತರು ಆಲೂಗಡ್ಡೆ ಹಾಗೂ ಮೆಣಸಿನ ಕಾಯಿ ತರಕಾರಿಗೆ ವಿಮೆ ಮಾಡಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ. ಅದೇ ರೀತಿ ಟೊಮ್ಯಾಟೋ, ಕ್ಯಾಬೇಜ್ ಹಾಗೂ ಈರುಳ್ಳಿ ತರಕಾರಿ ಬೆಳೆಗೆ ವಿಮೆ ಮಾಡಿಸಲು ಜುಲೈ 15 ಕೊನೆಯ ದಿನಾಂಕವಾಗಿದೆ.
ತರಕಾರಿಯ ಯಾವ ಬೆಳೆಗೆ ಎಷ್ಟು ವಿಮೆ ಕಟ್ಟಿಸಬೇಕು. ವಿಮೆ ಕಟ್ಟಿದ ನಂತರ ಬೆಳೆ ಅತೀವೃಷ್ಟಿ ಅನಾವೃಷ್ಟಿ, ಬಿರುಗಾಳಿ, ಚಂಡಮಾರುತ, ಗುಡುಗು ಸಿಡಿಲಿನಿಂದ ಬೆಳೆ ಹಾಳಾದರೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ.
ಆನ್ಲೈನ್ ನಲ್ಲಿ ನಿಮ್ಮ ಜಿಲ್ಲೆಗೆ ಯಾವ ತರಕಾರಿಗೆ ಎಷ್ಟುವಿಮೆ ಜಮೆಯಾಗುತ್ತದೆ ? ಚೆಕ್ ಮಾಡಿ
ರೈತರು ಈಗ ಬೆಳೆ ವಿಮೆ ಮಾಡಿಸಲು ಯಾವ ಬೆಳೆಗೆ ಎಷ್ಟು ವಿಮೆ ಹಣ ಕಟ್ಟಬೇಕು ಹಾಗೂ ಜಮೆಯಾಗುವ ಹಣವೆಷ್ಟು ಎಂಬುದನ್ನು ಮೊಬೈಲ್ ನಲ್ಲೇ ನೋಡಬಹುದು.
ಹೌದು, ರೈತರು ಈ
https://www.samrakshane.karnataka.gov.in/Premium/Premium_Chart.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ರೈತರು ಯಾವ ಜಿಲ್ಲೆಗೆ ಸೇರಿದ್ದಾರೋ ಆ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಹೋಬಳಿ ಆಯ್ಕೆ ಮಾಡಿಕೊಂಡ ನಂತರ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಯಾವ ಬೆಳೆಗೆ ವಿಮೆ ಮಾಡಿಸುತ್ತೀರೋ ಅಲ್ಲಿ ಬೆಳೆ ಆಯ್ಕೆ ಮಾಡಿಕೊಳ್ಳಬೇಕು. ಎಷ್ಟು ಎಕರೆಗೆ ವಿಮೆ ಮಾಡಿಸುತ್ತೀರೋ ಅದನ್ನು ನಮೂದಿಸಬೇಕು.
ಉದಾಹರಣೆ ಒಂದು ಎಕರೆಗೆ ವಿಮೆ ಮಾಡಿಸಲು ಅಂದುಕೊಂಡಿದ್ದರೆ ಅಲ್ಲಿ 1 ಎಕರೆ ಗುಂಟೆಯಲ್ಲಿ 0 ನಮೂದಿಸಬೇಕು. ನಂತರ ಶೋ ಪ್ರಿಮಿಯಂ ಮೇಲೆಕ್ಲಿಕ್ ಮಾಡಬೇಕು. ಆಗ ಒಟ್ಟು ಎಷ್ಟುವಿಮೆ ಹಣ ಜಮೆಯಾಗುತ್ತದೆ, ಒಟ್ಟು ವಿಮೆ ಕಟ್ಟುವ ಹಣವೆಷ್ಟು, ರೈತರು ಕಟ್ಟುವ ಹಣವೆಷ್ಟು? ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲೆಷ್ಟು ಎಂಬುದೆಲ್ಲಾ ಕಾಣುತ್ತದೆ.
ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ?
ಉದಾಹರಣೆಗೆ ರೈತರು ಒಂದು ಎಕರೆಗೆ ವಿಮೆ ಎಷ್ಟು ಕಟ್ಟಬೇಕು ಹಾಗೂ ಬೆಳೆ ಹಾನಿಯಾದರೆ ಎಷ್ಟು ಹಣ ಜಮೆಯಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ.
ಟೊಮ್ಯಾಟೋ ಒಂದು ಎಕರೆ ಬೆಳೆ ನಷ್ಟವಾದರೆ ರೈತರಿಗೆ 47754 ರೂಪಾಯಿ ಜಮೆಯಾಗುತ್ತದೆ. ಅದಕ್ಕೆ ರೈತರು ಒಂದು ಎಕರೆಗೆ 2387 ರೂಪಾಯಿ ಕಟ್ಟಬೇಕು.
ಈರುಳ್ಳಿ ಒಂದು ಎಕರೆ ಬೆಳೆ ನಷ್ಟವಾದರೆ ರೈತರಿಗೆ 30352 ರೂಪಾಯಿ ಜಮೆಯಾಗುತ್ತದೆ. ಅದಕ್ಕೆ ರೈತರು ಒಂದು ಎಕರೆಗೆ 1517 ರೂಪಾಯಿ ಕಟ್ಟಬೇಕು.
ಇದನ್ನೂ ಓದಿ ನಿಮ್ಮ ಜಮೀನಿನ ಮೇಲೆ ಸಾಲವೆಷ್ಟಿದೆ? ಇಲ್ಲೇ ಚೆಕ್ ಮಾಡಿ
ಮೆಣಸಿನ ಕಾಯಿ ಒಂದು ಎಕರೆ ಬೆಳೆ ನಷ್ಟವಾದರೆ 28733 ರೂಪಾಯಿ ಜಮೆಯಾಗುತ್ತದೆ. ಅದಕ್ಕೆ ರೈತರು ಒಂದು ಎಕರೆಗೆ 1436 ರೂಪಾಯಿ ಕಟ್ಟಬೇಕು.
ಹೂಕೋಸು ಒಂದು ಎಕರೆ ಬೆಳೆ ನಷ್ಟವಾದರೆ 47754 ರೂಪಾಯಿ ಜಮೆಯಾಗುತ್ತದೆ. ಅದಕ್ಕೆ ರೈತರು ಒಂದು ಎಕರೆಗೆ 2387ರೂಪಾಯಿ ಕಟ್ಟಬೇಕು.
ಆಲೂಗಡ್ಡೆ ಒಂದು ಎಕರೆಗೆ ಬೆಳೆ ನಷ್ಟವಾದರೆ 28329 ರೂಪಾಯಿ ಜಮೆಯಾಗುತ್ತದೆ. ಅದಕ್ಕೆ ರೈತರು ಒಂದು ಎಕರೆಗೆ 1415 ರೂಪಾಯಿ ಕಟ್ಟಬೇಕು.
ಇಲ್ಲಿ ನೀರಾವರಿ ಮತ್ತು ಒಣ ಬೇಸಾಯ ತರಕಾರಿ ಬೆಳೆಗಳಿಗೆ ವಿಮೆ ಕಂತು ಹಾಗೂ ವಿಮೆ ಜಮೆಯಾಗುವ ಹಣ ವ್ಯತ್ಯಾಸವಾಗಿರುತ್ತದೆ. ವಿಮೆ ಕಟ್ಟುವಾಗ ನೀರಾವರಿ ಬೆಳೆಯೋ ಅಥವಾ ಮಳೆಯಾಶ್ರಿತ ಬೆಳೆಯೋ ಎಂಬುದನ್ನು ನಮೂದಿಸಿ ಚೆಕ್ ಮಾಡಬಹುದು.