ರೈತರ ಖಾತೆಗೆ ಬೆಳೆ ವಿಮೆ ಹಣ ಜಮೆ-ಇಲ್ಲೇ ಸ್ಟೇಟಸ್ ಚೆಕ್ ಮಾಡಿ

Written by By: janajagran

Updated on:

Crop insurance money ರೈತರಿಗಿಲ್ಲಿದೆ ಸಂತಸದ ಸುದ್ದಿ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ದೂರುದಾರರಿಗೆ ಬಾಕಿ ಹಣ ಸೇರಿದಂತೆ 8.49 ಕೋಟಿ ರೂಪಾಯಿ 9911 ರೈತರಿಗೆ ಶೀಘ್ರದಲ್ಲಿಯೇ ಪಾವತಿಸಬೇಕೆಂದು ಜಿಲ್ಲಾಧಿಕಾರಿ ವಿಮಾ ಕಂಪನಿಗಳಿಗೆ ಸೂಚಿಸಿದ್ದಾರೆ.

ಹೌದು, ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಜಿಲ್ಲಾಮಟ್ಟದ ಕುಂದುಕೊರತೆ ಸಭೆಯಲ್ಲಿ ವಿಮಾ ಕಂಪನಿಗಳಿಗೆ ಸೂಚಿಸಿದ್ದಾರೆ. 2021-22ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳ ಸ್ಥಳೀಯ ನೈಸರ್ಗಿಕ ವಿಕೋಪದಡಿಯಲ್ಲಿ 9911 ರೈತ ದೂರುದಾರರಿಗೆ ಬಾಕಿ ಹಣ ಸೇರಿದಂತೆ 8.49 ಕೋಟಿ ರೂಪಾಯಿ ಹಣ ಶೀಘ್ರದಲ್ಲಿ ಪಾವತಿಸಬೇಕೆಂದು ಯೂನಿವರ್ಸಲ್ ಸೊಂಪೋ ಜನರಲ್ ಇನ್ಸುರೆನ್ಸ್ ಕಂಪನಿಯ ಬೆಂಗಳೂರಿನ ಪ್ರತಿನಿಧಿಗಳು ಒಪ್ಪಿಕೊಂಡಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ 2021-22ನೇ ಸಾಲಿಗೆ ಸ್ಥಳೀಯ ನೈಸರ್ಗಿಕ ವಿಕೋಪ ಪರಿಹಾರದಡಿ ಜಿಲ್ಲೆಯಲ್ಲಿ 33,109 ದೂರುಗಳು ರೈತರಿಂದ ದಾಖಲಾಗಿವೆ. ಇದರಲ್ಲಿ 21521 ರೈತರಿಗೆ 22.013 ಕೋಟಿ ರೂಪಾಯಿ ಹಣ ಈಗಾಗಲೇ ಪಾವತಿಸಲಾಗಿದೆ.ಉಳಿಂದತೆ 3480 ದೂರುದಾರ ರೈತರಿಗೆ ಭಾಗಶಃ ಹಣ ಪಾವತಿಸಿದ್ದು, ಬಾಕಿಹಣ 2.506 ಕೋಟಿ ರೂಪಾಯಿಗಳನ್ನು ಏಪ್ರೀಲ್ 10 ರೊಳಗೆ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವುದಾಗಿ ವಿಮಾ ಕಂಪನಿಯ ಪ್ರತಿನಿಧಿಗಳು ತಿಳಿಸಿದ್ದಾರೆ.

ಇದಲ್ಲದೆ ತಡವಾಗಿ ಬೆಳೆ ಹಾನಿ ದೂರು ದಾಖಲಿಸಿದ 6,431 ರೈತರಿಗೂ ಸಹ 5.991 ಕೋಟಿರೂಪಾಯಿ ಹಣವನ್ನು ಇದೇ ಏಪ್ರೀಲ್ 20 ರೊಳಗಾಗಿ ಪಾವತಿಸಲಾಗುವುದು ಎಂದು ವಿಮಾ ಸಂಸ್ಥೆಯ ಪ್ರತಿನಿಧಿಗಳು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಒಪ್ಪಿಕೊಂಡಿದ್ದಾರೆ.

ಇದರಿಂದಾಗಿ ಕಲಬುರಗಿ ಜಿಲ್ಲೆಯಲ್ಲಿ 2021-22ನೇ ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಸ್ಥಳೀಯ ನೈಸರ್ಗಿಕ ವಿಕೋಪ ಘಟಕದಡಿ ಒಟ್ಟಾರೆ ದೂರು ಸಲ್ಲಿಸಿದ ಎಲ್ಲಾ ರೈತರಿಗೆ ಅರ್ಹ ವಿಮೆ ಪರಿಹಾರ ದೊರಕುವಂತಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Crop insurance money ಮೊಬೈಲ್ ನಲ್ಲೇ ಚೆಕ್ ಮಾಡಿ ಬೆಳೆ ವಿಮೆ ಜಮೆ ಸ್ಟೇಟಸ್

ರೈತರು ಮನೆಯಲ್ಲಿಯೇ ಕುಳಿತು ಬೆಳೆ ವಿಮೆ ಜಮೆಯಾಗುವ  ಸ್ಸೇಟಸ್ ನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ರೈತರು ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಲು ಈ

https://www.samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸರ್ಕಾರದ ಸಂರಕ್ಷಣೆ (SAMRAKSHANE) ಬೆಳೆ ವಿಮೆಯ ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತರು ಬೆಳೆವಿಮೆಯ ವರ್ಷ  ಋುತು ಅಂದರೆ ಮುಂಗಾರು (Kharif), ರಾಬಿ (Rabi),  ಬೇಸಿಗೆ (Summer) ಈ ಮೂರರಲ್ಲಿ ಯಾವ ಬೆಳೆಯ ಸ್ಟೇಟಸ್ ಚೆಕ್ ಮಾಡಬೇಕೋ ಅದನ್ನು  ಆಯ್ಕೆ ಮಾಡಿಕೊಳ್ಳಬೇಕು.

ಉದಾಹರಣೆ 2021-22ನೇ ಸಾಲಿನ ಮುಂಗಾರು ಬೆಳೆ ವಿಮೆಯ ಸ್ಟೇಟಸ್ ಚೆಕ್ ಮಾಡಬೇಕಾದರೆ Kharif ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆದರೆ ಅಲ್ಲಿ ಸ್ಕಿಪ್ ಮೇಲೆ ಕ್ಲಿಕ್ ಮಾಡಬೇಕು. ಫಾರ್ಮರ್ಸ್ ಕಾಲಂ ಕೆಳಗಡೆ ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಳ್ಳಬೇಕು.

ಇದನ್ನೂ ಓದಿ : ಜಮೀನುಗಳ ಸರ್ವೆ ನಂಬರ್ ಸಹಿತ ಬಂಡಿದಾರಿ, ಹಳ್ಳಕೊಳ್ಳಗಳ ಮ್ಯಾಪ್ ಬೇಕೆ? ಇಲ್ಲಿದೆ ಮಾಹಿತಿ

ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಕ್ಯಾಪ್ಚಾ ಕೋಡ್ ನಮೂದಿಸಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ತೆರೆದುಕೊಳ್ಳುತ್ತದೆ.  ಅಲ್ಲಿ ನಿಮ್ಮ ಬೆಳೆ ವಿಮೆ ನೋಂದಣಿ ವಿಮಾ ಕಂಪನಿಯಿಂದ ಅರ್ಜಿ ಸ್ವೀಕೃತವಾಗಿದೆಯೋ ಇಲ್ಲವೋ ಗೊತ್ತಾಗುತ್ತದೆ. ಮುಂದೆ ಕಾಣುವ ಸೆಲೆಕ್ಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಯಾವ ದಿನಾಂಕದಂದು ನಿಮ್ಮಅರ್ಜ ಅಪ್ರೂವಲ್ ಆಗಿದೆ. ಬ್ಯಾಂಕಿನವರು ಇನ್ಸುರೆನ್ಸ್ ಕಂಪನಿಗೆ ಅರ್ಜಿ ಫಾರ್ವರ್ಡ್ ಮಾಡಿದ್ದಾರೋ ಇಲ್ಲವೋ ಎಂಬುದು ಸಹ ಗೊತ್ತಾಗುತ್ತದೆ.

Leave a Comment