Do you know cibil score ಸರ್ಕಾರಿ ಬ್ಯಾಂಕ್ ಆಗಲಿ, ಖಾಸಗಿ ಬ್ಯಾಂಕ್ ಆಗಲಿ, ಸಾಲ ಕೇಳಲು ಹೋದರೆ ಅವರು ಮೊದಲು ನೋಡುವುದು ನಿಮ್ಮ ಸಿಬಿಲ್ ಸ್ಕೋರ್. ಸಿಬಿಲ್ ಸ್ಕೋರ್ ಚೆನ್ನಾಗಿದ್ದರೆ ಮಾತ್ರ ನಿಮಗೆ ಸಾಲ ಸಿಗುತ್ತದೆ. ಸಿಬಿಲ್ ಸ್ಕೋರ್ ಕಡಿಮೆಯಿದ್ದರೆ ಬ್ಯಾಂಕಿನವರಾಗಲಿ ಖಾಸಗಿ ಹಣಕಾಸಿನ ಸಂಸ್ಥೆಗಳಾಗಲಿ ಸಾಲ ನೀಡಲು ನಿಮ್ಮನ್ನು ನಿರಾಕರಿಸುತ್ತಾರೆ.
ಹಾಗಾದರೆ ಸಿಬಿಲ್ ಸ್ಕೋರ್ ಎಂದರೇನು? ಸಿಬಿಲ್ ಸ್ಕೋರ್ ಎಷ್ಟಿರಬೇಕು? ಸಿಬಿಲ್ ಸ್ಕೋರ್ ಏಕೆ ಉತ್ತಮವಾಗಿರಬೇಕು? ಸಿಬಿಲ್ ಸ್ಕೋರ್ ದಿಂದಾಗಿ ಯಾವ ಯಾವ ಮಾಹಿತಿ ಗೊತ್ತಾಗುತ್ತದೆ? ಸಿಬಿಲ್ ಸ್ಕೋರ್ ದಿಂದಾಗುವ ಪ್ರಯೋಜನಗಳೇನು? ಸಿಬಿಲ್ ಸ್ಕೋರ್ ಹೆಚ್ಚಾಗಲು ಏನು ಮಾಡಬೇಕು ಎಂಬಿತ್ಯಾದಿ ನಿಮ್ಮ ಪ್ರಶ್ನೆಗಳಿಗಿಲ್ಲಿದೆ ಉತ್ತರ.
ಬ್ಯಾಂಕ್ ಗ್ರಾಹಕನಾಗಲಿ ಇನ್ನೊಬ್ಬರಾಗಲಿ ಸಾಲ ತೀರಿಸುವ ಸಾಮರ್ಥ್ಯವನ್ನು ಸಿಬಿಲ್ ಸ್ಕೋರ್ ಅಂದರೆ ಕ್ರೆಡಿಟ್ ಸ್ಕೋರ್ ಮೂಲಕವೇ ಅಳೆಯಲಾಗುತ್ತದೆ. ಸಾಲ ಪಡೆದ ವ್ಯಕ್ತಿ ಹಿಂದಿನ ಆರು ತಿಂಗಳುಗಳ ಬ್ಯಾಂಕ್ ಚಟುವಟಿಕೆಗಳು, ಹಳೆಯ ಸಾಲದ ಕಂತು ಸರಿಯಾದ ಸಮಯಕ್ಕೆ ಕಟ್ಟಿದ್ದಾರೋ ಇಲ್ಲವೋ ಎಂಬದನ್ನು ಚೆಕ್ ಮಾಡುತ್ತದೆ ಕ್ರೆಡಿಟ್ ಸ್ಕೋರ್. ಸಾಲಗಾರರ ಈ ಕ್ರೇಡಿಟ್ ಸ್ಕೋರ್ ಆಧಾರದ ಮೇಲೆಯೇ ಗ್ರಾಹಕನಿಗೆ ಸಾಲ ಮಂಜೂರು ಮಾಡುತ್ತದೆ. ಹಾಗಾದರೆ ಕ್ರೆಡಿಟ್ ಸ್ಕೋರ್ ಎಶ್ಟಿರಬೇಕು?
Do you know cibil score ಕ್ರೇಡಿಟ್ ಸ್ಕೋರ್ ಎಷ್ಟಿದ್ದರೆ ಸಾಲ ಸಿಗುತ್ತದೆ?
ಬ್ಯಾಂಕ್ ಗ್ರಾಹಕನಿಗೆ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಸಾಲ ಮಂಜೂರು ಮಾಡಲಾಗುತ್ತದೆ. 700 ಗಿಂತ ಹೆಚ್ಚನ ಸ್ಕೋರ್ ಇದ್ದರೆ ಉತ್ತಮ. ಗ್ರಾಹಕರನಿಗೆ ಕನಿಷ್ಟ 750 ಕ್ರೇಡಿಟ್ ಸ್ಕೋರ್ ಇದ್ದರೆ ಸಾಲ ಮರುಪಾವತಿಸಲು ಸಾಮರ್ಥ್ಯರು ಎಂದು ಪರಿಗಣಿಸಲಾಗುತ್ತದೆ. ಇದು ವಿದ್ಯಾರ್ಥಿಗೆ ಡಿಸ್ಟಿಂಕ್ಷನ್ ಗೆ ಸಮ ಎಂದು ಹೇಳಬಹುದು. ಕ್ರೆಡಿಟ್ ಸ್ಕೋರ್ 300 ರಿಂದ 900 ರವರೆಗೆ ಇರುತ್ತದೆ.
ಸಿಬಿಲ್ ಸ್ಕೋರ್ ಯಾವ ಮಾಹಿತಿಯನ್ನು ಒದಗಿಸುತ್ತದೆ?
ಸಿಬಿಲ್ ಸ್ಕೋರ್ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ದೊಂದಿಗೆ ಸಾಲದ ಇತಿಹಾಸ, ಮರುಪಾವತಿಯ ದಿನಾಂಕಗಳು ಮತ್ತು ಯಾವುದಾದರೂ ಮರುಪಾವತಿ ಡಿಫಾಲ್ಟ್ ಹಾಗೂ ವಿಳಂಬವಾಗಿದ್ದರೆ ಅವುಗಳ ಸಂಪೂರ್ಣ ಮಾಹಿತಿ ನೀಡುತ್ತದೆ. ಇದರೊಂದಿಗೆ ಯಾವ ಬ್ಯಾಂಕಿನಲ್ಲಿ ಎಷ್ಟು ಸಾಲ ಪಡೆದಿದ್ದಾರೆ ಎಂಬ ಮಾಹಿತಿಯನ್ನು ಸಹ ಒದಗಿಸುತ್ತದೆ.
ಸಿಬಿಲ್ ಸ್ಕೋರ್ ಉಚಿತವಾಗಿ ಚೆಕ್ ಮಾಡುವುದು ಹೇಗೆ?
ಸಿಬಿಲ್ ಸ್ಕೋರ್ ನ್ನು ಮೊಬೈಲ್ ನಲ್ಲೇ ಪರಿಶೀಲಿಸಬೇಕಾದರೆ ಈ https://homeloans.sbi/getcibil
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಎಸ್.ಬಿ. ಬ್ಯಾಂಕಿನ ಉಚಿತವಾಗಿ ಸಿಬಿಲ್ ಸ್ಕೋರ್ ಚೆಕ್ ಮಾಡುವ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಹೆಸರು, ಲಿಂಗ, ಜನ್ಮ ದಿನಾಂಕ ವಿಳಾಸ, ಮೊಬೈಲ್ ನಂಬರ್, ಈ ಮೇಲ್ ಐಡಿ ನಮೂದಿಸಿದ ಕೆಳಗಿನ ಟರ್ಮ್ಸ್ ಆ್ಯಂಡ್ ಕಂಡಿಶನ್ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ಭರ್ತಿ ಮಾಡಿದ ಎಲ್ಲಾ ಮಾಹಿತಿಗಳನ್ನು ಮತ್ತೊಮ್ಮೆ ಪರಿಶೀಲಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೊಂದು ಪಿಡಿಎಫ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ಇಲ್ಲಿಯವರೆಗೆ ಯಾವ ಯಾವ ಬ್ಯಾಂಕಿನಲ್ಲಿ ಸಾಲ ಪಡೆದಿದ್ದೀರಿ ಹಾಗೂ ನಿಮ್ಮ ಸಿಬಿಲ್ ಸ್ಕೋರ್ ಎಷ್ಟಿದೆ ಎಂಬ ಮಾಹಿತಿ ಗೊತ್ತಾಗುತ್ತದೆ. ಈ ಸಿಬಿಲ್ ಸ್ಕೋರ್ ಆಧಾರದ ಮೇಲೆ ನೀವು ಸುಲಭವಾಗಿ ಸಾಲ ಪಡೆಯಬಹುದು.
ಏನಿದು ಸಿಬಿಲ್ ಸ್ಕೋರ್ (What is CIBIL score)?
CIBIL ಕ್ರೆಡಿಟ್ ಇನಫಾರ್ಮೇಶನ್ ಬ್ಯೂರೋ (ಇಂಡಿಯಾ) ಲಿಮಿಟೆಡ್. ಇದು ಸಾಲದ ಬಗ್ಗೆ ಮಾಹಿತಿ ನೀಡುವ ದೇಶದ ಮೊದಲ ಕಂಪನಿಯಾಗಿದೆ. ವ್ಯಕ್ತಿಗಳು ಹಾಗೂ ವಾಣಿಜ್ಯ ಸಂಸ್ಥೆಗಳು ಸಾಲದ ದಾಖಲೆಗಳ ಸಂಗ್ರಹಣೆ ಮತ್ತು ನಿರ್ವಹಣೆಯೇ ಈ ಕಂಪನಿಯ ಮೂಲ ಉದ್ದೇಶವಾಗಿದೆ.
ಸಿಬಿಲ್ ಸ್ಕೋರ್ ಹೆಚ್ಚಾಗಬೇಕಾದರೆ ಏನು ಮಾಡಬೇಕು?
ನಿಮ್ಮ ಸಿಬಿಲ್ ಸ್ಕೋರ್ ಕಡಿಮೆಯಿದ್ದರೆ ನೀವು ಬ್ಯಾಂಕಿನಿಂದ ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಬೇಕು. ವೈಯಕ್ತಿಕ ಸಾಲವಾಗಲಿ, ಗೃಹ, ವಾಹನ ಸಾಲಗಳಾಗಲಿ ಸಾಲದ ಕಂತನ್ನು ಸರಿಯಾದ ಸಮಯಕ್ಕೆ ಪಾವತಿಸುತ್ತಾ ಹೋದರೆ ನಿಮ್ಮ ಸಿಬಿಲ್ ಸ್ಕೋರ್ ಹೆಚ್ಚಾಗುತ್ತಾ ಹೋಗುತ್ತದೆ.