Pradhanmantri Fasal Bima scheme ರೈತರಿಗೆ ಸಂತಸದ ಸುದ್ದಿ, ರೈತರ ಮನೆ ಬಾಗಿಲಿಗೆ ಫಸಲ್ ಬಿಮಾ ಯೋಜನೆಯ ಪಾಲಿಸಿಯನ್ನು ತಲುಪಿಸಲು ಕೃಷಿ ಇಲಾಖೆ ಮುಂದಾಗಿದೆ. ಹೌದು, ನನ್ನ ಪಾಲಿಸಿ ನನ್ನ ಕೈಲಿ ಎಂಬ ಅಭಿಯಾನ ಆರಂಭಿಸಿದ್ದು, ಈ ಅಭಿಯಾನದ ಮೂಲಕ ರೈತರ ಮನೆಬಾಗಿಲಿಗೆ ಫಸಲ್ ಬಿಮಾ ಯೋಜನೆ ಪಾಲಿಸಿಯನ್ನು ತಲುಪಿಸಲು ಕೃಷಿ ಇಲಾಖೆ ಮುಂದಾಗಿದೆ.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯು ಏಳನೇಯ ವರ್ಸಕ್ಕೆ ಕಾಲಿಡುತ್ತಿದ್ದು, ಮುಂಬರುವ ಮುಂಗಾರು ಅವಧಿಯಲ್ಲಿ ವಿಮಾ ಪಾಲಿಸಿಗಳನ್ನು ರೈತರಮನೆಬಾಗಿಲಿಗೆ ತಲುಪಿಸುವ ಅಭಿಯಾನವನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಪಾಲಿಸಿಯ ವಿವರ, ಜಮೀನಿನ ದಾಖಲೆಗಳು, ಕ್ಲೇಮ್ ಪ್ರಕ್ರಿಯೆ ಮತ್ತು ದೂರು ಹೇಳಿಕೊಳ್ಳುವ ಬಗ್ಗೆ ಎಲ್ಲ ರೈತರಿಗೆ ಗೊತ್ತಿರಬೇಕು ಎಂಬ ಉದ್ದೇಶದಿಂದಾಗಿ ಮೇರಿ ಪಾಲಿಸಿ ಮೇರಿ ಹಾಥ್ ಹೆಸರಿನ ಈ ಅಭಿಯಾನ ಇದಾಗಿದೆ. ಯೋಜನೆಯ ಜಾರಿಯಲ್ಲಿರುವ ಎಲ್ಲಾ ರಾಜ್ಯಗಳಲ್ಲಿಯೂ ಈ ಅಭಿಯಾನ ಆರಂಭಿಸಲಾಗಿದೆ.
ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ವಾದ ರೈತರಿಗೆ ಫಸಲ್ ಬಿಮಾ ಯೋಜನೆಯಡಿ ನೆರವು ನೀಡಲಾಗುತ್ತಿತ್ತು. ಆದರೆ ಬೆಳೆಗಳಿಗೆ ವಿಮೆ ಮಾಡಿಸಿದ ರೈತರಿಗೆ ಬೆಳೆ ನಷ್ಟವಾದಾಗ ಅವರಿಗೆ ವಿಮೆ ಸಿಗುತ್ತಿರಲಿಲ್ಲ. ಇದರಿಂದಾಗಿ ರೈತರು ಬೆಳೆಗಳಿಗೆವಿಮೆ ಮಾಡಿಸಲು ಹಿಂದೇಟು ಹಾಕುತ್ತಿದ್ದರು. ಸರ್ಕಾರ ರೈತರಿಗೆ ಆಗುತ್ತಿರುವ ಸಮಸ್ಯೆಯನ್ನು ಮನಗಂಡು ಈಗ ರೈತರ ಮನೆ ಬಾಗಿಲಿಗೆ ಫಸಲ್ ಬಿಮಾ ಯೋಜನೆಯನ್ನು ತಲುಪಿಸಲು ತಯಾರಾಗಿದೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಬಿಎಚ್ಎಸ್ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಿ ಕೃಷಿ ಸಚಿವ ಬಿ.ಸಿ ಪಾಟೀಲ್ ಮಾತನಾಡಿದರು.
ಇದನ್ನೂ ಓದಿ : ಸಿಬಿಲ್ ಸ್ಕೋರ್ ಮೊಬೈಲ್ ನಲ್ಲಿಯೇ ಉಚಿತವಾಗಿ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಪ್ರಕೃತಿ ವಿಕೋಪಗಳಿಂದ ಬೆಳೆಗಳಿಗೆ ವಿಮಾ ಭದ್ರತಾ ಕವಚ ಒದಗಿಸುವುದು ಸರ್ಕಾರದ ಸಂಕಲ್ಪವಾಗಿದೆ. ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟವಾದರೆ ರೈತರ ನೆರವಿಗೆ ಬರುವ ಯೋಜನೆ ಇದಾಗಿದೆ. ಹಿಂಗಾರು 2021-22ರ ಹಂಗಾಮಿನಲ್ಲಿ ನೋಂದಣಿಮಾಡಿಸಿದ ರೈತರಿಗೆ ತಮ್ಮ ಪಾಲಿಸಿ ವಿವರವನ್ನು ಇನ್ ಲ್ಯಾಂಡ್ ಲೆಟರ್ ನಮೂನೆಯಲ್ಲಿ ವಿತರಿಸಲಾಗುವುದು ಎಂದರು.
Pradhanmantri Fasal Bima scheme ಬೆಳೆ ವಿಮೆ ಅರ್ಜಿಯ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಬೆಳೆ ವಿಮೆ ಕಟ್ಟಿದ ರೈತರು ಬೆಳೆ ವಿಮೆ ಅರ್ಜಿಯ ಸ್ಟೇಟಸ್ ಚೆಕ್ ಮಾಡಲು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ…. ರೈತರು ವಿಮೆ ಸ್ಟೇಟಸ್ ಚೆಕ್ ಮಾಡಲು ಈ
https://www.samrakshane.karnataka.gov.in/Premium/CheckStatusMain_aadhaar.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸಂರಕ್ಷಣೆಯ ಪೇಜ್ ಓಪನ್ ಆಗುತ್ತದೆ. ಅಲ್ಲಿ ಚೆಕ್ ಸ್ಟೇಟಸ್ ಬೈ ಟೈಪ್ ಮುಂದುಗಡೆ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ಮೊಬೈಲ್ ನಂಬರ್ ನಮೂದಿಸಿ ಕ್ಯಾಪ್ಚ್ಯಾ ಕೋಡ್ ನಮೂದಿಸಿದ ನಂತರ ಸರ್ಚ್ ಮೇಲೆಕ್ಲಿಕ್ ಮಾಡಿದರೆ ಸಾಕು, ಬೆಳೆ ವಿಮೆ ಅರ್ಜಿಯ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ನೀವು ಬೆಳೆವಿಮೆ ಸಲ್ಲಿಸಿದ ಅರ್ಜಿ ಸ್ವೀಕೃತವಾಗಿದೆಯೋ ಇಲ್ಲವೋ ಎಂಬುದು ಗೊತ್ತಾಗುತ್ತದೆ.
ಬೆಳೆವಿಮೆ ಸಲ್ಲಿಸಿದ ನಂತರ ಅರ್ಜಿಯ ಸ್ಟೇಟಸ್ ಏನೂ ಕಾಣದಿದ್ದರೆ ನೀವು ಯಾವ ವಿಮಾ ಕಂಪನಿಗೆ ಹಣ ಪಾವತಿಸಿದ್ದೀರೋ ಆ ವಿಮಾ ಕಂಪನಿಯ ಏಜೆಂಟರಿಂದ ಮಾಹಿತಿ ಪಡೆಯಬಹುದು. ಒಂದು ವೇಳೆ ನಿಮಗೆ ವಿಮಾ ಕಂಪನಿಯ ಏಜೆಂಟರ ಮೊಬೈಲ್ ನಂಬರ್ ಗೊತ್ತಿಲ್ಲದಿದ್ದರೆ ಈ 1800 180 1551 ಸಹಾಯವಾಣಿಗೆ ಕರೆ ಮಾಡಿದರೆ ಸಾಕು. ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಇದೆ. ನಿಮ್ಮ ಜಿಲ್ಲೆಯ ಏಜೆಂಟರ ನಂಬರ್ ಕೊಡುತ್ತಾರೆ. ಆಗ ನೀವು ನಿಮ್ಮ ಬೆಳೆ ವಿಮಾಕಂಪನಿಯ ಏಜೆಂಟರೊಂದಿಗೆ ಸಂಪರ್ಕಿಸಿ ನಿಮ್ಮ ಬೆಳೆವಿಮಾ ಅರ್ಜಿಯ ಸ್ಟೇಟಸ್ ಚೆಕ್ ಮಾಡಬಹುದು.