LIC Status ಮೊಬೈಲ್ ನಲ್ಲೇ ಚೆಕ್ ಮಾಡಿ? ಇಲ್ಲಿದೆ ಮಾಹಿತಿ

Written by By: janajagran

Updated on:

LIC Status ನ್ನು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ನಿಮ್ಮ ಬಳಿಯಿರುವ ಮೊಬೈಲ್ ನಲ್ಲಿ ಕೇವಲ ಒಂದೇ ನಿಮಿಷದಲ್ಲಿ ಚೆೆೆಕ್ ಮಾಡಬಹುದು.

ಎಲ್ಐಸಿ ಎಂಬುದು ಈಗ ಪ್ರತಿಯೊಬ್ಬರಿಗೂ ಮಹತ್ವವಾಗಿದೆ. ಎಲ್ಐಸಿಯಿಲ್ಲದ ಮನೆಯೇ ಇಲ್ಲವೆಂದು ಹೇಳುವಸ್ಟರಮಟ್ಟಿಗೆ ಈಗ ಎಲ್ಐಸಿ ಪ್ರಸಿದ್ಧಿ ಪಡೆದಿದೆ.

ಪ್ರತಿಯೊಂದು ಕುಟುಂಬದಲ್ಲಿ ಒಬ್ಬರಾದರೂ ಎಲ್ಐಸಿ ಮಾಡಿಸಿಯೇ ಇರುತ್ತಾರೆ. ಮೊದಲು ಎಲ್ಐಸಿ ಮ್ಯಾಚುರಿಟಿ, ಬೋನಸ್, ಸಾಲ ತೆಗೆದುಕೊಂಡಿದ್ದರೆ ಎಷ್ಟು ಸಾಲ ಪಡೆದಿದ್ದೀರಿ ಸೇರಿದಂತೆ ಇನ್ನಿತರ ಮಾಹಿತಿ ಪಡೆಯಲು ಎಲ್ಐಸಿ ಕಚೇರಿಗೆ ಅಥವಾ ಎಲ್ಐಸಿ ಏಜೆಂಟರ ಬಳಿ ಹೋಗಬೇಕಿಲ್ಲ. ಈಗ ಮನೆಯಲ್ಲಿಯೇ ಕುಳಿತು ಎಲ್ಐಸಿ ಸ್ಟೇಟಸನ್ನು ಚೆಕ್ ಮಾಡಬಹುದು. ಹೌದು,ಈಗ ಮೊಬೈಲ್ ನಲ್ಲಿಯೇ ಎಲ್ಐಸಿಯ ಎಲ್ಲಾ ಮಾಹಿತಿಯನ್ನು ಪಡೆಯಬಹುದು.

ಪಾಲಿಸಿದಾರರು LIC Status ನೋಡಲು ಅವರ ಪಾಲಿಸಿಯ ನಂಬರ್ ಗೊತ್ತಿದ್ದರೆ ಸಾಕು, ಎಲ್ಐಸಿ ನಂಬರ್ ನಮೂದಿಸಿ ಪ್ರೀಮಿಯಂ ಕಟ್ಟುವ ದಿನಾಂಕ, ವಿಮೆಯ ಬೋನಸ್, ಶರಣಾಗತಿಯ ಮೌಲ್ಯ ( Policy Surrender value)  ಮಾಹಿತಿಯನ್ನು ಸಹ ತಿಳಿದುಕೊಳ್ಳಬಹುದು.

 LIC status ನೋಡಲು ಈ https://licindia.in/Home-(1)/LICOnlineServicePortal

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಎಲ್ಐಸಿ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ New user ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಪಾಲಿಸಿ ನಂಬರ್ , Installment Premium ಅಂದರೆ ಕಂತಿನ ಹಣ ಹಾಕುಬೇಕು. ಅರ್ಧವಾರ್ಷಿಕ, ವಾರ್ಷಿಕ, ತಿಂಗಳ ಹೀಗೆ ನೀವು ಯಾವ ರೀತಿಯಾಗಿ ಪಾವತಿಯ ಇನ್ಸ್ಟಾಲ್ ಮೆಂಟ್ ಕಟ್ಟುತ್ತಿದ್ದೀರೋ ಅದರ ಬಗ್ಗೆ ನಮೂದಿಸಬೇಕು. ಹುಟ್ಟಿದ ದಿನಾಂಕ, ಮೊಬೈಲ್ ನಂಬರ್, ಈ ಮೇಲ್ ಐಡಿ, ಪಾಸ್ಪೋರ್ಟ್ ನಂಬರ್ ಇದ್ದರೆ ಪಾಸ್ಪೋರ್ಟ್ , ಪ್ಯಾನ್ ನಂಬರ್, ಜೆಂಡರ್ ನಲ್ಲಿ ಪುರುಷ ರಾಗಿದ್ದರೆ ಮೇಲೆ,ಮಹಿಳೆಯರಾಗಿದ್ದರೆ ಫಿಮೇಲ್ ಆಯ್ಕೆ ಮಾಡಿಕೊಳ್ಳಬೇಕು. I confirm Box ಆಯ್ಕೆಮಾಡಿಕೊಂಡು ಪ್ರೊಸೀಡ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲ್ ನಂಬರ್,ಪ್ಯಾನ್ ನಂಬರ್ ಹಾಗೂ ಈ ಮೇಲ್ ನೊಂದಿಗೆ ಒಂದು ಸಂದೇಶ ಕಾಣುತ್ತದೆ. ಅಲ್ಲಿ ನಿಮ್ಮ ಮೊಬೈಲ್ ನಂಬರ್, ಪ್ಯಾನ್ ನಂಬರ್, ಈ ಮೇಲೆ ಐಡಿ ಚೆಕ್ ಮಾಡಿಕೊಂಡುಯಸ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಾಸ್ವರ್ಡ್ ಸೆಟ್ ಮಾಡಿಕೊಂಡು ನಂತರ ನಿಮ್ಮ ಯೂಸರ್ ಐಡಿ ಎಲ್ಐಸಿ ಪೋರ್ಟಲ್ ನಲ್ಲಿ ನೋಂದಣಿಯಾಗುತ್ತದೆ. ಆಗ ನಿಮ್ಮ ಯೂಸರ್ ಐಡಿ ಮತ್ತು ಪಾಸ್ವರ್ಡ್ ನಮೂದಿಸಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಪಾಲಿಸಿ ಪ್ರಿಮಿಯಂ, ಬೋನಸ್,ಶರಣಾಗತಿಯಮೌಲ್ಯ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ನೋಡಬಹುದು.

ಇದನ್ನೂ ಓದಿ ಬೆಳೆ ಸಾಲಮನ್ನಾ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಒಂದು ವೇಳೆ ನೀವು ಯೂಸರ್ ಐಡಿ ಕ್ರಿಯೇಟ್ ಮಾಡಿ ಪಾಸ್ವರ್ಡ್ ಮರೆತಿದ್ದರೆ ಕೆಳಗಡೆ ಕಾಣುವ ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಫಾರ್ಗೇಟ್ ಪಾಸ್ವರ್ಡ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲ್ ನಂಬರ್ ಅಥವಾ ಈ ಮೇಲ್ ಐಡಿ, ಹುಟ್ಟಿದ ದಿನಾಂಕ, ಕ್ಯಾಪ್ಚ್ಯಾ ಕೋಡ್ ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಮೊಬೈಲ್ ಮತ್ತು ಈ ಮೇಲ್ಗೆ ಓಟಿಪಿ ಬರುತ್ತದೆ. ಓಟಿಪಿ ನಮೂದಿಸಿ ಪಾಸ್ವರ್ಡ್ ಕ್ರಿಯೇಟ್ ಮಾಡಿಕೊಳ್ಳಬೇಕು.

ಎಲ್ಐಸಿ ಪೇಜ್ ಓಪನ್ ಆದಾಗ ಬೇಸಿಕ್ ಸರ್ವಿಸೆಸ್ ಮೇಲೆ ಕ್ಲಿಕ್ ಮಾಡಬೇಕು. ಆಗ ಎಡಗಡೆ ಆನ್ಲೈನ್ ನಲ್ಲಿ ಯಾವ ಯಾವ  ಮಾಹಿತಿಗಳನ್ನು ವೀಕ್ಷಿಸಬಹುದು ಎಂಬ ಸಂದೇಶ ಕಾಣುತ್ತದೆ. ಪ್ರಿಮಿಯಂ ಕ್ಯಾಲೆಂಡರ್ ಮೇಲೆ ಕ್ಲಿಕ್ ಮಾಡಿದಾಗ ಹಿಂದೆ ನಿಮ್ಮಪಾಲಿಸಿ ಕಂತಿನ ಪೆಂಡಿಂಗ್ ಅಂದರೆ ಡ್ಯೂ ಲಿಸ್ಟ್ ಕಾಣುತ್ತದೆ. ಪಾಲಿಸಿ ಸ್ಕೆಡ್ಲೂಲ್ಡ್ ಮೇಲೆ ಕ್ಲಿಕ್ ನಿಮ್ಮ ಪಾಲಿಸಿ ಬಾಂಡ್ ಡೌನ್ಲೋಡ್ ಮಾಡಿಕೊಳ್ಳಬಹುದು. ಪಾಲಿಸಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಪಾಲಿಸಿ Active ಇದೆಯೋ ಇಲ್ಲವೋ ಎಂಬ ಮಾಹಿತಿ ಕಾಣುತ್ತದೆ. ಕಾಣುತ್ತದೆ.ಕ್ಲೇಮ್ ಸ್ಟೇಟಸ್ ಮೇಲೆಕ್ಲಿಕ್ ಮಾಡಿದಾಗ ನಿಮ್ಮ ಪಾಲಿಸಿ ಮುಗಿದ ನಂತರ ಎಷ್ಟು ವರ್ಷ  ದವರೆಗೆ ಪಾಲಿಸಿ ಚಾಲ್ತಿಯಲ್ಲಿರುತ್ತದೆ ಎಂಬ ಸಂದೇಶ ಕಾಣುತ್ತದೆ. ಲೋನ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿದ್ದರೆ ನೀವು ಎಷ್ಟು ಲೋನ್ ಪಡೆದಿದ್ದೀರಿ ಅದಕ್ಕೆ ಬಡ್ಡಿ ಎಷ್ಟು ಕಟ್ಟಬೇಕು ಎಂಬ ಮಾಹಿತಿ ಕಾಣುತ್ತದೆ.

Leave a Comment