ಒಂದು ರಾಷ್ಟ್ರ ಒಂದು ನೋಂದಣಿ ಯೋಜನೆ ಘೋಷಣೆ

Written by By: janajagran

Updated on:

One nation one Registration ಒಂದು ರಾಷ್ಟ್ರ ಒಂದು ಪಡಿತರ ಯೋಜನೆಯಂತೆ ಈ ಸಲ ಕೇಂದ್ರ ಬಜೆಟ್ ನಲ್ಲಿ ರೈತರ ಜಮೀನು ನೋಂದಣಿ ಸೌಲಭ್ಯ  ಸರಳೀಕರಣಗೊಳಿಸಲು ಒಂದು ರಾಷ್ಟ್ರ ಒಂದು ನೋಂದಣಿ ಘೋಷಣೆ ಮಾಡಲಾಗಿದೆ.

ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು ಮಂಡಿಸಿದ ಬಜೆಟ್ ನಲ್ಲಿ ಒಂದು ರಾಷ್ಟ್ರ ಒಂದು ನೋಂದಣಿ ವ್ಯವಸ್ಥೆಯನ್ನು ಘೋಷಣೆ ಮಾಡಿದ್ದಾರೆ. ರೈತರು ಜಮೀನಿ ನೋಂದಣಿ ಮಾಡಿಸುವಾಗ ಅನುಭವಿಸುತ್ತಿರುವ ಸಮಸ್ಯೆಯನ್ನು ಬಗೆಹರಿಸಲು ಈ ಯೋಜನೆಯನ್ನು ಘೋಷಿಸಲಾಗಿದೆ.  ಇದು ರೈತರಿಗೆ ಸುಗಮ ಜೀವನ ಮತ್ತು ವ್ಯವಹಾರವನ್ನು ಸುಗಮಗೊಳಿಸುತ್ತದೆ. ರೈತರು ಸುಗಮವಾಗಿ ಜೀವನ ನಡೆಸಲು ಹಾಗೂ ಜಮೀನಿಗೆ ಸಂಬಂಧಿಸಿದ ವಹಿವಾಟಿನಲ್ಲಿ ಸಮಸ್ಯೆಯಾಗದಂತೆ ಒಂದು ರಾಷ್ಟ್ರ ಒಂದು ನೋಂದಣಿಯನ್ನು ವ್ಯವಸ್ಥೆಯನ್ನು ಘೋಷಣೆ ಮಾಡಿದ್ದಾರೆ.

ಗಂಗಾ ನದಿ ದಡದಲ್ಲಿ 5 ಕಿ.ಮೀ ಅಗಲದ ಕಾರಿಡಾರಗಳಲ್ಲಿ ರೈತರ ಭೂಮಿಯನ್ನು ಕೇಂದ್ರೀಕರಿಸಿ ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲಾಗುವುದು. ರೈತರ ಆದಾಯ ಹೆಚ್ಚಿಸಲು ಪಿಪಿಪಿ ವಿಧಆನದಲ್ಲಿ ಯೋಜನೆ ಆರಂಭಿಸಲಾಗುವುದು ಎಂದು ಘೋಷಿಸಿದ್ದಾರೆ.

ಇದನ್ನೂ ಓದಿ : ಬೆಳೆ ವಿಮೆ ಮಾಡಿಸಿದ ಮಾತ್ರಕ್ಕೆ ವಿಮೆ ಪರಿಹಾರ ಜಮೆಯಾಗಲ್ಲ. ವಿಮೆ ಮಾಡಿಸಿದ ರೈತರೇನು ಮಾಡಬೇಕು? ಇಲ್ಲಿದೆ ಮಾಹಿತಿ

ಕೋವಿಡ್ ಸಾಂಕ್ರಾಮಿಕದಿಂದಾಗಿ ಸಂಕಷ್ಟದಲ್ಲಿರುವ ಕೃಷಿ ಕ್ಷೇತ್ರವನ್ನು ಮೇಲೆತ್ತುವುದಕ್ಕಾಗಿ ರೈತ ಆದಾಯ ಮತ್ತು ಭದ್ರತೆಯ ದೃಷ್ಟಿಯಿಂದ ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ಆಪ್ಟಿಕಲ್ ಫೈಬರ್ ಹಳ್ಳಿಗಳಿಗೂ ತಲುಪಲಿದೆ ಎಂದು ಘೋಷಣೆ ಮಾಡಿದ್ದರೆ.

ತರಕಾರಿ ಬೆಳೆಯುವ ರೈತರಿಗಾಗಿ ಪ್ಯಾಕೇಜ್ ಗಳನ್ನು ತರುವುದಾಗಿ ಹೇಳಇದ್ದಾರೆ. ಇದೇ ವೇಳೆ ಕೃಷಿ ವಿಚಾರವಾಗಿ ಮಾತನಾಡಿದ ಅವರು ರೈತರಿಗೆ ಎಂಎಸ್ ಪಿ 2,7 ಲಕ್ಷ ಕೋಟಿ ರೂಪಾಯಿ ಹಾಗೂ ಎಣ್ಣೆಕಾಳು ಕೃಷಿಗೆ ಸರ್ಕಾರ ಉತ್ತೇಜನ ನೀಡಲಿದೆ ಎಂದು ಹೇಳಿದ್ದಾರೆ. ಕಿಸಾನ್ ಡ್ರೋನ್ ಗಳನ್ನು ಸರ್ಕಾರವು ಉತ್ತೇಜಿಸುವುದಾಗಿ ಘೋಷಿಸಿದ್ದಾರೆ.

One nation one Registration ಮೊಬೈಲ್ ನಲ್ಲಿ ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ? 

ಸಾರ್ವಜನಿಕರು ರೇಷನ್ ಕಾರ್ಡ್ ಸ್ಟೇಟಸ್ ನ್ನು ಮೊಬೈಲ್ ನಲ್ಲೇ ಚೆಕ್ ಮಾಡಲು ಈ

https://ahara.kar.nic.in/Home/EServices

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮಗೆ ಬಲಗಡೆ ಕೆಲವು ಆಯ್ಕೆಗಳು ಕಾಣುತ್ತವೆ. ವಿಧಾನ, ಇ ಪಡಿತರ ಚೀಟಿ, ಇ-ಸ್ಥತಿ, ಇ ನ್ಯಾಯಬೆಲೆ ಅಂಗಡೆ, ಸಾರ್ವಜನಿಕ ದೂರು ಮತ್ತು ಬಹುಮಾನ ಯೋಜನೆ, ಎಸ್.ಎಂಎಸ್ ಸೇವೆ, ಸೌಕರ್ಯ ಕೇಂದ್ರಗಳು, ಅಂಕಿ ಅಂಶ, ಟೆಂಡರ್, ದರಗಳು, ಹೀಗೆ ವಿವಿಧ ಆಯ್ಕೆಗಳು ಕಾಣುತ್ತವೆ.

ಅಲ್ಲಿ ನೀವು ಇ ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಬೇಕು. ನಂತರಇನ್ನಿ ಕೆಲವು ಆಯ್ಕೆಗಳು ಕಾಣಿಸುತ್ತವೆ. ಹೊಸ ಪಡಿತರ ಚೀಟಿ,  ಪಡಿತರ ಚೀಟಿ ತೋರಿಸು, ಹಂಚಿಕೆ, ಪಡಿತರಎತ್ತುವಳಿ ಸ್ಥಿತಿ, ಅಪ್ಡೇಟ್ ಆಧಾರ್, ರದ್ದುಗೊಳಿಸಲಾದ /ತಡೆಹಿಡಿಯಲಾದ ಪಟ್ಟಿ, ಹಳ್ಳಿ ಪಟ್ಟಿ ವಿತರಣೆಯಾಗುವ ಹೊಸ ಪಡಿತರ ಚೀಟಿ ಹೀಗೆ ಹಲವಾರು ಆಯ್ಕೆಗಳು ಕಾಣುತ್ತದೆ.

ಹಳ್ಳಿ ಪಟ್ಟಿ ಮೇಲೆ ಕ್ಲಿಕ್ ಮಾಡಿ (click on village list)

ಅಲ್ಲಿ ಹಳ್ಳಿ ಪಟ್ಟಿ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ತೆರೆದುಕೊಳ್ಳುತ್ತದೆ.ಅಲ್ಲಿ ಜಿಲ್ಲೆ ತಾಲೂಕು, ಗ್ರಾಮ ಪಂಚಾಯತ್, ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗೋ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಯಾರ ಯಾರ ಹೆಸರಿನಲ್ಲಿ ಪಡಿತರ ಚೀಟಿ ಇದೆ ಎಂಬ ಪಟ್ಟಿ ಕಾಣಿಸುತ್ತದೆ.

Leave a Comment