how much Crop damage compensation? ನವೆಂಬರ್ ತಿಂಗಳಲ್ಲಿ ಸುರಿದ ಅತೀ ಮಳೆಯಿಂದಾಗಿ ರೈತರ ಸಾಕಷ್ಟು ಬೆಳೆ ಹಾನಿಯಾಗಿತ್ತು. ಇದರಿಂದಾಗಿ ರೈತರಿಗೆ ಸರ್ಕಾರವು ಬೆಳೆಹಾನಿ ಪರಿಹಾರ ಸಹ ಘೋಷಣೆ ಮಾಡಿತ್ತು. ಆದರೆ ಸರ್ಕಾರ ಘೋಷಣೆ ಮಾಡಿದ ಪರಿಹಾರ ಎಷ್ಟು ಗೊತ್ತೇ…. ಇಲ್ಲಿದೆ ಮಾಹಿತಿ
ಬಾಳೆ ಗಿಡಕ್ಕೆ 20 ಪೈಸೆ, ಅಡಿಕೆ ಮರಕ್ಕೆ 3 ರೂಪಾಯಿ, ತೆಂಗಿನ ಮರಕ್ಕೆ 90 ರೂಪಾಯಿ ಹಾ9ಗೂ ಭತ್ತ ಒಂದು ಗುಂಟೆಗೆ 60 ರೂಪಾಯಿ ಘೋ,ಣೆ ಮಾಡಿದೆ. ಆದರೆ ಈ ಪರಿಹಾರ ಹಣ ರೈತರಿಗೆ ಎದಕ್ಕೂ ಉಪಯೋಗವಿಲ್ಲದಂತಾಗಿದೆ. ಇತ್ತೀಚಿನ ಕಾಲದಲ್ಲಿ ವ್ಯವಸಾಯದಲ್ಲಿ ಖರ್ಚುವೆಚ್ಚ ನೋಡಿದರೆ ಈ ಪರಿಹಾರ ಜುಜುಬಿ ಪರಿಹಾರವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಸಕ್ತ ವರ್ಷ ಭತ್ತ ಬೆಳೆಯಲ್ಲಿ ಉತ್ತಮ ಫಸಲು ಬಂದರೂ ಕಟಾವಿನ ಸಂದರ್ಭ ಸುರಿದ ಮಳೆಯಿಂದಾಗಿ ರೈತರ ಅಪಾರ ಬೆಳೆ ಹಾನಿಯಾಗಿತ್ತು. ಕಟಾವಿಗೆ ಸಿದ್ದವಾಗಿದ್ದ ಬೆಳೆಯೂ ಸಹ ನೆರೆ ಹಾಗೂ ನಿಂತ ನೀರಿನಲ್ಲಿಯೇ ಕೊಳೆತುಹೋಯಿತು. ಇದರಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಯಿತು. ಇದರಿಂದಾಗಿ ರೈತರಿಗೆ ಅಲ್ಪ ನೆರವಾಗಲೆಂದು ಸರ್ಕಾರವ ಪರಿಹಾರ ಹಣ ಘೋಷಿಸಿದೆ. ಈಗಾಗಲೆ ಕೆಲವು ರೈತರ ಖಾತೆಗೆ ನೇರವಾಗಿ ಪರಿಹಾರ ಹಣ ಜಮೆ ಮಾಡಲಾಗಿದೆ. ಇನ್ನೂ ಕೆಲವು ರೈತರ ಖಾತೆಗೆ ಹಣ ಜಮೆಯಾಗಿಲ್ಲ. ಈಗಾಗಲೇ ರೈತರು ಪರಿಹಾರದ ಅರ್ಜಿ ಸಲ್ಲಿಸಿದ್ದಾರೆ. ಪರಿಹಾರ ಪೋರ್ಟಲ್ ನಲ್ಲಿ ರೈತರ ಮಾಹಿತಿ ಅಪ್ಲೋಡ್ ಮಾಡಲಾಗಿದೆ. ಪರಿಹಾರ ವೆಬ್ ನಲ್ಲಿ ರೈತರ ಮಾಹಿತಿ ಅಪ್ಲೋಡ್ ಮಾಡಿದ ತಕ್ಷಣ 24 ಗಂಟೆಯೊಳಗೆ ರೈತರ ಖಾತೆಗೆ ಹಣ ಜಮೆ ಮಾಡಲಾಗುವುದು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಆದೇಶ ನೀಡಿದ್ದರೂ ಸಹ ಇನ್ನೂ ಕೆಲವು ರೈತರ ಖಾತೆಗೆ ಪರಿಹಾರ ಹಣ ಜಮೆಯಾಗಿಲ್ಲ ಎಂಬ ದೂರು ಕೇಳಿ ಬರುತ್ತಿದೆ.
how much Crop damage compensation? ಪರಿಹಾರ ಸ್ಟೇಟಸ್ ನೋಡುವುದು ಹೇಗೆ?
ರೈತರು
https://landrecords.karnataka.gov.in/PariharaPayment/
ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಆಧಾರ್ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡು ವಿಪತ್ತು (calamity Type) ಕಾಲಂನಲ್ಲಿ Flood ಆಯ್ಕೆ ಮಾಡಿಕೊಳ್ಳಬೇಕು.ವರ್ಷದಲ್ಲಿ 2021-22 ಆಯ್ಕೆ ಮಾಡಿಕೊಳ್ಳಬೇಕು. ಒಂದು ಕಳೆದ ವರ್ಷದ ಪರಿಹಾರ ಣ ನಿಮ್ಮ ಖಾತೆಗೆ ಜಮೆಯಾಗಿದೆಯೇ ಎಂಬುದನ್ನು ನೋಡಬೇಕಾದರೆ 2020-21 ಆಯ್ಕೆ ಮಾಡಿಕೊಳ್ಳಬೇಕು.
ಇದನ್ನೂ ಓದಿ ನಿಮ್ಮ ಜಮೀನಿನ ಮ್ಯಾಪ್ mobileನಲ್ಲಿ ಡೌನ್ಲೋಡ್ ಮಾಡಿ
ಆಧಾರ್ ಸಂಖ್ಯೆ ನಮೂದಿಸಬೇಕು. ಕ್ಯಾಪ್ಚ್ಯಾ ಕೋಡ್ ನ್ನು ಪಕ್ಕದಲ್ಲಿ ತಿಳಿಸಿದಂತೆ ನಮೂದಿಸಿ ವಿವರಗಳನ್ನು ಪಡೆಯಲು /Fetch details ಮೇಲೆ ಕ್ಲಿಕ್ ಮಾಡಬೇಕು. ಆಗ ಈ ವರ್ಷ ಜಮೆಯಾಗಿದ್ದರೆ ಡಿಟೇಲ್ ಇರುತ್ತದೆ. ಇನ್ನೂ ಜಮೆ ಮಾಡಿಲ್ಲ. ಈ ವಾರದಲ್ಲಿ ರೈತರ ಖಾತೆಗೆ ಹಣ ಜಮೆ ಮಾಡುವ ಸಾಧ್ಯತೆಯಿದೆ. ಕಳೆದ ವರ್ಷದ ಜಮೆ ಸ್ಟೇಟಸ್ ನೋಡಬಹುದು.
ಏನಿದು ಪರಿಹಾರ ಆ್ಯಪ್?
ಅತೀವೃಷ್ಟಿ, ಅನಾವೃಷ್ಟಿ, ಪ್ರವಾಹ, ಬರಗಾಲ, ಭೂಕುಸಿತ, ಬಿರುಗಾಳಿ ಸೇರಿದಂತೆ ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾಳಾದರೆ ರೈತರಿಗೆ ಪರಿಹಾರ ನೀಡವುದುಕ್ಕಾಗಿ ರಾಜ್ಯ ಸರ್ಕಾರವು ಪರಿಹಾರ ಎಂಬ ತಂತ್ರಾಂಶವನ್ನು ಆರಂಭಿಸಿದೆ. ಇದರಲ್ಲಿ ಸಂಬಂಧಿಸಿದ ಅಧಿಕಾರಿಗಳು ರೈತರ ಬೆಳೆ ಹಾನಿಯಾದ ಕುರಿತು ಮಾಹಿತಿ ಅಪ್ಲೋಡ್ ಮಾಡುತ್ತದೆ. ನಂತರ ಸರ್ಕಾರವು ಯಾವ ಬೆಳೆಗೆ ಎಷ್ಟು, ಎಕರೆಗೆ ಎಷ್ಟು ಪರಿಹಾರ ನೀಡಬೇಕೆಂದು ನಿರ್ಧರಿಸಿ ಪರಿಹಾರ ಹಣವನ್ನು ಬಿಡುಗಡೆ ಮಾಡುತ್ತದೆ.