poultry rearing Free training ಕುರಿ, ಕೋಳಿ ಸಾಕಾಣಿಕೆ ಮಾಡಲಿಚ್ಚಿಸುವ ರೈತರಿಗೆ ಸಂತಸದ ಸುದ್ದಿ. ರೈತರು ಕೃಷಿಯೊಂದಿಗೆ ಉಪಕಸುಬು ಕೋರಿ ಕೋಳಿ ಸಾಕಾಣಿಕೆ ಮಾಡಿ ಆರ್ಥಿಕವಾಗಿ ಸಬಲರಾಗಲೆಂದ ಉದ್ದೇಶದಿಂದ ಉಚಿತವಾಗಿ ತರಬೇತಿ ನೀಡಲು ಅರ್ಜಿ ಆಹ್ವಾನಿಲಾಗಿದೆ.
poultry rearing Free training ಯಾವ ಯಾವ ಜಿಲ್ಲೆಯಲ್ಲಿ ತರಬೇತಿ ನೀಡಲಾಗುತ್ತಿದೆ?
ಕಲಬುರಗಿಯ ಎಸ್.ಬಿ.ಐ. ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ (ಕಿಟಸರ್ಡ್) ಸಂಸ್ಥೆಯಲ್ಲಿ ಕಲಬುರಗಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಉಚಿತವಾಗಿ ಹತ್ತು ದಿನಗಳ ಕಾಲ ಕುರಿ ಮತ್ತು ಆಡು ಸಾಕಾಣಿಕೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.
ಈ ತರಬೇತಿ ಸಂಸ್ಥೆಯಲ್ಲಿ ಇದೇ ಡಿಸೆಂಬರ್ 14 ರಿಂದ 23ರವರೆಗೆ ಹತ್ತು ದಿನಗಳ ತರಬೇತಿ ನೀಡಲಾಗುತ್ತಿದ್ದು, ಕಲಬುರಗಿ ಜಿಲ್ಲೆಯ ಗ್ರಾಮೀಣ ಭಾಗದ 18 ರಿಂದ 45 ವರ್ಷದೊಳಗಿನ ಬಿ.ಪಿ.ಎಲ್., ಅಂತ್ಯೋದಯ ಅನ್ನ ಪಡಿತರ ಚೀಟಿ ಹಾಗೂ ಎಂಜಿಎನ್ಆರ್ಇಜಿಎ ಕಾರ್ಡ್ ಹೊಂದಿದ ಕುಟುಂಬದ ನಿರುದ್ಯೋಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳೊಂದಿಗೆ 2021ರ ಡಿಸೆಂಬರ್ 11 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತರಬೇತಿ ಸಂಸ್ಥೆಯಲ್ಲಿ 2021ರ ಡಿಸೆಂಬರ್ 13 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3.30 ಗಂಟೆಯವರೆಗೆ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು.
ಮತ್ತಿತರ ಹೆಚ್ಚಿನ ಮಾಹಿತಿಗಾಗಿ ತರಬೇತಿ ಸಂಸ್ಥೆಯನ್ನು ಹಾಗೂ ಮೊಬೈಲ್ ಸಂಖ್ಯೆ 9243602888, 9886781239 ಹಾಗೂ 9900135705ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
poultry rearing Free training ಅಲ್ಪಾವಧಿ ಕೋಳಿ ಸಾಕಾಣಿಕೆ ತರಬೇತಿ: ಹೆಸರು ನೋಂದಾಯಿಸಲು ಸೂಚನೆ
ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ (ನಿ) ಕಲಬುರಗಿ ಪ್ರಾದೇಶಿಕ ಕೇಂದ್ರದಲ್ಲಿ ಇದೇ ಡಿಸೆಂಬರ್ 6 ರಿಂದ 10 ರವರೆಗೆ ಐದು ದಿನಗಳ ಕಾಲ ಅಲ್ಪಾವಧಿ ಕೋಳಿ ಸಾಕಾಣಿಕೆ ತರಬೇತಿ ನೀಡಲಾಗುತ್ತಿದ್ದು, ಇದಕ್ಕಾಗಿ ಆಸಕ್ತಿಯುಳ್ಳ ನಿರುದ್ಯೋಗಿ ಯುವಕ/ಯುವತಿಯರು ಹಾಗೂ ರೈತರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕೆAದು ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ (ನಿ) ಕಲಬುರಗಿ ಪ್ರಾದೇಶಿಕ ಕೇಂದ್ರದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ, ಬೀದರ, ಯಾದಗಿರ, ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ಅಭ್ಯರ್ಥಿಗಳು ಕೂಡ ಈ ತರಬೇತಿಗೆ ಹಾಜರಾಗಬಹುದಾಗಿದೆ. 18 ವರ್ಷದ ಮೇಲ್ಪಟ್ಟ ವಯೋಮಾನದ ಅಭ್ಯರ್ಥಿಗಳು ಕನಿಷ್ಠ 7ನೇ ತರಗತಿ ಪಾಸಾದ ಅಂಕಪಟ್ಟಿ ಅಥವಾ ವರ್ಗಾವಣೆ ಪ್ರಮಾಣ ಪತ್ರ ಮತ್ತು ಜಾತಿ ಪ್ರಮಾಣಪತ್ರದ ಝೆರಾಕ್ಸ ಪ್ರತಿ, ಮೂಲ ವಾಸಸ್ಥಳ ಪ್ರಮಾಣಪತ್ರ ಹಾಗೂ ಇತ್ತೀಚಿನ ಎರಡು ಭಾವಚಿತ್ರಗಳೊಂದಿಗೆ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ (ನಿ) ಕಲಬುರಗಿ ಪ್ರಾದೇಶಿಕ ಕೇಂದ್ರದಲ್ಲಿ ಪ್ರತಿದಿನ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ಬಂದು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ : ಮೊಬೈಲ್ ನಲ್ಲಿಯೇ ಓರಿಜಿನಲ್ ಪಹಣಿ (Pahani) ಡೋನ್ಲೋಡ್ ಮಾಡಿಕೊಳ್ಳಬೇಕೇ…. ಇಲ್ಲಿದೆ ಸಂಪೂರ್ಣ ಮಾಹಿತಿ
ಮೀಸಲಾತಿ ಹಾಗೂ ಮೊದಲು ಹೆಸರು ನೊಂದಾಯಿಸಿಕೊAಡ ಆಧಾರದ ಮೇರೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಗೊಂಡ ಅಭ್ಯರ್ಥಿಗಳು ಒಂದು ಬಾರಿಗೆ ತರಬೇತಿ ಪಡೆಯಲು ಅವಕಾಶ ಇರುತ್ತದೆ. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08472-241256ಗೆ ಸಂಪರ್ಕಿಸಲು ಕೋರಲಾಗಿದೆ.