what is kharab land ಜಮೀನಿಗೆ ಸಂಬಂಧಿಸಿದಂತೆ ಪ್ರತಿಯೊಂದು ಮಾಹಿತಿ ರೈತರಿಗೆ ಗೊತ್ತಿರಬೇಕು. ಯಾವುದೇ ರೈತನಾಗಲಿ. ಅವರ ಜಮೀನು ಸುತ್ತಮುತ್ತ ಅಥವಾ ಪಕ್ಕದಲ್ಲಿ ಅ ಖರಾಬು ಮತ್ತು ಬ ಖರಾಬು ಜಮೀನು ಇದ್ದೇ ಇರುತ್ತದೆ. ಆದರೆ ಖರಾಬು ಜಮೀನು ಎಂದುರೇನು ಈ ಜಮೀನಿನಲ್ಲಿ ಉಳುಮೆ ಮಾಡಿ ಸಕ್ರಮಗೊಳಿಸುವುದು ಹೇಗೆ ಎಂಬುದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಜಮೀನಿನಲ್ಲಿಯೂ ಸಹ ಅ ಖರಾಬು ಮತ್ತು ಬ ಖರಾಬು ಜಮೀನು ಇದ್ದೇ ಇರುತ್ತದೆ. ಅ ಖರಾಬು ಜಮೀನು ಯಾವುದು ಮತ್ತು ಬ ಖರಾಬು ಜಮೀನು ಯಾವುದೆಂಬುದರ ಕುರಿತು ಇಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ. ಸರ್ಕಾರದ ವತಿಯಿಂದ ಸಾರ್ವಜನಿಕವಾಗಿ ಮೀಸಲಾದ ಖರಾಬು ಜಮೀನುಗಳನ್ನು ಪಹಣಿ/ಆರ್.ಟಿ.ಸಿ ಅಡಿಯಲ್ಲಿ ಬ ಖರಾಬು ಎಂದು ನಮೂದಿಸಿರುತ್ತಾರೆ. ವ್ಯವಸಾಯಕ್ಕೆ ಯೋಗ್ಯವಲ್ಲದ ಖರಾಬನ್ನು ಅ ಖರಾಬು ಎಂದು ಪಹಣಿಯಲ್ಲಿ ನಮೂದಿಸಿರುತ್ತಾರೆ. ಅ ಖರಾಬು ಸರ್ಕಾರಿ ಸ್ವತ್ತು ಆಗಿರುವುದಿಲ್ಲ. ಅದರಲ್ಲಿ ಖಾಸಗಿಯವರು ವ್ಯವಸಾಯಕ್ಕೆ ಬಳಸುತ್ತಿಲ್ಲವೆಂದು ಅದಕ್ಕೆ ವ್ಯವಸಾಯ ಜಮೀನಿನ ಕಂದಾಯ ವಿನಾಯ್ತಿ ಕೊಟ್ಟು ಖರಾಬು ಭಾಗಕ್ಕೆ ಸೇರಿಸಿರುತ್ತಾರೆ.
what is kharab land ಖರಾಬು ಎಂದೇನು?
ಉಳುಮೆಗೆ ಯೋಗ್ಯವಲ್ಲದಂತಹ ಮತ್ತು ವ್ಯವಸಾಯ ಮಾಡಲು ಅನರ್ಹವಾಗಿರುವ ಜಮೀನನ್ನು ಖರಾಬು ಜಮೀನು ಎಂದು ಕರೆಯುತ್ತಾರೆ. ಇಂತಹ ಜಮೀನು ಊರ ಹೊರಗಡೆ, ಕೆರೆ ಕಟ್ಟೆಗಳ ಪಕ್ಕದಲ್ಲಿ ಜಮೀನು ನೋಡಿರುತ್ತ್ತೀರಿ. ಇಂತಹ ಖರಾಬು ಜಮೀನಿನಲ್ಲಿಯೂ ಎರಡು ವಿಧವಿದೆ. ಒಂದನೇಯದ್ದು ಅ ಖರಾಬು ಎರಡನೇಯದ್ದು ಬ ಖರಾಬು ಜಮೀನು.
ಅ ಖರಾಬು ಎಂದರೇನು?
ಜಮೀನಿನಲ್ಲಿರುವ ಉಳುಮೆ ಮಾಡಲಿಕ್ಕೆ ಬರದ ಜಮೀನನ್ನು ಅ ಖರಾಬು ಜಮೀನು ಎಂದು ಕರೆಯುತ್ತಾರೆ. ಈ ಜಮೀನಿನ ವಿಸ್ತೀರ್ಣ ಮತ್ತು ನಕಾಶೆ ಇರುತ್ತದೆ. ಆದರೆ ತೆರಿಗೆ ಇರುವುದಿಲ್ಲ. ಸರ್ಕಾರದ ಅಧೀನದಲ್ಲಿರುವುದರಿಂದ ಇದಕ್ಕೆ ತೆರಿಗೆ ಇರುವುದಿಲ್ಲ. ಕೃಷಿ ಮಾಡಲಿಕ್ಕೆ ಈ ಜಮೀನು ಯೋಗ್ಯವಲ್ಲದ ಕಾರಣ ಇದಕ್ಕೆ ತೆರಿಗೆ ಕಟ್ಟುವ ಅವಶ್ಯಕತೆಯಿಲ್ಲ. ಉದಾಹರಣೆಗೆ ಗುಡ್ಡ, ಸಣ್ಣ ನಾಲೆ, ಕಣಮನೆ, ಮರಡಿಕೊರಕಲ್ಲು, ಪಾಳು ಜಮೀನು ಆಗಿರಬಹುದು. ಇವೆಲ್ಲ ಅ ಖರಾಬು ಜಮೀನಿನಲ್ಲಿ ಬರುತ್ತದೆ.
ಇದನ್ನೂ ಓದಿ: ನಿಮ್ಮ ಜಮೀನಿಗೆ ಹೋಗುವ ಕಾಲುದಾರಿ, ಎತ್ತಿನಬಂಡಿ ಹೋಗುವ ದಾರಿ, ಕೆರೆಕಟ್ಟೆ, ನಿಮ್ಮ ಸರ್ವೆನಂಬರ್ ನೋಡಬೇಕೆ… ಇಲ್ಲಿದೆ ಮಾಹಿತಿ
ನಿಮ್ಮ ಜಮೀನಿನಲ್ಲಿರುವ ಅ ಖರಾಬು ಜಮೀನನ್ನು ಸರಿಪಡಿಸಿಕೊಂಡು ಉಳುಮೆ ಮಾಡಬೇಕೆಂದರೆ ನೀಮ್ಮ ಗ್ರಾಮ ಪಂಚಾಯತಿ ತಲಾಟಿ ಅಥವಾ ವಿಲೇಜ್ ಅಕೌಂಟೆಟ್ ನನ್ನು ಭೇಟಿಯಾಗಿ ರೈತರು ವಿಚಾರಿಸಬಹುದು. ಅ ಖರಾಬು ಭೂಮಿಯಲ್ಲಿ ಬೆಳೆ ಬೆಳೆದಿದ್ದರೆ ಅದಕ್ಕೆ ವಿಮೆ ಇರುವುದಿಲ್ಲ. ಬೆಳೆ ಸಮೀಕ್ಷೆ ಮಾಡುವುದಕ್ಕಾಗುವುದಿಲ್ಲ. ಬೆಳೆ ಸಾಲ ಪಡೆಯುವುದಕ್ಕೂ ಆಗುವುದಿಲ್ಲ. ಏಕೆಂದರೆ ಈ ಜಮೀನು ಸರ್ಕಾರದ ಸುಪರ್ದಿಯಲ್ಲಿರುತ್ತದೆ.
ಬ ಖರಾಬು ಎಂದರೇನು?
ಭೂಮಿಯನ್ನು ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟಿರುವ ಜಮೀನನ್ನು ಬ ಖರಾಬು ಜಮೀನು ಎಂದು ಕರೆಯುತ್ತಾರೆ. ಉದಹರಣೆಗೆ ರಸ್ತೆ, ಬಂಡಿದಾರಿ, ಕಾಲುದಾರಿ, ಹಳ್ಳ, ಸ್ಮಶಾನ ಭೂಮಿ ಹೀಗೆ ಅನೇಕ ಜಮೀನುಗಳು ಬರುತ್ತವೆ. ಬ ಖರಾಬು ಜಮೀನು ಸರ್ಕಾರದ ಅಡಿಯಲ್ಲಿ ಬರುತ್ತದೆ.
ಜಮೀನುಗಳಲ್ಲಿ ಪ್ರಕೃತ್ತಿದತ್ತವಾಗಿ ಹರಿಯುವ ಹಳ್ಳ ಕೊಳ್ಳ, ರಾಜಕಾಲುವೆ, ಸಾರ್ವಜನಿಕ ಬಳಕೆಗೆ ಉಪಯೋಗವಾಗುವ ಕಾಲುದಾರಿ ಬಿ ಖರಾಬು ಭೂಮಿ ಎನಿಸಿದೆ. ಜತೆಗೆ ಉಳುಮೆ ಮಾಡಲಾಗದ ಪಾಳು ಭೂಮಿ ಕೂಡ ಈ ವರ್ಗಕ್ಕೆ ಸೇರಿದೆ. ಇಂತಹ ಭೂಮಿ ಆಯಾ ಸರ್ವೆ ನಂಬರ್ಗಳ ವ್ಯಾಪ್ತಿಯಲ್ಲಿ ಕೆಲ ಗುಂಟೆಗಳಷ್ಟು ಪ್ರಮಾಣದಲ್ಲಿ ಇರುತ್ತವೆ. ಇವುಗಳ ಸ್ವರೂಪ ಬದಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ. .