what is pouti khate ಕುಟುಂಬದ ಸದಸ್ಯರು ಮರಣ ಹೊಂದಿ ಬಹಳ ವರ್ಷ ಕಳೆದರೂ ಸಹ ಕೆಲವರು ತಮ್ಮ ಹೆಸರಿಗೆ ಜಮೀನು ವರ್ಗಾವಣೆ ಮಾಡಿಕೊಂಡಿರುವುದಿಲ್ಲ. ಮುಂದೆ ಮಾಡಿದರಾಯಿತು ಎಂಬ ನಿರ್ಲಕ್ಷದಿಂದಾಗಿ ಕೆಲವು ಸಲ ಮುಂದೆ ಜಮೀನು ವರ್ಗಾವಣೆಯಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಒಂದು ವೇಳೆ ನೀವು ನಿಮ್ಮ ಜಮೀನು ನಿಮ್ಮ ಹೆಸರಿಗೆ ವರ್ಗಾವಣೆ ಮಾಡಿರದಿದ್ದರೆ ಕೂಡಲೇ ಜಮೀನು ವರ್ಗಾಯಿಸಿಕೊಳ್ಳಿ. ದಿನಕ್ಕೊಂದು ಕಾನೂನು, ದಿನಕ್ಕೊಂದು ದಾಖಲೆ ಕೇಳಲಾಗುತ್ತಿರುವುದರಿಂದ ಜಮೀನು ವರ್ಗಾವಣೆ ಪ್ರಕ್ರಿಯೆ ಬೇಗ ಮುಗಿಸಿಕೊಳ್ಳುವುದು ಒಳಿತು.
ನಿಮ್ಮ ಜಮೀನು ನಿಮ್ಮ ಹೆಸರಿಗೆ ಆಗಿಲ್ಲವೇ. ಕುಟುಂಬದ ಮುಖ್ಯಸ್ಥರು ಮರಣ ಹೊಂದಿ ಅನೇಕ ವರ್ಷಗಳಾದರೂ ಸಹ ಜಮೀನು ನಿಮ್ಮ ಹೆಸರಿಗೆ ವರ್ಗಾವಣೆಯಾಗದಿದ್ದರೆ ಚಿಂತೆ ಮಾಡಬೇಕಿಲ್ಲ ಪೌತಿ ಖಾತೆ ಮೂಲಕ ಸುಲಭವಾಗಿ ನಿಮ್ಮ ಜಮೀನು ಅಥವಾ ಆಸ್ತಿ ವರ್ಗಾವಣೆ ಮಾಡಿಕೊಳ್ಳಬಹುದು. ಪೌತಿ ಖಾತೆಯಡಿ ಜಮೀನು ವರ್ಗಾವಣೆ ಮಾಡಿಕೊಳ್ಳುವುದು ಹೇಗೆ ಹಾಗೂ ಜಮೀನು ವರ್ಗಾವಣೆಗೆ ಬೇಕಾಗುವ ದಾಖಲೆಗಳು ಸೇರಿದಂತೆ ಇನ್ನಿತರ ಸಮಗ್ರ ಮಾಹಿತಿ ಇಲ್ಲಿ ನೀಡಲಾಗಿದೆ. ಹೇಗೆ ಮಾಡಿಕೊಳ್ಳಬೇಕು.
ಪೌತಿ ಖಾತೆ ಎಂದರೇನು (What is pouti khate)
ರೈತರು ಮರಣ ಹೊಂದಿದ ಹೆಸರಿನಲ್ಲಿರುವ ಆಸ್ತಿಯನ್ನು ತಮ್ಮ ವಾರಸುದಾರರ ಅಥವಾ ಕುಟುಂಬಸ್ಥರ ಹೆಸರಿಗೆ ಜಮೀನಿನ ಖಾತೆಯೆನ್ನು ವರ್ಗಾವಣೆ ಮಾಡುವುದನ್ನು ಪೌತಿ ಖಾತೆ ಎನ್ನುತ್ತಾರೆ. ಉದಾಹರಣೆಗೆ ಒಂದು ಮನೆಯಲ್ಲಿ ತಂದೆ, ಗಂಡ ಅಥವಾ ಅಜ್ಜ, ಅಜ್ಜಿ ಮರಣ ಹೊಂದಿದರೆ ಅವರ ಹೆಸರಿನ ಮೇಲೆ ಜಮೀನನ್ನು ವಾರಸುದಾರರ ಅಥವಾ ಕುಟುಂಬಸ್ಥರ ಹೆಸರಿಗೆ ಜಮೀನನ್ನು ವರ್ಗಾವಣೆ ಮಾಡುವುದು.
ಪೌತಿ ಖಾತೆಯಡಿ ಜಮೀನು ವರ್ಗಾವಣೆಗೆ ಬೇಕಾಗುವ ದಾಖಲೆಗಳು(Documents)
ಮರಣ ಪ್ರಮಾಣ ಪತ್ರ, ಆಧಾರ್ ಕಾರ್ಡ್, ವಂಶವೃಕ್ಷ ಅಥವಾ ವಂಶಾವಳಿ ಪ್ರಮಾಣ ಪತ್ರ ಬೇಕು. ಇತ್ತೀಚಿನ ಪಹಣಿ ಹಾಗೂ 18 ವರ್ಷದ ಮ್ಯುಟೇಷನ್ ಸಲ್ಲಿಸಬೇಕು, ಚುನಾವಣೆ ಗುರುತಿನ ಚೀಟಿ ಮತ್ತು ರೇಷನ್ ಕಾರ್ಡ್ ಬೇಕು. ಒಂದು ವೇಳೆ ವಂಶವೃಕ್ಷ ಲಭ್ಯವಿರದಿದ್ದರೆ ಅರ್ಜಿದಾರರು ಕುಟುಂಬದ ಮಾಹಿತಿಯನ್ನು ನೋಟರಿ ಮಾಡಿ ಅಟಲ್ ಜನಸ್ನೇಹಿ ಕೇಂದ್ರದಲ್ಲಿ ದಾಖಲಿಸುವುದು.
ಉದಾಹರಣೆ ಒಂದು ಕುಟುಂಬದಲ್ಲಿ ನಾಲ್ಕೈದು ಮಕ್ಕಳಿದ್ದರೆ ಯಾರ ಹೆಸರಿನ ಮೇಲೆ ಎಷ್ಟು ಜಮೀನು ವರ್ಗಾವಣೆ ಮಾಡಬೇಕೆಂಬುದರ ವಿವರವನ್ನು ಅರ್ಜಿಯಲ್ಲಿ ನಮೂದಿಸಬೇಕು.
ನಾಡಕಚೇರಿಯಲ್ಲಿ ಅರ್ಜಿ ಲಭ್ಯ (at Nadakacheri Application available)
ಪೌತಿ/ವಾರಸು ಖಾತೆ ಮಾಡಿಕೊಳ್ಳಲು ನಮೂನೆ-1 ಅರ್ಜಿ ರಾಜ್ಯದ ಎಲ್ಲಾ ನಾಡಕಚೇರಿಗಳಲ್ಲಿ ಲಭ್ಯವಿರುತ್ತದೆ. ಇಲ್ಲವೆ ನಾಡಕಚೇರಿ ಅಥವಾ ತಹಶೀಲ್ ಕಚೇರಿಯ ಬಳಿಯಿರುವ ಝರಾಕ್ಸ್ ಅಂಗಡಿಗಳಲ್ಲಿಯೂ ಲಭ್ಯವಿರುತ್ತದೆ.
ಇದನ್ನೂ ಓದಿ: ನಿಮ್ಮ ಜಮೀನು ಒತ್ತುವರಿಯಾಗಿದ್ದರೆ, ಪಹಣಿಯಲ್ಲಿ ಕಡಿಮೆ ತೋರಿಸುತ್ತಿದ್ದರೆ ಅಳತೆ ಕಾರ್ಯಕ್ಕೆ ಅರ್ಜಿ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ
ಹೊಲದ ಸುತ್ತಮುತ್ತದ ಸರ್ವೆ ನಂಬರ್ ಮತ್ತು ಮಾಲೀಕರ ಹೆಸರು ಹಾಗೂ ಸಹಿ ಮಾಡಿಸಬೇಕು. ಮೂರ್ನಾಲ್ಕು ತಿಂಗಳ ನಂತರ ಪಹಣಿ ವಾರಸುದಾರರ ಹೆಸರಿನ ಮೇಲೆ ವರ್ಗಾವಣೆಯಾಗುತ್ತದೆ.
ಪೌತಿಖಾತೆಯಡಿ ಜಮೀನು ವರ್ಗಾವಣೆಯಿಂದಾಗುವ ಉಪಯಗೋಗಳು (what is use for poutikhate)
ಪೌತಿ ಖಾತೆಯಡಿ ಜಮೀನು ವರ್ಗಾವಣೆ ಮಾಡಿಕೊಳ್ಳುವುದರಿಂದ ಸರ್ಕಾರದಿಂದ ಸೌಲಭ್ಯಗಳು ಸಿಗುತ್ತವೆ. ಅತೀವೃಷ್ಟಿ ಅನಾವೃಷ್ಟಿಯಿಂದ ಬೆಳೆ ಹಾಳಾದಾಗ ಬೆಳೆ ವಿಮೆ ಪರಿಹಾರ ಪಡೆಯಲು ಸಹಾಯವಾಗುತ್ತದೆ. ಒಂದುವೇಳೆ ಸರ್ಕಾರವು ನಿಮ್ಮ ಜಮೀನನ್ನು ಸಾವರ್ಜನಿಕ ಉದ್ದೇಶಕ್ಕೆ ಭೂ ಸ್ವಾಧೀನ ಪಡೆದುಕೊಂಡರೆ ಸರ್ಕಾರದಿಂದ ಪರಿಹಾರ ಹಣ ಸಿಗುತ್ತದೆ.
ಮರಣಹೊಂದಿದ ಪ್ರಮಾಣ ಪತ್ರವಿರದಿದ್ದರೆ ಏನು ಮಾಡಬೇಕು.
ವ್ಯಕ್ತಿ ಮರಣ ಹೊಂದಿ ವರ್ಷ ಮೀರಿದ್ದು, ಮರಣ ನೋಂದಣಿಯಾಗದಿದ್ದಲ್ಲಿ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಮರಣದ ಕುರಿತ ಆದೇಶ ಪಡೆದು ತಹಶೀಲ್ದಾರ ಕಚೇರಿಯಲ್ಲಿ ಮರಣ ಪತ್ರವನ್ನು ಪಡೆಯುವುದು. ಅಥವಾ ಆಧಾರ್, ಪಡಿತರ ಚೀಟಿ ದಾಖಲೆ ಪರಿಶೀಲಿಸಿಕೊಂಡು ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರು ಸ್ಥಳ ಪರಿಶೀಲನೆ ಮಹಜರ್ ಮಾಡಿ ಮರಣ ಹೊಂದಿದ ಬಗ್ಗೆ ಸಂಬಂಧಪಟ್ಟ ವಾರಸುದಾರರಿಂದ ಅಫಿಡಿವೆಟ್ ಪಡೆದು ಅವರ ಆಧಾರ್, ಪಡಿತರ ಚೀಟಿ ಲಿಂಕ್ವೋಲೆ ಅರ್ಜಿ ದಾಖಲಿಸಬಹುದು.