Farmer is the Chairman of Coconut Board ತೆಂಗಿನ ಕೃಷಿ ಹೆಚ್ಚಿಸುವುದಕ್ಕಾಗಿ ತೆಂಗು ಮಂಡಳಿ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದ್ದು, ಅಧಿಕಾರಿ ವರ್ಗಕ್ಕೆ ಹೊರತಾದವರೂ ತೆಂಗು ಮಂಡಳಿ (Farmer is the Chairman of Coconut Board) ಅಧ್ಯಕ್ಷರಾಗಲಿದ್ದಾರೆ.
ಹೌದು, ತೆಂಗು ಕೃಷಿಯನ್ನು ಉತ್ತೇಜಿಸುವುದಕ್ಕಾಗಿ ತೆಂಗು ಅಭಿವೃದ್ಧಿ ಮಂಡಳಿ ಕಾಯ್ದೆ 1979ಕ್ಕೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿದೆ. ತಿದ್ದುಪಡಿ ಬಳಿಕ ಮಂಡಳಿಗೆ ಅಧಿಕಾರಿ ಮುಖ್ಯಸ್ಥನಾಗಿರುವುದಿಲ್ಲ. ಬದಲಿಗೆ ರೈತ ಸಮುದಾಯದವರೇ ಅಧ್ಯಕ್ಷರಾಗಿರುತ್ತಾರೆ ಎಂದು ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ತಿಳಿಸಿದ್ದಾರೆ.
ತೆಂಗು ಅಭಿವೃದ್ಧಿ ಮಂಡಳಿ ಕಾಯ್ದೆ ತಿದ್ದಪುಡಿ ಪ್ರಸ್ತಾವನೆಯನ್ನು ಕೃಷಿ, ಸಹಕಾರ ಮತ್ತು ಕೃಷಿಕರ ಕಲ್ಯಾಣ ಇಲಾಖೆ ಸಿದ್ದಪಡಿಸಿದೆ. ತೆಂಗು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನವನ್ನು ನಾನ್ ಎಕ್ಸಿಕ್ಯೂಟಿವ್ ಆಗಿಟ್ಟು, ಕಾರ್ಯಾಚರಣೆ ನೋಡಿಕೊಳ್ಳಲು ಒಬ್ಬ ಸಿಇಓರವರನ್ನು ನೇಮಕ ಮಾಡುವ ಅಂಶ ಪ್ರಸ್ತಾವನೆಯಲ್ಲಿದೆ. ಮಂಡಳಿಗೆ ಆರು ಜನ ಸದಸ್ಯರನ್ನು ನಾಮ ನಿರ್ದೇಶನ ಮಾಡಲಿದೆ,
Farmer is the Chairman of Coconut Board ಎಪಿಎಂಸಿಗಳಿಗೆ 1 ಲಕ್ಷ ಕೋಟಿ ರೂಪಾಯಿಯವರೆಗೆ ನೆರವು- ತೋಮರ್
ಕೃಷಿ ಕ್ಷೇತ್ರದ ಮೂಲಸೌಕರ್ಯ ಹೆಚ್ಚಿಸಲು ಕೇಂದ್ರ 1 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದೆ. ಇದನ್ನು ಅಗ್ರಿಕಲ್ಚರ್ ಪ್ರೊಡ್ಯೂಸ್ ಆಂಡ್ ಲೈವ್ ಸ್ಟಾಕ್ ಮಾರ್ಕೇಟ್ ಕಮಿಟಿಗಳ (ಎಪಿಎಂಸಿ) ಮೂಲಕ ಕೃಷಿಕರ ಒಳಿತಿಗಾಗಿ ಬಳಸಲಾಗುತ್ತಿದೆ. ಎಪಿಎಂಸಿಗಳಿಗೆ ಹೆಚ್ಚಿನ ಸಂಪನ್ಮೂಲ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಈಗ 1 ಲಕ್ಷ ಕೋಟಿ ಮೂಲ ಸೌಕರ್ಯ ನಿಧಿಗೆ ನೀಡಲಾಗುತ್ತಿದೆ ಇದನ್ನು ಎಪಿಎಂಸಿಗಳ ಮೂಲಕ ಬಳಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ 13 ಲಕ್ಷ ರೈತರಿಗೆ ಬೆಳೆ ವಿಮೆ ಪರಿಹಾರ ಬಿಡುಗಡೆ- ಸ್ಟೇಟಸ್ ಚೆಕ್ ಮಾಡಿ
ಎಪಿಎಂಸಿ ಪ್ರಾಂಗಣದಲ್ಲೇ ಕೈಗೊಳ್ಳಲಾಗುವ 2 ಕೋಟಿ ರೂಪಾಯಿ ವೆಚ್ಚದ ಶೈತ್ಯಾಗಾರ, ವಿಂಗಡನೆ, ಗ್ರೇಡಿಂಗ್ ಮತ್ತು ಸಂಸ್ಕರಣಾ ಘಟಕಗಳ ನಿರ್ಮಾಣದಂತಹ ಪ್ರಾಜೆಕ್ಟ್ ಗಳಿಗೆ ಕೇಂದ್ರವು ಬಡ್ಡಿ ದರದಲ್ಲಿ ವಿನಾಯ್ತಿ ಒದಗಿಸಲಿದೆ ಎಂದು ತಿಳಿಸಿದ್ದಾರೆ.
ಹೊಸ ಕೃಷಿ ಕಾಯ್ದೆಗಳು ಜಾರಿಯಾದರೆ ಎಪಿಎಂಸಿಗಳು ರದ್ದುಪಡಿಸಲಾಗುವುದು ಎಂಬ ಆತಂಕವಿದೆ. ಆದರೆ ಎಪಿಎಂಸಿ ಮಾರುಗಟ್ಟೆಗಳನ್ನು ಮುಚ್ಚಲಾಗುವುದಿಲ್ಲ. ಮೂರು ಕೃಷಿ ಕಾನೂನುಗಳ ಅನುಷ್ಠಾನದ ಬಳಿಕೆ ಎಪಿಎಂಸಿಗಳಿಗೆ ಎಐಎಪ್ ನಿಂದ ಹಣ ದೊರೆಯಲಿದೆ ಎಂದ ಅವರು, ವಿವಾದಾತ್ಮಕ ಕಾಯ್ದೆಗಳ ವಿರುದ್ಧ ರೈತರು ಹೋರಾಟ ಕೈಬಿಟ್ಟು ಸರ್ಕಾರದೊಂದಿಗೆ ಮಾತುಕತೆಗೆಮುಂದೆ ಬರಬೇಕೆಂದು ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ
ರೈತರು ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂಮಿ ತಂತ್ರಾಂಶದ ಮೂಲಕ ರೈತರು ತಮ್ಮ ಜಮೀನು ಯಾವ ರೈತರಿಂದ ಯಾವ ರೈತರಿಗೆ ವರ್ಗಾವಣೆಯಾಗಿದೆ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು. ಹೌದು, ರೈತರು ಕೇವಲ ತಮ್ಮ ಸರ್ವೆ ನಂಬರ್ ನಮೂದಿಸಿ ಚೆಕ್ ಮಾಡಬಹುದು.