goat training ಕುರಿ ಸಾಕಾಣಿಕೆ ಮಾಡಲಿಚ್ಚಿಸುವ ರೈತರಿಗಿಲ್ಲದೆ ಸಂತಸದ ಸುದ್ದಿ. ಜಿಲ್ಲಾ ಪಂಚಾಯತಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆ 2021-22ನೇ ಸಾಲಿನಲ್ಲಿ ವಿಸ್ತರಣಾ ಘಟಕಗಳ ಬಲಪಡಿಸುವ ಕಾರ್ಯಕ್ರಮದಡಿಯಲ್ಲಿ ಕುರಿ ಸಾಕಾಣಿಕೆ ಕುರಿತು ತರಬೇತಿ ನೀಡಲಾಗುವುದು.
goat training ಕುರಿ ಮೇಕೆ ಸಾಕಾಣಿಕೆ ಎಲ್ಲಿ ತರಬೇತಿ ನೀಡಲಾಗುವುದು?
ಸುಧಾರಿತ ಕುರಿ-ಮೇಕೆ ಸಾಕಾಣಿಕೆ ಕ್ರಮಗಳ ಕುರಿತು ಜುಲೈ 27 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ತರಬೇತಿ ನಡೆಯಲಿದೆ. ಕುರಿ ಸಾಕಾಣಿಕೆ ಕುರಿತು ರಾಷ್ಟ್ರೀಯ ಪಶುಪೋಷಣೆ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ. ಎನ್.ಕೆ. ಶಿವಕುಮಾರಗೌಡ, ರಾಷ್ಟ್ರೀಯ ಪಶುಪೋಷಣೆ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ. ಆನಂದನ್ ಹಾಗೂ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಜೆ.ಎಂ. ನಾಗರಾಜ ತರಬೇತಿಯಲ್ಲಿ ಭಾಗವಹಿಸಿ ರೈತರಿಗೆ ಮಾಹಿತಿ ನೀಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಡಾ. ಸಿದ್ದಪ್ಪ , ಮುಖ್ಯಪಶುವೈದ್ಯಾಧಿಕಾರಿಗಳು ( ಆಡಳಿತ ) , ನೆಲಮಂಗಲ –9845637387 ಡಾ. ನಾರಾಯಣಸ್ವಾಮಿ , ಮುಖ್ಯಪಶುವೈದ್ಯಾಧಿಕಾರಿಗಳು ( ಆಡಳಿತ ) , ದೇವನಹಳ್ಳಿ –9480910509 ಡಾ || ಆಂಜಿನಪ್ಪ , ಮುಖ್ಯಪಶುವೈದ್ಯಾಧಿಕಾರಿಗಳು ( ಆಡಳಿತ ) , ದೊಡ್ಡಬಳ್ಳಾಪುರ –9632047920 ಡಾ. ಎಂ.ಕೆ , ಮಂಜುನಾಥ್ , ಮುಖ್ಯಪಶುವೈದ್ಯಾಧಿಕಾರಿಗಳು ( ಆಡಳಿತ ) , ಹೊಸಕೋಟೆ –9448988649 ಉಪನಿರ್ದೇಶಕರ ನಂಬರಿಗೆ ಕರೆ ಮಾಡಬಹುದು.
ಇದನ್ನೂ ಓದಿ: ರೈತರಿಗೆ ಕುರಿ, ಮೇಕೆ, ಕೋಳಿ, ಹೈನುಗಾರಿಕೆಗೆ ತರಬೇತಿ ನೀಡಲು ರಾಜ್ಯದಲ್ಲಿವೆ 25 ತರಬೇತಿ ಕೇಂದ್ರಗಳು
ಕೊಪ್ಪಳ ಜಿಲ್ಲೆಯ ರೈತರಿಂದಲೂ ಅರ್ಜಿ ಆಹ್ವಾನ
ಹಾಲು ಉತ್ಪಾದಕರಗೆ ಉತ್ತೇಜನ ಕಾರ್ಯಕ್ರಮದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಉಳಿಕೆ ಅನುದಾನದಲ್ಲಿ ಒಂದು ಮಿಶ್ರತಳಿ ಹಸು ಅಥವಾ ಸುಧಾರಿತ ತಳಿ ಎಮ್ಮೆ ಘಟಕ ಹಾಗೂ ಕುರಿ ಅಥವಾ ಮೇಕೆ ಘಟಕ ಅನುಷ್ಠಾನಗೊಳಿಸಲು ಕೊಪ್ಪಳ ಜಿಲ್ಲೆಯ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಒಂದು ಮಿಶ್ರ ತಳಿ ಹಸು, ಸುಧಾರಿತ ತಳಿ ಎಮ್ಮೆ ಘಟಕದಲ್ಲಿ 1 ಮಿಶ್ರ ತಳಿ ಹಸು ಅಥವಾ 1 ಸುಧಾರಿತ ತಳಿ ಎಮ್ಮೆಯನ್ನು ವಿತರಿಸಲಾಗುವುದು. ಈ ಘಟಕದ ವೆಚ್ಚ 60 ಸಾವಿರ ಇದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 54 ಸಾವಿರ ಸಹಾಯಧನ ಹಾಗೂ 6 ಸಾವಿರ ಫಲಾನುಭವಿಗಳ ವಂತಿಕೆ ಅಥವಾ ಬ್ಯಾಂಕ್ ನಿಂದ ಸಾಲದೊಂದಿಗೆ ಅನುಷ್ಠಾನಗೊಳಿಸಲಾಗುವುದು.
ಅರ್ಜಿ ಸಲ್ಲಿಸಲು ಡಿಸೆಂಬರ್ 19 ಕೊನೆಯ ದಿನವಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಎಚ್. ನಾಗರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯ ರೈತರಿಂದಲೂ ಅರ್ಜಿ ಆಹ್ವಾನ
2022-23ನೇ ಸಾಲಿನ ಹಾಲು ಉತ್ಪಾದಕರಿಗೆ ಉತ್ತೇಜನ ನೀಡುವುದಕ್ಕಾಗಿ ಉಳಿಕೆ ಅನುದಾನದಡಿಯಲ್ಲಿ ಒಂದು ಮಿಶ್ರ ತಳಿ ಹಸು, ಸುಧಾರಿತ ಎಮ್ಮೆ, ಅಥವಾ 10 ಕುರಿ ಒಂದು ಹೋತ (10+1) ಕುರಿ ಮೇಕೆ ಘಟಕ ಸ್ಥಆಪನಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆಯಲ್ಲಿಆಸಕ್ತಿಯಿರುವ ರೈತರು ಕುರಿ, ಕೋಳಿ, ಹೈನುಗಾರಿಕೆ ಕುರಿತಂತೆ ಮಾಹಿತಿ ಪಡೆಯಲು ಈ 8277 100 200 ಗೆ ಕರೆ ಮಾಡಿ ದಿನದ 24 ಗಂಟೆ ಮಾಹಿತಿ ಪಡೆಯಬಹುದು.