Kharif MSP Hike 2021 ದಕ್ಷಿಣ ಭಾರತದಲ್ಲಿ ಮುಂಗಾರು ಆರಂಭವಾಗುತ್ತಿದ್ದಂತೆ ಕೇಂದ್ರ ಸರ್ಕಾರವು ರೈತರಿಗೆ ಸಂತಸದ ಸುದ್ದಿ ನೀಡಿದೆ. ತೊಗರಿ, ಜೋಳ, ಭತ್ತ, ರಾಗಿ, ಹತ್ತಿ ಸೇರಿದಂತೆ ಒಟ್ಟು 14 ಮುಂಗಾರು ಬೆಳೆಗಳ ಕನಿಷ್ಟ ಬೆಂಬಲ ಬೆಲೆ (Hikes kharif msp) ಹೆಚ್ಚಿಸಿದೆ.
ಹೌದು, ಬುಧವಾರ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಬೆಲೆ ಹೆಚ್ಚಳ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. ಅನುಮತಿ ನೀಡಲಾಗಿದೆ.
ಭತ್ತಕ್ಕೆ ನೀಡಲಾಗುವ ಬೆಂಬಲ ಬೆಲೆಯನ್ನು ಕ್ವಿಂಟಲ್ ಗೆ 72 ರೂಪಾಯಿಯಷ್ಟು, ತೊಗರಿ ಮತ್ತು ಉದ್ದು ಬೆಳೆಯ ಬೆಲೆಯನ್ನು 300 ರೂಪಾಯಿಯಷ್ಟು ಜೋಳ ಮತ್ತು ರಾಗಿಯ ಬೆಂಬಲ ಬೆಲೆಯನ್ನು ಕ್ವಿಂಟಾಲಿಗೆ 118 ಹಾಗೂ 80 ರಷ್ಟು ಹೆಚ್ಚಿಸಲಾಗಿದೆ.
2021-22ನೇ ಸಾಲಿನ ಒಟ್ಟು 14 ಮುಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ ಪ್ರಸ್ತಾವಕ್ಕೆ ಸಂಪುಟದ ಅನುಮೋದನೆ ಲಭಿಸಿದೆ. ಈ ಬೆಳೆಗಳನ್ನು ಬೆಳೆಯುವ ರೈತರಿಗೆ ಉತ್ಪಾದನಾ ವೆಚ್ಚದ ಮೇಲೆ ಶೇ. 50 ರಿಂದ 85 ರಷ್ಟು ಹೆಚ್ಚು ಗಳಿಕೆ ಆಗಲಿದೆ ಎಂದು ಕೇಂದ್ರದ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ತಿಳಿಸಿದ್ದಾರೆ.
ಇದನ್ನೂ ಓದಿ ನಿಮ್ಮ ಜಮೀನಿನ ಭೂ ಮಾಲಿಕರ ವಿವರ ಮೊಬೈಲ್ ನಲ್ಲೇ ಚೆಕ್ ಮಾಡಿ
ಎಂ.ಎಸ್.ಪಿ ಈಗಲೂ ಇದೆ ಮುಂದೆಯೂ ಇರುತ್ತದೆ ಎಂದು ಹೇಳಿದ ಅವರು ಎಂಎಸ್.ಪಿ ದರವನ್ನು ಈಗ ಹೆಚ್ಚಿಸಿದಂತೆ ಮಂದೆಯೂ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಹೊಸ ಬೆಲೆಯ ಪ್ರಕಾರ 2021-22ನೇ ಸಾಲಿನಲ್ಲಿ ಭತ್ತಕ್ಕೆ (ಸಾಮಾನ್ಯ ತಳಿ) ಕ್ವಿಂಟಾಲಿಗೆ 72 ರೂಪಾಯಿ ಹೆಚ್ಚಿಸಲಾಗಿದೆ. ಈಗ 1940 ರೂಪಾಯಿ ಇದ್ದು, ಕಳೆದ ವರ್ಷ 1868 ಇತ್ತು. ಹತ್ತಿಯ ಬೆಲೆ 211 ರೂಪಾಯಿ ಹೆಚ್ಚಿಸಲಾಗಿದ್ದು ಈ ಮೂಲಕ ಕ್ವಿಂಟಾಲ್ ಹತ್ತಿಗೆ 5726 ರೂಪಾಯಿಗಳಾಗಿವೆ.
ಜೋಳ (ಹೈಬ್ರಿಡ್) 118 ರೂಪಾಯಿ ಹೆಚ್ಚಿಸಲಾಗಿದೆ. ಹಾಗಾಗಿ ಈ ವರ್ಷ 2738 ರೂಪಾಯಿ ಆಗಿದೆ. ಕಳೆದ ವರ್ಷ 2620 ಇತ್ತು. ತೊಗರಿಗೆ 300 ರೂಪಾಯಿ ಹೆಚ್ಚಿಸಲಾಗಿದೆ. ಈ ವರ್ಷ 6300 ರೂಪಾಯಿ ಆಗಿದೆ. ಕಳೆದ ವರ್ಷ 6000 ಇತ್ತು. ಉದ್ದುವಿಗೆ 300 ರೂಪಾಯಿ ಹೆಚ್ಚಿಸಲಾಗಿದೆ. ಈ ವರ್ಷ 6300 ರೂಪಾಯಿ ಆಗಿದೆ. ಕಳೆದ ವರ್ಷ 6000 ರೂಪಾಯಿ ಇತ್ತು. ಶೇಂಗಾ 275 ರೂಪಾಯಿ ಹೆಚ್ಚಿಸಲಾಗಿದೆ. ಈ ವರ್ಷ 5550 ರೂಪಾಯಿ ಆಗಿದೆ. ಎಳ್ಳು 452 ರೂಪಾಯಿ ಹೆಚ್ಚಿಸಲಾಗಿದೆ. ಇದರ ಬೆಲೆ ಈ ವರ್ಷ 7307 ರುಪಾಯಿ ಆಗಿದೆ. ಸಜ್ಜೆ 100 ರೂಪಾಯಿ ಹೆಚ್ಚಸಿದ್ದರಿಂದ 2250 ರೂಪಾಯಿ ಆಗಿದೆ. ರಾಗಿಯ ಬೆಂಬಲ ಬೆಲೆಯನ್ನು 82 ರೂಪಾಯಿ ಹೆಚ್ಚಿಸಿದ್ದರಿಂದ ಈಗ ಅದರ ಬೆಂಬಲ ಬೆಲೆ 3377 ಆಗಿದೆ.ನವಣೆಯ ಬೆಂಬಲ ಬೆಲೆ 100 ರೂಪಾಯಿ ಹೆಚ್ಚಿಸಲಾಗಿದೆ. ಇದರ ಬೆಲೆ 2250 ರೂಪಾಯಿ ಆಗಿದೆ.ಸೂರ್ಯಕಾಂತಿ ಬೆಂಬಲ ಬೆಲೆ 130 ರೂಪಾಯಿ ಹೆಚ್ಚಿಸಲಾಗಿದೆ. ಇದರ ಬೆಲೆ ಈ ವರ್ಷ 6015 ರೂಪಾಯಿ ಆಗಿರಲಿದೆ.
Kharif MSP Hike 2021 ಎಂಎಸ್.ಪಿ ದರ ಪಟ್ಟಿ
ಬೆಂಬಲ ಬೆಲೆ (ಪ್ರತಿ ಕ್ವಿಂಟಾಲಿಗೆ) ಹೆಚ್ಚಳ ಯಾವ ಬೆಲೆಗೆ ಎಷ್ಟು ಇಲ್ಲಿದೆ ಸಂಪೂರ್ಣ ಮಾಹಿತಿ | |||
ಬೆಳೆ | ಏರಿಕೆ | ಹೊಸ ದರ | ಹಳೆ ದರ |
ತೊಗರಿ | 300 | 6300 | 6000 |
ಉದ್ದು | 300 | 6300 | 6000 |
ಹೆಸರು | 79 | 7275 | 7196 |
ಶೇಂಗಾ | 275 | 5550 | 5275 |
ಭತ್ತ (ಸಾಮಾನ್ಯ) | 72 | 1940 | 1868 |
ಭತ್ತ (ಎ ಗ್ರೇಡ್) | 72 | 1960 | 1888 |
ರಾಗಿ, | 82 | 3377 | 3295 |
ಬಾಜ್ರಾ | 100 | 2250 | 2150 |
ಮೆಕ್ಕೆಜೋಳ | 20 | 1870 | 1850 |
ಸೂರ್ಯಕಾಂತಿ | 130 | 6015 | 5885 |
ಹತ್ತಿ (ಮಧ್ಯಮ) | 211 | 5726 | 5515 |
ಹತ್ತಿ (ಉದ್ದ) | 200 | 6025 | 5825 |
ಸೋಯಾಬಿನ್ | 70 | 3950 | 3880 |
ನೈಗರ್ ಸೀಡ್ | 235 | 6930 | 6695 |