ಈ ತಾಲೂಕುಗಳ ರೈತರಿಗೆ ಮಾತ್ರ ಬರ ಪರಿಹಾರ ಹಣ ಸಿಗಲಿದೆ ಇಲ್ಲಿದೆ ಮಾಹಿತಿ

Written by Ramlinganna

Published on:

Baragala talukugal patti : ರಾಜ್ಯದಲ್ಲಿ ಮುಂಗಾರು ಋತುವಿನಲ್ಲಿ ಒಣಹವೆ ಮುಂದುವರೆದಿದ್ದು, ಮಳೆಯ ಅಭಾವದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಹೆಚ್ಚುವರಿ 23 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಿದೆ.

ಹೌದು, ಕಂದಾಯ ಇಲಾಖೆಯುವ ಈ ಕುರಿತು ಗುರುವಾರ ಆದೇಶ ಹೊರಡಿಸಿದೆ.

ಈ ಮೊದಲು ಆಗಸ್ಟ್ 27 ರಂದು ಮೊದಲ ಹಂತದ ಅಧಿಸೂಚನೆಯಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಆದಾಗ್ಯೂ ರಾಜ್ಯದ ಹಲವೆಡೆ ಒಣಹವೆ ಮುಂದುವರಿದ ಕಾರಣ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಉಳಿದ 139 ತಾಲೂಕುಗಳಲ್ಲಿ ವೈಜ್ಞಾನಿಕ ಅಧ್ಯಯನ ನಡೆಸಿ ವರದಿ ಸಲ್ಲಿಸಿತ್ತು. ಉಪ ಮುಖ್ಯಮಂತ್ರಿ ಡಾ. ಜಿತ. ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ನಡೆದ ನೈಸರ್ಗಿಕ ವಿಕೋಪಗಳ ಸಂಪುಟ ಉಪ ಸಮಿತಿ ಸಭೆಯಲ್ಲಿ ನೀಡಿದ ನಿರ್ದೇಶನದಂತೆ 24 ತಾಲೂಕುಗಳ 214 ಹಳ್ಳಿಗಳಲ್ಲಿ ಮೊಬೈಲ್ ಯಾಪ್ ಮೂಲಕ ಗ್ರೌಂಡ್ ಟ್ರೂಥಿಂಕ್ (ಸ್ಥಳ ಪರಿಶೀಲನೆ ನಡೆಸಲಾಯಿತು.

ಗ್ರೌಂಡ ಟ್ರೂಥಿಂಗ್ ಮತ್ತು ಕೆಎಸ್ಎನ್.ಡಿ.ಎಂಸಿ ಸಲ್ಲಿಸಿದ ಸಮಗ್ರ ವರದಿಯ ಆಧಾರದ ಮೇಲೆ ಪ್ರಸ್ತುತ ಹೆಚ್ಚುವರಿಯಾಗಿ 23 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇವುಗಳಲ್ಲಿ 21 ತಾಲೂಕುಗಳು ತೀವ್ರ ಬರಪೀಡಿತ ಹಾಗೂ 2 ತಾಲೂಕುಗಳು ಸಾಧಾರಣ ಬರಪೀಡಿತ ಎಂದು ವರ್ಗೀಕರಿಸಲ್ಪಟ್ಟಿದೆ. ಈ ಆದೇಶವು ತಕ್ಷಣದಿಂದ ಜಾರಿಗೆ ಬಂದಿದ್ದು, ಮುಂದಿನ ಆರು ತಿಂಗಳ ಅವಧಿಗೆ ಜಾರಿಯಲ್ಲಿರಲಿದೆ ಎಂದು ಸರ್ಕಾರ ತಿಳಿಸಿದೆ.

Baragala talukugal patti 101 ಬರಪೀಡಿತ ತಾಲೂಕುಗಳ ಪಟ್ಟಿ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಬರಪೀಡಿತ ನ 101 ತಾಲೂಕುಗಳ ಪಟ್ಟಿ

ತೀವ್ರ ಬರಪೀಡಿತ ತಾಲೂಕುಗಳು

ತುಮಕೂರು ಜಿಲ್ಲೆಯ ತಿಪಟೂರು, ಕೊಪ್ಪಳ ಜಿಲ್ಲೆಯ ಕಾರಟಗಿ, ರಾಯಚೂರು ಜಿಲ್ಲೆಯ ಮಾನ್ವಿ, ಸಿಂಧನೂರು ಮತ್ತು ಸಿರವಾರ, ಕಲಬುರಗಿ ಜಿಲ್ಲೆಯ ಅಫಜಲ್ಪುರ, ಆಳಂದ, ಚಿತ್ತಾಪುರ, ಕಲಬುರಗಿ, ಯಡ್ರಾಮಿ, ಶಹಾಬಾದ್, ಬೀದರ್ ಜಿಲ್ಲೆಯ ಭಾಲ್ಕಿ, ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ, ಬಬಲೇಶ್ವರ ಮತ್ತು ತಿಕೋಟಾ, ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ, ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ನವಲಗುಂದ, ಹುಬ್ಬಳ್ಳಿ ನಗರ ಮತ್ತು ಅಣ್ಣಿಗೇರಿ, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕುಗಳಉ.

ಸಾಧಾರಣ ಬರಪೀಡಿತ ತಾಲೂಕುಗಳು

ಕೊಡಗು ಜಿಲ್ಲೆಯ ಪೊನ್ನಂಪೇಟೆ ಮತ್ತು ವಿರಾಜಪೇಟೆ.

ಬೆಳೆ ಹಾನಿ ಪರಿಹಾರ ಎಕರೆಗೆ ಎಷ್ಟು ಜಮೆಯಾಗಲಿದೆ? ಇಲ್ಲಿದೆ ಮಾಹಿತಿ

ಬೆಳೆ ಹಾನಿ ಪರಿಹಾರ ಹೇಗೆ ನಿರ್ಧರಿಸುತ್ತಾರೆ ಎಕರೆಗೆ ಎಷ್ಟು ಬೆಳೆ ಹಾನಿ ಪರಿಹಾರ ಜಮೆ ಮಾಡಲಾಗುತ್ತದೆ. ಕಳೆದ ವರ್ಷದಂತೆ ಈ ವರ್ಷವೂ ಅದೇ ನಿಯಮದಂತೆ ಹಣ ಜಮೆ ಮಾಡಲಾಗುವುದೇ ಅಥವಾ ಹೆಚ್ಚಿನ ಹಣ ಜಮೆ ಮಾಡಲಾಗುವದೇ ಎಂಬುದರ ಮಾಹಿತಿ ಇಲ್ಲಿದೆ.

ಕರ್ನಾಟಕದಲ್ಲಿ ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ಬೆಳೆಗಳಿಗೆ ರಾಜ್ಯ ಸರ್ಕಾರವು ಎನ್.ಡಿ.ಆರ್.ಎಫ್ ಹಾಗೂ ಹೆಚ್ಚುವರಿ ಪರಿಹಾರವನ್ನು ಸೇರಿಸಿ ಪ್ರತಿ ಹೆಕ್ಟೇರಿಗೆ ಪರಿಹಾರ ಜಮೆ ಮಾಡಲಾಗುತ್ತದೆ.

ಎಕರೆಗೆ ಪರಿಹಾರವನ್ನು ಲೆಕ್ಕ ಹಾಕುವುದಾದರೆ 1 ಹೆಕ್ಟೇರಿಗೆ ಸುಮಾರು 2.47 ಎಕರೆ ಜಮೀನಿರುತ್ತದೆ.

ಹೆಕ್ಟೇರಿಗೆಷ್ಟು ಬೆಳೆ ಹಾನಿ ಪರಿಹಾರ ಜಮೆ

ಕಳೆದ ಸಲ ಬೆಳೆ ಹಾನಿಯಾದರೆ ರೈತರಿಗೆ ಹೆಕ್ಟೇರಿಗೆನ ಲೆಕ್ಕ ಪ್ರಕಾರ ಹಣ ಜಮೆ ಮಾಡಲಾಗಿತ್ತು. ಹೌದು, ಒಣ ಬೇಸಾಯ ಬೆಳೆಗಳಿಗೆ ಪ್ರತಿ ಹೆಕ್ಟೇರಿಗೆ ಒಟ್ಟು 17000 ರೂಪಾಯಿ ಅಂದರೆ ಎಕರೆಗೆ 6880 ರೂಪಾಯಿ ಜಮೆಯಾಗಿತ್ತು..

ನೀರಾವರಿ ಬೆಳೆಗಳಿಗೆ ಪ್ರತಿ ಹೆಕ್ಟೇರಿಗೆ ಒಟ್ಟು 31000 ರೂಪಾಯಿ ಅಂದರೆ ಎಕರೆಗೆ ಸುಮಾರು 12500 ರೂಪಾಯಿ ಜಮೆಯಾಗಿತ್ತು.

ಇದನ್ನೂ ಓದಿ ಇಲ್ಲಿ ಬಯೋಮೆಟ್ರಿಕ್ ಇಕೆವೈಸಿ ಮಾಡಿದರೆ ಮಾತ್ರ ಪಿಎಂ ಕಿಸಾನ್ ಕಂತಿಣ ಜಮೆ

ಅದೇ ರೀತಿ ಬಹುವಾರ್ಷಿಕ ಬೆಳೆಗಳು ಪ್ರತಿ ಹೆಕ್ಟೇರಿಗೆ ಒಟ್ಟು 31000 ರೂಪಾಯಿ ಅಂದರೆ ಎಕರೆಗೆ ಸುಮಾರು 12500 ರೂಪಾಯಿ  ಜಮೆ ಮಾಡಲಾಗಿತ್ತು.

ಆದರೆ ಈ ವರ್ಷ ಬರಗಾಲ ಘೋಷಣೆ ಮಾಡಿದೆ. ರಾಜ್ಯದ 101 ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ. ಅದರಲ್ಲಿ ಇನ್ನೂ ಕೆಲವು ತಾಲೂಕುಗಳು ಸೇರ್ಪಡೆಯಾಗಿಲ್ಲವೆಂದು ರೈತರು ಹೋರಾಟ ನಡೆಸುತ್ತಿದ್ದಾರೆ. ವಿಶೇಷವಾಗಿ ಕಲಬುರಗಿ ಜಿಲ್ಲೆಯ 7 ಜಿಲ್ಲೆಗಳೂ ಬರಗಾಲ ಪೀಡಿತ ತಾಲೂಕೆಂದು ಘೋಷಿಸಬೇಕೆಂದು ಆಗ್ರಹಿಸಿದ್ದಾರೆ. ಅತೀ ಶೀಘ್ರದಲ್ಲಿ ಈ ಜಿಲ್ಲೆಯ ತಾಲೂಕುಗಳನ್ನು ಬರಗಾಲ ಪ್ರದೇಶವೆಂದು ಘೋಷಣೆ ಮಾಡುವ ಸಾಧ್ಯತೆಯಿದೆ.

Leave a Comment