Plot House purchase subsidy : ಬೆಂಗಳೂರಿನ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದಿಂದ ಆಳಂದ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವ ವಸತಿ ರಹಿತರು ಮತ್ತು ನಿವೇಶನ ರಹಿತರಿಗೆ ವಸತಿ ಸೌಕರ್ಯ ಕಲ್ಪಿಸಲು ಮತ್ತು ನಿವೇಶನ ರಹಿತರಿಗೆ ಸರ್ಕಾರಿ ನಿವೇಶನ ಒದಗಿಸಲು ಅರ್ಹ ಸಾರ್ವಜನಿಕರಿಂದ ಅರ್ಜಿ ಸಲ್ಲಿಕೆ ಅವಧಿಯನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
Plot House purchase subsidy ಅರ್ಜಿ ಎಲ್ಲಿ ಸಲ್ಲಿಸಬೇಕು
ಇದುವರೆಗೂ ಅರ್ಜಿ ಸಲ್ಲಿಸದೆ ಇರುವ ಆಳಂದ ತಾಲೂಕಿನ ಎಲ್ಲಾ ಅರ್ಹ ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಸಂಬಂಧಿಸಿದ ಗ್ರಾಮ ಪಂಚಾಯತಿಗೆ ಅವಶ್ಯಕ ದಾಖಲಾತಿಗಳಾದ ಆಧಾರ್ ಕಾರ್ಡ್, ಪಡಿತರ ಚೀಟಿ (ರೇಶನ್ ಕಾರ್ಡ್) ಬ್ಯಾಂಕ್ ಪಾಸ್ ಬುಕ್ , ಜಾತಿ ಮತ್ತು ಆದಾಯ ಪ್ರಮಾಣ ಪತ್ರ , ಚುನಾವಣೆ ಗುರುತಿನ ಚೀಟಿಯೊಂದಿಗೆ ನೀಡಿ ಮೇಲ್ಕಂಡ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ತಮಗೆ ಸಂಬಂಧಿಸಿದ ಗ್ರಾಮ ಪಂಚಾಯತಿ ಕಚೇರಿಗೆ ಸಂಪರ್ಕಿಸಲು ಕೋರಲಾಗಿದೆ.
ಸೆಪ್ಟೆಂಬರ್ 16 ರಂದು ಮಿನಿ ಉದ್ಯೋಗ ಮೇಳ
ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಇದೇ ಸೆಪ್ಟೆಂಬರ್ 16 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಕಲಬುರಗಿ ಎಂ.ಎಸ್.ಕೆ ಮಿಲ್ ರಸ್ತೆಯ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಮತ್ತೂಟ್ ಫೈನಾನ್ ದಲ್ಲಿ ಇನ್ಟರ್ನ್ಸ್ ಟ್ರೈನಿ (ಮಹಿಳಾ ಪುರುಷ) ಹುದ್ದೆಗೆ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 26 ವಯೋಮಾನದೊಳಗಿರಬೇಕು.
ಶ್ರೀ ಸಾಯಿ ಅರ್ಥ್ ಮೂವರ್ಸ್ ದಲ್ಲಿ ಸರ್ವೀಸ್ ಇಂಜಿನಿಯರ್, ಸೇಲ್ಸ್ ಇಂಜಿನಿಯರ್, ಸಿ.ಆರ್.ಎಮ್ ಹುದ್ದೆಗೆ ಐಟಿಐ, ಡಿಪ್ಲೋಮಾ, ಬಿಇ, ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 35 ವಯೋಮಾನದೊಳಗಿರಬೇಕು.
ಟಿಸಿ ಮೆನ್ ಟೆಕ್ ಸಲ್ಯೂಶನ್ ದಲ್ಲಿ ಫೀಲ್ಡ್ ಎಕ್ಸಿಕ್ಯೂಟಿವ್ ಸೇಲ್ಸ್ ಎಕ್ಸಿಕ್ಯೂಟಿವ್, ಕ್ಯಾಶ್ ಕಲೆಕ್ಷನ್ ಎಕ್ಸಿಕ್ಯೂಟಿವ್, ಬಿಪಿಒ ಹುದ್ದೆಗೆ ಪಿಯುಸಿ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 48 ವಯೋಮಾನದೊಳಗಿರಬೇಕು.
ಇದನ್ನೂ ಓದಿ ನಿಮ್ಮ ಜಮೀನಿಗೆ ಹೋಗುವ ಕಾಲುದಾರಿ ಬಂಡಿದಾರಿ ಮುಚ್ಚಿಹೋಗಿದೆಯೇ ಚೆಕ್ ಮಾಡಿ
ಕ್ರೆಡಿಟ್ ಆಕ್ಸಸ್ ಗ್ರಾಮೀಣ ಲೀ. ದಲ್ಲಿ ಕ್ರೇಡಿಟ್ ಪ್ರೊಸೆಸಿಂಗ್ ಅಸೋಸಿಯೇಶನ್ ಹುದ್ದೆಗೆ ಬಿಕಾಂ, ಬಿಎಸ್.ಸಿ, ಬಿಬಿಎ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 21 ರಿಂದ 30 ವಯೋಮಾನದೊಳಗಿರಬೇಕು.
ಸ್ವತಂತ್ರ ಮೈಕ್ರೋ ಫೈನಾನ್ಸ್ ದಲ್ಲಿ ಫೀಲ್ಡ್ ಆಫೀಸರ್ ಕಲೆಕ್ಷನ್ ಆಫೀಸರ್ ಹುದ್ದೆಗೆ ಪಿಯುಸಿ, ಐಟಿಐ ಹಾಗೂ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತ 18 ರಿಂದ 30 ವಯೋಮಾನದೊಳಗಿರಬೇಕು.
ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ವಿಧ್ಯಾಭ್ಯಾಸದ ಎಲ್ಲಾ ಅಂಕಪಟ್ಟಿಗಳ ಝಾರಾಕ್ಸ್ ರೆಸ್ಯೂಮ್ (ಬಯೋಡಾಟಾ) ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್ ದೊಂದಿಗೆ ಮೇಲ್ಕಂಡ ದಿನದಂದು ನಡೆಯುವ ಉದ್ಯೋಗ ಮೇಳದಲ್ಲಿ ಭಾಗವಹಿಸಬೇಕು.
ಉದ್ಯೋಗ ಮೇಳದಲ್ಲಿ ಭಾಗವಹಿಸುವ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಕ್ಯೆ 08472 274846, ಮೊಬೈಲ್ ಸಂಖ್ಯೆ 9620095270 ಗೆ ಸಂಪರ್ಕಿಸಲು ಕೋರಲಾಗಿದೆ.
ಇನ್ನೇಕೆ ತಡ ಕೂಡಲೇ ಸೆಪ್ಟೆಂಬರ್ 16 ರಂದು ಕಲಬುರಗಿಗೆ ಹೋಗಿ ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಉದ್ಯೋಗ ಪಡೆದುಕೊಳ್ಳಿ.





