ಪಿಎಂ ಕಿಸಾನ್ ಹಣ ಜಮೆಗೆ ಇಕೆವೈಸಿ ಕಡ್ಡಾಯ- ಸ್ಟೇಟಸ್ ಇಲ್ಲೇ ಚೆಕ್ ಮಾಡಿ

Written by Ramlinganna

Published on:

PMkisan EKYC status check : ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಸದುಪಯೋಗ ಪಡಯಲು ವಾರ್ಷಿಕ ಇಕೆವೈಸಿ ಮಾಡಿಕೊಳ್ಳಬೇಕು. ಇಕೆವೈಸಿ ಸ್ಟೇಟಸ್ ಇಲ್ಲೇ ಚೆಕ್ ಮಾಡಿ

ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ವಾರ್ಷಿಕ ಬಯೋಮೆಟ್ರಿಕ್ ಅಥವಾ ಫೆಶಿಯಲ್ ಇಕೆವೈಸಿ ಕಡ್ಡಾಯವಾಗಿದ್ದು, ಇಧರಿಂದ ರೈತರಿಗೆ ಸಾಕಷ್ಟು ಪ್ರಯೋಜನಗಳಿವೆ. ಅವುಗಳಲ್ಲಿ, ರೈತ ಫಲಾನುಭವಿಯ ನೈಜತೆ ದೃಢೀಕರಣ, ಡಿಬಿಟಿ ಮೂಲಕ ಯೋಜನೆಯ ಹಣ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಸಮಯಕ್ಕೆ ಜಮೆಯಾಗುವುದು. ರೈತ ಬಾಂಧವರು ಸ್ವತಃ ಪಿಎಂ ಕಿಸಾನ್ ಮೊಬೈಲ್ ಯಾಪ್ ಡೌನ್ಲೋಡ್ ಮಾಡಿಕೊಂಡು ಅಥವಾ ನಾಗರಿಕ ಸೇವಾ ಕೇಂದ್ರಗಳಿಗೆ  ಭೇಟಿ ನೀಡಿ ಸಮಯಕ್ಕೆ ಸರಿಯಾಗಿ ಬಯೋಮೆಟ್ರಿಕ್ ಅಥವಾ ಫಿಶಿಯನ್ ಇಕೆವೈಸಿ ಮಾಡಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಲಾಭ ಪಡೆಯಲು ಸೂಚಿಸಲಾಗಿದೆ.

ಇ ಕೆವೈಸಿ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಿ. ಆಗ ಪಿಎಂ ಕಿಸಾನ್ ಯೋಜನೆಯ 24ನೇ ಕಂತಿನ ಹಣವು ರೈತರ ಖಾತೆಗೆ  ಸಮಯಕ್ಕೆ ಜಮೆ ಆಗುತ್ತದೆ

ಅರ್ಹ ಫಲಾನುಭವಿ ರೈತರಿಗೆ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ನಿಮ್ಮ ಸ್ಥಿತಿ ತಿಳಿಯಿರಿ ಸೌಲಭ್ಯವನ್ನು ಪೋರ್ಟಲ್ ನಲ್ಲಿ ನೀಡಲಾಗಿದೆ. ಇದರ ಮೂಲಕ ಪಾವತಿ ಸ್ಥಿತಿ, ಅರ್ಹತೆ, ಆಧಾರ್ ಜೋಡಣೆ ಮತ್ತು ಇಕೆವೈಸಿ ಸ್ಥಿತಿಯನ್ನು ತಿಳಿಯಬಹುದು.

ರೈತರು ಇಕೆವೈಸಿ ಪ್ರಕ್ರಿಯಯನ್ನು ಮನೆಗಳಿಂದಲೇ ಪೂರ್ಣಗೊಳಿಸಲು ಅವಕಾಶ ಕಲ್ಪಿಸುವ ಯಾಪ್ ಒಂದನ್ನು ಕೂಡ ಕೇಂದ್ರವು ಬಿಡುಗಡೆ ಮಾಡಿದೆ.

PMkisan EKYC status check ಇಕೆವೈಸಿ ಆಗಿದೆಯೋ ಇಲ್ಲವೋ ಹೀಗೆ ಚೆಕ್ ಮಾಡಿ

ಪಿಎಂ ಕಿಸಾನ್ ಯೋಜನೆ ಎಫ್ಐಡಿಗೆ ಇಕೆವೈಸಿ ಆಗಿದೆಯೋ ಇಲ್ಲವೋ ಚೆಕ್ ಮಾಡಲು ಈ

https://pmkisan.gov.in/BeneficiaryStatus_New.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ Enter Registration No ನಮೂದಿಸಬೇಕು ನಂತರ ಅಲ್ಲಿ ಕಾಣುವ ಕ್ಯಾಪ್ಚಾ ಕೋಡ್ ನಮೂದಿಸಿ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಓಟಿಪಿ ನಮೂದಿಸಿದ ನಂತರ ಸ್ಟೇಟಸ್ ಪೇಜ್ ತೆರೆದುಕೊಳ್ಳುತ್ತದೆ. . ನಿಮ್ಮ ಪಿಎಂ ಕಿಸಾನ್ ನೋಂದಣಿ ಸಂಖ್ಯೆ ಗೊತ್ತಿಲ್ಲದಿದ್ದರೆ Know Your Registration No ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು. ಅಲ್ಲಿ ಕಾಣುವ ಕ್ಯಾಪ್ಜ್ಯಾ ಕೋಡ್ ನಮೂದಿಸಬೇಕು. ನಂತರ ಗೆಟ್ ಮೊಬೈಲ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಓಟಿಪಿ ನಮೂದಿಸಿ ಸ್ಟೇಟಸ್ ಚೆಕ್ ಮಾಡಬಹುದು.

Today pm kisan release  ಪಿಎಂ ಕಿಸಾನ್ ನೋಂದಣಿಗೆ ಫಾರ್ಮರ್ ಐಡಿ ಕಡ್ಡಾಯ

ಪಿಎಂ ಕಿಸಾನ್ ಯೋಜನೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ನೋಂದಣಿಗೆ ಫಾರ್ಮರ್ ಐಡಿಯನ್ನು ಕಡ್ಡಾಯಗೊಳಿಸಿದೆ.ಪ್ರಸ್ತುತ ರೈತರ ನೋಂದಣಿ ಕಾರ್ಯ ಪ್ರಾರಂಭವಾಗಿರುವ ಕರ್ನಾಟಕ, ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತಿಸಗಢ, ಗುಜರಾತ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಸ್ಸಾ, ರಾಜಸ್ಥಾನ, ತಮಿಳುನಾಡು, ತೆಲಂಗಾಣ ಹಾಗೂ ಉತ್ತರ ಪ್ರದೇಶದ ಸೇರಿದಂತೆ ಒಟ್ಟು 14 ರಾಜ್ಯಗಳಲ್ಲಿ ಹೊಸದಾಗಿ ಅರ್ಜಿ ಸಲ್ಲಿಸುವವರು ಫಾರ್ಮರ್ ಐಡಿ ಒದಗಿಸುವುದು ಕಡ್ಡಾಯವಾಗಿದೆ.

ಇದನ್ನೂ ಓದಿ : ಬೆಳೆ ಹಾನಿ ಪರಿಹಾರ ಎಕರೆಗೆ ಎಷ್ಟು ಜಮೆಯಾಗಲಿದೆ? ಇಲ್ಲಿದೆ ಮಾಹಿತಿ

ಇನ್ನುಳಿದ ರಾಜ್ಯಗಳಲ್ಲಿ ನೋಂದಣ ಕಾರ್ಯ ಇನ್ನೂ ಶುರುವಾಗದ ಕಾರಣ ಅಲ್ಲಿ ಈ ಐಡಿ ಕಡ್ಡಾಯವಾಗಿದೆ. ಇನ್ನುಳಿದ ರಾಜ್ಯಗಳಲ್ಲಿ ನೋಂದಣಿ ಕಾರ್ಯ ಇನ್ನೂ ಶುರುವಾಗದ ಕಾರಣ ಅಲ್ಲ ಈ ಐಡಿ ಕಡ್ಡಾಯಾಗಿಲ್ಲ. ಕೇಂದ್ರ ಸರ್ಕಾರದ ಈ ಮಹತ್ವದ ಯೋಜನೆಯು ಸಣ್ಣ ಮತ್ತು ಅತೀ ಸಣ್ಣ ರೈತರ ಬದುಕಿಗೆ ಆಸರೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ದೊಡ್ಡ ಮಟ್ಟದ ಉತ್ತೇಜನ ನೀಡುತ್ತಿದೆ.

Leave a Comment