ಬರಗಾಲ ಪೀಡಿತ ತಾಲೂಕುಗಳ ಘೋಷಣೆ – ರೈತರಿಗೆ ಬೆಳೆ ವಿಮೆ ಮತ್ತು ಪರಿಹಾರ

Written by Ramlinganna

Published on:

Baragala peedita talukagala Ghoshane : ರಾಜ್ಯದಲ್ಲಿ ಮಳೆ ಕೊರತೆಯಿಂದ ತೀವ್ರ ಬರಗಾಲ ಎದುರಾಗಿದೆ. ಕೇಂದ್ರ ಸರ್ಕಾರದ ಡ್ರಾಟ್ ಮಾನ್ಯುವಲ್ 2020ರ ಪ್ರಕಾರ ರಾಜ್ಯದಲ್ಲಿ ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ , ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.

ಅವರು ಗುರುವಾರ ಬೆಂಗಳೂರಿನ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಜೂನ್ 1 ರಿಂದ ಆಗಸ್ಟ್ 26 ರವರೆಗೆ 666 ಮಿ.ಮೀ ಮಳೆ ಬದಲು ಕೇವಲ 465 ಮಿ.ಮೀ ಮಳೆಯಾಗಿದೆ. ಇದರಿಂದ ಶೇ. 30 ರಷ್ಟು ಮಳೆ ಕೊರತೆಯಾಗಿದೆ. ರಾಜ್ಯದ 29 ಜಿಲ್ಲೆಗಳು ಹಾಗೂ 190 ತಾಲೂಕುಗಳು ಮಳೆ ಕೊರತೆ ಮತ್ತು ತೀವ್ರ ಮಳೆ ಕೊರತೆ ವ್ಯಾಪ್ತಿಯಲ್ಲಿವೆ ಈ ಪೈಕಿ 12 ತಾಲೂಕುಗಳು ತೀವ್ರ ಮಳೆ ಕೊರತೆ ಅನುಭವಿಸುತ್ತಿವೆ. ಆಗಸ್ಟ್ 26 ರ ವೇಳೆಗೆ ಮಳೆ ಇಲ್ಲದೆ ಸತತ 3ಕ್ಕಿಂತ ಹೆಚ್ಚು ವಾರಗಳ ಕಾಲ ಒಣಹವೆ ಅನುಭವಿಸಿದ 134 ತಾಲೂಕುಗಳನ್ನು ಗುರುತಿಸಲಾಗಿದೆ.

Baragala peedita talukagala Ghoshane ರೈತರಿಗೆ ಬೆಳೆ ವಿಮೆ ಮತ್ತು ಪರಿಹಾರ

ಮಳೆಯಿಲ್ಲದೆ ಬಿತ್ತನೆ ಮಾಡಲು ಸಾಧ್ಯವಾಗದ ರೈತರಿಗೂ ಬೆಳೆ ವಿಮೆ ಅಡಿ ಬಿತ್ತನೆ ತಡೆ ವಿಶೇಷ ಅವಕಾಶದಡಿ ಪರಿಹಾರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ರೈತರು ವಿಮೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 31 ರವರೆಗೆ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದ್ದು, ರೈತರು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಸರ್ಕಾರ ಪರವಾಗಿ ಮನವಿ ಮಾಡಿದರು.

ಫಸಲ್ ಬಿಮಾ ಯೋಜನೆಯಡಿ ಈ ಬಾರಿ ದಾಖಲೆ ಮಟ್ಟದಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆ ಬೆಳೆಯುವ 49  ಲಕ್ಷ ರೈತರು ಈಗಾಗಲೇ ಬೆಳೆ ವಿಮೆ ಮಾಡಿಸಿದ್ದಾರೆ. ರೈತರ ಹಿತರಕ್ಷಣೆಗಾಗಿ ಸರ್ಕಾರವು ಸಹ ಇದಕ್ಕೆ ಹೆಚ್ಚಿನ ಒತ್ತಾಸೆ ನೀಡಿದೆ. ಮಳೆಯ ಕೊರತೆಯಿಂದಾಗಿ ಒಂದು ವೇಳೆ ಬೀಜ ಬಿತ್ತಲು ಸಾಧ್ಯವಾಗದಿದ್ದರೂ ಸಹ ಬಿತ್ತನೆ ತಡೆ ಎಂಬ ವಿಶೇಷ ಕ್ಯಾಟಗರಿಯಡಿ ವಿಮಾ ಪರಿಹಾರ ಪಡೆಯಲು ಅವಕಾಶವಿದೆ.

ಬರಗಾಲ ತಾಲೂಕುಗಳ ಪಟ್ಟಿಯಲ್ಲಿ ನಿಮ್ಮ ತಾಲೂಕಿದೆಯೇ ಇಲ್ಲೇ ಚೆಕ್ ಮಾಡಿ

ಬರಗಾಲ ತಾಲೂಕುಗಳ ಪಟ್ಟಿಯಲ್ಲಿ ನಿಮ್ಮ ತಾಲೂಕಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

drought_affected_taluks

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬರಗಾಲ ಪೀಡಿತ ಪ್ರದೇಶಗಳ ಪಟ್ಟಿ ತೆರೆದುಕೊಳ್ಳುತ್ತದೆ.

ಕೇಂದ್ರ ಸರ್ಕಾರವು ಡ್ರಾಟ್ ಮ್ಯಾನುವಲ್ 2020 ರ ಪ್ರಕಾರ ಬರಪೀಡಿತ ತಾಲೂಕು ಎಂದು ಘೋಷಿಸಲು ಹಲವು ಟ್ರಿಗರ್ ಪಾಯಿಂಟ್ ಗಳ ಅವಶ್ಯಕತಯಿದೆ. ಟ್ರಿಗರ್ 1 ಮೂರು ಅಥವಾ ಅದಕ್ಕಿಂತ ಹೆಚ್ಚಿನ ವಾರಗಳಲ್ಲಿ ಮಳೆ ಆಗದಿರುವುದು ಮತ್ತು ಟ್ರಿಗರ್ 2 ಬಿತ್ತನೆಯ ಪ್ರಮಾಣ ಬಿತ್ತಿದ ಬೆಳೆಗಳ ಸ್ಥಿತಿಗತಿ, ಮಣ್ಣಿನ ತೇವಾಂಶ, ಅಂತರ್ಜಲ ಪ್ರಮಾಣ, ಕೆರೆಕಟ್ಟೆಗಳು, ಅಣೆಕಟ್ಟೆಗಳಲ್ಲಿನ ನೀರಿನ ಪ್ರಮಾಣ ಇದರಲ್ಲಿ ಬರುತ್ತದೆ. ಈ ಎರಡೂ ಅಂಶ ಆಧರಿಸಿ ನಾವು ಮೌಲ್ಯಮಾಪನ ಮಾಡಿದ್ದೇವೆ. ಗ್ರೌಂಡ್ ಟ್ರೂಥಿಂಗ್ ಮಾಡಿದ್ದೇವೆ. 134 ತಾಲೂಕುಗಳು ಟ್ರಿಗರ್ 1 ಪ್ರಕಾರ ಅರ್ಹತೆ ಪಡೆದಿವೆ. ಗ್ರೌಡ್ ಟ್ರೂಥಿಂಗ್ ಮಾಡಿದಾಗ ಸದ್ಯಕ್ಕೆ 101 ತಾಲೂಕುಗಳು ಬರಪೀಡಿತ ಎಂದು ಘೋಷಿಸಲು ಅರ್ಹತೆ ಪಡೆದಿವೆ. ಉಳಿದ 32 ತಾಲೂಕುಗಳಉ ಟ್ರಿಗರ್ 1 ಪ್ರಕಾರ ಅರ್ಹತೆ ಪಡೆದಿವೆ. ಅವುಗಳನ್ನೂ ಪರಿಶೀಲಿಸಲಾಗುವುದು ಎಂದರು.

ಇದನ್ನೂ ಓದಿ ಪಿಎಂ ಕಿಸಾನ್ 24ನೇ ಕಂತಿನ ಹಣ ಯಾರು ಯಾರಿಗೆ ಜಮೆಯಾಗಲಿದೆ ಇಲ್ಲಿದೆ ಮಾಹಿತಿ

ಬರ ನಿರ್ವಹಣೆಗೆ ರಾಜ್ಯ ಸರ್ಕಾರ ಸದ್ಯಕ್ಕೆ 635 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಹೆಚ್ಚಿನ ನೆರವು ಕೋರಿ ಸಿಎಂ ನೇತೃತ್ವದ ನಿಯೋಗ ಪ್ರಧಾನಿ ಹಾಗೂ ಗೃಹಸಚಿವರನ್ನು ಭೇಟಿ ಮಾಡಲಿದೆ. ರೈತರಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಒತ್ತಾಯಿಸಲಿದ್ದೇವೆ ಎಂದರು.

ಪ್ರತಿ 15 ದಿನಕ್ಕೊಮ್ಮೆ ಉನ್ನತ ಮಟ್ಟದ ಸಭೆ ಸೇರಿ ವಾಸ್ತವ ಸ್ಥಿತಿ ಹಾಗೂ ಕೇಂದ್ರದ ಮಾನದಂಡದ ಅನ್ವಯ ಬರದ ಪಟ್ಟಿಗೆ ತಾಲೂಕುಗಳನ್ನು ಸೇರಿಸಲಾಗುತ್ತದೆ.

Leave a Comment