Ration card ekyc update : ರಾಜ್ಯದಲ್ಲಿರುವ ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಕಾರ್ಡ್ ಹೊಂದಿರುವ ಎಲ್ಲರೂ ಕೆವೈಸಿ ಮಾಡಿಸಬೇಕು. ಐದು ವರ್ಷದ ಹಿಂದೆ ಕೆವೈಸಿ ಮಾಡಿರುವ ಸುಮಾರು 2.59 ಕೋಟಿ ಪಡಿತರ ಚೀಟಿಗಳಿದ್ದು ಸೆಪ್ಟೆಂಬರ್ 30 ರೊಳಗೆ ಕೆವೈಸಿ ಮಾಡಲು ಗಡವು ನೀಡಲಾಗಿದೆ. ಉಳಿದವರು ಸಹ ಕಡ್ಡಾಯವಾಗಿ ಕೆವೈಸಿ ಮಾಡಿಸಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಿಜ್ವಾನ್ ಆರ್ಷದ್ ತಿಳಿಸಿದರು.
ಅವರು ಉಡುಪಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ ಆಙಾರ ಭದ್ರತಾ ಯೋಜನೆಯಡಿ ಕೇಂದ್ರ ಸರ್ಕಾರ 4.01 ಕೋಟಿ ಜನರಿಗೆ ಮಾತ್ರ ಪಡಿತರ ಅನುಮತಿ ನೀಡಿದೆ. ಹೀಗಾಗಿ ಬಾಕಿ ಉಳಿದ ಸುಮಾರು 50 ಲಕ್ಷ ಜನರನ್ನು ಪಡಿತರ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸಲಾಗುವುದು. ರಾಜ್ಯದ ಏಳು ಕೋಟಿ ಜನಸಂಖ್ಯೆಯಲ್ಲಿ 4.50 ಕೋಟಿ ಜನರು ಮಾನದಂಡಂತೆ ಆಹಾರ ಭದ್ರತೆ ಹೊಂದಲು ಅರ್ಹರಿದ್ದಾರೆ.
ಕೇಂದ್ರ ಸರ್ಕಾರ 7.59 ಲಕ್ಷ ಪಡಿತರ ಚೀಟಿಗಳ ರದ್ದತಿಗೆ ಸಚಿಸಿದ್ದು 4 ಲಕ್ಷ ಪಡಿತರ ರದ್ದು ಮಾಡಲಾಗಿದೆ. ಉಳಇದ 3.59 ಲಕ್ಷ ಪಡಿತರ ಚೀಟಿಗಳ ರದ್ದು ಆದೇಶವನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಆದೇಶಿಸಲಾಗಿದೆ ಎಂದು ತಿಳಿಸಿದರು.
ಜಾತಿ ಪ್ರಮಾಣ ಪತ್ರ ಕಡ್ಡಾಯ – ಇ ಕೆವೈಸಿಗೂ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಲಾಗಿದೆ. ಜಾತಿ ಪ್ರಮಾಣ ಪತ್ರದಲ್ಲಿರುವ ಆರ್.ಡಿ. ಸಂಖ್ಯೆಯನ್ನು ಇಕೆವೈಸಿ ವೇಳೆ ದಾಖಲಿಸಬೇಕಾಗಲಿದೆ. ಅದರೊಂದಿಗೆ ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಅಪಡೇಟ್ ಮಾಡಬೇಕಾಗಲಿದೆ. ಮೊಬೈಲ್ ಸಂಖ್ಯೆ ಇಲ್ಲವಾದರೆ, ಇತರರ ಮೊಬೈಲ್ ಸಂಖ್ಯೆ ನೀಡುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ. ಪಡಿತರದಾರರು ಒಂದು ವೇಳೆ ಗ್ಯಾಸ್ ಸಿಲಿಂಡರ್ ಸೌಲಭ್ಯ ಹೊಂದಿದ್ದ ಪೈಕಿ ಯಾವ ಕಂಪನಿಯ ಗ್ಯಾಸ್, ಸರ್ಕಾರದ ವಿವಿಧ ಯೋಜನೆಯ ಮೂಲಕ ಗ್ಯಾಸ್ ಪಡೆಯಲಾಗಿದೆಯೇ ಅಥವಾ ಹಣ ಕೊಟ್ಟು ಪಡೆಯಲಾಗಿದೆಯೇ ಎಂಬುದನ್ನು ನಮೂದಿಸಬೇಕು.
ಪಡಿತರ ಕಾರ್ಡ್ ನಲ್ಲಿ ಹೆಸರು ಇರುವವರು ಬಯೋಮೆಟ್ರಿಕ್ ನೀಡುವ ಮೂಲಕ ಖಾತ್ರಿ ಪಡೆಸಲಾಗಿದೆ.
ಇಕೆವೈಸಿ ಆಗದೆ ಇರುವ ಪಡಿತರ ಚೀಟಿಯೆ ಕಾರ್ಡ್ ಸಂಖ್ಯೆಯೊಂದಿಗೆ ಹೆಸರುಗಳನ್ನು ಆಯಾ ನ್ಯಾಯಬೆಲೆ ಅಂಗಡಿಗೆ ನೀಡಲಾಗಿದೆ ಒಂದು ಪ್ರತಿಯನ್ನು ನ್ಯಾಯಬೆಲೆ ಅಂಗಡಿಯ ಮುಂಭಾಗದಲ್ಲಿ ಅಂಟಿಸುವುದಕ್ಕೆ ಸೂಚಿಸಲಾಗಿದೆ. ಈಗಾಗಲೇ ಇಕೆವೈಸಿ ಮಾಡಿಕೊಂಡಿದ್ದರೂ ಪಟ್ಟಿಯಲ್ಲಿ ಹೆಸರು ಹೊಂದಿರುವವರು ಮತ್ತೊಂದು ಬಾರಿ ಇಕೆವೈಸಿ ಮಾಡಿಸಿಕೊಳ್ಳಬಹುದು.
Ration card ekyc update ಪಡಿತರ ಚೀಟಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ ?
ಪಡಿತರ ಚೀಟಿ ಇ ಸ್ಥಿತಿ (ಸ್ಟೇಟಸ್ ) ಚೆಕ್ ಮಾಡಲು
ಈ https://ahara.karnataka.gov.in/Home/EServices
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಇ ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಬೇಕು. ನಂತರ ಪಡಿತರ ಚೀಟಿ ತೋರಿಸಿ ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ನಿಮ್ಮ ಬಡಿತರ ಚೀಟಿ ನಂಬರ್ ನಮೂದಿಸಬೇಕು. ನಂತರ ಗೋ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಪಡಿತರ ಚೀಟಿ ಮೊಬೈಲ್ ನಲ್ಲೇ ನೋಡಬಹುದು.
ಪಡಿತರ ಚೀಟಿ ಇಕೆವೈಸಿ ಮಾಡಿಸಲೇಬೇಕು.
ಪಡಿತರ ಚೀಟಿ ಇಕೆವೈಸಿ ಮಾಡಿಸಲಬೇಕು. ಹೌದು, ಇಕೆವೈಸಿ ಮಾಡಿಸದಿದ್ದರೆ ನಿಮಗೆ ಮುಂದಿನ ದಿನಗಳಲ್ಲಿ ಸರ್ಕಾರದ ಸೌಲಭ್ಯ ಸಿಗುವುದಿಲ್ಲ. ಅಂದರೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಸೇರಿದಂತೆ ಇತರ ಆಹಾರ ಧಾನ್ಯಗಳು ಸಿಗುವುದಿಲ್ಲ. ಹಾಗಾಗಿ ಈಗಲೇ ಇಕೆವೈಸಿ ಮಾಡಿಸಿಕೊಳ್ಳಬೇಕು. ಕೊನೆಯ ದಿನಾಂಕದವರೆಗೆ ಕಾಯಬಾರದು. ಕೊನೆಯ ದಿನಾಂಕಗಳಲ್ಲಿ ಸರ್ವರ್ ಸಮಸ್ಯೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ ಆಟೋರಿಕ್ಷಾ ಟ್ಯಾಕ್ಸಿ, ಗೂಡ್ಸ್ ವಾನಹ ಖರೀದಿಗೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನ
ಇಕೆವೈಸಿ ಸಂಬಂಧಿಸಿದಂತ ಮಾಹಿತಿಗಾಗಿ ಸಹಾಯವಾಣಿ 1967 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.





