ಹಸು ಸಾಕಾಣಿಕೆಗೆ ಟ್ಯಾಕ್ಸಿ ಖರೀದಿಗೆ 40 ಸಾವಿರ ರೂಪಾಯಿಯವರೆಗೆ ಸಬ್ಸಿಡಿ

Written by Ramlinganna

Published on:

Cow taxi purchase subsidy : ಹಸು ಸಾಕಾಣಿಕೆಗೆ 40 ಸಾವಿರ ರೂಪಾಯಿಯವರೆಗೆ ಸಬ್ಸಿಡಿ ನೀಡಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೌದು, ಹಸು ಸಾಕಾಣಿಕೆ, ಸೇರಿದಂತೆ ಇನ್ನಿತರ  ವ್ಯಾಪಾರ ವಹಿವಾಟುಗಳ ಖರೀದಿಗೆ 40 ಸಾವಿರ ರೂಪಾಯಿಯವರೆಗೆ ಸಬ್ಸಿಡಿ ನೀಡಲಾಗುವುದು. ಹಾಗಾದರೆ ಯಾವ ಯಾವ ಉದ್ಯಮ ಆರಂಭಿಸಲು  ಹಾಗೂ ಯಾರು ಯಾರಿಗೆ ಸಬ್ಸಿಡಿ ನೀಡಲಾಗುವುದು. ಅರ್ಜಿ ಎಲ್ಲಿ ಯಾವಾಗ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ 2026-27ನೇ ಸಾಲಿಗೆ ವಿಪ್ರ ಸ್ವ- ಉದ್ಯೋಗ ನೇರ ಸಾಲ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ನೇರವಾಗಿ ಸಾಲ ಸಹಾಯಧನ ಮಂಜೂರು ಮಾಡಲು ಉದ್ದೇಶಿಸಿಸಿದ್ದು, ಇದಕ್ಕಾಗಿ  ಅರ್ಹ ಬ್ರಾಹ್ಮಣ ಸಮುದಾಯದವರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.

ಹಲವು ವೃತ್ತಿಗಳಾದ ಹಸು ಸಾಕಾಣಿಕೆ, ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ, ಹೋಟೆಲ್ ಉದ್ಯಮ, ಟ್ಯಾಕ್ಸಿ ಇತ್ಯಾದಿ ವ್ಯಾಪಾರ ವಹಿವಾಟುಗಳನ್ನು ಕೈಗೊಳ್ಳಲು ಕನಿಷ್ಠ 1 ಲಕ್ಷ ರೂಪಾಯಿ ಹಾಗೂ ಗರಿಷ್ಠ 2 ಲಕ್ಷ ರೂಪಾಯಿಗಳ ಆರ್ಥಿಕ ನೆರವು ಒದಗಿಸಲಾಗುತ್ತದೆ. ಶೇ. 4 ರ ವಾರ್ಷಿಕ ಬಡ್ಡಿ ದರದಲ್ಲಿ ರೂಪಾಯಿ 1 ಲಕ್ಷಕ್ಕೆ 20 ಸಾವಿರ ರೂಪಾಯಿಗಳ ಸಹಾಯಧನವನ್ನು ಹಾಗೂ ರೂಪಾಯಿ 2 ಲಕ್ಷಕ್ಕೆ 40 ಸಾವಿರ ರೂಪಾಯಿಗಳ ಸಹಾಯಧನವನ್ನು ಸಾಮಾನ್ಯ ಅರ್ಹತೆ ಹೊಂದಿದ ಹಿಂದುಳಿದ ಬ್ರಾಹ್ಮಣ ಸಮುದಾಯದವರು ಪಡೆದುಕೊಳ್ಳಬಹುದು.

ಬ್ರಾಹ್ಮಣ ಸಮುದಾಯದ ಸಾಮಾನ್ಯ ವರ್ಗಕ್ಕೆ ಸೇರಿದ ಅರ್ಜಿದಾರರು ಚಾಲ್ತಿಯಲ್ಲಿರುವ ಆರ್ಥಿಕವಾಗಿ ಹಿಂದುಳಿದ ಪ್ರಮಾಣ ಪತ್ರ (ಇಡಬ್ಲೂಎಸ್) ಪ್ರಮಾಣ ಪತ್ರ ಹೊಂದಿರಬೇಕು. ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ವಯೋಮಿತಿ 18 ರಿಂದ 65 ವಯೋಮಾನದೊಳಗಿರಬೇಕು. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ಅರ್ಹತೆ ಹೊಂದಿರುವ ಅರ್ಹ ಬ್ರಾಹ್ಮಣ ಸಮುದಾಯದವರು

https://ksbdb.karnataka.gov.in/

Website ದಲ್ಲಿ ಆನ್ಲೈನ್ ಮೂಲಕ ಆಗಸ್ಟ್ 31 ರ ಸಂಜೆ 5.30 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು. ಸಾಮಾನ್ಯ ಅರ್ಹತೆಗಳು ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಚೇರಿ ಸಮಯದಲ್ಲಿ ಸಹಾಯವಾಣಿ ಸಂಖ್ಯೆ 8029605888 ಹಾಗೂ 8762249230  ಗೆ ಕರೆ ಮಾಡಿ ಸಂಪರ್ಕಿಸಬಹುದು.

Cow taxi purchase subsidy  ಅರ್ಜಿ ಸಲ್ಲಿಸಲು ಸಾಮಾನ್ಯ ಅರ್ಹತೆಗಳು

ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಬ್ರಾಹ್ಮಣ ಸಮುದಾಯದವರಾಗಿರಬೇಕು. ಅರ್ಜಿದಾರರು ವಯಸ್ಸು ಕನಿಷ್ಠ 18 ರಿಂದ 65 ರ ಒಳಗಿರಬೇಕು. ಒಂದು ಕುಟುಂಬದಿಂದ ಒಬ್ಬರು ಮಾತ್ರ ಅರ್ಜಿ ಸಲ್ಲಿಸಬಹುದು. ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ನೀಡಲಾಗುವುದು. ವಿಕಲಚೇತನರಿಗೆ ಶೇ. 5 ರಷ್ಟು ಮೀಸಲಾತಿ ನೀಡಲಾಗುವುದು. ಅರ್ಜಿದಾರರ ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು. ಮತ್ತು ಬ್ಯಾಂಕ್ ಖಾತೆ ಸೀಡ್ ಆಗಿರಬೇಕು.

Cow taxi purchase subsidy  ಆನ್ಲೈನ್ ನಲ್ಲಿ ಲಾಗಿನ್ ಆಗುವುದು ಹೇಗೆ ?

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು  ಲಾಗಿನ್ ಆಗಲು ಈ

https://ksbdb.co.in/Loan/register

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಅಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು. ನಂತರ ನಿಮ್ಮ ಮೊಬೈಲಿಗೆ ಒಂದು ಓಟಿಪಿ ಬರುತ್ತದೆ. ಆ ಓಟಿಪಿ ನಮೂದಿಸದ ನಂತರ ಅರ್ಜಿ ಓಪನ್ ಆಗುತ್ತದೆ. ಅಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು.

ಷರತ್ತುಗಳು

ಈ ಯೋಜನೆಯಡಿ ಪಡೆದ ಸಾಲವನ್ನು ಸಾಲ ಮಂಜೂರಾದ 2 ತಿಂಗಳ ನಂತರ ಪ್ರತಿ ಎರಡು ತಿಂಗಳು 3 ವರ್ಷಗಳ ಕಾಲ ಒಟ್ಟು 34 ಕಂತುಗಳಲ್ಲಿ ಮೂಲಧನ ಹಾಗೂ ಬಡ್ಡಿಯೊಂದಿಗೆ  ಆನ್ಲೈನ್ ಮೂಲಕ ಕಡ್ಯವಾಗಿ ಹಣ ಪಾವತಿಸಬೇಕು. ಸಾಲ ಮಂಜೂರಾದ ಫಲಾನುಭವಿಗಳಿಗೆ ಸಾಲ ಹಾಗೂ ಸಹಾಯಧನವನ್ನು ನೇರ ನಗದು ವರ್ಗಾವಣೆ ಮೂಲಕ ಬಿಡುಗಡೆ ಮಾಡಲಾಗುವುದು.

ಇದನ್ನೂ ಓದಿ ರೈತರಿಗೆ ಗುಡ್ ನ್ಯೂಸ್ ಜಮೀನಿನ ಟಿಪ್ಪಣಿ ಮೊಬೈಲ್ ನಲ್ಲೇ ಪಡಯಲು ಇಲ್ಲಿ ಕ್ಲಿಕ್ ಮಾಡಿ

Leave a Comment