PM KUSUM Scheme ಯಡಿ ಸೋಲಾರ್ Pumpsetಗೆ ಸಬ್ಸಿಡಿ ಪಡೆಯಿರಿ

Written by By: janajagran

Updated on:

ಪ್ರತಿಯೊಬ್ಬ ರೈತರು ಸ್ವಾವಲಂಬಿಯಾಗಿ ಜೀವನ ಸಾಗಿಸಲು ತಮ್ಮ ಹೊಲದಲ್ಲಿಯೇ ಸೋಲಾರ್ ಪಂಪ್ ಸೆಟ್ ಗಳನ್ನು ಅಳವಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಪಿಎಂ ಕುಸುಮ ಯೋಜನೆಯನ್ನು (pm kusum scheme) ಜಾರಿಗೆ ತರಲಾಗಿದೆ. ಈ ಯೋಜನೆಯನ್ನು 2014-15ನೇ ಸಾಲಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಜಾರಿಗೆ ತರಲಾಗಿದೆ.

ರೈತರು ತಮ್ಮ ಬರಡು ಭೂಮಿಯಲ್ಲಿಯೂ ಸಹ ಸೌರ್ ವಿದ್ಯುತ್ ಘಟಕ ನಿರ್ಮಿಸಲು ಪಿಎಂ ಕುಸುಮ ಯೋಜನೆ (PM Kusum Scheme) ಯಡಿ ಸರ್ಕಾರ ಸಹಾಯ ಮಾಡಲಿದೆ. ಬರಡು ಭೂಮಿಯಲ್ಲಿಯೂ ರೈತರು ಲಾಭ ಗಳಿಸುವಂತೆ ಮಾಡಲು ಈ ಯೋಜನೆ ರಚಿಸಲಾಗಿದೆ.

ಕುಸುಮ್ ಯೋಜನೆಯಡಿ ರೈತರು, ರೈತರ ಗುಂಪು, ಪಂಚಾಯತ್, ಸಹಕಾರಿ ಸಂಘಗಳು ಸೌರ ಪಂಪ್ ನೆಡಲು ಅರ್ಜಿ ಸಲ್ಲಿಸಬಹುದು. ಈ ಯೋಜನೆಯಲ್ಲಿ ಒಳಗೊಂಡಿರುವ ಒಟ್ಟು ವೆಚ್ಚವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ, ಇದರಲ್ಲಿ ಸರ್ಕಾರವು ರೈತರಿಗೆ ಸಹಾಯ ಮಾಡುತ್ತದೆ. ಸರ್ಕಾರವು ರೈತರಿಗೆ 60% ಸಬ್ಸಿಡಿ ನೀಡಲಿದೆ ಮತ್ತು 30% ವೆಚ್ಚವನ್ನು ಸರ್ಕಾರವು ಸಾಲ ರೂಪದಲ್ಲಿ ನೀಡಲಿದೆ. ರೈತರು ಯೋಜನೆಯ ಒಟ್ಟು ವೆಚ್ಚದ 10% ಮಾತ್ರ ನೀಡಬೇಕಾಗುತ್ತದೆ. ಸೌರ ಫಲಕದಿಂದ ಉತ್ಪತ್ತಿಯಾಗುವ ವಿದ್ಯುತ್ ಅನ್ನು ರೈತರು ಮಾರಾಟ ಮಾಡಬಹುದು.ವಿದ್ಯುತ್ ಮಾರಾಟ ಮಾಡಿದ ನಂತರ ಗಳಿಸಿದ ಹಣವನ್ನು ಹೊಸ ಉದ್ಯಮವನ್ನು ಪ್ರಾರಂಭಿಸಲು ಬಳಸಬಹುದು.

ಕೇಂದ್ರ ಸರ್ಕಾರದ ಪಿಎಂ ಕುಸುಮ್  ಯೋಜನೆಯಡಿ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‍ಸೆಟ್‍ಗಳನ್ನು ಅಳವಡಿಸುವ ಕಾರ್ಯಕ್ರಮವನ್ನು ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ ಸಹಯೋಗದೊಂದಿಗೆ ಕೈಗೊಳ್ಳಲಾಗುತ್ತಿದೆ. ರೈತರ ಕೊಳವೆಬಾವಿಗಳಿಗೆ ಮೊದಲು 5 ಹೆಚ್ ಪಿ ಸಾಮರ್ಥ್ಯದ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್ ಸೆಟ್ ಅಳವಡಿಸಲಾಗುತ್ತಿತ್ತು. ಪ್ರಸ್ತುತ, ರಾಜ್ಯ ಸರ್ಕಾರದ ನಿರ್ದೇಶನದಂತೆ, 7.5 ಹೆಚ್.ಪಿ ಸಾಮರ್ಥ್ಯದ ವರೆಗೆ ಸೌರ ಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್‌ ಗಳನ್ನು ಅಳವಡಿಸಬಹುದು.

PM-KUSUM, Component-B ಅಡಿಯಲ್ಲಿ ಕೇಂದ್ರ ಸಹಾಯಧನ ಶೇ. 30 ರಷ್ಟು, ರಾಜ್ಯ ಸರ್ಕಾರದಿಂದ ಶೇ. 50 ರಷ್ಟು ಹಾಗೂ ಪ.ಜಾ/ಪ.ಪಂ ಫಲಾನುಭವಿಗಳ ವಂತಿಗೆಯಾಗಿ ಶೇ.20 ರಷ್ಟು ಪಾಲು ಹಂಚಿಗೆಯಂತೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ರಾಜ್ಯದ ಪಾಲನ್ನು ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಮೊತ್ತದಿಂದ ಭರಿಸಲಾಗುತ್ತಿದೆ.  ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಸಹಾಯಧನ ಪಡೆದವರು  ಈ ಯೋಜನೆಗೆ ಅರ್ಹರಾಗುವುದಿಲ್ಲ.

ಇದನ್ನೂ ಓದಿ : Dishank app ದಿಂದ ಜಮೀನು ಯಾರ ಹೆಸರಿನಲ್ಲಿದೆ ಚೆಕ್ ಮಾಡಿ

ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವ ಮತ್ತು ಈಗಾಗಲೇ ವಿದ್ಯುತ್ ಸಂಪರ್ಕದಲ್ಲಿರುವ ರೈತರಿಗೂ ಕೃಷಿ ಪಂಪ್‍ಸೆಟ್‍ಗಳನ್ನು ಅಳವಡಿಸಲು ಈ ಯೋಜನೆಯು ಅನ್ವಯಿಸುತ್ತದೆ. ಮೊದಲು ಬಂದವರಿಗೆ ಆದ್ಯತೆಯ ಮೇರೆಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.

ಪ್ರಯೋಜನಗಳು (Benefit):

ಸದರಿ ಯೋಜನೆಯು ರೈತರಿಗೆ ಬಹಳ ಪ್ರಯೋಜನಕಾರಿಯಾಗಿದ್ದು,  ವಿದ್ಯುತ್‌ ಮೇಲೆ ಅವಲಂಬಿತರಾಗದೇ ವರ್ಷದ ಬಹಳ ದಿನಗಳಲ್ಲಿ ಹಗಲು ವೇಳೆ ಸೌರ ಸಕ್ತಿಯ ಬಳಕೆಯಿಂದ ಬೆಳೆಗೆಳಿಗೆ ನೀರಾವರಿ ಕಲ್ಪಿಸಬಹುದು. ಇದಕ್ಕೆ ಸರ್ಕಾರ ಸಬ್ಸಿಡಿ ನೀಡುವುದುರಿಂದ ರೈತರಿಗೆ ಅನುಕೂಲವಾಗಲಿದೆ.

ದಾಖಲಾತಿಗಳು (Documents):

ಭೂ ಮಾಲಿಕತ್ವವುಳ್ಳ ರೈತರ ಹೆಸರು, . ಆಧಾರ್ ಕಾರ್ಡ್ ಸಂಖ್ಯೆ, . ದೂರವಾಣಿ ಸಂಖ್ಯೆ, . ವಾಸಸ್ಥಳ ಮತ್ತು ವಿಳಾಸ, ಗ್ರಾಮ, ತಾಲೂಕು, ಜಿಲ್ಲೆ, ಭೂ ದಾಖಲೆಗಳ ವಿವರಗಳು,, .  ಜಾತಿ ಪ್ರಮಾಣಪತ್ರ ಆರ್.ಡಿ, ರೇಷನ್ ಕಾರ್ಡ್ ಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ  https://kredl.karnataka.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮುಖ್ಯವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ಯೋಜನೆಗಳು ಮೇಲೆ ಕ್ಲಿಕ್ ಮಾಡಬೇಕು. ಸೌರ ಆಫ್ ಗ್ರಿಡ್ ಮೇಲೆ ಕ್ಲಿಕ್ ಮಾಡಬೇಕು.ಸೋರ ನೀರಾವರಿ ಪಂಪ್ ಸೆಟ್ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಎಲ್ಲಾ ಮಾಹಿತಿ ನೀಡಲಾಗುತ್ತದೆ. ಆಗಾಗ ಸರ್ಕಾರದ ನಿಯಮಗಳು ಬದಲಾಗುತ್ತಿರುತ್ತವೆ. ಇಲ್ಲಿ ಎಲ್ಲಾ ಮಾಹಿತಿಯನ್ನೂ ನೀಡಲಾಗಿರುತ್ತದೆ.

ಇನ್ನೂ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ-080 22202100ಗೆ ಸಂಪರ್ಕಿಸಬಹುದು. ಅಥವಾ ನಿಮ್ಮ ಹತ್ತಿರದ ವಿದ್ಯುತ್ ಸರಬರಾಜು ಕಂಪನಿಗಳ ಕಚೇರಿಗಳಲ್ಲಿಯೂ ಮಾಹಿತಿ ಪಡೆಯಬಹುದು.

ಸೂಚನೆ: ಪಿಎಂ ಕುಸುಮ್ ಯೋಜನೆ ಸೇರಿದಂತೆ ಇನ್ನಿತರ ಯಾವುದೇ ಯೋಜನೆಗಳಿಗೆ ಫಲಾನುಭವಿಗಳಿಂದ ಸರ್ಕಾರವು ಆನ್ ಲೈನ್ ಮೂಲಕ ಹಣ ಪಡೆಯುವುದಿಲ್ಲ.

ಮೂಲ: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ

Leave a Comment