Solar subsidy get here : ಮನೆಯ ಮೇಲ್ಛಾವಣಿ ಮೇಲೆ ಸೋಲಾರ್ ಅಳವಡಿಕೆಗೆ ಫಲಾನುಭವಿಗಳಿಗೆ 78 ಸಾವಿರ ರೂಪಾಯಿಯವರೆಗೆ ಸಬ್ಸಿಡಿ ಸಿಗಲಿದೆ.
ಹೌದು, ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ 30 ಸಾವಿರ ರೂಪಾಯಿಯಿಂದ 78 ಸಾವಿರ ರೂಪಾಯಿಯವರೆಗೆ ಸಬ್ಸಿಡಿ ದೊರೆಯಲಿದೆ. ಯಾರು ಅರ್ಜಿ ಸಲ್ಲಿಸಬಹುದು. ಅರ್ಜಿ ಎಲ್ಲಿ ಸಲ್ಲಿಸಬೇಕು. ಸಬ್ಸಿಡಿ ಹೇಗೆ ದೊರೆಯಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ವಿದ್ಯುತ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದೆ. ವಿದ್ಯುತ್ ಬೆಲೆಯಲ್ಲಿ ಉಳಿತಾಯ ಮಾಡಲು ಹಾಗೂ ಹೆಚ್ಚುವರಿ ವಿದ್ಯುತ್ ಎಸ್ಕಾಂಗಳಿಗೆ ಮಾರಾಟ ಮಾಡುವ ಮೂಲಕ ಆದಾಯಗಳಿಸಲು ಸರ್ಕಾರವು ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯನ್ನು ಆರಂಭಿಸಿದೆ. ವಿದ್ಯುತ್ ಉತ್ಪಾದಿಸಿ ಹಣ ಉಳಿಸಿ ಆದಾಯ ಗಳಿಸಿ ಎಂಬ ಉದ್ದೇಶವನ್ನಿಟ್ಟುಕೊಂಡು ಈ ಯೋಜನೆ ಆರಂಭಿಸಲಾಗಿದೆ.
ಗ್ರಾಹಕರು ಗೃಹ ಬಳಕೆಗೆ ಪ್ರತ್ಯೇಕ ಮನೆಗಳಿಗೆ ಸೋಲಾರ್ ಅಳವಡಿಸಬಹುದು. 1 ಕಿ. ವ್ಯಾಟ್ ಗೆ 30 ಸಾವಿರ ರೂಪಾಯಿ, 2 ಕಿ.ವ್ಯಾಟ್ ಗೆ 60 ಸಾವಿರ ರೂಪಾಯಿ ಹಾಗೂ 3 ಕಿ.ವ್ಯಾಟ್ ಗೆ 78 ಸಾವಿರ ರೂಪಾಯಿ ಸಬ್ಸಿಡಿ ದೊರೆಯಲಿದೆ. ಫಲಾನುಭವಿಗಳಿಗೆ ಸಾಲ ಸೌಲಭ್ಯವೂ ಸಿಗಲಿದೆ. ಹೌದು, ಕನಿಷ್ಠ ಶೇ.6.7 ರಿಂದ 7.5 ರೂಪಾಯಿ ಬಡ್ಡಿ ದರದಲ್ಲಿ ಬ್ಯಾಂಕ್ ನಲ್ಲಿ ಸಾಲ ಸೌಲಭ್ಯವೂ ಸಿಗಲಿದೆ.
Solar subsidy get here 2026-27ರ ವರ್ಷದಲ್ಲಿ ಕೋಟಿ ಮನೆಗಳಿಗೆ ವಿದ್ಯುತ್
ಸರ್ಕಾರದ ಈ ಯೋಜನೆಗೆ 75 ಸಾವಿರ ಕೋಟಿಗೂ ಹೆಚ್ಚು ಮೊತ್ತವನ್ನು ಮೀಸಲಿಡಲಾಗಿದ್ದು, 2026-27 ರ ವೇಳೆಗೆ ದೇಶದ 1 ಕೋಟಿ ಮನೆಗಳಿಗೆ ಸೌರ ವಿದ್ಯುತ್ ಒದಗಿಸುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ : ನಿಮ್ಮ ಜಮೀನನ ಖಾತಾ ನಿಮ್ಮ ಬಳಿಯಿರುವ ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ
ಈ ಯೋಜನೆಯ ಪ್ರಮುಖ ಆಕರ್ಷಣೆ ಎಂದರೆ, ಒಂದು ಮನೆ ಸೂಕ್ತ ಸಾಮರ್ಥ್ಯದ ಸೌರ ವ್ಯವಸ್ಥೆ ಅಳವಡಿಸಿದರೆ ಪ್ರತಿ ತಿಂಗಳು 300 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯಬಹುದು. ಇದರಿಂದ ಬಹುತೇಕ ಮನೆಗಳಿಗೆ ವಿದ್ಯುತ್ ಬಿಲ್ ಶೂನ್ಯವಾಗುವ ಸಾಧ್ಯತೆ ಇದೆ. ಇದರ ಜೊತೆಗೆ, ಅಗತ್ಯಕ್ಕಿಂತ ಹೆಚ್ಚಾಗಿ ಉತ್ಪಾದನೆಯಾಗುವ ವಿದ್ಯುತ್ ಅನ್ನು ವಿದ್ಯುತ್ ಗ್ರಿಡ್ ಗೆ ಕಳುಹಿಸಬಹುದು. ಇದರಿಂದ ಗ್ರಾಹಕರು ಹೆಚ್ಚುವರಿ ಆದಾಯವನ್ನು ಕೂಡ ಗಳಿಸಬಹುದು.
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ?
ಯೋಜನೆಯ ಸೌಲಭ್ಯ ಪಡೆಯಲು ಅರ್ಜಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್ಲೈನ್ ನಲ್ಲಿ ಮಾಡಲಾಗಿದೆ. ಅರ್ಜಿದಾರರು
https://pmsuryaghar.gov.in/#/
ವೆಬ್ಸೈಟ್ ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬೇಕು. ನಂತರ ತಮ್ಮ ವಿದ್ಯುತ್ ಗ್ರಾಹಕ ಸಂಖ್ಯೆಯನ್ನು ನಮೂದಿಸಿ ಅರ್ಜಿ ಸಲ್ಲಿಸಬಹುದು. ಜೆಸ್ಕಾಂನಿಂದ ತಾಂತ್ರಿಕ ಅನುಮೋದನೆ ದೊರೆತ ಬಳಿಕ, ನೋಂದಾಯಿತ ವಿಕ್ರೇತರಿಂದ ಸೌರ ಫಲಕಗಳನ್ನು ಅಳವಡಿಸಲಾಗುತ್ತದೆ. ಅಳವಡಿಕೆ ಮತ್ತು ತಪಾಸಣೆ ಮುಗಿದ ನಂತರ ನೆಟ್ ಮೀಟರ್ ಅಳವಡಿಸಲಾಗುತ್ತದೆ. ಬಳಿಕೆ ಸಬ್ಸಿಡಿ ಮೊತ್ತವನ್ನ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಒಟ್ಟಿನಲ್ಲಿ ಈ ಯೋಜನೆ 2026ರ ವೇಳೆಗೆ ಮನೆ ಮಂದಿಯ ವಿದ್ಯುತ್ ಬಿಲ್ ಗಳಿಗೆ ಪೂರ್ಣ ವಿರಾಮ ನೀಡುವ ಸಾಮರ್ಥ್ಯ ಹೊಂದಿದ್ದು, ಸಾಮಾನ್ಯ ಜನರಿಗೆ ಆರ್ಥಿಕ ನೆಮ್ಮದಿ ಹೊಸ ದಾರಿ ತೆರೆದಿದೆ.
ಏನಿದು ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ?
ವಿದ್ಯುತ್ ಸಮಸ್ಯೆಯನ್ನು ಶಾಶ್ವತ ಪರಿಹಾರವಾಗಿ ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೆ ತಂದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆಬ್ರವರಿ 2024 ರಲ್ಲಿ ಆರಂಭಿಸಿದ ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ದೇಶದ ಮನೆಗಳನ್ನು ಸೌರಶಕ್ತಿಯ ಮೂಲಕ ಸ್ವಾವಲಂಬಿಗಳನ್ನಾಗಿಸುವ ಗುರಿ ಹೊಂದಿದೆ. ಈ ಯೋಜನೆಯಡಿ ಮನೆಗಳ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸಿ, ಜನರು ತಾವೇ ವಿದ್ಯುತ್ ಉತ್ಪಾದಿಸುವ ಅವಕಾಶವನ್ನು ಸರ್ಕಾರ ನೀಡುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ಎಸ್ಕಾಂ ಕಚೇರಿಗೆ ಭೇಟಿ ನೀಡಿ. ಸೋಲಾರ್ ಸಹಾಯವಾಣಿ ನಂಬರ್ 08022340816 ಅಥವಾ 08022340817 ಗೆ ಕರೆ ಮಾಡಬಹುದು.





