Tantibeli subsidy get here : 2026-27 ನೇ ಸಾಲಿನ ಕೃಷಿ ಭಾಗ್ಯ ಯೋಜನೆಯನ್ನು ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಸರ್ಕಾರವು ಆದೇಶ ಹೊರಡಿಸಿದ್ದು, ತಾಲೂಕಿನ ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
Tantibeli subsidy get here ಏನೇನು ನಿರ್ಮಾಣಕ್ಕೆ ಸಬ್ಸಿಡಿ ಸಿಗಲಿದೆ ?
ಕೃಷಿ ಭಾಗ್ಯ ಯೋಜನೆಯ ಎಲ್ಲಾ ಘಟಕಗಳನ್ನು ಕ್ಷೇತ್ರಬದು, ಕೃಷಿ ಹೊಂಡ, ಕೃಷಿ ಹೊಂಡದ ಸುತ್ತ ತಂತಿಬೇಲಿ, ಪಾಲಿಥಿನ್ ಹೊದಿಕೆ, ಪೆಟ್ರೋಲ್ ಪಂಪ್ ಸೆಟ್ ಹಾಗೂ ಸೂಕ್ಷ್ಮ ನೀರಾವರಿ ಘಟಕಗಳನ್ನು ರೈತರು ಅನುಷ್ಠಾನ ಮಾಡಿಕೊಳ್ಳಬಹುದು.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ರೈತರು ಅರ್ಜಿ ಸಲ್ಲಿಸಬಹುದು.
ಯಾವ ರೈತರು ಅರ್ಜಿ ಸಲ್ಲಿಸಲು ಅರ್ಹರು ?
ಕ್ಷೇತ್ರಬದು, ಕೃಷಿ ಹೊಂಡ, ಕೃಷಿ ಹೊಂಡದ ಸುತ್ತ ತಂತಿಬೇಲಿ, ಎಚ್ಚರಿಕೆ ಫಲಕ ಅನುಷ್ಠಾನಗೊಳಿಸುವುದು ಕಡ್ಡಾಯ. ಎಲ್ಲಾ ಘಟಕಗಳನ್ನು ಅಳವಡಿಸಿಕೊಳ್ಳುವ ರೈತರು ಹಾಗೂ ಒಟ್ಟು ಸಾಗುವಳಿ ಕ್ಷೇತ್ರ ಕನಿಷ್ಠ 20 ಗುಂಟೆ ಮೇಲಿರುವ ರೈತರು ಮಾತ್ರ ಕೃಷಿ ಭಾಗ್ಯ ಯೋಜನೆಗೆ ಅರ್ಹರು. ಈ ಹಿಂದೆ ಕೃಷಿ ಇಲಾಖೆ ಮತ್ತು ಇತರ ಇಲಾಖೆಗಳ ಯೋಜನೆಯಲ್ಲಿ ಕೃಷಿ ಹೊಂಡ, ಕ್ಷೇತ್ರ ಬದು ಮತ್ತು ಇತರ ಘಟಕಗಳನ್ನು ಅಳವಡಿಸಿಕೊಂಡಿದ್ದಲ್ಲಿ ಅಂತಹ ರೈತರು ಈ ಯೋಜನೆಯಡಿ ಅರ್ಹರಲ್ಲ.
ಇದನ್ನೂ ಓದಿ : Ayushman Arogya Cardದಿಂದ 5 ಲಕ್ಷವರೆಗೆ ಉಚಿತ ಚಿಕಿತ್ಸೆ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
ನಿಗದಿತ ಗುರುಗಿಂತ ಹೆಚ್ಚಿನ ಅರ್ಜಿಗಳು ಬಂದಲ್ಲಿ ಲಾಟರಿ, ಮುಖಾಂತರ ಆಯ್ಕೆ ಮಾಡಲಾಗುವುದು. ಆಸಕ್ತಿಯುಳ್ಳ ರೈತರು ತಮಗೆ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಲು ಸೂಚಿಸಿದೆ ಮತ್ತು ಹೆಚ್ಚಿನ ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಸಹಾಯಕ ಕೃಷಿ ನಿರ್ದೇಶಕ ಟಿ.ಸಿ. ವೆಂಕಟೇಶಮೂರ್ತಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.





