Free saree distribution scheme: ಈ ಮಹಿಳೆಯರಿಗೆ ಉಚಿತವಾಗಿ ವರ್ಷಕ್ಕೆ 2 ಸೀರೆ ವಿತರಣೆ ನಾಳೆ ಬಜೆಟ್ ನಲ್ಲಿ ಘೋಷಣೆ ಸಾಧ್ಯತೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ಗೃಹಲಕ್ಷ್ಮೀ ಫಲಾನುಭವಿಗಳಿಗೆ 2 ಸಾವಿರ ರೂಪಾಯಿ ಮಾಸಿಕ ಸಹಾಯದೊಂದಿಗೆ ವರ್ಷಕ್ಕೆ 2 ಸೀರೆ ವಿತರಣೆ ಮಾಡುವ ಯೋಜನೆಯನ್ನು ನಾಳೆ ಮಂಡನೆಯಾಗುವ ಬಜೆಟ್ ನಲ್ಲಿ ಘೋಷಣೆಯಾಗುವ ಸಾಧ್ಯತೆಯಿದೆ
ಹೌದು, ತಮಗೆಲ್ಲಾ ಗೊತ್ತಿದ್ದ ಹಾಗ ನಾಳೆ ರಾಜ್ಯ ಸರ್ಕಾರವು ಬಜೆಟ್ ಮಂಡಿಸಲಿದೆ.
Free saree distribution scheme ಉಚಿತವಾಗಿ ಸೀರೆ ವಿತರಿಸುವ ಯೋಜನೆ
ಅನ್ನಭಾಗ್ಯ ಫಲಾನುಭವಿಗಳಿಗೆ ಪೌಷ್ಠಿಕ ಆಹಾರ ನೀಡವ ಉದ್ದೇಶದೊಂದಿಗೆ ಇಂದಿಹಾ ಆಹಾರ ಕಿಟ್ ಯೋಜನೆ, ಗೃಹಲಕ್ಷ್ಮೀ ಫಲಾನುಭವಿಗಳಿಗೆ ಸಹಾಯಧನದ ಜೊತೆಗೆ ಸೀರೆ ವಿತರಣೆ, ವಸತಿ ಹಂಚಿಕೆ ಗೊಂದಲ ನಿವಾರಿಸಲು ನೂತನ ಯೋಜನೆ ಆರಂಭಿಸುವ ಸಾಧ್ಯತೆಯಿದೆ. ಗ್ಯಾರೆಂಟಿ ಯೋಜನೆಗಳಿಗೆ ಸಂಪೂರ್ಣ ಹಣ ಒದಗಿಸುತ್ತಲೇ ಇನ್ನಷ್ಟು ಜನರಿಗೆ ನೇರ ಲಾಭ ತಂದುಕೊಂಡುವ ಇಂದಿರಾ ಕಿಟ್ ಸೇರಿತ ಹಲವು ಯೋಜನೆಗಳನ್ನು ನಾಳೆ ಮಂಡಿಸಲಿಲುವ ಆಯವ್ಯಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 100 ಕ್ಕೆ 100 ಅಂಕಪಡೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು
ಈವರೆಗೆ ಗ್ಯಾರೆಂಟಿ ಯೋಜನೆಗಳತ್ತಲೇ ಹೆಚ್ಚಿನ ಗಮನಹರಿಸಲಾಗಿದ್ದ ಬಜೆಟ್ ನಲ್ಲಿ ಈ ಬಾರಿ ಹಲವು ಹೊಸ ಯೋಜನೆಗಳ ಘೋಷಣೆಗೆ ಆರ್ಥಿಕ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ದತೆ ನಡೆಸಿದ್ದಾರೆ.
ಶುಕ್ರವಾರ ಮಂಡನೆಯಾಗಲಿರುವ 2026-27ನೇ ಸಾಲಿ ನ ರಾಜ್ಯ ಬಜೆಟ್ ನಲ್ಲಿ ಜನಪರ ಯೋಜನೆಗಳ ಘೋಷಣೆ ಮಾಡಲಾಗುತ್ತಿದೆ. ಪ್ರಮುಖವಾಗಿ ಅನ್ನಭಾಗ್ಯ ಯೋಜನೆ ಡಿ ಅಕ್ಕಿ ಜತೆಗೆ ಇಂದಿರಾ ಆಹಾರ ಕಿಟ್ ನೀಡಲು ಆನುದಾನ ಮೀಸಲಿಡಲಾಗುತ್ತಿದೆ.
ಸದ್ಯ ಅನ್ನಭಾಗ್ಯ ಯೋಜನೆ ಅಡಿ ಪ್ರತಿ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ನೀಡಲಾಗುತ್ತಿದೆ. ಅದರ ಬದಲು 5 ಕೆಜಿ ಅಕ್ಕಿ ನೀಡಿ ಉಳಿದ 5 ಕೆಜಿ ಅಕ್ಕಿ ಬದಲಿದಗೆ ತಲಾ 1 ಕೆಜಿ ತೊಗರಿ ಬೇಳೆ, ಹೆಸರು ಕಾಳು, ಸಕ್ಕರೆ, ಉಪ್ಪು, 1 ಲೀಟರ್ ಅಡುಗೆ ಎಣ್ಣೆಯನ್ನೊಳಗೊಂಡ ಇಂದಿರಾ ಆಹಾರ ಕಿಟ್ ನೀಡುವ ಘೋಷಣೆ ಮಾಡಲಾಗುತ್ತಿದೆ. ಅದಕ್ಕೆ ಅಗತ್ಯವಿರುವ ಸೂಕ್ತ ಅನುದಾನ ಬಜೆಟ್ ನಲ್ಲಿ ಮೀಸಲಿಡಲಾಗುತ್ತಿದೆ.
ಉಚಿತವಾಗಿ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ
ಗ್ರಾಮೀಣ ಭಾಗದ ಕುಶಲ ಕರ್ಮಿಕಗಳಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ನೀಡಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಉಪ ನಿರ್ದೇಶಕರು, ಕೈಗಾರಿಕಾ ವಿಭಾಗ ಜಿಲ್ಲಾ ಪಂಚಾಯತ್, ಧಾರವಾ ಇವರು ಸುಧಾರಿತ ಉಫಕರಣ ಯೋಜನೆಯಡಿ ಗ್ರಾಮೀಣ ಭಾಗದ ಕುಶಲಕರ್ಮಿಗಳಿಗೆ ಸುಧಾರಿತ ಉಪಕರಣಗಳ್ನು ನೀಡಲು ಫಲಾನುಭವಿಗಳಿಂದ ಆನ್ಲೈನ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅದರ ಪ್ರಯುಕ್ತ ವಿದ್ಯುತ್ ಚಾಲನತ ಹೊಲಿಗೆ ಯಂತ್ರಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (ಮಹಿಳಾ ಫಲಾನುಭವಿಗಳು) 18 ರಿಂದ 38 ವರ್ಷ ಒಳಗಡೆ ಇರುವ ಪಲಾನುಭವಿಗಳು ಹಾಗೂ ಕಮ್ಮಾರಿಕೆ, (ಪುರುಷರು), ಕ್ಷೌರಿಕ (ಪುರುಷರು) ಮತ್ತು ಧೋಬಿ (ಪುರುಷ ಮಹಿಳೆಯರು) ಸುಧಾರಿತ ಉಪಕರಣಗಳ ಚಟವಟಿಕೆಗೆ ಕ್ರಿಯಾ ಯೋಜನೆಯ ಗುರಿಗನುಗುಣವಾಗಿ ಅರ್ಜಿಗಳನ್ನು ಸ್ವೀಕೃತವಾಗದೆ ಇರುವುದರಿಂದ ಅವಧಿ ವಿಸ್ತರಿಸಿ ಅರ್ಜಿಗಳನ್ನು ಈ ಮೇಲೆ ತಿಳಿಸಿದಂತೆ ಆಹ್ವಾನಿಸಲಾಗಿದೆ.
ಆದುದ್ದರಿಂದ ಸದರಿ ಸುಧಾರಿತ ಉಪಕರಣಗಳನ್ನು ಪಡೆಯಲು https://dharwad.nic.in/
ವೆಬ್ಸೈಟ್ ನಲ್ಲಿ ಮಾರ್ಚ್ 15 ರೊಳಗಾಗಿ ಆನ್ಲೈನಲ್ಲಿ ಧಾರವಾಡ ಜಿಲ್ಲೆಯ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಗ್ರಾಮೀಣ ಭಾಗದ ಕುಶಲಕರ್ಮಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಫಲಾನುಭವಿಗಳು 18 ವರ್ಷ ಮೇಲ್ಪಟ್ಟಿರಬೇಕು.
ಆದ್ದರಿಂದ ಮೇಲೆ ವಿವರಿಸಿದಂತೆ 15-03-2026 ರವರೆಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಿಸಲು ಈ ಮೂಲಕ ಕೋರಲಾಗಿದೆ. ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
ಜನ್ಮ ದಿನಾಂಕ ನಮೂದಿಸಿರುವ ದಾಖಲೆ (ವರ್ಗಾವಣೆ ಪ್ರಮಾಣ ಪತ್ರ) ಎಸ್.ಎಸ್.ಎಲ್.ಸಿ ಅಂಕಪಟ್ಟಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇರಬೇಕು. ಶೈಕ್ಷಣಿಕ ಅರ್ಹತೆ (ವರ್ಗಾವಣೆ ಪ್ರಮಾಣ ಪತ್ರ ಇರಬೇಕು.
ಜಾತಿ ಪ್ರಮಾಣ ಪತ್ರ ನೀಡಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಅಲ್ಪ ಸಂಖ್ಯಾತರಿಗೆ ಮಾತ್ರ. ಪಡಿತರ ಚೀಟಿ ಹಾಗೂ ಮತದಾರರ ಗುರುತಿನ ಚೀಟಿ , ಆಯಾ ಗ್ರಾಮ ಪಂಚಾಯತಿಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಂದ ಹೊಲಿಗೆ (ಟೈಲರಿಂಗ್) ವೃತ್ತಿ ಮಾಡುತ್ತಿರುವ ದೃಢೀಕರಣ ಪ್ರಮಾಣ ಪತ್ರ ನೀಡಬೇಕು. ಸರ್ಕಾರಿ ನೌಕರರು ಅಥವಾ ಅವರ ಅವಲಂಬಿತರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ?
ಅರ್ಜಿ ಸಲ್ಲಿಸುತ್ತಿರುವ ಜಿಲ್ಲೆಯ ಹೆಸರು ಧಾರವಾಡ ಆಯ್ಕೆ ಮಾಡಿಕೊಳ್ಳಬೇಕು. ತಾಲೂಕು ಆಯ್ಕೆ ಮಾಡಿಕೊಳ್ಳಬೇಕು ಅರ್ಜಿದಾರರ ಹೆಸರು ಬರೆಯಬೇಕು. ತಂದೆಯ ತಾಯಿಯ ಅಥವಾ ಗಂಡನ ಹೆಸರು ನಮೂದಿಸಬೇಕು. ಲಿಂಗ ಆಯ್ಕೆ ಮಾಡಿಕೊಳ್ಳಬೇಕು. ಜಾತಿ ಪ್ರವರ್ಗ ಆಯ್ಕೆ ಮಾಡಿಕೊಳ್ಳಬೇಕು. ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ, ಇ ಮೇಲ್ ವಿಳಾಸ, ರಾಜ್ಯದ ಹೆಸರು, ವಿಳಾಸ ಪಿನ್ ಕೋಡ್ ಶೈಕ್ಷಣಿಕ ಅರ್ಹತೆ ವಿದ್ಯಾರ್ಹತೆ, ಪ್ರಮಾಣ ಪತ್ರಗಳು ಆಯ್ಕೆ ಮಾಡಿಕೊಳ್ಳಬೇಕು.
ಘೋಷಣೆ ಯಲ್ಲಿ I Agree ಆಯ್ಕೆ ಮಾಡಿಕೊಳ್ಳಬೇಕು.ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ನಮೂದಿಸಬೇಕು. ನಂತರ Submit ಮೇಲೆ ಕ್ಲಿಕ್ ಮಾಡಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.





