ನಿಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಇದ್ದರೆ ಮಾತ್ರ ನಿಮಗೆ ಪಿಎಂ ಕಿಸಾನ್ ಹಣ ಜಮೆ

Written by Ramlinganna

Published on:

Fruits id Mandatory for pmkisan :  ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಹಣ ನಿಮ್ಮ ಖಾತೆಗೆ ಜಮೆಯಾಗಬೇಕಾದರ ಫ್ರೂಟ್ಸ್ ಐಡಿ ಕಡ್ಡಾಯಗೊಳಿಸಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಡುವ ವಿವಿಧ ಕೃ ಷಿ ಸಬ್ಸಿಡಿ, ಬೆಳೆ ಹಾನಿ ಪರಿಹಾರ, ಬೆಳೆವಿಮೆ ಹಣ, ಪಿಎಂ ಕಿಸಾನ್ ಹಣ ಹಾಗೂ ವಿವಿಧ ಸಲಭ್ಯಗಳು ಪಡೆಯಬೇಕಾದರೆ ರೈತರು ತಮ್ಮ ಫಾರ್ಮರ್ ಐಡಿ (ಎಫ್ಐಡಿ) ಇರುವುದು ಕಡ್ಡಾಯವಾಗಿದೆ. ಹೌದು, ಒಂದು ವೇಳೆ ನಿಮ್ಮ ಹತ್ತಿರ ಎಫ್ಐಡಿ ನಂಬರ್ ಇಲ್ಲದಿದ್ದರೆ ನಿಮಗೆ ಸರ್ಕಾರದ ಸೌಲಭ್ಯಗಳು ಸಿಗವುವುದಿಲ್ಲ. ಹಾಗಾದರೆ ಎಫ್ಐಡಿ ಎಲ್ಲಿ ಮಾಡಿಸಬೇಕು ಅದಕ್ಕೆ ಬೇಕಾಗುವ ದಾಖಲಾತಿಗಳು ಯಾವುವು ಎಂಬುದರ ಮಾಹಿತಿ ಇಲ್ಲಿದೆ.

ಪಿಎಂ ಕಿಸಾನ್ ಯೋಜನೆಗೆ ನೋದಣಿ ಮಾಡಿಸಿದ ರೈತರು ಇನ್ನೂ ಮುಂದೆ ಫ್ರೂಟ್ಸ್ ಐಡಿ ಹೊಂದಿರುವುದು ಕಡ್ಡಾಯವಾಗಿದೆ. ಇದರೊಂದಿಗೆ ಎಲ್ಲಾ ಸರ್ವೆ ನಂಬರ್ ಗಳನ್ನು ಫ್ರೂಟ್ಸ್ ಐಡಿಗೆ ಲಿಂಕ್ ಮಾಡಿಸಬೇಕು. ಫ್ರೂಟ್ಸ್ ಐಡಿಗೆ ಎಲ್ಲಿ ನೋಂದಣಿ ಮಾಡಿಸಬೇಕು ಫ್ರೂಟ್ಸ್ ಐಡಿ ಇದೆಯೋ ಇಲ್ಲವೋ ಎಂಬುದನ್ನು ಸಹ ಮೊಬೈಲ್ ನಲ್ಲಿ ಚೆಕ್ ಮಾಡಬಹುದು. ರೈತರು ತಮ್ಮ ಜಮೀನಿನ ವಿವರ, ಮೊಬೈಲ್ ನಂಬರ್, ಇಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ. ಸರ್ಕಾರದ ಸೌಲಭ್ಯ ಪಡೆಯಲು ರೈತರು ಈ ಕೆಲಗಿನ ಕೆಲಸವನ್ನು ಪೂರ್ಣಗೊಳಿಸಿರಬೇಕು.

ನಿಮ್ಮ ಆಧಾರ್ ಕಾರ್ಡ್ ನಂಬರಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಎಫ್ಐಡಿಗೆ ಜೋಡಿಸಬೇಕು.

ಆಧಾರ್ ಆಧಾರಿತ ಎಲೆಕ್ಟ್ರಾನಿಕ್  ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ನಿಮ್ಮ ಹೆಸರಿನಲ್ಲಿರುವ ಸರ್ವೆ ನಂಬರ್ ಹಾಗೂ ವಿಸ್ತೀರ್ಣದ ವಿವರಗಳ್ನು ಸ್ವಯಂ ಘೋ ಷಣೆ ಮಾಡಬೇಕಾಗುತ್ತದೆ.

ಮೊಬೈಲ್ ನಲ್ಲಿ ಫ್ರೂಟ್ಸ್ ಐಡಿ ನೋಂದಣಿ ಮಾಡುವುದು ಹೇಗೆ ?

ಮೊಬೈಲ್ ನಲ್ಲಿ  ಫ್ರೂಟ್ಸ್ ಐಡಿಗೆ ನೋಂದಣಿ ಮಾಡಿಸಲು ಈ

https://fruits.karnataka.gov.in/OnlineUserLogin.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಫ್ರೂಟ್ಸ್ ಪೇಜ್ ಓಪನ್ ಆಗುತ್ತದೆ.  ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಬೇಕು. ನಂತರ ನೀವು ಪಾಸ್ವರ್ಡ್ ಕ್ರಿಯೇಟ್ ಮಾಡಬೇಕು. ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ನಂತರ ಲಾಗನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಕೇಳಲಾದ ಮಾಹಿತಿಗಳನ್ನ ಒಂದೊಂದನ್ನಾಗಿ ಭರ್ತಿ ಮಾಡಿ ಆನ್ಲೈನ್ ನಲ್ಲಿ ಫ್ರೂಟ್ಸ್ ಐಡಿಗೆ ನೋಂದಣಿ ಮಾಡಬಹುದು.

Fruits id Mandatory for pmkisan ಎಫ್ಐಡಿ ಇದ್ದರೆ ರೈತರಿಗೆ ಏನೇನು ಸೌಲಭ್ಯ ಸಿಗುತ್ತದೆ ?

ಎಫ್ಐಡಿ ಇದ್ದರೆ  ಪ್ರಕೃತಿ ವಿಕೋಪದಿಂದಾಗಿ ಅಂದರೆ ಅತೀ ಮಳೆಯಿಂದಾಗಿ ರೈತರ ಬೆಳೆ ಹಾನಿಯಾದರೆ ಬೆಳೆ ಹಾನಿ ಪರಿಹಾರ ಸಿಗುತ್ತದೆ.  ಬೆಳೆ ವಿಮೆ ಮಾಡಿಸಿದ ನಂತರ ಒಂದು ವೇಳೆ ಎಫ್ಐಡಿ ಇಲ್ಲಿದ್ದರೆ ಬೆಳೆ ವಿಮೆಯಿಂದ ವಂಚಿತರಾಗಲಿದ್ದಾರೆ. ಹಾಗಾಗಿ ಎಫ್ಐಡಿ ಇದ್ದರೆ ಮಾತ್ರ ಬೆಳೆ ವಿಮೆ ಹಣ ಸಿಗುತ್ತದೆ.

ಇದನ್ನೂ ಓದಿ SSLC ಮಾದರಿ ಉತ್ತರ ಪತ್ರಿಕೆ ಬಿಡುಗಡೆ ಮೊಬೈಲ್ ನಲ್ಲಿ ಹೀಗೆ ಡೌನ್ಲೋಡ್ ಮಾಡಿ

ಬಿತ್ತನೆಯಿಂದ ಹಿಡಿದು ಬೆಳೆ ಕಟಾವುವವರಿಗೆ ಕೃ ಷಿ ಯಂತ್ರೋಪಕರಣಗಳು ಸಬ್ಸಿಡಿಯಲ್ಲಿ ಸಿಗುತ್ತದೆ.

ರೈತರು ಎಫ್ಐಡಿ ಅಪ್ಡೇಟ್ ಮಾಡುವುದು ಹೇಗೆ ?

ರೈತರು ಎಫ್ಐಡಿ ಅಪಡೇಟ್ ಮಾಡಲು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬೇಕು. ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು. ಏಕೆಂದರೆ ಅಪ್ಡೇಟ್ ಮಾಡುವಾಗ ಓಟಿಪಿ ಬರುತ್ತದೆ. ಆ ಓಟಿಪಿ ಆಧಾರದ ಮೇಲೆ ರೈತರು ಎಫ್ಐಡಿ ಅಪ್ಡೇಟ್ ಮಾಡಬಹುದು.

Leave a Comment