PMSYM scheme pension : ಕೇಂದ್ರ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರಿಗೆ ವಯೋವೃದ್ಧ ವೇಳೆಯಲ್ಲಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣಕ್ಕಾಗಿ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ –ಧನ್ (ಪಿ.ಎಮ್.ಎಸ್.ವೈ.ಎಂ) ಎಂಬ ವಂತಿಗೆ ಆಧಾರಿತ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ 18 ರಿಂದ 40 ವರ್ಷದೊಳಗಿನ ಅಸಂಘಟಿತ ಕಾರ್ಮಿಕರು ನೋಂದಾಯಿಸಿಕೊಂಡು ಇದರ ಪ್ರಯೋಜನ ಪಡೆಯಬೇಕೆಂದು ಕಲಬುರಗಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಾದ ಮಹ್ಮದ್ ಬಶೀರ್ ಅನ್ಸಾರಿ ಅವರು ತಿಳಿಸಿದ್ದಾರೆ.
ವಯಸ್ಸಿಗೆ ಅನುಗುಣವಾಗಿ ಮಾಸಿಕವಾಗಿ 55 ರೂಪಾಯಿ ನಿಂದ 200 ರೂಪಾಯಿಯವರೆಗೆ ವಂತಿಕೆ ಪಾವತಿ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರದ ವತಿಯಿಂದ ಅಷ್ಟೇ ವಂತಿಕೆ ಪಾವತಿಸಿ ಬ್ಯಾಂಕ್ ಖಾತೆಯಲ್ಲಿ ಸದರಿ ಮೊತ್ತವನ್ನು ಸಂಗ್ರಹಿಸಲಾಗುತ್ತದೆ. ನೋಂದಣಿಯಾದ ಫಲಾನುಭವಿಯು ವಯಸ್ಸು 60 ಪೂರ್ಣಗೊಂಡ ನಂತರ ತಿಂಗಳಿಗೆ 3 ಸಾವಿರ ರೂಪಾಯಿ ಖಚಿತ ಮಾಸಿಕ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.
ಈ ಯೋಜನೆಯಡಿ ನರೇಗಾ ಕಾರ್ಮಿಕರು, ಎಸ್.ಎಚ್.ಜಿ ಸದಸ್ಯರು, ಕೃಷಿ ಕಾರ್ಮಿಕರು, ಅಂಗನವಾಡಿ ಕಾರ್ಮಿಕರು, ಮಧ್ಯಾಹ್ನದ ಬಿಸಿ ಊಟದ ಕಾರ್ಮಿಕರು, ಆಶಾ ಬೀದಿ ಬದಿ ವ್ಯಾಪಾರಿಗಳು, ಗೃಹ ಕಾರ್ಮಿಕರು, ಹಮಾಲರು, ಟೈಲರ್ ಗಳು, ಗೃಹ ಕಾರ್ಮಿಕರು, ಅಗಸರು, ಚಿಂದಿ ಆಯುವವರು, ಅಕ್ಕ ಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಭಟ್ಟಿ ಕಾರ್ಮಿಕರು, ಸಿನಿ ಕಾರ್ಮಿಕರು, ನೇಕಾರರು, ಬೀದಿ ವ್ಯಾಪಾರಿಗಳು, ಹೊಟೇಲ್ ಕಾರ್ಮಿಕರು, ಚಪ್ಪಲಿ ತಯಾರಿಕೆ ಮತ್ತು ರಿಪೇರಿ ಮಾಡುವ ಕಾರ್ಮಿಕರು, ಕೇಬಲ್ ಕಾರ್ಮಿಕರು, ಹಾಸಿಗೆ ಮತ್ತು ದಿಂಬು ತಯಾರಿಕಾ ಕಾರ್ಮಿಕರು, ಮರದ ಕೆತ್ತನೆ ಕೆಲಸ, ಉಣ್ಣೆ ಮತ್ತು ಕಂಬಳಿ ನೇಯ್ದೆ ಹಾಗೂ ಕಂಬಳಿ ತಯಾರಿಕೆ, ವಾಲಗ ಊದುವುದು, ದನಗಾಹಿ ವೃತ್ತಿ, ಹೈನುಗಾರಿಕೆ, ಬಳೆ ವ್ಯಾಪಾರ ತಯಾರಿಕೆ, ಸ್ಮಶಾನ ಕಾರ್ಮಿಕರು, ವಿಗ್ರಹ ಕೆತ್ತನೆ ಕೆಲಸ, ಮೀನುಗಾರಿಕೆ ಕಚು ಕೆಲಸ, ನಾರಿಯಿಂದ ವಿವಿಧ ಉತ್ಪನ್ನ ತಯಾರಿಕೆ, ಬೆತ್ತದ ಕೆಲಸ, ಕೆತ್ತನೆ ಕೆಲಸ ಚರ್ಮದ ವಸ್ತುಗಳ ತಯಾರಿಕೆ, ಅಗರಬತ್ತಿ ತಯಾರಿಕೆ, ಕಾಯರ್ ಫೈಬರ್ ತಯಾರಿಕೆ, ನಾಟಿ ಔಷಧಿ ತಯಾರಿಕೆ, ಬಣ್ಣ ಶೃಂಗಾರ (ಬ್ಯೂಟಿ ಪಾರ್ಲರ್) ಮಾಡುವ ವೃತ್ತಿ, ಬೈಸಿಕಲ್ ರಿಪೇರಿ, ಬಣ್ಣಗಾರಿಕೆ, ಮುದ್ರಣಗಾರಿಕೆ ಮತ್ತು ಹಚ್ಚೆ ಹಾಕುವುದು, ಮ್ಯಾಟ್ ತಯಾರಿಕೆ, ಗಾಡಿ ತಯಾರಿಕೆ, ಗ್ಲಾಸ್ ಬೀಡ್ಸ್ ತಯಾರಿಕೆ, ಜೇನು ಸಾಕಾಣಿಕೆ,ಗಾಣದ ಕೆಲಸ, ಹೂವುಕಟ್ಟುವ ವೃತ್ತಿ, ಪಾತ್ರೆಗಳಿಗೆ ಕಲಾಯಿ ಹಾಕುವುದು, ಕುರಿ ಸಾಕಾಣಿಕೆ, ಧಾರ್ಮಿಕ ಭಿಕ್ಷುಕ ವೃತ್ತಿ, ಮೋಡಿಗಾರರು, ಲಾವಣಿ ಪದಗಳನ್ನು ಹಾಡುವುದು, ಹವಾಮಾನ ಪ್ರವಾದಿಗಳು, ಗೊಂದಲು ಹಾಕುವುದು, ಹಳ್ಳಿಗಾಡಿನ ಸಾಹಸ ಕಲೆಗಳ ಪ್ರದರ್ಶನ, ಗುಂಡು ಎಸೆಯುವುದು, ಲಾಗ ಹಾಕುವುದು, ಎತ್ತಿನ ಬಂಡಿ ತಿರುಗಿಸುವುದು ಇತರೆ ಕಸರತ್ತುಗಳ ವೃತ್ತಿ ಗ್ರಾಮ ಚರಿತ್ರೆಗಳ ಪಾರು ಪತ್ತೆಗಾರರು, ತಂಬೂರಿ ಮತ್ತು ಹಾರ್ಮೋನಿಯಂ ಸಹಾಯದಿಂದ ಪದಗಳನ್ನು ಕಟ್ಟೆ ಹಾಡುವುದು,
ಇದನ್ನೂ ಓದಿ : ನಿಮ್ಮ ಜಮೀನಿನ ಇ ಸ್ಕೆಚ್ ನಿಮ್ಮ ಮೊಬೈಲ್ ನಲ್ಲಿ ಹೀಗೆ ಪಡೆಯಿರಿ
ದೇವಸ್ಥಾನಗಳಲ್ಲಿ ನರ್ತಿಸುವುದು, ಭಿಕ್ಷಾಟನೆ, ಗೋಂಧಳಿ ನೃತ್ತ ಮಾಡುವುದು, ಬೊಂಬೆ, ಹೊದಿಕೆ, ಬಾಚಾಣಿಕೆ ತಯಾರಿಕೆ, ಹಚ್ಚೆ ಹಾಕುವುದು, ಕಣಿ ಹೇಳುವುದು, ಎತ್ತನ್ನು ಹಿಡಿದುಕೊಂಡು ಊರಿಂದ ಊರಿಗೆ ಹೋಗಿ ಭಿಕ್ಷೆ ಬೇಡುವುದು, ಕಾಲಭೈರವನ ಆರಾಧನೆ ಕತ್ತಿ ತಯಾರಿಕೆ, ದೇವರ ಕಥೆಗಳು ಹಾಗೂ ಪುರಾಣದ ಕಥೆಗಳನ್ನು ಹೇಳುವ ಹಾಗೂ ಬೊಂಬೆ ಪ್ರದರ್ಶನ , ಪಶು ಪಾಲಕರು, ಕೋಳಿ ಮೊಟ್ಟೆ ಮೀನು ಮಾರಾಟ ಇನ್ನಿತರ ಅಸಂಘಟಿತ ವಲಯಗಳ ಕಾರ್ಮಿಕರು ಹಾಗು ವ್ಯಾಪಾರಿಗಳು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.
PMSYM scheme pension ನೋಂದಣಿಗೆ ಅರ್ಹತೆಗಳು
ವಯೋಮಿತಿ 18 ರಿಂದ 40 ವಯೋಮಾನದೊಳಗಿರಬೇಕು. ಇಪಿಎಫ್ ಸದಸ್ಯರಾಗಿರಬಾರದು. ಇಎಸ್ಐಸಿ ಸದಸ್ಯರಾಗಿರಬಾರದು. ಆದಾಯ ತೆರಿಗೆ ಪಾವತಿಸುವರಾಗಿರಬಾರದು. ಅಸಂಘಟಿತ ವಲಯದ ಕಾರ್ಮಿಕರು ನೋಂದಣಿಯಾಗಿ ವಯೋಮಿತಿ ಆಧಾರದ ಮೇಲೆ ವಂತಿಕೆ ಪಾವತಿಸಬೇಕಾಗುತ್ತದೆ.
ನೋಂದಣಿಗೆ ಬೇಕಾಗಿರುವ ದಾಖಲೆಗಳು
ಆಧಾರ್ ಕಾರ್ಡ್, ಚಾಲ್ತಿಯುಳ್ಳ ಬ್ಯಾಂಕ್ ಖಾತೆಯ ಪಾಸ್ ಬುಕ್, ಸಕ್ರೀಯ ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್ ಇಕೆವೈಸಿ ಕಡ್ಡಾಯ, ನಾಮ ನಿರ್ದೇಶಿತರ ಹೆಸರು ಮತ್ತು ಜನ್ಮ ದಿನಾಂಕ ಹಾಗೂ ಇ ಶ್ರ ಯೋಜನೆ ಕಾರ್ಡ್, ಆಸಂಘಟಿತ ವಲಯದ ಕಾರ್ಮಿಕರು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ಮೊದಲ ತಿಂಗಳ ವಂತಿಕೆಯೊಂದಿಗೆ ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ
https://maandhan.in/maandhan/login
ವೆಬ್ ಸೈಟ್ ನಲ್ಲಿ ನೋಂದಣಿಯಾಗಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಕಾರ್ಮಿಕ ಅಧಿಕಾರಿಗಳ ಕಚೇರಿಯನ್ನು ತಾಲೂಕಿನ ಸಂಬಂಧಪಟ್ಟ ಕಾರ್ಮಿಕ ನಿರೀಕ್ಷಕರುಗಳ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.





