ರೈತರಿಗೆ ಗುಡ್ ನ್ಯೂಸ್ –ಬಜೆಟ್ ನಲ್ಲಿ ರೈತರಿಗೆನೇನು ಸಿಕ್ಕಿದೆ ಇಲ್ಲಿದೆ ಮಾಹಿತಿ

Written by Ramlinganna

Published on:

Central government budget :  ಸಾಂಪ್ರದಾಯಿಕ ಬೆಳೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಉತ್ತೇಜನ ನೀಡುವ ಯೋಜನೆಗಳ ಮೂಲಕ ಅನ್ನದಾತರ ಆದಾಯ ಹೆಚ್ಚಿಸುವ ಆಶಯವನ್ನು ಈ ಬಾರಿಯ ಬಜೆಟ್ ಒಳಗೊಂಡಿದೆ.

ಹೌದು, ಭಾನುವಾರ ಫೆಬ್ರವರಿ 1 ರಂದು ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ಕೃಷಿ ವಲಯಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೃಷಿ ಕ್ಷೇತ್ರದಲ್ಲಿ ಬಹು ಆಯಾಮದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸುವ ಉದ್ದೇಶ ಹೊಂದಲಾಗಿದೆ.

ಅನ್ನದಾತರ ನಿರೀಕ್ಷೆಗಳ ಭಾರಿ ಕಡಿಮೆಗೊಳಿಸುವ ಪ್ರಯತ್ನ ಕೈಗೊಂಡಿದ್ದರೂ ಕೃಷಿ ವಲಯ ನಿರಂತರವಾಗಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರದ ಮಾರ್ಗ ತೋರಿಸುತ್ತಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ.

ಇದನ್ನೂ ಓದಿ ನಿಮಗೆ ಗೊತ್ತಿಲ್ಲದೆ ಆಧಾರ್ ಕಾರ್ಡ್ ಬೇರೆ ಕಡೆ ಬಳಕೆಯಾಗಿದೆಯೇ? ಹೀಗೆ ಚೆಕ್ ಮಾಡಿ

ಕೃಷಿ ಮತ್ತು ಸಂಬಂಧಿಸಿದ ವಲಯಕ್ಕೆ ಈ ಬಾರಿ 1.62 ಲಕ್ಷ ಕೋಟಿ ರುಪಾಯಿ ಅನುದಾನ ನಿಗದಿಪಡಿಸಲಾಗಿದೆ. ಇದರ ಕಳೆದ ವರ್ಷಕ್ಕಿಂತ ಶೇ. 7.12 ರಷ್ಟು  ಹೆಚ್ಚಳವಾಗಿದೆ.

ಶ್ರೀಗಂಧ ಮತ್ತು ತೆಂಗು ಬೆಳೆಗೆ ಉತ್ತೇಜನ, ಕೃತಕ ಬುದ್ಧಿಮತೆ ಬಳಕಗೆ ಆದ್ಯತೆ ನೀಡುವುದನ್ನು ಸಹ ಪ್ರಸ್ತಾಪಿಸಲಾಗಿದೆ. ಜತೆಗೆ, ಕೃಷಿಕರನ್ನು ಉದ್ದಮಶೀಲರನ್ನಾಗಿ ಪರಿವರ್ತಿಸುವ ಅಂಶಗಳನ್ನು ಉಲ್ಲೇಖಿಸಲಾಗಿದೆ. ಸಣ್ಣ ಮತ್ತು ಅತೀ ಸಣ್ಣ ರೈತರನ್ನು ಗಮನದಲ್ಲಿರಿಸಿಕೊಂಡು ಈ ಅಂಶಗಳನ್ನು ಪ್ರಸ್ತಾಪಿಸಲಾಗಿದೆ.

ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಪಶು ಸಂಗೋಪನಾ ವಲಯದಲ್ಲಿ ಉದ್ಯಮಶೀಲತೆ ಅಭಿವೃದ್ಧಿಗೆ ಬೆಂಬಲ ನೀಡುವುದಾಗಿ ಘೋಷಿಸಲಾಗಿದೆ.

Central government budget ಬಜೆಟ್ ನಲ್ಲಿ ಏನೇನು ಘೋಷಣೆ ಮಾಡಲಾಗಿದೆ?

ಸಾಲ ಆಧಾರಿತ ಸಬ್ಸಿಡಿ ಯೋಜನೆ, ಜಾನುವಾರುಗಳ ಸಾಕಾಣಿಕೆಗೆ ಆಧುನಿಕತೆಯ ಸ್ಪರ್ಶ, ಜಾನುವಾರುಗಳು, ಡೇರಿ ಮತ್ತು ಪೌಲ್ಟ್ರಿ ವಲಯವನ್ನು ಗಮನದಲ್ಲಿರಿಸಿಕೊಂಡು ಸರಪಳಿಯ ರೀತಿಯ ವ್ಯವಸ್ಥೆಯನ್ನು ರೂಪಿಸುವುದು ಹಾಗೂ ಜಾನುವಾರು ಕೃಷಿಕರ ಉತ್ಪಾದಕರ ಸಂಘಟನೆಗಳನ್ನು ಆರಂಬಿಸುವ ಮೂಲಕ ಈ ವಲಯಕ್ಕೆ ಹೊಸ ಸ್ಪರ್ಶ ನೀಡುವುದನ್ನು ಉಲ್ಲೇಖಿಸಲಾಗಿದೆ.

ತೆಂಗು, ಶ್ರೀಗಂಧ, ಕೊಕ್ಕೊ ಮತ್ತು ಗೋಡಂಬಿಗೆ ಉತ್ತೇಜನ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಅಗರ್, ಮರಗಳು, ಅಲ್ಕಂಡ್ಸ್, ವಾಲ್ನಟ್ಸ್ ಗಳಿಗೆ ಬೆಂಬಲ ನೀಡುವುದಾಗಿ ತಿಳಿಸಲಾಗಿದೆ.

ಗೋಡಂಬಿ ಮತ್ತ ಕೊಕ್ಕೋ ಉತ್ಪಾದನೆ ಹಾಗೂ ಸಂಸ್ಕರಣೆಯಲ್ಲಿ ಸ್ವಾವಲಂಬನೆ ಸಾಧಿಸಿ ರಫ್ತಿಗೆ ಉತ್ತೇಜನ ನೀಡಲಾಗುವುದು. ಈ ಮೂಲಕ 2030 ರ ವೇಳೆಗೆ ಈ ಉತ್ಪನ್ನಗಳನ್ನು ಜಾಗತಿಕ ಪ್ರಿಮಿಯಂ ಬ್ರ್ಯಾಂಡ್ ಗಳನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ.

ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನವನ್ನು ಮತ್ತಷ್ಟು ಹೆಚ್ಚಿಸಲು ಕೃತಕ ಬುದ್ಧಿಮತ್ತೆ (ಎಐ) ಸಾಧನ ಬಳಕೊಳ್ಳುವಂತೆ ಪ್ರೋತ್ಸಾಹಿಸುವ ಕ್ರಮಗಳನ್ನು ಘೋಷಿಸಲಾಗಿದೆ.

500 ಜಲಾಶಯಗಳು ಹಾಗೂ ಅಮೃತ ಸರೋವರಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಮೂಲಕ ಮೀನುಗಾರಿಕೆಗೆ ಉತ್ತೇಜನ ನೀಡುವ ಕ್ರಮಗಳನ್ನು ಸಹ ಪ್ರಸ್ತಾಪಿಸಲಾಗಿದೆ.

ಕೃಷಿಗೂ ಬರಲಿದೆ ಎಐ ಟೂಲ್

ದೇಶದ ಕೃಷಿ ವಲಯಕ್ಕೆ ಆಧುನಿಕತೆಯ ಹೊಸ ಸ್ಪರ್ಶ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ, ರೈತರಿಗೆ ಅವರವರ ಭಾಷೆಯಲ್ಲೇ ಕೃಷಿ ಸಂಬಂಧಿ ಮಾಹಿತಿ ನೀಡುವ ಕೃತಕ ಬುದ್ದಿಮತ್ತೆ ಆಧರಿತ ಟೂಲ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಭಾರತ್ – ವಿಸ್ತಾರ್ (ವರ್ಚುಯುವಲಿ  ಇಂಟಗ್ರೇಟೆಡ್ ಸಿಸ್ಟಮ್ ಟೂ ಆಕ್ಸೆಸ್ ಅಗ್ರಿಕಲ್ಚರ್ ರಿಸೋರ್ಸಸ್ ) ಹೆಸರಿನ ಈ ಟೂಲ್ ಅನ್ನು ಕೃಷಿ ಸಂಬಂಧಿಸಿದ ಐಸಿಎಆರ್ ವೆಬ್ ನೊಂದಿಗೆ ಜೋಡಣೆಗೊಳ್ಳಲಿದೆ.

ಹೀಗಾಗಿ ರೈತರು ತಮ್ಮ ಕೃಷಿ ಸಂಬಂಧಿತ ಕೇಳುವ ಪ್ರಶ್ನೆಗಳಿಗೆ ಈ ಎಐ ಟೂಲ್ ಅವರ ಭಾಷೆಯಲ್ಲೇ ಉತ್ತರ ನೀಡಲಿದೆ.

ಈ ಯಾಪ್ ದಿಂದ ಲಾಭವೇನು

ಈ ಟೂಲ್ ನಿಂದಾಗಿ ಕೃಷಿ ಉತ್ಪಾದಕತೆ ಹೆಚ್ಚಾಗಲಿದೆ. ಕೃಷಿ ವಿಷಯಗಳಲ್ಲಿ ಸೂಕ್ತ ಮತ್ತು ಉತ್ತಮ ನಿರ್ಧಾರ ಕೈಗೊಳ್ಳುವ ಅವಕಾಶ ರೈತರಿಗೆ ಸಿಗಲಿದೆ. ಕೃಷಿ ಸಂಬಂಧಿತ ನಿರ್ಧಿಷ್ಟ ಮಾಹಿತಿ ಲಭ್ಯವಾಗುವ ಕಾರಣ ರೈತರು ಎದುರಿಸುತ್ತಿರುವ ಅಪಾಯಗಳು ಕಡಿಮೆ ಆಗಲಿವೆ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.

Leave a Comment