ಎಲ್ಐಸಿ ಸ್ಟೇಟಸ್ ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ ಎಲ್ಲಾ ಮಾಹಿತಿ ಸಿಗಲಿದೆ

Written by Ramlinganna

Published on:

LIC status check here ನಿಮ್ಮ ಎಲ್ಐಸಿ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ ನಿಮ್ಮ ಪ್ರಿಮಿಯಂ, ಬೋನಸ್, ಸರೆಂಡರ್ ಮಾಡಿದರೆ ಎಷ್ಟು ಹಣ ಸಿಗಲಿದೆ ಇಲ್ಲಿದೆ ಮಾಹಿತಿ

ಎಲ್ಐಸಿ ಮಾಡದ ಜನರೇ ಸಿಗುವುದಿಲ್ಲ. ತಮ್ಮ ಮಕ್ಕಳ ಓದಿಗಾಗಿ, ಅಥವಾ ಮದುವೆಗಾಗಿ ಅಥವಾ ನಿವೃತ್ತಿ ಹೊಂದಿದ ನಂತರ ಹೆಚ್ಚಿನ ಹಣ ಸಿಗಲೆಂಬ ಉದ್ದೇಶದಿಂದ ಹಾಗೂ ಏನಾದರೂ ಅನಾಹುತವಾದರೆ ಕುಟುಂಬಕ್ಕೆ ಆರ್ಥಿಕ ಸಹಾಯವಾಗಲೆಂಬ ಉದ್ದೇಶದಿಂದ ಬಹುತೇಕ ಜನ ಒಂದಲ್ಲ ಒಂದು ಎಲ್ಐಸಿ ಮಾಡಿಸಿರುತ್ತಾರೆ. ಆದರೆ ಆ ಎಲ್ಐಸಿ ಯಾಕ್ಟಿವ್ ಇದೆಯೋ ಇಲ್ಲವೋ, ಪ್ರಿಮಿಯಂ ಕಟ್ಟಲು ಕೊನೆಯ ದಿನಾಂಕ ಯಾವಾಗ ಹಾಗೂ ಬೋನಸ್ ಹಣ ಎಷ್ಟು ಸಿಗುತ್ತದೆ. ಹಣ ಎಷ್ಟು ಜಮೆಯಾಗುತ್ತದೆ.

ನಿಮ್ಮ ಎಲ್ಐಸಿ ಸ್ಟೇಟಸನ್ನು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.  ಹೌದು, ನೀವು ಈಗ ಎಲ್ಐಸಿ ಕಚೇರಿಗೆ ಹೋಗಿ ಅಲ್ಲಿ ಸರತಿ ಸಾಲಿನಲ್ಲಿ ನಿಂತು ವಿಚಾರಿಸುವ ಅಗತ್ಯವಿಲ್ಲ. ನಿಮ್ಮ ಬಳಿಯಿರುವ ಮೊಬೈಲ್ ನಲ್ಲೇ ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು. ಇದಕ್ಕೆ ಯಾರ ಸಹಾಯವೂ ಬೇಕಿಲ್ಲ. ನಿಮಗೆ ಮೊಬೈಲ್ ಬಳಸುವ ಸಾಮಾನ್ಯ ಜ್ಞಾನವಿದ್ದರೆ ಸಾಕು,ಇಲ್ಲಿ ತಿಳಿಸಿದ ಮಾಹಿತಿಯಂತೆ  ಎಲ್ಐಸಿ ಸ್ಟೇಟಸನ್ನು ಚೆಕ್ ಮಾಡಿಕೊಳ್ಳಬಹುದು.

LIC status check here ಎಲ್ಐಸಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ ?

ಎಲ್ಐಸಿ ಸ್ಟೇಟಸ್ ಚೆಕ್ ಮಾಡಲು ಈ

https://ebiz.licindia.in/D2CPM/?_ga=2.44073316.112911503.1616004771-1997612316.1614659821#Register

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಎಲ್ಐಸಿ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಎಲ್ಐಸಿ ನಂಬರ್ ಹಾಕಬೇಕು. ನಂತರ ನಿಮ್ಮ ಜನ್ಮದಿನಾಂಕ, ಮೊಬೈಲ್ ನಂಬರ್ ಹಾಕಬೇಕು. ಇ ಮೇಲ್ ಐಡಿ ಹಾಕಬೇಕು. ಪಾಸ್ ಪೋರ್ಟ್ ನಂಬರ್ ಇದ್ದರೆ ಹಾಕಬೇಕು. ಪ್ಯಾನ್ ನಂಬರ್ ಹಾಕಬೇಕು, ನಂತರ ಮೇಲ್ ಫಿಮೇಲ್ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ Proceed ಮೇಲೆ ಕ್ಲಿಕ್ ಮಾಡಬೇಕು. ನಂತರ ಪಾಸ್ವರ್ಡ್ ಸೆಟ್ ಮಾಡಿಕೊಂಡು ನಂತರ ಯೂಸರ್ ಐಡಿ ಎಲ್ಐಸಿ ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳಬೇಕು. ಈಗ ನಿಮ್ಮ ಯೂಸರ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ನೀವು ಎಲ್ಐಸಿ ಪಾಲಿಸಿಯ ಮಾಹಿತಿಗಳನ್ನು ಪಾಲಿಸಿ ದರ್ಜೆ (ಸ್ಟೇಟಸ್) ಪ್ರಿಮಿಯಂ ಕಟ್ಟುವುದು, ಬೋನಸ್ ಬಗೆಗಿನ ಮಾಹಿತಿ ಹಾಗೂ ಪಾಲಿಸಿ ಸರೆಂಡರ್ ಇವೆಲ್ಲವನ್ನು ಸುಲಭವಾಗಿ ಮಾಹಿತಿ ಪಡೆಯಬಹುದು. ಇನ್ನೇಕೆ ತಡ ಮಾಡುತ್ತಿದ್ದೀರಿ. ನಿಮ್ಮ ಪಾಲಿಸಿಯ ಸ್ಟೇಟಸನ್ನು ಒಮ್ಮೆ ಚೆಕ್ ಮಾಡಿನೋಡಿಕೊಳ್ಳಿ..

ಇದನ್ನೂ ಓದಿ ನೀವು ನಿಂತಿರುವ ಜಮೀನಿನ ಮಾಲಿಕರು ಯಾರಿದ್ದಾರೆ? ಹೀಗೆ ಚೆಕ್ ಮಾಡಿ

ಇದು ಡಿಜಿಟಲ್ ಯುಗ. ಎಲ್ಲಾ ಕೆಲಸಗಳು ಬೆರಳ ತುದಿಯಲ್ಲಿಯೇ ಮಾಡಿ ಮುಗಿಸುವ ಕಾಲವಾಗಿದೆ. ಎಲ್ಲಾ ವ್ಯವಹಾರಗಳು ಸುಲಭವಾಗಿ ಕಡಿಮೆ ವೆಚ್ಚದಲ್ಲಿ ಮಾಡಲು ಜನರು ಬಯಸುತ್ತಾರೆ. ಇದಕ್ಕೆ ಬ್ಯಾಂಕಿಂಗ್ ವ್ಯವಹಾರ ಅಥವಾ ಎಲ್ಐಸಿ ವ್ಯವಹಾರಗಳು ಹೊರತಾಗಿಲ್ಲ.

ಫೋನ್ ಮೂಲಕ ಎಲ್ಐಸಿ ಪಾಲಿಸಿ ಸ್ಟೇಟಸ್ ತಿಳಿಯುವುದು ಹೇಗೆ ?

ಸಾರ್ವಜನಿಕರು ತಮ್ಮ ಎಲ್ಐಸಿ ಸ್ಟೇಟಸ್ನ್ನು ಮೊಬೈಲ್ ಎಸ್ಎಂಎಸ್ ಮೂಲಕವೂ ತಿಳಿದುಕೊಳ್ಳಬಹುದು. 1251 ಸಂಖ್ಯೆಗೆ ಕರೆ ಮಾಡಿ ಎಲ್ಐಸಿ ಮಾಹಿತಿಯನ್ನು ತಿಳಿಯಬಹುದು. ಈ ಸೌಲಭ್ಯವು ದಿನದ 24 ಗಂಟೆಗಳಲ್ಲಿ ಸಿಗಲಿದೆ. ಇಧರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ ಫಲಾನುಭವಿಗಳು ಎಲ್ಐಸಿ ಸಹಾಯವಾಣಿ ನಂಬರ್ ಕರೆ ಮಾಡಿ ವಿಚಾರಿಸಬಹುದು.

ಎಸ್ಎಂಎಸ್ ಮೂಲ ತಿಳಿಯುವುದು ಹೇಗೆ ?

ಎಸ್ಎಂಎಸ್ ಮೂಲಕ ಪಾಲಿಸಿ ಸ್ಟೇಟಸ್ ತಿಳಿಯಲು 56767877 ಸಂಖ್ಯೆಗೆ ಎಸ್ಎಂಎಸ್ ಕಳುಹಿಸಿ ಪಾಲಿಸಿ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ಎಸ್ಎಂಎಸ್ ಶುಲ್ಕ ವಿಧಿಸಲಾಗುತ್ತದೆ. ಹೌದು, 3 ರಿಂದ 10 ರೂಪಾಯಿಯವರೆಗೆ ಶುಲ್ಕ ವಿಧಿಸಲಾಗುತ್ತದೆ.

ನೀವು ಮೊಬೈಲ್ ನಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಂಡುಮೇಲೆ ತಿಳಿಸಿದ ಮಾಹಿತಿಯಂತೆ ಅತೀ ಸುಲಭವಾಗಿ ಎಲ್ಐಸಿ ಸ್ಟೇಟಸನ್ನು ಚೆಕ್ ಮಾಡಿಕೊಳ್ಳಬಹುದು.

Leave a Comment