Crop survey app 2025 :ರೈತರಿಗೆ ಗುಡ್ ನ್ಯೂಸ್ ಇಲ್ಲಿದೆ. ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿಯೇ ಬೆಳೆ ಸಮೀಕ್ಷೆ ಮಾಡಬಹುದು. ಹೌದು, ರೈತ ಮಿತ್ರರೇ ಇದಕ್ಕೆ ಯಾರ ಸಹಾಯವೂ ಬೇಕಿಲ್ಲ. ಇಲ್ಲಿ ತಿಳಿಸಿದ ಮಾಹಿತಿಯ ಪ್ರಕಾರ ನೀವು ಸುಲಭವಾಗಿ ನಿಮ್ಮ ಬೆಳೆಗಳಿಗೆ ನೀವೇ ಸಮೀಕ್ಷೆ ಮಾಡಿ ಮಾಹಿತಿಯನ್ನು ಅಪ್ಲೋಡ್ ಮಾಡಬಹುದು.
2025-26ನೇ ಸಾಲಿನ ಹಿಂಗಾರು ಬೆಳೆ ಸಮೀಕ್ಷೆ ಈಗಾಗಲೇ ಆರಂಭವಾಗಿದೆ. ರೈತರು ಗೂಗಲ್ ಪ್ಲೇ ಸ್ಟೋರ್ ನಿಂದ ಹಿಂಗಾರು ರೈತರು ಬೆಳೆ ಸಮೀಕ್ಷೆ 2025 ಆಯಪ್ ನ್ನು ಡೌನ್ಲೋಡ್ ಮಾಡಿಕೊಂಡು ಬೆಳೆ ವಿವರವನ್ನು ಖುದ್ದಾಗಿ ದಾಖಲಿಸಬೇಕಿದೆ. ಹೀಗೆ ವಿವರ ದಾಖಲಿಸುವುದರಿಂದ ರೈತರಿಗೆ ಕನಿಷ್ಠ ಬೆಂಬಲ ಯೋಜನೆ, ಬೆಳೆ ವಿಮೆ ಯೋಜನೆ, ಬರಗಾಲ ಮತ್ತು ಪ್ರವಾಹ ಸಂದರ್ಭದಲ್ಲಿ ನಷ್ಟ ಪರಿಹಾರ ಪಡೆಯಲು ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು, ಬೆಳೆಸಾಲ ಪಡೆಯುವಲ್ಲಿ ಅನುಕೂಲವಾಗಲಿದೆ. ಎಲ್ಲಾ ರೈತರು ಬೆಳೆ ವಿವರವನ್ನು ತ್ವರಿತವಾಗಿ ಬೆಳೆ ಸಮೀಕ್ಷೆ ಆಯಪ್ ನಲ್ಲಿ ದಾಖಲಿಸಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.
Crop survey app 2025 ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಮಾಡುವುದು ಹೇಗೆ?
ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಮಾಡಲು ರೈತರು ಈ
https://play.google.com/store/apps/details?id=com.csk.farmer23_24.cropsurvey
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ಆಗ ನಿಮಗೆ ಹಿಂಗಾರು ರೈತರ ಬೆಳೆ ಸಮೀಕ್ಷೆ 2025 ಕಾಣಿಸುತ್ತದೆ. ಅಲ್ಲಿ ನೀವು ಇನಸ್ಟಾಲ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ ವೈಲ್ ಯೂಸಿಂಗ್ ದ ಆಯಪ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲೋ ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ ಅಗ್ರಿ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ರೈತರ ಬೆಳೆ ಸಮೀಕ್ಷೆ 2025 ಕೆಳಗಡೆ ಋತು ಹಿಂಗಾರು ಕಾಣಿಸುತ್ತದೆ. ಅದರ ಕಳಗಡೆ ನಿಮಗೆ ಬೆಳೆ ಸಮೀಕ್ಷೆಯಲ್ಲಿ ತೊಂದರೆಯಾದರೆ ಅಲ್ಲಿ ಕಾಣುವ ರೈತರು ಬೆಳೆ ಸಮೀಕ್ಷೆಯ ಉಚಿತ ಸಹಾಯವಾಣಿ ನಂಬರ್ 18004253553 ಗೆ ಸಂಪರ್ಕಿಸಬಹುದು.
ಬೆಳೆ ಸಮೀಕ್ಷೆ ಮಾಡುವಾಗ ಏನೇನು ಮಾಡಬೇಕು?
ಇಕೆವೈಸಿ ಮೂಲಕ ಆಧಾರ್ ದೃಢೀಕರಿಸು ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ ನ್ನ ಆಧಾರ್ ಮಾಹಿತಿ ಹಾಗೂ ಇತರ ಮಾಹಿತಿಗಳು ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಈಘ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಓಟಿಪಿ ಪಡೆಯಿರಿ Generate OTP ಮೇಲೆ ಕ್ಲಿಕ್ ಮಾಡಬೇಕಾ. ನಿಮ್ಮ ಮೊಬೈಲಿಗೆ ಒಂದು ಓಟಿಪಿ ಬರುತ್ತದೆ.ಆ ಓಟಿಪಿಸಂಖ್ಯೆಯನ್ನು ನೀವು ನಮೂದಿಸಬೇಕು.ಇಲ್ಲದಿದ್ದರೆ ಫೇಸ್ ಕ್ಯಾಪ್ಚುರ್ ಮೇಲೆ ಕ್ಲಿಕ್ ಮಾಡಬೇಕು
ಬೆಳೆ ಸಮೀಕ್ಷೆ ಏಕೆ ಕಡ್ಡಾಯ
ರೈತರು ಬರಗಾಲ ಪರಿಹಾರ, ಬೆಳೆ ವಿಮೆ, ಬೆಳೆ ಹಾನಿ ಪರಿಹಾರ ಪಡೆಯಲು ರೈತರು ಬೆಳೆ ಸಮೀಕ್ಷೆ ಮಾಡುವುದು ಕಡ್ಡಾಯವಾಗಿದೆ. ಇನ್ನೇಕೆ ತಡ ಈಗಲೇ ಬೆಳೆ ಸಮೀಕ್ಷೆ ಮಾಡಿ ಬೆಳೆ ಪರಿಹಾರ ಪಡೆಯಿರಿ.
ಇದನ್ನೂ ಓದಿ ನಿಮ್ಮ ಜಮೀನಿಗೆ ಹೋಗಲು ಕಾಲುದಾರಿ ಬಂಡಿದಾರಿ ಇದೆಯೇ ಇಲ್ಲೇ ಚೆಕ್ ಮಾಡಿ
ರೈತರು ಬೆಳೆ ವಿವರ ದಾಖಲಿಸದೇ ಹೋದಲ್ಲಿ ಸರ್ಕಾರದ ಯೋಜನೆಯ ಲಾಭದಿಂದ ವಂಚಿತರಾಗುವ ಸಾಧ್ಯತೆಯಿದೆ. ಆದ್ದರಿಂದ ಬೆಳೆ ವಿವರ ದಾಖಲಿಸಬೇಕು ಎಂದು ಲಕ್ಷ್ಮೇಶ್ವರ ಕೃಷಿ ಸಂಪರ್ಕ ಕೇಂದ್ರದ ಸಹಾಯಕ ನಿರ್ದೇಶಕ ಚಂದ್ರಶೇಖರ ನರಸಮ್ಮನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತರು ಹೆಚ್ಚಿನ ಆಸಕ್ತಿಯಂದಿಗೆ ಬೆಳೆ ಸಮೀಕ್ಷೆಯಲ್ಲಿ ಪಾಲ್ಗೊಂಡು ತಮ್ಮ ಜಮೀನಿನ ಬೆಳೆ ಮಾಹಿತಿ ದಾಖಲಿಸಬೇಕು. ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಆಯಾ ಗ್ರಾಮಗಳಿಗೆ ನಿಯೋಜಿಸಿದ ಖಾಸಗಿ ನಿವಾಸಿಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.





