Vegetable seeds kit distribution : 2024-25ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃಧ್ಧಿ ಮಂಡಳಿಯ ಸರ್ಕಾರದ ವಿವೇಚನಾ ನಿಧಿಯಡಿ ಸಾಮಾನ್ಯ ಉಪಯೋಜನೆಯಡಿ (ತೋಟಗಾರಿಕೆ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಅನುಷ್ಟಾನಗೊಳಿಸಲಾಗುತ್ತಿರುವ) ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ವಿವಿಧ ಬಗೆಯ ತರಕಾರಿ ಬೀಜದ ಕೀಟ್ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ (ಜಿ.ಪಂ.) ತೋಟಗಾರಿಕೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಇದನ್ನೂ ಓದಿ : ಬೆಳೆ ವಿಮೆ ಪರಿಹಾರಕ್ಕೆ ಸರ್ಕಾರ ಆದೇಶ: ಶೀಘ್ರದಲ್ಲಿಯೆ ಈ ರೈತರ ಬ್ಯಾಂಕ್ ಖಾತೆಗೆ ಹಣ ಜಮೆ
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಪ್ರತಿ ಫಲಾನುಭವಿಗೆ ತರಕಾರಿ ಬೆಳೆಯ ಆಯ್ಕೆ ಮತ್ತು ರೈತರ ಪ್ರದೇಶ ವಿಸ್ತರಣೆ ಲಭ್ಯತೆಗೆ ಅನುಗುಣವಾಗಿ ಗರಿಷ್ಠ 20,000 ರೂಪಾಯಿ ಮೊತ್ತದ ವಿವಿಧ ಬಗೆಯ ತರಕಾರಿ ಬೀಜಗಳನ್ನು ವಿತರಿಸಲಾಗುತ್ತದೆ.
Vegetable seeds kit distribution ಯಾರಿಗೆ ಸಂಪರ್ಕಿಸಬೇಕು?
ಆಸಕ್ತಿಯುಳ್ಳ ರೈತರು ತಮ್ಮ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಿಂದ ನಿಗದಿತ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ 2025ರ ನವೆಂಬರ್ 24 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ರೈತ ಬಾಂಧವರು ಸಂಬಂಧಪಟ್ಟ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಮತ್ತು ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಲು ಹಾಗೂ ಅಫಜಲಪೂರ ಮೊಬೈಲ್ ಸಂಖ್ಯೆ 7760969088, ಆಳಂದ-8095143035, ಚಿಂಚೋಳಿ-9916874287, ಚಿತ್ತಾಪೂರ-9611250501, ಕಲಬುರಗಿ-9900108196, ಜೇವರ್ಗಿ-9986516251 ಹಾಗೂ ಸೇಡಂ-9164570011 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
ಪಿಎಂ ಸ್ವನಿಧಿ 2.0 ಯೋಜನೆಯಡಿ ಬೀದಿ ಬದಿ ಹಾಗೂ ಸಣ್ಣ ಪುಟ್ಟ ವ್ಯಾಪಾರಸ್ಥರಿಂದ ಅರ್ಜಿ ಆಹ್ವಾನ
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ (ಪಿಎಂ ಸ್ವನಿಧಿ 2.0) ಯೋಜನೆಯು ವಿಸ್ತರಣೆಯಾಗಿದ್ದು, ಈ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹ ಬೀದಿ ಬದಿ ವ್ಯಾಪಾರಿಗಳು ಹಾಗೂ ಸಣ್ಣಪುಟ್ಟ ವ್ಯಾಪಾರಸ್ಥರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮುನಾವರ್ ದೌಲಾ ಅವÀರು ತಿಳಿಸಿದ್ದಾರೆ.
ನವದೆಹಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಬೀದಿ ಬದಿ ವ್ಯಾಪಾರಸ್ಥರಿಗೆ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ ಯೋಜನೆ ಅನುಷ್ಠಾನಗೊಳಿಸಿದೆ. ಜಿಲ್ಲೆಯ ಎಲ್ಲಾ 12 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಮೊದಲ ಹಂತದಲ್ಲಿ ರೂ. 15 ಸಾವಿರ, ಎರಡನೇ ಹಂತದಲ್ಲಿ ರೂ. 25 ಸಾವಿರ, ಮೂರನೇ ಹಂತದಲ್ಲಿ ರೂ. 50 ಸಾವಿರ, ಗಳ ಸಾಲವನ್ನು ಬ್ಯಾಂಕುಗಳ ಮೂಲಕ ಪಡೆಯಬಹುದಾಗಿದೆ. ಮೊದಲ ಎರಡು ಕಂತುಗಳಲ್ಲಿ ಸಾಲ ಪಡೆದು ನಿಯಮಿತವಾಗಿ ಮರುಪಾವತಿ ಮಾಡಿದ ಫಲಾನುಭವಿಗಳಿಗೆ ರೂ. 30 ಸಾವಿರ ಗಳವರೆಗಿನ ಕ್ರೆಡಿಟ್ ಕಾರ್ಡ್ ಪಡೆಯುವ ಸೌಲಭ್ಯವಿರುತ್ತದೆ. ಆನ್ಲೈನ್, ಡಿಜಿಟಲ್ ವ್ಯಾಪಾರ, ವ್ಯವಹಾರ ನಡೆಸುವ ಚಿಲ್ಲರೆ ವಹಿವಾಟುಗಳಿಗೆ 1200 ರೂ.ಗಳ ವರೆಗೆ ಮತ್ತು ಸಗಟು ವ್ಯಾಪಾರ ವಹಿವಾಟುಗಳಿಗೆ 400 ರೂ, ವರೆಗೆ ಕ್ಯಾಶ್ ಬ್ಯಾಕ್ ಸೌಲಭ್ಯ ಒದಗಿಸಲಾಗುತ್ತಿದೆ.
ಸಂಬAಧಪಟ್ಟ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿರುವ ಅರ್ಹ ವ್ಯಾಪಾರಸ್ಥರು ಗುರುತಿನ ಚೀಟಿ, ರೇಷನ್ ಕಾರ್ಡ, ಆಧಾರ ಕಾರ್ಡ, ಬ್ಯಾಂಕ್ ಪಾಸ್ ಬುಕ್, ಭಾವಚಿತ್ರ, ಕುಟುಂಬದ ಫೋಟೋ, ವ್ಯಾಪಾರದ ಫೋಟೋ ಹಾಗೂ ಇತರ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮಹನಾಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತನ ಡೇ-ನಲ್ಮ್ ಶಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬೇಕು.
ಅರ್ಹ ಬೀದಿಬದಿ ವ್ಯಾಪಾರಿಗಳು ಪಿಎಂ ಸ್ವ-ನಿಧಿ ಯೋಜನೆಯ ಸಂಪೂರ್ಣ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಕಲಬುರಗಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





