ಬೆಳೆ ಹಾನಿ ಪರಿಹಾರ ಯಾವ ಬೆಳೆಗೆ ಎಷ್ಟು ಹಣ ಜಮೆ? ಇಲ್ಲಿದೆ ಮಾಹಿತಿ

Written by Ramlinganna

Published on:

belehani parihara money credit : ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಯಿಂದಾಗಿ ರೈತರ ಅಪಾರ ಬೆಳೆ ಹಾನಿಯಾಗಿದೆ. ಹಾಗಾಗಿ ರೈತರಿಗೆ ಪರಿಹಾರ ಹಣ ನೀಡಲು ಸರ್ಕಾರ ಪರಿಹಾರ ಹಣ ಘೋಷಿಸಿದೆ. ಯಾವ ರೈತರಿಗೆ ಎಷ್ಟು ಅಂದರೆ ಯಾವ ಯಾವ ಬೆಳೆಗೆ ಎಷ್ಟು ಪರಿಹಾರ ಹಣ ಸಿಗಲಿದೆ ಎಂಬ ಮಾಹಿತಿ ಇಲ್ಲಿದ.

ಕಳೆದ ಮುಂಗಾಗು ಹಂಗಾಮಿನಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಅಪಾರ ಬೆಳೆ ಹಾನಿಯಾಗಿತ್ತು. ಇದರೊಂದಿಗೆ  ಪ್ರವಾಹದಿಂದ ಬೆಳೆ ಹಾನಿಯಾಗಿತ್ತು.   ಸಂಕಷ್ಟಕ್ಕೆ ಒಳಗಾಗಿದ್ದ ರೈತರ ನೆರವಿಗೆ ಮುಂದಾದ ರಾಜ್ಯ ಸರ್ಕಾರ ದೊಡ್ಡ ರಿಲೀಫ್ ನೀಡಿದ್ದು, ಈಗ ಪರಿಹಾರ ಹಣ ಘೋಷಣೆ ಮಾಡಿದೆ.  ಪ್ರತಿ ಹೆಕ್ಟೇರಿಗೆ 8500 ರೂಪಾಯಿ ಹೆಚ್ಚುವರಿ  ಇನ್ಪುಟ್ ಸಬ್ಸಿಡಿ ನೀಡುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರವು ತೆಗೆದುಕೊಂಡಿದೆ.

ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ರಾಜ್ಯದಲ್ಲಿ 12.82 ಲಕ್ಷ ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈ ನಷ್ಟಕ್ಕೆ ಎನ್.ಡಿ.ಆರ್.ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯಿದೆ) ಮತ್ತು ಎಸ್.ಡಿ.ಆರ್.ಎಫ್ (ರಾಜ್ಯ ವಿಪತ್ತು ನಿರ್ವಹಣಾ ಕಾಯಿದೆ) ಮಾರ್ಗಸೂಚಿಗಿಂತ ಅಧಿಕ ಮೊತ್ತದ ಪರಿಹಾರ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು.

ಇದನ್ನೂ ಓದಿ : ಪಿಎಂ ಕಿಸಾನ್ 21ನೇ ಕಂತಿನ ಹಣ ಯಾವಾಗ ಜಮೆ ಇಲ್ಲಿದೆ ಮಾಹಿತಿ

ಎರಡು ಹೆಕ್ಟೇರಿಗೆ ಸೀಮಿತವಾಗಿ ಇನ್ಪುಟ್ ಸಬ್ಸಿಡಿಯನ್ನು ನೀಡಲಾಗುತ್ತಿದೆ. ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರಿಗೆ ನಿಗದಿಯಾಗಿದ್ದ 8500 ರೂಪಾಯಿ ಬದಲಿಗೆ 17 ಸಾವಿರ ರೂಪಾಯಿ ಪರಿಹಾರವನ್ನು ನಿಗದಿ ಮಾಡಲಾಗಿದೆ. ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರಿಗೆ ನಿಗದಿಯಾಗಿರುವ 17 ಸಾವಿರ ರೂಪಾಯಿ ಬದಲಿಗೆ 25 ಸಾವಿರ ರೂಪಾಯಿ ಬಹುವಾರ್ಷಿಕ ಬೆಳೆಗಳಿಗೆ ಪ್ರತಿ ಹೆಕ್ಟೇರಿಗೆ ನಿಗದಿಯಾಗಿದ್ದ  22500 ರೂಪಾಯಿ ಬದಲಿಗೆ 31 ಸಾವಿರ ರೂಪಾಯಿ ಪರಿಹಾರ ವಿತರಣೆಗೆ ತೀರ್ಮಾನಿಸಲಾಗಿದೆ ಎಂದು ಸಭೆ ಬಳಿಕ ಕಾನೂನು ಸಚಿವ ಎಚ್.ಕೆ. ಪಾಟೀಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಳೆ ಹಾನಿ ನಷ್ಟ ಪರಿಹಾರ ಎನ್.ಡಿ.ಆರ್.ಎಫ್ ಮಾನದಂಡ ಹೆಚ್ಚ ಮಾಡುವಂತೆ ಒತ್ತಾಯ ಕೇಳಿ ಬಂದಿತ್ತು. ಪ್ರವಾಹ, ಹಾನಿ, ಪ್ರಕೃತಿ ಹಾನಿ, ಪ್ರಕೃತಿ ವಿಕೋಪ, ಬೆಳೆ ನಷ್ಟದ ಪರಿಹಾರ, ಎನ್.ಡಿ.ಆರ್.ಎಫ್ ಮಾನದಂಡ ಕಳೆದ ಎಂಟು ವರ್ಷಗಳಿಂದ ವೈಜ್ಞಾನಿಕವಾಗಿ ಪುನರ್ ಪರಿಶೀಲನೆ ಆಗಿಲ್ಲ ಎಂದು ರೈತ ಸಂಘದವರು ಹೇಳಿದ್ದರು. ಇದಾದ  ಬೆನ್ನಲ್ಲೆ ರಾಜ್ಯ ಸರ್ಕಾರ ಭಾರಿ ಮಳೆ ಮತ್ತು ಪ್ರವಾಹದಿಂದ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿದ್ದ ರೈತರಿಗೆ ರಿಲೀಫ್ ನೀಡಿದೆ.

belehani parihara money credit ನಿಮಗೆ ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆಯೋ ಇಲ್ಲವೋ ಹೀಗೆ ಚೆಕ್ ಮಾಡಿ

ಬೆಳೆ ಹಾನಿ ಪರಿಹಾರ ಹಣ ನಿಮಗೆ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು

https://parihara.karnataka.gov.in/service87/

ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪರಿಹಾರ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ಇದಾದನಂತರ  ವರ್ಶ ಆಯ್ಕೆ ಮಾಡಿಕೊಳ್ಳಬೇಕು. ( 2025-26) ಆಯ್ಕೆ ಮಾಡಿಕೊಳ್ಳಬೇಕು. ನಂತರ ಖಾರೀಫ್ ಆಯ್ಕೆ ಮಾಡಿಕೊಳ್ಳಬೇಕು. ಇದಾದನಂತರ ಫ್ಲಡ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿದರೆ ಹಣ ಜಮೆಯಾಗಿದ್ದರೆ ಅಥವಾ ಪಟ್ಟಿಇದ್ದರೆ ಓಪನ್ ಆಗುತ್ತದೆ. ಅತೀ ಶೀಘ್ರದಲ್ಲಿ ಈ ರಿಪೋರ್ಟ್ ನಲ್ಲಿ ಹೆಸರು ಗೊತ್ತಾಗುತ್ತದೆ.

Leave a Comment