Based on Climate rain proverbs ಮುಂಗಾರು ಮಳೆ ನಕ್ಷತ್ರಗಳ ಆಧರಿಸಿ ಹಿರಿಯರು ಕಟ್ಟಿದ ಗಾದೆಗಳು ಎಷ್ಟು (Based on Climate proverbs) ಸಮಂಜಸವಾಗಿವೆ ಗೊತ್ತಾ…. ಅವರು ಯಾವ ಪಿಹೆಚ್ ಡಿ ಪದವಿ ಪಡೆದವರಲ್ಲ, ಯಾವ ವಿಜ್ಞಾನಿಗಳಂತ ಅಲ್ಲವೇ ಅಲ್ಲ, ಆದರೂ ವೈಜ್ಞಾನಿಕವಾಗಿ ಕಂಡುಹಿಡಿದ ಸತ್ಯಾಂಶದಂತೆ ಮಳೆ ನಕ್ಷತ್ರಗಳ ಆಧಾರದ ಮೇಲೆ ಸೂಕ್ತವಾದ ಗಾದೆಗಳನ್ನು ಹೇಳಿದ್ದಾರೆ.
ಹಿರಿಯರು ತಮ್ಮ ಅನುಭವದ ಮೇಲೆ ಕಟ್ಟಿದ ಗಾದೆಗಳನ್ನು ತಿಳಿದುಕೊಳ್ಳಬೇಕಾ….ಇಲ್ಲಿದೆ ಮಳೆ ನಕ್ಷತ್ರಗಳ ಮೇಲಿರುವ ಕೆಲವು ಗಾದೆಗಳು. ರೈತಬಾಂಧವರ ಬಾಯಲ್ಲಿ ಈಗಲೂ ಈ ಗಾದೆಗಳು ಕೇಳಿಬರುತ್ತದೆ. ಈ ವರ್ಷದ ಮಳೆ ನಕ್ಷತ್ರಗಳ ಕಾಲಾವಧಿ ಹಾಗೂ ಗಾದೆಗಳನ್ನು ಇಲ್ಲಿ ನೀಡಲಾಗಿದೆ.
Based on Climate rain proverbs ಮಳೆ ನಕ್ಷತ್ರಗಳ ಮಾಹಿತಿ ಇಲ್ಲಿದೆ
ಅಶ್ವಿನಿ- (ಏಪ್ರೀಲ್ 13 ರಿಂದ ಏಪ್ರೀಲ್ 26 ರವರೆಗೆ) ಅಶ್ವಿನಿ ಮಳೆ ಬಿದ್ದರೆ ಅರಿಶಿಣಕ್ಕೆ ಮೇಲು, ಅಶ್ವೀನಿ ಸನ್ಯಾಸಿನೀ,
ಭರಣಿ – (ಏಪ್ರೀಲ್ 27 ರಿಂದ ಮೇ 10ರವರೆಗೆ) ಭರಣಿಯಲ್ಲಿ ಮಳೆಯಾದರೆ ಧರಣಿಯೆಲ್ಲಾ ಬೆಳೆ,ಭರಣಿ ಸುರಿದರೆ ಧರಣಿ ಬದುಕೀತು
ಕೃತಿಕಾ- ( ಮೇ 11 ರಿಂದ ಮೇ 24ರವರೆಗೆ) ಕೃತಿಕ ನಕ್ಷತ್ರ ಕಾದರೆ ಗದ್ದೆಗೆ ಒಳ್ಳೆಯದು
ರೋಹಿಣಿ- (ಮೇ 25 ರಿಂದ ಜೂನ್ 7ರವರೆಗೆ) ರೋಹಿಣಿ ಮಳೆ ಓಣಿಯೆಲ್ಲಾ ಕೆಸರು
ಮೃಗಶಿರ -(ಜೂನ್ 8 ರಿಂದ ಜೂನ್ 21ರವರೆಗೆ) ಮೃಗಶಿರೆಯಲ್ಲಿ ಮಿಸುಕಾಡದೆ ನೆರೆ ಬಂತು
ಆರಿದ್ರಾ (ಜೂನ್ 22 ರಿಂದ ಜುಲೈ 4ರವರೆಗೆ) ಆರಿದ್ರಾ ಮಳೆ ಆಗದೆ ಗುಡುಗಿದರೆ ಆರು ಮಳೆ ಆಗಲ್ಲ, ಆರಿದ್ರಾ ಮಳೆ ಆರದೆ ಹುಯ್ಯುತ್ತೇ, ಆರಿದ್ರಾ ಇಲ್ಲದಿದ್ದರೆ ದರಿದ್ರ ಖಂಡಿತ, ಅಮ್ಮನ ಮನಸ್ಸು ಬೆಲ್ಲದ ಹಾಗೆ, ಆರಿದ್ರಾ ಹನಿ ಕಲ್ಲಿನ ಹಾಗೆ.
ಪುಷ್ಯ -ಜುಲೈ 19 ರಿಂದ ಆಗಸ್ಟ್ 1ರವರೆಗೆ) ಪುಷ್ಯ ಮಳೆ ಭಾಷೆ ಕೊಟ್ಟ ಹಾಗೆ (ತಪ್ಪಿಸುವುದಿಲ್ಲ)
ಆಶ್ಲೇಷ -ಆಗಸ್ಟ್ 2 ರಿಂದ ಆಗಸ್ಟ್ 15ರವರೆಗೆ) ಆಶ್ಲೆ ಮಳೆ ಭೂಮಿ ಹಸ್ರುಗಟ್ಟಂಗೆ ಹುಯ್ತದೆ, ಅಸಲೆ ಮಳೆ ಕೈತುಂಬಾ ಬೆಳೆ, ಅಸಲೆ ಮಳೆ ಬಿದ್ದು ಸಸಿಲೆ(ಸಣ್ಣ ಮೀನು) ಬೆಟ್ಟಕ್ಕೇರಿತು
ಮಘ- (ಆಗಸ್ಟ್ 16 ರಿಂದ ಆಗಸ್ಟ್ 29ರವರೆಗೆ) ಬಂದರೆ ಮಗೆ ಹೋದರೆ ಹೊಗೆ, ಬಂದರೆ ಮಘೆ ಇಲ್ಲದಿದ್ದರೆ ಧಗೆ, ಮಘೆ ಮಳೆ ಬಂದಷ್ಟು ಒಳ್ಳೇದು, ಮನೆಮಗ ಉಂಡಷ್ಟು ಒಳ್ಳೇದು.
ಇದನ್ನೂ ಓದಿ ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ
ಹಿಂದೆ ಮುಂಗಾರು ಹಿಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಹಿರಿಯರು ಮಳೆಯ ಕುರಿತಂತೆ ತಮ್ಮ ಅನುಭವದ ಮೇಲೆ ಗಾದೆಗಳನ್ನು ಕಟ್ಟುತ್ತಿದ್ದರು. ಅವರ ಅನುಭವದ ಮಾತಿನಂತೆ ಮಳೆಯೂ ಆಗುತ್ತಿತ್ತು. ಯಾವ ಋತುವಿನಲ್ಲಿ ಮಳೆ ಯಾವ ಪ್ರಮಾಣದಲ್ಲಾಗುತ್ತದೆ ಎಂಬುದರ ಕುರಿತು ಹಿರಿಯರು ತಮ್ಮ ಅನುಭವದ ಬುಟ್ಟಿಯನ್ನೇ ತೆರೆದಿಟ್ಟಿದ್ದಾರೆ. ಆ ಗಾದೆಗಳು ಇಂದಿಗೂ ಸತ್ಯವಾಗಿದೆ.